twitter
    For Quick Alerts
    ALLOW NOTIFICATIONS  
    For Daily Alerts

    ಭಾಷೆಯ ಸವಾಲು ದಾಟಿ 'ಒಲವಿನ ನಿಲ್ದಾಣ'ದಲ್ಲಿ ನಿಂತಿರುವ ಮಂಗಳೂರು ಚೆಲುವೆ

    By ಪೂರ್ವ
    |

    ಪಟ ಪಟನೆ ಮಾತನಾಡುವ ಅಂದದ ಗೊಂಬೆ ಅಮಿತಾ ಸದಾಶಿವ ಕುಲಾಲ್. ತುಳುನಾಡಿನಲ್ಲಿ ಹುಟ್ಟಿ ಮಾತೃ ಭಾಷೆಯನ್ನು ಮರೆಯದೆ ತನ್ನ ಛಾಪನ್ನು ಕರ್ನಾಟಕದ ಉದ್ದ ಅಗಲಕ್ಕು ಚಾಚಿದ್ದಾರೆ. ಅನೇಕ ಜನರು ಕಿರುತೆರೆಗೆ, ಹಿರಿತೆರೆಗೆ ಆಗಮಿಸಿದರು ಕೂಡ ಅವರ ಮಾತು ಬೆಂಗಳೂರು ಕನ್ನಡದ ರೀತಿಯೇ ಇರುತ್ತದೆ ಆದರೆ ಅಮಿತಾ ಮಾತು ಮಾತ್ರ ಮಂಗಳೂರಿಗರು ಮಾತನಾಡುವ ಶೈಲಿಯಲ್ಲಿದೆ.

    ಅದನ್ನು ನೋಡಿದ ಜನರು ಕರಾವಳಿಯ ಜನರು ಫುಲ್ ಖುಷಿಯಾಗಿದ್ದಾರೆ. ಮಗುವಿನ ಹಾಗೆ ಮಾತನಾಡುವ ಇನ್ನೋಸೆಂಟ್ ಮಾತು, ಬಟ್ಟಲು ಕಣ್ಣು, ನೋಡಲು ಸುಂದರಿ ಈಕೆ. ಅಮಿತಾ ಸದಾಶಿವ ಸುಮಾರು ವರುಷ ಬಾಂಬೆಯಲ್ಲಿ ಇದ್ದರೂ. ಬಳಿಕ ಬಾಡಿಗೆ ಕಟ್ಟಲಾಗದೆ ಊರಿಗೆ ಮರಳಿದರು.

    ಕೋಸ್ಟಲ್‌ವುಡ್‌ನಲ್ಲಿ ಧೂಳೆಬ್ಬಿಸುತ್ತಿದೆ 'ರಾಜ್ ಸೌಂಡ್ಸ್ ಆಂಡ್ ಲೈಟ್ಸ್' ತುಳು ಸಿನಿಮಾಕೋಸ್ಟಲ್‌ವುಡ್‌ನಲ್ಲಿ ಧೂಳೆಬ್ಬಿಸುತ್ತಿದೆ 'ರಾಜ್ ಸೌಂಡ್ಸ್ ಆಂಡ್ ಲೈಟ್ಸ್' ತುಳು ಸಿನಿಮಾ

    ಅಮಿತಾ ಸದಾಶಿವ ಇದೀಗ 'ಒಲವಿನ ನಿಲ್ದಾಣ' ಎಂಬ ಧಾರಾವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇದಕ್ಕೂ ಮುನ್ನ ಹಲವಾರು ಆಡಿಶನ್ ಗಳನ್ನು ನೀಡಿದ್ದಾರೆ. ಆದರೆ ಯಾವುದರಲ್ಲೂ ಸೆಲೆಕ್ಟ್ ಆಗಿರಲಿಲ್ಲ. ''ನೀನು ಮಾತನಾಡುವ ಕನ್ನಡ ಸರಿ ಇಲ್ಲ'' ಎಂದೆಲ್ಲ ಹೇಳುತ್ತಿದ್ದರು. ಇದು ಅಮಿತಾಗೆ ಬಹಳ ಬೇಸರ ತರಿಸುತ್ತಿತ್ತು. ಆ ನಂತರ ಭಾಷೆಯ ವಿಷಯವಾಗಿ ಸತತ ಪರಿಶ್ರಮ ಹಾಕಿ ಅವಕಾಶ ಗಿಟ್ಟಿಸಿಕೊಂಡರು ಚೆಲುವೆ.'ಒಲವಿನ ನಿಲ್ದಾಣ'ದ ನಿರ್ದೇಶಕರು, ಅಮಿತಾ ಆಕ್ಟಿಂಗ್ ನೋಡಿ ಗುರುತಿಸಿ ಈ ಧಾರಾವಾಹಿಯಲ್ಲಿ ಚಾನ್ಸ್ ಕೊಟ್ಟರು.

    ಹತ್ತನೇ ತರಗತಿ ಫೇಲ್ ಎನ್ನುವ ಅಮಿತಾ

    ಹತ್ತನೇ ತರಗತಿ ಫೇಲ್ ಎನ್ನುವ ಅಮಿತಾ

    ಅಮಿತಾರ ಊರು ಮಂಗಳೂರು. ಯಾರಾದ್ರೂ ಏನು ಓದಿರೋದು ಅಂತ ಕೇಳಿದ್ರೆ ತಕ್ಷಣಕ್ಕೆ, ನಾನು ಹತ್ತನೇ ಕ್ಲಾಸ್ ಫೇಲು ಎಂದು ಹೇಳಿ ಥಟ್ಟನೆ ನಗುತ್ತಾರೆ. ಇವರ ಆ ನಗುವಿಗೆ ಅನೇಕ ಜನ ಫ್ಯಾನ್ಸ್ ಇದ್ದಾರೆ. ಅದೆಷ್ಟೋ ಬಾರಿ ಸೀರಿಯಲ್ ಸೆಟ್‌ನಲ್ಲೂ ಕೆಲವರು ನೀವೆಷ್ಟು ಓದಿದ್ದೀರಿ ಎಂದಾಗ ಹತ್ತನೇ ಕ್ಲಾಸ್ ಫೇಲ್ ಎಂದು ಹೇಳುತ್ತಾರೆ. ಈ ಥರ ಹೇಳಿ ಸೆಟ್ ಹುಡುಗರ ತಲೆಗೆ ಹುಳ ಬಿಟ್ಟಿದ್ದಾರೆ. ಆದರೆ ನಿಜಕ್ಕೂ ಈಕೆ ಕಂಪ್ಯೂಟರ್ ಸೈನ್ಸ್ ಪದವೀಧರೆ. ಭರತನಾಟ್ಯದಲ್ಲಿ ಸೀನಿಯರ್ ಎಕ್ಸಾಂ ಪಾಸ್ ಮಾಡಿ ದೇಶಾದ್ಯಂತ ಪ್ರದರ್ಶನ ಕೊಟ್ಟಿದ್ದಾರೆ.

    ಮುಂಬೈನಲ್ಲಿ ನಟನೆ ಕಲಿತ ಅಮಿತಾ

    ಮುಂಬೈನಲ್ಲಿ ನಟನೆ ಕಲಿತ ಅಮಿತಾ

    ಹದಿನೇಳನೇ ವಯಸ್ಸಿಗೇ ಬಾಂಬೆಗೆ ಹೋಗಿ ಅಲ್ಲಿ ಮಾಡೆಲಿಂಗ್ ನಲ್ಲಿ ಮಿಂಚಿದವರು. ಹಿಂದಿ ರಂಗಭೂಮಿಯಲ್ಲಿ ಆಕ್ಟಿಂಗ್ ಸ್ಕಿಲ್ಸ್ ಕಲಿತರು. ಆದರೆ ಕೋವಿಡ್ ಬಂದು ಪ್ರಾಜೆಕ್ಟ್‌ಗಳೆಲ್ಲ ಕೈ ಬಿಟ್ಟಾಗ ಅಲ್ಲಿ ರೂಮ್‌ ಬಾಡಿಗೆ ಕಟ್ಟಲಾಗದೇ ಮಂಗಳೂರಿನ ಮನೆಗೆ ಮರಳಿದರು. ಬಳಿಕ ಬೆಂಗಳೂರಿಗೆ ಆಗಮಿಸಿದ ಅಮಿತಾ ಸದಾಶಿವ ಅನೇಕ ಸಿನಿಮಾ, ಸೀರಿಯಲ್ ಗೆ ಆಡಿಷನ್ ಕೊಟ್ಟರು, ಆದರೆ ಯಾವುದರಲ್ಲೂ ಅವಕಾಶ ಸಿಗಲಿಲ್ಲ. ಎಲ್ಲಿ ಹೋದರೂ ಇವರ ಭಾಷೆಯೇ ಅಡ್ಡಿ ಆಗ್ತಿತ್ತು. ಇವರದು ಮಂಗಳೂರು ಶೈಲಿಯ ಅಚ್ಚಗನ್ನಡ. ಮಾತೃಭಾಷೆ ತುಳುವಾದರೂ ಇವರ ತಂದೆಗೆ ತನ್ನ ಮಗಳು ಮುಂದೆ ಕನ್ನಡ ಎಂಎ ಮಾಡಬೇಕು ಅನ್ನೋ ಕನಸು ಇತ್ತು.

    ಹಲವು ಆಡಿಷನ್ ಗಳಲ್ಲಿ ನಪಾಸಾದ ಅಮಿತಾ

    ಹಲವು ಆಡಿಷನ್ ಗಳಲ್ಲಿ ನಪಾಸಾದ ಅಮಿತಾ

    ಇದರಿಂದ ಆಗಿ ಮನೆಯಲ್ಲೂ ಮಾತೃಭಾಷೆ ತುಳು ಆಗಿದ್ದರೂ ಅದನ್ನು ಬಿಟ್ಟು ಕನ್ನಡವನ್ನೇ ಮಾತಾಡುತ್ತಿದ್ದರು. ಆದರೆ ಮಂಗಳೂರು ಶೈಲಿಯ ಕನ್ನಡವೇ ಇವರ ಶತ್ರುವಾಗಿತ್ತು. ಸೀರಿಯಲ್‌ಗೆ ಬೆಂಗಳೂರಿಗರು ಮಾತನಾಡುವ ರೀತಿಯ ಹುಡುಗಿ ಬೇಕಿತ್ತು ಆದರೆ ಲುಕ್‌ನಲ್ಲಿ ಸೆಲೆಕ್ಟ್ ಆದರೂ ಭಾಷೆ ಸರಿ ಹೋಗದ ಕಾರಣ ಅದೆಷ್ಟೋ ಆಡಿಶನ್ ಕೊಟ್ಟರೂ ಆಯ್ಕೆ ಆಗಿರಲಿಲ್ಲ. ಇದರಿಂದ ಅಮಿತಾ ಸದಾಶಿವ ನೊಂದುಕೊಂಡಿದ್ದರು. ಆಡಿಷನ್ ನೀಡುತ್ತಾ ನೀಡುತ್ತಾ ನಿರ್ಮಾಪಕಿ ಶ್ರುತಿ ನಾಯ್ಡು ಮತ್ತು ನುರಿತ ನಿರ್ದೇಶಕ ರಮೇಶ್ ಇಂದಿರಾ ಅವರ ಎದುರು ಆಡಿಷನ್ ನೀಡಿ ಸೆಲೆಕ್ಟ್ ಆದರೂ.

    ಬೆಂಬಲ ನೀಡಿದ 'ಒಲವಿನ ನಿಲ್ದಾಣ' ತಂಡ

    ಬೆಂಬಲ ನೀಡಿದ 'ಒಲವಿನ ನಿಲ್ದಾಣ' ತಂಡ

    'ಒಲವಿನ ನಿಲ್ದಾಣ' ಆಡಿಷನ್‌ಗೆ ಅಮಿತಾರನ್ನು ಆಯ್ಕೆ ಮಾಡಿದವರು, ''ನಿಮ್ಮ ಭಾಷೆ ಸರಿ ಇಲ್ಲ ಅನಿಸಿದರೆ ನಾವು ಸರಿ ಪಡಿಸ್ತೀವಿ, ನೀನು ಆಕ್ಟಿಂಗ್ ಮಾಡು'' ಅಂತ ಕಾನ್ಫಿಡೆನ್ಸ್ ತುಂಬಿದರು. ಅದೇ ಆತ್ಮವಿಶ್ವಾಸದಲ್ಲಿ ಅಮಿತಾ ಸದಾಶಿವ 'ಒಲವಿನ ನಿಲ್ದಾಣ' ಸೀರಿಯಲ್ ನಾಯಕಿಯಾಗಿ ಉತ್ತಮವಾಗಿ ಅಭಿನಯಿಸುತ್ತಿದ್ದಾರೆ. ಅಪ್ಪಿತಪ್ಪಿ ಮಂಗಳೂರು ಕನ್ನಡ ನುಸುಳಿದರೆ ರಂಗಭೂಮಿ ಹಿನ್ನೆಲೆ ಇರುವ ಹಿರಿಯ ನಟ ಮಂಡ್ಯ ರಮೇಶ್, 'ಮಂಗಳೂರು ಕನ್ನಡ..' ಅಂತ ಎಚ್ಚರಿಸುತ್ತಾರಂತೆ. ಆಗ ಮತ್ತೆ ಮಲೆನಾಡ ಕನ್ನಡಕ್ಕೆ ಶಿಫ್ಟ್ ಆಗುತ್ತಾರೆ ಅಮಿತಾ. 'ಒಲವಿನ ನಿಲ್ದಾಣ'ದ ತಾರಿಣಿ ಎಂಬ ಮುದ್ದು ಹುಡುಗಿ ಪಾತ್ರದಲ್ಲಿ ಅಮಿತಾ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಅಕ್ಷಯ್ ನಾಯಕನಾಗಿ ನಟಿಸುತ್ತಿದ್ದಾರೆ. ಮಲೆನಾಡ ಹುಡುಗಿ, ಬೆಂಗಳೂರು ಹುಡುಗನ ಪ್ರೇಮ, ಸಂಬಂಧ, ಸ್ಟ್ರಗಲ್ ಗಳ ಕಥೆ ಈ ಸೀರಿಯಲ್‌ನದು

    English summary
    Olavina Nildana serial heroin Amitha Sadashiva journey, know here serial journey.
    Tuesday, July 12, 2022, 18:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X