ನನ್ನ ಗಂಡ ಎಲ್ಲಿದ್ದಾನೆ ಅಂತ ನನಗೆ ಗೊತ್ತಿಲ್ಲ, ನಾನು ಇನ್ನೂ ಡಿವೋರ್ಸ್ ಕೊಟ್ಟಿಲ್ಲ - ಬಿಗ್ ಬಾಸ್ ಚೆಲುವೆ ಭಾವುಕ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಿಂದೊಮ್ಮೆ ಪವಿತ್ರ ಬಂಧ ಎಂದು ಪರಿಗಣಿಸಲಾಗುತ್ತಿದ್ದ ಮದುವೆಯ ಸಂಬಂಧ ಅರ್ಥ ಕಳೆದುಕೊಂಡಿದೆ. ಇನ್ನೂ ಹಿಂದೆ ಡಿವೋರ್ಸ್ ಸಮಾಜದ ದೃಷ್ಟಿಯಲ್ಲಿ ಸಾಮಾಜಿಕ ಕಳಂಕವಾಗಿತ್ತು. ಆದರೆ ಈಗ ಚಿಕ್ಕ ಚಿಕ್ಕ ವಿಚಾರಕ್ಕೆ ದಾಂಪತ್ಯ ಜೀವನ ಮುಕ್ತಾಯವಾಗುತ್ತಿದೆ. ನೆಮ್ಮದಿ ಮತ್ತು ಸ್ವಾತಂತ್ರ್ಯ ಅರಸಿಕೊಂಡು ಹಲವರು ಸಂಬಂಧಗಳನ್ನು ಕಡಿದುಕೊಂಡು ಹೊರ ಬರುತ್ತಿದ್ದಾರೆ.
ಮತ್ತೂ ಕೆಲವರ ಬದುಕಿನಲ್ಲಿ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಸಮಾಜಕ್ಕೆ ಹೆದರಿ, ನೋಡಿದವರು ಏನಂತಾರೆ ..? ಎಂಬ ಭಯದಲ್ಲಿ ಹಲವರು ನಾಲ್ಕು ಗೋಡೆಗಳ ನಡುವೆ ತಮ್ಮ ಮನಸ್ತಾಪ ಹೂತು ಹಾಕಿ ಮುಖವಾಡದ ಬದುಕು ಬದುಕುತ್ತಿದ್ದಾರೆ. ಹೊರಗಡೆ ಆದರ್ಶ ದಂಪತಿಗಳಂತೆ ಫೋಸ್ ನೀಡಿ ಮನೆಯೊಳಗೆ ಕಣ್ಣೀರು ಹಾಕುತ್ತಾರೆ.

ಇನ್ನೂ ಕೆಲವರು ವಿಚ್ಚೇದನವನ್ನು ನೀಡದೇ, ಜೊತೆಯಲ್ಲಿ ವಾಸವೂ ಮಾಡದೇ, ನಾನೊಂದು ತೀರ.. ನೀನೊಂದು ತೀರ ಎಂಬಂತೆ ಬದುಕುತ್ತಾರೆ. ಒಬ್ಬರಿಗೊಬ್ಬರು ಸಂಬಂಧವೇ ಇಲ್ಲ ಎನ್ನುವಂತೆ ಇರುತ್ತಾರೆ. ಉದಾಹರಣೆಗೆ ಮಂಜು ಪಾತ್ರೋಸ್.
ಹೌದು, ಮಂಜು ಪಾತ್ರೋಸ್.. ಕೇರಳದ ಚೆಲುವೆ. ಇವರ "ಮರಿಮಯಂ" ಧಾರಾವಾಹಿಯ 'ಶ್ಯಾಮಲ' ಪಾತ್ರ ಇವತ್ತು ಕೂಡ ಪ್ರಸಿದ್ದ. ''ಅಲಿಯನ್ ವರ್ಸಸ್ ಅಲಿಯನ್''.. ಇವರ ಮತ್ತೊಂದು ಖ್ಯಾತ ಹಾಸ್ಯ ಧಾರಾವಾಹಿ.
ಕೇವಲ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿ ಕೂಡ ಮೋಡಿ ಮಾಡಿರುವ ಮಂಜು ಪಾತ್ರೋಸ್ ''ಮಹೇಶಿಂಟೆ ಪ್ರತಿಕಾರಂ''.. ''ಮುಂತಿರಿವಳ್ಳಿಕಲ್ ತಳೀರ್ಕುಂಬೋಳ್''..''ಕುಟ್ಟನಾಟನ್ ಬ್ಲಾಗ್''.. ಮತ್ತು ''ಉಟ್ಟೋಪಿಂಯಲೆ ರಾಜಾವು'' ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
''ಬಿಗ್ ಬಾಸ್'' ಮಲಯಾಳಂನ ಎರಡನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದ ಮಂಜು ಪಾತ್ರೋಸ್, ಮನೆಯಲ್ಲಿ 49 ದಿನ ಇದ್ದರು. 2000ನೇ ಇಸ್ವಿಯ ಆಸು ಪಾಸು ಸಂಗೀತಗಾರ ಸುನಿಚನ್ ಅವರನ್ನು ಪ್ರೀತಿಸಿ ಮದುವೆಯಾದ ಇವರಿಗೆ ಬರ್ನಾರ್ಡ್ ಎಂಬ ಮಗ ಇದ್ದಾನೆ. ಸದ್ಯ ಬೆಂಗಳೂರಿನಲ್ಲಿ ಓದುತ್ತಿದ್ದಾನೆ.

ಇಂಥಾ ಮಂಜು ಪಾತ್ರೋಸ್ ತಮ್ಮ ಪತಿಯಿಂದ ಕಳೆದ ವರ್ಷಗಳಿಂದ ದೂರ ಇದ್ದಾರೆ. ಅವರಿಗೆ ವಿಚ್ಚೇದನವನ್ನು ನೀಡಿಲ್ಲ. ಅವರೆಲ್ಲಿದ್ದಾರೆ ಎನ್ನುವುದು ಕೂಡ ಇವರಿಗೆ ಗೊತ್ತಿಲ್ಲ. ಈ ವಿಚಾರವನ್ನು ಖುದ್ದು ಮಂಜು ಪಾತ್ರೋಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹಳಿ ತಪ್ಪಿದ ತಮ್ಮ ದಾಂಪತ್ಯ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಈ ಕುರಿತು ''ಐಸ್‌ಬ್ರೇಕ್ ಎಂಟರ್‌ಟೈನ್‌ಮೆಂಟ್ಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಂಜು ಪಾತ್ರೋಸ್, 40 ವರ್ಷವಾಗುವ ಮುನ್ನ ಇದ್ದ ಮಂಜು ಬೇರೆ ಈಗ ಇರುವ ಮಂಜು ಬೇರೆ ಎಂದು ಹೇಳಿದ್ದಾರೆ. ಮೊದಲಾದರೆ ಈ ಪ್ರಪಂಚದಲ್ಲಿ ಅವರು ಇಲ್ಲದಿದ್ದರೆ ನಾನು ಒಬ್ಬಳೇ ಹೇಗೆ ಬದುಕಲಿ ಎಂದು ಯೋಚನೆ ಮಾಡುತ್ತಿದ್ದೆ, ಬದುಕಲು ಭಯ ಪಡುತ್ತಿದ್ದೆ ಎಂದು ಹೇಳಿರುವ ಮಂಜು ಪಾತ್ರೋಸ್ ಈಗ ನನಗೆ ಯಾವ ಭಯ ಇಲ್ಲ ಎಂದು ಹೇಳಿದ್ದಾರೆ. ಮೊದಲು ಆತಂಕದಲ್ಲಿ ಕಣ್ಣೀರು ಹಾಕುತ್ತಿದ್ದೆ ಆದರೆ ಈಗ ಆ ಯೋಚನೆಗಳೇ ಬರುವುದಿಲ್ಲ ಎಂದಿದ್ದಾರೆ.
ನನ್ನ ಮಾತುಗಳಿಂದ ಅವಳಿಗೇನೂ ಸಾಕಷ್ಟು ಹಣ ಇದೆ ಎಂದು ಹಲವರಿಗೆ ಅನಿಸಬಹುದು, ಆದರೆ ನಿಜಾ ಹೇಳಬೇಕಂದರೆ ನನ್ನ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲ ಎಂದು ಮಂಜು ಪಾತ್ರೋಸ್ ಹೇಳಿದ್ದಾರೆ. ಮನೆ ಕಟ್ಟಿಸಿರುವುದರಿಂದ ಸಾಲ ಇದೆ ಆ ಸಾಲ ತೀರಿಸಬೇಕಿದೆ, ದಿನನಿತ್ಯ ಅದಕ್ಕಾಗಿಯೇ ಹೋರಾಟ ಎಂದು ಹೇಳಿರುವ ಮಂಜು ಪಾತ್ರೋಸ್ ನನ್ನ ಮಗ ಬೆಂಗಳೂರಿನಲ್ಲಿ ಓದುತ್ತಿದ್ದು, ಅವನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಖರ್ಚಾಗುತ್ತೆ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ನನ್ನ ಪತಿ ಸುನಿಚ್ಚನ್ ಜೊತೆ ನನಗೆ ಈಗ ಯಾವ ಸಂಬಂಧವೂ ಇಲ್ಲ, ಸಂಪರ್ಕವೂ ಇಲ್ಲ ಎಂದು ಹೇಳಿರುವ ಮಂಜು ಪಾತ್ರೋಸ್ ಮಗನ ವಿಚಾರಕ್ಕೆ ಮಾತ್ರ ಆಗಾಗ ನಾವು ಕರೆ ಮಾಡಿ ಮಾತನಾಡುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ. ಅದನ್ನು ಹೊರತು ಪಡಿಸಿದರೆ ಬೇರೆ ಯಾವ ಮಾತು ಕಥೆ ನಮ್ಮ ನಡುವೆ ಇಲ್ಲ ಎಂದಿದ್ದಾರೆ.
ನನ್ನ ಗಂಡನಿಗೆ ಮಗನನ್ನು ಭೇಟಿ ಮಾಡಬೇಡ ಎಂದು ಹೇಳುವ ಹಕ್ಕು ನನಗಿಲ್ಲ ಯಾಕೆಂದರೆ ಕಾನೂನು ಬದ್ದವಾಗಿ ನಾವು ಇನ್ನೂ ವಿಚ್ಚೇದನ ಪಡೆದಿಲ್ಲ ಎಂದು ಹೇಳಿರುವ ಮಂಜು ಪಾತ್ರೋಸ್ ಬೇರೆಯವರ ಇಷ್ಟಾನುಸಾರ ಬದುಕಲು ಸಾಧ್ಯ ಇಲ್ಲ, ಯಾಕೆಂದರೆ ಅಂತಹ ಬದುಕಿಂದ ಮನದ ನೆಮ್ಮದಿ ಹಾಳಾಗುತ್ತೆ ಎಂದು ಹೇಳಿದ್ಧಾರೆ. ತೃಪ್ತಿ ಕೊಡುವ ಕೆಲಸವನ್ನು ಮಾಡಬೇಕು, ಬೇರೆಯವರಿಗೆ ನಮ್ಮಿಂದ ತೊಂದರೆಯಾಗಬಾರದು ಎಂದು ಹೇಳಿರುವ ಮಂಜು ಪಾತ್ರೋಸ್ ನನ್ನಿಂದ ನನ್ನ ಮಗ ಎಲ್ಲೂ ತಲೆ ತಗ್ಗಿಸಬಾರದು ಎಂದು ಹೇಳಿದ್ದಾರೆ. ಭಾವುಕರಾಗಿದ್ದಾರೆ. ನನ್ನನ್ನು ನಾನು ಪ್ರೀತಿಸಿ ಬದುಕುವುದೇ ನನಗೆ ಇಷ್ಟ, ಖುಷಿಯಾಗಿರಲು ನನಗೆ ನೂರಾರು ಬೇರೆ ದಾರಿಗಳಿವೆ ಎಂದಿದ್ದಾರೆ.


Click it and Unblock the Notifications











