ಎರಡನೇ ಇನ್ನಿಂಗ್ಸ್ ಮುಗಿಸಿದ ನರ್ಸ್ ಜಯಲಕ್ಷ್ಮಿ
ಪ್ರತಿ ಶುಕ್ರವಾರ ಹಿರಿಯ ನಟಿ ಚಂದ್ರಿಕಾ ಅವರು ಅರೆಬರೆ ಉಡುಪು ತೊಟ್ಟು ಬರುತ್ತಿದ್ದರು. ಆದರೆ ಈ ಬಾರಿ ಸೀರೆಯಲ್ಲಿ ಕಾಣಿಸಿಕೊಂಡು ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಹೆಜ್ಜೆಹಾಕಿದ 'ಚೆಲುವೆ ನೀನು ನಕ್ಕರೆ ಬದುಕು ಹಾಲು ಸಕ್ಕರೆ' ದಿನಗಳನ್ನು ನೆನಪಿಸಿದರು.
ಇನ್ನೊಂದು ಕಡೆ ಸುದೀಪ್ ಅವರು ರಿಷಿಕಾ ಅವರಿಗೆ ಕಿವಿಮಾತನ್ನೂ ಹೇಳಿದರು. ಲೀಡರ್ ಷಿಪ್ ಸಿಕ್ಕಿದರೆ ಹೇಗೆಲ್ಲಾ ಬದಲಾಗುತ್ತಾರೆ. ಹಿಟ್ಲರ್ ಎನ್ನಿಸಿಕೊಳ್ಳುವುದು ಬಹಳ ಕಷ್ಟ. ಅದೇ ನಗುನಗುತ್ತಾ ಕ್ಯಾಪ್ಟನ್ ಆಗಿ ಎಲ್ಲರೊಂದಿಗೆ ಕೆಲಸ ಮಾಡಿಸಿಕೊಳ್ಳುವುದು ಹೇಗೆ ಎಂದು ಹೇಳುತ್ತೇನೆ. ಈಗ ವರ್ಷ ನಾನು ಕಪ್ ಗೆದ್ದದ್ದು ಹಿಟ್ಲರ್ ಆಗಿ ಅಲ್ಲ, ನಗುನಗುತ್ತಾ ಎಲ್ಲರೊಂದಿಗೆ ಬೆರೆತದ್ದಕ್ಕೇ ಕಪ್ ಸಿಕ್ಕಿದ್ದು ಎಂದು ಸಿಸಿಎಲ್ ಕಪ್ ಗೆದ್ದದ್ದನ್ನು ನೆನಪಿಸಿದರು.

ಜಯಲಕ್ಷ್ಮಿ ಅವರಿಗೆ ಈ ಬಾರಿ ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶವನ್ನು ಬಿಗ್ ಬಾಸ್ ಕೊಟ್ಟರು. ಅವರು ರೋಹನ್ ಗೌಡ ಹಾಗೂ ಅನುಶ್ರೀ ಅವರನ್ನು ನಾಮಿನೇಟ್ ಮಾಡಿ ಹೊರನಡೆದರು. ಈ ಶನಿವಾರ (ಮೇ.11) 'ರಾಗಿಣಿ ಐಪಿಎಸ್' ಬಿಗ್ ಬಾಸ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ರಾತ್ರಿ 8ಕ್ಕೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು.


Click it and Unblock the Notifications











