ಕೇವಲ ದುಡ್ಡಿಗಾಗಿ ಈ ಶೋ ಒಪ್ಪಿಕೊಂಡಿಲ್ಲ, ಸುದೀಪ್
ಅಂತೂ ಇಂತೂ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಈ ಶುಕ್ರವಾರ (ಜೂ.14) 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಅವರು ಮಾತನಾಡುತ್ತಾ ಚಂದ್ರಿಕಾ ಅವರಿಗೆ ಕೆಲವೊಂದು ವಿಚಾರಗಳಲ್ಲಿ ಸ್ಪಷ್ಟೀಕರಣವನ್ನೂ ನೀಡಿದರು.
ನಿಕಿತಾ ಜೊತೆ ಪದೇ ಪದೇ ಜಗಳವಾಡುತ್ತಿರುವುದನ್ನು ಪ್ರಸ್ತಾಪಿಸಿದರು. ನಿಕಿತಾ ತನ್ನ ಮಗು ಛೀ ಎಂದು ಬೈದರು ಎಂದು ಈ ಹಿಂದೆ ಆರೋಪ ಮಾಡಿದಾಗ ಸುದೀಪ್ ಈ ಬಗ್ಗೆ ನಿಕಿತಾ ಮೂಲಕ ಸ್ಪಷ್ಟೀಕರಣ ನೀಡಿಸಿದ್ದರು. ಈ ಜಗಳ ಪುನರಾವರ್ತನೆಯಾದಾಗ ಚಂದ್ರಿಕಾಗೆ ಸುದೀಪ್ ಹೇಳಿದ್ದೇನೆಂದರೆ...

ವ್ಯಕ್ತಿಗಳು ನಮಗಿಷ್ಟವಾಗದೇ ಇದ್ದಾಗ ಅವರು ಮಾಡಿದ್ದೆಲ್ಲವೂ ತಪ್ಪಾಗಿಯೇ ಕಾಣುತ್ತಿರುತ್ತದೆ. ನಿಕಿತಾ ಅವರ ಬಗೆಗಿನ ನಿಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಿದರು. ಬಹುಶಃ ಚಂದ್ರಿಕಾ ಅವರು ಬಿಗ್ ಬಾಸ್ ಮನೆಯಲ್ಲಿ ಕಲಿತ ಅತಿ ದೊಡ್ಡ ಪಾಠ ಎಂದರೆ ಇದೇ ಇರಬೇಕು.
ಬಿಗ್ ಬಾಸ್ ಅವರು ನಿಕಿತಾ ಬಗ್ಗೆ ಹೆಚ್ಚು ಕಾಳಜಿಕೊಡುತ್ತಿದ್ದಾರೆ ಎಂಬ ಚಂದ್ರಿಕಾ ಆರೋಪವನ್ನು ಪ್ರಸ್ತಾಪಿಸಿ ಸುದೀಪ್ ಹೇಳಿದ್ದಿಷ್ಟು. ಚಂದ್ರಿಕಾ ಅವರೇ ಒಬ್ಬ ತಾಯಿಗೆ ಐದು ಜನ ಮಕ್ಕಳಿದ್ದಾರೆ ಎಲ್ಲರ ಮೇಲೆಯೂ ಪ್ರೀತಿ ಸಮಾನವಾಗಿರುತ್ತದೆ. ಇಲ್ಲೂ ಅಷ್ಟೇ. ಆದರೆ ಒಂದು ಮಗು ಅಂಗವೈಕಲ್ಯದಿಂದ ಬಳಲುತ್ತಿದ್ದರೆ. ತಾಯಿ ಆ ಮಗುವಿನ ಕಡೆಗೆ ಒಂಚೂರು ಹೆಚ್ಚು ಆಸಕ್ತಿ ತೋರಿಸಬಹುದು.


Click it and Unblock the Notifications











