For Quick Alerts
  ALLOW NOTIFICATIONS  
  For Daily Alerts

  'ದಿಲ್ ಬರ್' ನಟಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ರಾ ಕೊರಿಯೋಗ್ರಾಫರ್?: ಪ್ರತಿಕ್ರಿಯೆ ನೀಡಿದ ನೋರಾ ಫತೇಹಿ

  |

  ನಟಿ ಮತ್ತು ಅದ್ಭುತ ಡ್ಯಾನ್ಸರ್ ನೋರಾ ಫತೇಹಿ ಮತ್ತು ಕೊರಿಯೋಗ್ರಾಫರ್ ಟೆರೆನ್ಸ್ ಲೂಯಿ ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಹಿಂದಿಯ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ 'ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್' ನಲ್ಲಿ ನಟಿ ನೋರಾ ಫತೇಹಿ ಮತ್ತು ಕೊರಿಯೋಗ್ರಾಫರ್ ಟೆರೆನ್ಸ್ ಲಾಯಿ ಇಬ್ಬರು ಜಡ್ಜ್ ಆಗಿದ್ದಾರೆ.

  ವೇದಿಕೆ ಮೇಲೆ ಕೊರಿಯೋಗ್ರಾಫರ್ ಟೆರೆನ್ಸ್ ಲಾಯಿ, ನೋರಾ ಫತೇಹಿಯ ಹಿಂಭಾಗವನ್ನು ಸ್ಪರ್ಶಿಸುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಟ್ಯಾಲೆಂಟ್ ಶೋನಲ್ಲಿ ಈ ರೀತಿ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಮುಂದೆ ಓದಿ..

  ಈ ನಟಿ ಧರಿಸಿರುವುದು ದುಬಾರಿ ಬೆಲೆಯ ವಿಗ್: ಅಂಥ ವಿಶೇಷತೆ ಏನಿದೆ.?

  ಅನುಚಿತವಾಗಿ ಸ್ಪರ್ಶಿಸಿದ್ರಾ ಟೆರೆನ್ಸ್?

  ಅನುಚಿತವಾಗಿ ಸ್ಪರ್ಶಿಸಿದ್ರಾ ಟೆರೆನ್ಸ್?

  ಟೆರೆನ್ಸ್ ಮತ್ತು ನೋರಾ ವಿಡಿಯೋ ವೈರಲ್ ಆದ ಬಳಿಕ ಟೆರೆನ್ಸ್ ಅನುಚಿತವಾಗಿ ನೋರಾ ಅವರನ್ನು ಸ್ಪರ್ಶಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿವಾದವೀಗ ದೊಡ್ಡದಾಗಿ ಇಬ್ಬರು ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಇದೀಗ ನೋರಾ ಮತ್ತು ಟೆರೆನ್ಸ್ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  ವಿಡಿಯೋ ಮಾರ್ಫಿಂಗ್ ಎಂದ ನೋರಾ

  ವಿಡಿಯೋ ಮಾರ್ಫಿಂಗ್ ಎಂದ ನೋರಾ

  ಈ ಬಗ್ಗೆ ನಟಿ ನೋರಾ ವಿಡಿಯೋವನ್ನು ಫೋಟೋಶಾಪ್ ಮಾಡಲಾಗಿದೆ ಎಂದು ಹೇಳಿದ್ದಾರೆ. 'ಧನ್ಯವಾದಗಳು, ಟೆರೆನ್ಸ್. ಇಂದಿನ ಸಮಯದಲ್ಲಿ ಸಾಮಾಜಿಕ ಜಾಲತಾಣಗಳು ಟ್ರೋಲ್ ಮಾಡಲು ವಿಡಿಯೋವನ್ನು ಮಾರ್ಫಿಂಗ್ ಮತ್ತು ಫೋಟೋಶಾಪ್ ಮಾಡುತ್ತಾರೆ. ನಿಮಗೆ ತೊಂದರೆ ಕೊಡಲು ಬಿಡದಿರುವುದು ಖುಷಿ ತಂದಿದೆ. ನೀವು ಘನತೆಯನ್ನು ಕಾಪಾಡಿಕೊಂಡಿದ್ದೀರಿ. ನೀವು ಮತ್ತು ಗೀತಾ ಮೇಡಮ್ ಇಬ್ಬರು ನನ್ನೊಂದಿಗೆ ತುಂಬಾ ಗೌರವದಿಂದ ಇದ್ದೀರಿ. ಜಡ್ಜ್ ಆಗಿ ಇಬ್ಬರೂ ನನ್ನನ್ನು ತುಂಬಾ ಇಷ್ಟಪಡುತ್ತೀರಿ. ಇದು ಉತ್ತಮ ಜೀವನ ಕಲಿಯುವ ಅನುಭವವಾಗಿದೆ' ಎಂದು ಬರೆದುಕೊಂಡಿದ್ದಾರೆ.

  ಜೆನ್ ಕಥೆ ಹೇಳಿದ ಟೆರೆನ್ಸ್

  ಜೆನ್ ಕಥೆ ಹೇಳಿದ ಟೆರೆನ್ಸ್

  ಇನ್ನು ಕೊರಿಯೋಗ್ರಾಫರ್ ಟೆರೆನ್ಸ್ ಲೂಯಿ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಅತ್ಯಂತ ಸುಂದರ, ಗೌರವಾನ್ವಿತ ಮತ್ತು ತುಂಬಾ ಕ್ಲಾಸಿ ಅತಿಥಿ ಜಡ್ಜ್ ಆಗಿದ್ದಕ್ಕೆ ಮತ್ತು ನನ್ನ ಮೇಲಿನ ನಂಬಿಕೆಗಾಗಿ ಧನ್ಯವಾದಗಳು' ಎಂದು ಹೇಳಿದ್ದಾರೆ. ಜೊತೆಗೆ ಜೆನ್ ಕಥೆಯ ಫಿಲಾಸಫಿಯನ್ನು ಹೇಳಿದ್ದಾರೆ. ಕಥೆಯ ಜೊತೆಗೆ ನೋರಾ ಫತೇಹಿಯನ್ನು ಎರಡು ಕೈಗಳಿಂದ ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

  ರಾಗಿಣಿ, ಸಂಜನಾ ಮೊಬೈಲ್ ನಿಂದ ಬಯಲಾಯ್ತು ಸ್ಪೋಟಕ ಮಾಹಿತಿ..? | Filmibeat Kannada
  ಮಲೈಕಾ ಜಾಗಕ್ಕೆ ಬಂದ ನೋರಾ

  ಮಲೈಕಾ ಜಾಗಕ್ಕೆ ಬಂದ ನೋರಾ

  ಅಂದ್ಹಾಗೆ ನೋರಾ ಫತೇಹಿ ನಟಿ ಮಲೈಕಾ ಅರೋರಾ ಜಾಗಕ್ಕೆ ಜಡ್ಜ್ ಆಗಿ ಬಂದಿದ್ದಾರೆ. ಮಲೈಕಾಗೆ ಕೊರೊನಾ ಪಾಸಿಟಿವ್ ಬಂದ ಬಳಿಕ ಕ್ವಾರಂಟೈನ್ ನಲ್ಲಿದ್ದಾರೆ. ಹಾಗಾಗಿ ಸೆಪ್ಟಂಬರ್ ಮೊದಲ ವಾರದಿಂದ ನೋರಾ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಮಲೈಕಾ ಕೊರೊನಾ ದಿಂದ ಗುಣಮುಖರಾಗಿದ್ದು, ಸದ್ಯದಲ್ಲೇ ಶೋಗೆ ಮರಳುವ ಸಾಧ್ಯತೆ ಇದೆ.

  English summary
  Actress and famous dancer Nora Fatehi clarification about choreographer Terence Lewis video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X