DKD: ಉಪ್ಪಿ-ಶಿವಣ್ಣ ಜುಗಲ್ಬಂದಿ; ಎಲ್ರೂ ಸೇರಿ ಹ್ಯಾಟ್ರಿಕ್ ಹೀರೋ ಕಣ್ಣಲ್ಲಿ ನೀರಾಕಿಸಿಬಿಟ್ರು!

By ಎಸ್ ಸುಮಂತ್

ಜೀ ಕನ್ನಡದಲ್ಲಿ ಡಿಕೆಡಿ ಕಾರ್ಯಕ್ರಮದ ಮೂಲಕ ಡ್ಯಾನ್ಸ್ ಬರದವರಿಗೂ ಹೆಜ್ಜೆ ಹೇಳಿಕೊಟ್ಟು ಪಕ್ಕಾ ಡ್ಯಾನ್ಸರ್ ಆಗಿ ಮಾಡಿದ್ದಾರೆ. ಶನಿವಾರ ಮತ್ತು ಭಾನುವಾರ ಮಹಾಸಂಚಿಕೆ ನಡೆದಿದೆ. ಈ ಮಹಾಸಂಚಿಕೆಯಲ್ಲಿ ಸಾಕಷ್ಟು ಎಮೋಷನಲ್ ದೃಶ್ಯಗಳು ಕಂಡು ಬಂದಿವೆ. ಅದರಲ್ಲೂ ಶಿವಣ್ಣನನ್ನು ಅಳಿಸಿದ ಘಟನೆಯೂ ನಡೆದಿದೆ.

ಸ್ಪೆಷಲ್ ಅಂದ್ರೆ ಈ ಮಹಾಸಂಚಿಕೆ ವೇದಿಕೆ ಮೇಲೆ ದಿಗ್ಗಜರನ್ನ ಕರೆಸಲಾಗಿದೆ. ಮತ್ತೆ ಹಳೆಯ ನೆನಪುಗಳಿಗೆ ಜಾರುವಂತೆ ಮಾಡಿದ್ದಾರೆ. ಉಪೇಂದ್ರ ಹಾಗೂ ಶಿವಣ್ಣ ಒಂದೇ ವೇದಿಕೆ ಮೇಲೆ ಕೂತಿದ್ದನ್ನು ಕಂಡು ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

Om film director Upendra and Shivarajkumar reunited in Zee kannada DKD stage

'ಓಂ' ಸಿನಿಮಾದಿಂದಾನೂ ಒಟ್ಟಾಗಿರಿವ ಶಿವಣ್ಣ -ಉಪೇಂದ್ರ ಲವಕುಶ, ಪ್ರೀತ್ಸೆ ಅಂತ ಸೂಪರ್ ಡೂಪರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಸದ್ಯ '45' ಚಿತ್ರದಲ್ಲೂ ಒಂದಾಗಿದ್ದು, ಈಗ ಡಿಕೆಡಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವಣ್ಣ- ಉಪ್ಪಿ ಸಮಾಗಮ

ಈ ವಾರದ ಮಹಾಸಂಚಿಕೆಯಲ್ಲಿ ಶಿವಣ್ಣ ಮತ್ತು ಉಪ್ಪಿ ಮಹಾಸಂಗಮವಾಗಿದೆ. ಅದರ ಜೊತೆಗೆ ಡಾಲಿ ಧನಂಜಯ, ಸುಧಾರಾಣಿ, ಗುರುಕಿರಣ್ ಕೂಡ ಬಂದಿದ್ದಾರೆ. ಶಿವಣ್ಣ ಜೊತೆಗೆ ಮೊದಲ ಸಿನಿಮಾ 'ಆನಂದ್'ಗೆ ಜೋಡಿಯಾಗಿದ್ದು ಸುಧಾರಾಣಿ. ಹೀಗಾಗಿ ವೇದಿಕೆ ಮೇಲೆ ಉಪ್ಪಿ ಜೊತೆಗೆ ಮಾತ್ರವಲ್ಲ ಸುಧಾರಾಣಿ ಜೊತೆಗೂ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಉಪ್ಪಿ ಕೊಟ್ಟ ಲಾಂಗ್ ಬೀಸಿದ ಶಿವಣ್ಣ

ಶಿವಣ್ಣ ಉಪ್ಪಿ ಸ್ಪೆಷಲ್ ಎಪಿಸೋಡ್ ಆಗಿರುವ ಕಾರಣ ಇಬ್ಬರಿಗೂ ವಿಶೇಷವಾಗಿ ಉಡುಗೊರೆ ನೀಡಿದ್ದಾರೆ. ಉಪ್ಪಿ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕಿ, ಎಂಟರ್ಟೈನ್ಮೆಂಟ್ ನೀಡಿದ್ದಾರೆ. ಅಷ್ಟೆ ಅಲ್ಲ ಪ್ರಿಯಾಂಕ ಅವರನ್ನು ವೇದಿಕೆ ಕರೆಸಿ, ಸರ್ಪೈಸ್ ನೀಡಿದ್ದಾರೆ. ಶಿವಣ್ಣ ಹಿಡಿದರೆ ಲಾಂಗ್ ಗೆ ಒಂದು ಕಳೆ ಎಂಬ ಮಾತಿದೆ. ಸತ್ಯನ ಕೈಗೆ ಉಪ್ಪಿ ಲಾಂಗ್ ಕೊಟ್ಟಾಗಲೇ ಚೆಂದ. ಡಿಕೆಡಿ ಮಹಾಸಂಚಿಕೆಯ ವೇದಿಕೆಯಲ್ಲೂ ಅದೇ ಆಗಿದೆ‌. ಉಪ್ಪಿ ಕೊಟ್ಟ ಲಾಂಗ್ ಅನ್ನು ಶಿವಣ್ಣ ಜೋರಾಗಿಯೇ ಬೀಸಿದ್ದಾರೆ.

ಗೀತಕ್ಕನಿಗೆ ಥ್ಯಾಂಕ್ಸ್ ಹೇಳಿದ ಶಿವಣ್ಣ

ಇನ್ನು ಡಿಕೆಡಿ ವೇದಿಕೆಯಲ್ಲಿ ಸರಿಗಮಪ ಸ್ಪರ್ಧಿಗಳು ಕೂಡ ಬಂದಿದ್ದಾರೆ. ಶಿವಣ್ಣ ಅವರಿಗೆ ಹಾಡು ಹೇಳುವ ಮೂಲಕ ಗೌರವ ನೀಡಿದ್ದಾರೆ. ವೇದಿಕೆಗೆ ಬಂದ ದಿಯಾ ಹೆಗ್ಡೆ ಲಾಂಗು ಗ್ಯಾಂಗು ಅಂತ ಹಾಡಿದ್ದಾರೆ. ಗೀತಕ್ಕ-ಶಿವಣ್ಣ ಫೋಟೋ ಹಾಕಿ ನಿನ್ನೆ ಮೊನ್ನೆವರೆಗೂ ನಾ ಹಾಡಿದ್ದಾರೆ, ಪಾರ್ವತಮ್ಮ ಹಾಗೂ ಶಿವಣ್ಣ ಫೋಟೋಗೆ ಭೂಮಿ ತಾಯಿಯ ಹಾಡು ಹಾಡಿದ್ದಾರೆ. ಈ ಹಾಡುಗಳಿಂದ ಶಿವಣ್ಣನಿಗೆ ಕಣ್ಣು ತುಂಬಿ ಬಂದಿದೆ. ಮೊದಲು ತಂದೆ ತಾಯಿಯನ್ನು ನೆನೆದ ಶಿವಣ್ಣ, ತನ್ನ ಜೀವನದಲ್ಲಿ ಗೀತಕ್ಕನ ಪಾತ್ರವನ್ನು ಹೇಳಿ ಹಣೆಗೊಂದು ಮುತ್ತುಕೊಟ್ಟಿದ್ದಾರೆ.

ಶಿವಣ್ಣ ಎಂದರೆ ಅಚ್ಚುಮೆಚ್ಚು

ಮಹಾಸಂಚಿಕೆಗೆ ಡಾಲಿ ಧನಂಜಯ ಕೂಡ ಬಂದಿದ್ದಾರೆ. ಈ ವೇಳೆ ಧನಂಜಯ, ಶಿವಣ್ಣ ಎಂದು ಕೂಗಿದಾಗ, ಶಿವಣ್ಣ ತನ್ನದೇ ಸ್ಟೈಲ್‌ನಲ್ಲಿ ಹೇಯ್ ಡಾಲಿ ಎಂದು ಕರೆದಿದ್ದಾರೆ. ಆಗ ಡಾಲಿ ಇವತ್ತು ಅನ್ ಕಂಡಿಷನ್ ಲವ್ ಅಂತ ಪಡೆಯುತ್ತಿದ್ದಾರೆ, ಅಂದ್ರೆ ಅದು ಶಿವಣ್ಣ ಮಾತ್ರ ಎಂದಿದ್ದಾರೆ. ಈ ಮಾತಿನಿಂದ ಶಿವಣ್ಣ ಎಮೋಷನಲ್ ಆಗಿದ್ದಾರೆ. ಅಭಿಮಾನಿಗಳ ಅಭಿಮಾನದ ಜೊತೆಗೆ ಇಂಡಸ್ಟ್ರಿಯಲ್ಲೂ ಇಷ್ಟೊಂದು ಅಭಿಮಾನ ಇರುವುದು ಶಿವಣ್ಣನ ಕಣ್ಣಲ್ಲಿ ನೀರು ತರಿಸಿದೆ.

More from Filmibeat

English summary
Zee kannada DKD: Here is the details about Shivanna got unconditional love.. Shivanna was in tears at Dolly's words;
Read more about: tv serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X