ರಾಕ್ಷಸಿಯರಿಗೆ ನಾನು ರಾಕ್ಷಸಿ ; ನಿಮ್ಮನ್ನು ಕಳಿಸಿಯೇ ನಾನು ಹೋಗೋದು- ಅಶ್ವಿನಿ ಎದುರು ಶಪಥ ಮಾಡಿದ ರಕ್ಷಿತಾ

''ಬಿಗ್ ಬಾಸ್'' ಅಂದರೆ ರಂಪ-ರಾಮಾಯಣಕ್ಕೆ ಮತ್ತೊಂದು ಹೆಸರು. ಮನೆ ಶಾಂತವಾಗಿದ್ದರೆ ಈ ಮನೆಯತ್ತ ಯಾರು ತಲೆ ಹಾಕಿ ಮಲಗಲ್ಲ. ಅಶಾಂತಿಯೇ ಈ ಮನೆಯ ಲಕ್ಷಣ. ಇದು ಮನೆಯೊಳಗೆ ಹೋಗುವ ಸ್ಫರ್ಧಿಗಳಿಗೆ ಚೆನ್ನಾಗಿಯೇ ಗೊತ್ತು. ಕಾರ್ಯಕ್ರಮದ ಆಯೋಜಕರಿಗೆ ಕೂಡ ಗೊತ್ತು. ಈ ಹಿನ್ನೆಲೆ. ಪ್ರತಿ ವರ್ಷ ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತೆ.

ವಿವಾದಾತ್ಮಕ ವ್ಯಕ್ತಿಗಳನ್ನು ... ವಿಚಿತ್ರ ವ್ಯಕ್ತಿಗಳನ್ನು... ಹುಡುಕಿ ಮನೆಯೊಳಗೆ ಕಳುಹಿಸಲಾಗುತ್ತೆ. ಈ ಬಾರಿಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಕೂಡ ಇದರಿಂದ ಹೊರತಾಗಿಲ್ಲ. ಕಾಕ್ರೋಚ್ ಸುಧಿ.. ಗಿಲ್ಲಿ.. ಧ್ರುವಂತ್.. ಚಂದ್ರಪ್ರಭಾ.. ರಿಷಾ ಗೌಡ.. ಅಶ್ವಿನಿ ಗೌಡ..

OATH VS CHALLENGE Rakshitha Shetty Vows Revenge on Ashwini Gowda in BBK 12 s Fiercest Rivalry

ಹೀಗೆ ವೆರೈಟಿ ವೆರೈಟಿ ವ್ಯಕ್ತಿಗಳನ್ನು ಮನೆಯ ಒಳಗಡೆ ಕಳುಹಿಸಲಾಗಿದೆ. ಆ ಪೈಕಿ ರಕ್ಷಿತಾ ಕೂಡ ಒಬ್ಬರು. ಸದ್ಯ ಈ ಮನೆಯಲ್ಲಿ ಮೊದಲ ದಿನದಿಂದ ಹಾವು ಮುಂಗುಸಿಯಂತೆ ಕಿತ್ತಾಡುತ್ತಿರುವ ರಕ್ಷಿತಾ ಮತ್ತು ಅಶ್ವಿನಿ ಗೌಡ ಅವರ ಜಗಳ ತಾರಕಕ್ಕೇರಿದೆ. ಇದಕ್ಕೆ ಪುರಾವೆ ಎಂಬಂತೆ ಅಶ್ವಿನಿ ಗೌಡ ಅವರನ್ನು ಮನೆಯ ಹೊರಗಡೆ ಕಳುಹಿಸಿಯೇ ನಾನು ಹೋಗೋದು ಎಂಬ ಶಪಥವನ್ನು ರಕ್ಷಿತಾ ಮಾಡಿದರು.

ಹೌದು, ಮನೆಯಲ್ಲಿರಲು ಯಾರು ಅರ್ಹರಲ್ಲ ಎಂಬ ವಿಚಾರವನ್ನು ಸ್ಫರ್ಧಿಗಳು ಹೇಳಬೇಕಿತ್ತು. ಕಾರಣ ನೀಡಿ ಮುಖಕ್ಕೆ ಮಸಿ ಬಳಿಯಬೇಕಿತ್ತು. ವಾದಕ್ಕೆ ಮುಖಕ್ಕೆ ಮಸಿ ಹಚ್ಚಿಸಿಕೊಂಡ ಸ್ಫರ್ಧಿಗಳು ಪ್ರತಿ ವಾದ ಮಾಡಬೇಕಿತ್ತು. ಈ ಸಮಯದಲ್ಲಿ ಅಶ್ವಿನಿ ಗೌಡ ವಿರುದ್ದ ಹರಿಹಾಯ್ದ ರಕ್ಷಿತಾ ಇವರು ಎಷ್ಟೇ ಯಶಸ್ಸನ್ನು ಗಳಿಸಿರಲಿ ಆದರೆ ಆ ಯಶಸ್ಸು ಅವರಿಗೆ ಅವರ ಮನೆಯವರಿಗೆ ಅವರ ಅಭಿಮಾನಿಗಳಿಗಷ್ಟೇ ಇರಲಿ, ನೀವು ನೂರು ಸಿನಿಮಾನೇ ಮಾಡಿರಲಿ, ಆದರೆ ಒಬ್ಬ ವ್ಯಕ್ತಿಯನ್ನು ಕಾಲಡಿ ಹಾಕಿ ತುಳಿಯುವ ಹಕ್ಕು ನಿಮಗಿಲ್ಲ ಎಂದು ಹೇಳಿದರು. ಬೇರೆಯವರ ಯೋಗ್ಯತೆ ಬಗ್ಗೆ ಮಾತನಾಡುವ ನೀವು ಎಷ್ಟೇ ಸಿನಿಮಾ ಮಾಡಿದ್ದರು ಕೂಡ ವೇಸ್ಟ್ ಎಂದು ಹೇಳಿದರು. ''ಬಿಗ್ ಬಾಸ್‌'' ಮನೆಯಲ್ಲಿರಲು ನಿಮಗೆ ಯೋಗ್ಯತೆಯೇ ಇಲ್ಲ ಎಂದು ಮಸಿ ಬಳಿದರು.

ರಕ್ಷಿತಾ ವಾದಕ್ಕೆ ಪ್ರತಿವಾದ ಮಾಡಿದ ಅಶ್ವಿನಿ ನೂರು ಸಿನಿಮಾ ಮಾಡಿರಲಿ, ಹತ್ತು ಸಿನಿಮಾ ಮಾಡಿರಲಿ, ಒಂದು ಸಿನಿಮಾ ಮಾಡಿರಲಿ, ಕಲಾವಿದರನ್ನು ಕಾಲಡಿ ಹಾಕಿಕೊಂಡು ಮಾತನಾಡುವುದು ಇದೆಯಲ್ಲ, ಅದು ಅವರ ವ್ಯಕ್ತಿತ್ವ ತೋರಿಸುತ್ತೆ ಎಂದು ಹೇಳಿದರು. ಈ ಮನೆಯಲ್ಲಿ ಎಲ್ಲರೂ ಸೇರಿಕೊಂಡು ನಿನಗೆ ಉತ್ತರ ಕೊಡುವ ಕಾಲ ಹತ್ತಿರ ಇದೆ ಎಂದು ಹೇಳಲು ಬಯಸುತ್ತೇನೆ ಎಂದರು.

ಆ ನಂತರ ರಕ್ಷಿತಾ ಮುಖಕ್ಕೆ ಮಸಿ ಹಚ್ಚಿದ ಅಶ್ವಿನಿ ಗೌಡ, ನಾನು ಅಂದುಕೊಂಡಷ್ಟು ಮುಗ್ದೆ ಅಲ್ಲ ಎಂದು ಹೇಳಿದ್ದಾರೆ. ರಾಮ ಡ್ರಾಮಾ ಎಂದು ಇಲ್ಲಿ ಕೆಲವರಿಗೆ ಹೇಳ್ತಿರ್ತಾರೆ,ಇವರು ಡ್ರಾಮಾ ಕಂಪನಿಯ ಅಪ್ಪಾನೂ ಅಲ್ಲ ಮುತ್ತಾತ. ತಮ್ಮ ಕುತಂತ್ರ, ಚೇಷ್ಠೆಗಳು ಇನ್ನೊಬ್ಬರಿಗೆ ಅರ್ಥ ಆಗುತ್ತೆ ಎಂದು ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಿ, ಅವರ ಕೈ ಹಿಡಿದುಕೊಳ್ಳೋದು, ನಾವ್ಯಾರು 24-25ನೇ ವಯಸ್ಸಿಗೆ ಹೀಗೆ ಮಾಡಿಲ್ಲ.ನಾವ್ಯಾರು 24-25ನೇ ವಯಸ್ಸಿಗೆ ಹೀಗೆ ಮಾಡಿಲ್ಲ. ಹಾಗಾಗಿ ಅದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮಷ್ಟು ವಯಸ್ಕರು ಹೊರಗೆ ಶೋ ನೋಡುತ್ತಿರುತ್ತಾರೆ ಎಂದು ಹೇಳಿದರು.

oath-vs-challenge-rakshitha-shetty-vows-revenge-on-ashwini-gowda-in-bbk-12s-fiercest-rivalry

ಮುಂದುವರೆದು ನಾವೇನು ಹಾಗೆಯೇ ಇಲ್ಲಿಗೆ ಬಂದಿಲ್ಲ. ನೂರು ಸಿನಿಮಾ ಮಾಡಿ ಬಂದಿದ್ದು, ನಿನ್ನ ಹಾಗೆ ಒಂದು ಯುಟ್ಯೂಬ್ ಚಾನೆಲ್ ಮಾಡಿಕೊಂಡು ಇಲ್ಲಿಗೆ ಬಂದಿಲ್ಲ ಎಂದು ಹೇಳಿದ ಅಶ್ವಿನಿ ಗೌಡ, ಇದು ನನ್ನ 15 ವರ್ಷದ ಪ್ರಯಾಣ, ಪ್ರತಿಯೊಂದು ಪಾಠವನ್ನು ಕಲಿತುಕೊಂಡು ಬಿಗ್‌ಬಾಸ್‌ಗೆ ಬಂದಿದ್ದೇವೆ ಎಂದು ಹೇಳಿದರು. ಮೂರನೇ ವಾರ ಯಾವುದೋ ಒಂದು ಕಾರ್ಡ್ ವರ್ಕೌಟ್ ಆಗಿದ್ದಕ್ಕೆ ನಮ್ಮ ವ್ಯಕ್ತಿತ್ವವನ್ನು ಡಸ್ಟ್‌ಬಿನ್‌ಗೆ ಹಾಕುವ ಯೋಗ್ಯತೆ ನಿನಗಿಲ್ಲ ಎಂದು ಗುಡುಗಿದ ಅಶ್ವಿನಿ ಗೌಡ ನಿನ್ನಂತಹ ಚಾನೆಲ್‌ಗಳನ್ನು ನಾನು ನೂರು ಮಾಡಬಹುದು. ನನ್ನ 39-40 ವಯಸ್ಸಿಗೆ ನೂರು ಸಿನಿಮಾ ಮಾಡು ತೋರಿಸು ಎಂದು ರಕ್ಷಿತಾಗೆ ಚಾಲೆಂಜ್ ಹಾಕಿದರು. ಮುಖಕ್ಕೆ ಮಸಿ ಹಚ್ಚಿದರು.

ಅಶ್ವಿನಿ ಗೌಡ ಅವರ ಈ ಮಾತುಗಳಿಂದ ಕೆರಳಿದ ರಕ್ಷಿತಾ ನಾನು ಇನೋಸೆಂಟ್‌ಗಳಿಗೆ ಇನೋಸೆಂಟ್. ರಾಕ್ಷಸಿಯರಿಗೆ ನಾನು ರಾಕ್ಷಸಿ, ನಿಮ್ಮನ್ನು ಮೊದಲು ಈ ಮನೆಯಿಂದ ಹೊರಗೆ ಕಳುಹಿಸಿದ ನಂತರವೇ ನಾನು ಇಲ್ಲಿಂದ ಹೋಗೋದು ಇದು ನನ್ನ ಓಪನ್ ಚಾಲೆಂಜ್ ಎಂದು ಹೇಳಿದರು.

More from Filmibeat

English summary
"The war is on in BBK12! Rakshitha Shetty drops a bombshell, making a vicious oath and an open challenge directly to Ashwini Gowda. Find out the stunning reason behind their most intense rivalry yet!"
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X