'ಜೋಡಿ ನಂ.1' ವೇದಿಕೆಯಲ್ಲಿ 'ಓಂ' ಸಂಭ್ರಮ; ಶಿವಣ್ಣ, ಪ್ರೇಮಾ ಪಾತ್ರಕ್ಕೆ ಗೋಪಿ, ಸುನೇತ್ರ ಡಬ್ಬಿಂಗ್ ಜುಗಲ್‌ಬಂದಿ

ಉಪೇಂದ್ರ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ನಟನೆಯ ಬ್ಲಾಕ್‌ಬಸ್ಟರ್ ಓಂ ಸಿನಿಮಾ 31 ವರ್ಷ ಪೂರೈಸಿದೆ. ಚಿತ್ರದ ಪ್ರತಿ ಪಾತ್ರ, ಪ್ರತಿ ದೃಶ್ಯ, ಪ್ರತಿ ಹಾಡು ಪ್ರೇಕ್ಷಕರ ಮನಗೆದ್ದಿತ್ತು. ವರ್ಷಗಳೇ ಕಳೆದರೂ 'ಓಂ' ಕ್ರೇಜ್ ಮಾತ್ರ ಕಮ್ಮಿ ಆಗಲ್ಲ.

ಜೀ ಕನ್ನಡ ವಾಹಿನಿಯ 'ಜೋಡಿ ನಂ.1' ವೇದಿಕೆಯಲ್ಲಿ 'ಓಂ' ಸಿನಿಮಾವನ್ನು ಮೆಲುಕು ಹಾಕಲಾಗಿದೆ. ಶೋನಲ್ಲಿ ಮಿಮಿಕ್ರಿ ಗೋಪಿ ಸ್ಪರ್ಧಿಯಾಗಿರುವುದು ಗೊತ್ತೇಯಿದೆ. ತಮ್ಮ ಕಂಠದ ಮೂಲಕ ಖ್ಯಾತ ಕಲಾವಿದರು, ರಾಜಕೀಯ ನಾಯಕರನ್ನು ಗೋಪಿ ಕಣ್ಮುಂದೆ ತರುತ್ತಾರೆ. ಗೋಪಿ ಮಿಮಿಕ್ರಿಗೆ ಶಿವರಾಜ್‌ಕುಮಾರ್ ಕೂಡ ದೊಡ್ಡ ಅಭಿಮಾನಿ. ಈ ವಾರ ಕಂಠದಾನ ಕಲಾವಿದೆ ಸುನೇತ್ರ ಪಂಡಿತ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದಾರೆ.

Om Scene Recreated on Jodi No 1 Stage Mimicry Gopi and Sunetra Pandit Impress Viewers

'ಓಂ' ಚಿತ್ರದ ಸೂಪರ್ ಹಿಟ್ ಸನ್ನಿವೇಶಕ್ಕೆ ಲೈವ್‌ನಲ್ಲಿ ಮಿಮಿಕ್ರಿ ಗೋಪಿ ಹಾಗೂ ಸುನೇತ್ರ ವಾಯ್ಸ್ ಡಬ್ ಮಾಡಿ ತೋರಿಸಿದ್ದಾರೆ. ಮಧು ಹುಟ್ಟುಹಬ್ಬದ ದಿನ ಸತ್ಯ ಆಕೆಗೆ ಕಾಟ ಕೊಡುವ ಸನ್ನಿವೇಶ ಅದು. ಸಿನಿಮಾಗಳಿಗೆ ಡಬ್ಬಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಅಂದಹಾಗೆ 'ಓಂ' ಚಿತ್ರದಲ್ಲಿ ನಟಿ ಪ್ರೇಮಾ ಅವರ ಮಾಧುರಿ ಪಾತ್ರಕ್ಕೆ ಇದೇ ಸುನೇತ್ರಾ ಧ್ವನಿ ನೀಡಿದ್ದರು. ಅದಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಮುಂದೆ ನೂರಾರು ಸಿನಿಮಾಗಳಿಗೆ ಆಕೆ ಕಂಠದಾನ ಕಲಾವಿದೆಯಾಗಿ ಕೆಲಸ ಮಾಡುವಂತಾಯಿತು. ಜೀ ಕನ್ನಡ ಜೋಡಿ ನಂಬರ್ 1 ವೇದಿಕೆಯಲ್ಲಿ ಶಿವಣ್ಣನ ಸತ್ಯ ಪಾತ್ರಕ್ಕೆ ಗೋಪಿ ಹಾಗೂ ಮಧು ಪಾತ್ರಕ್ಕೆ ಸುನೇತ್ರ ವಾಯ್ಸ್ ಕೊಟ್ಟಿದ್ದಾರೆ.

ವೇದಿಕೆಯಲ್ಲಿ 'ಓಂ' ವೈಭವವನ್ನು ಕಂಡು ಎಲ್ಲರೂ ಎಂಜಾಯ್ ಮಾಡಿದ್ದಾರೆ. ಗೋಪಿ ಹಾಗೂ ಸುನೇತ್ರ ಪ್ರಯತ್ನಕ್ಕೆ ತೀರ್ಪುಗಾರರು ಸೇರಿದಂತೆ ಅಲ್ಲಿದ್ದ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಸುನೇತ್ರ ಅವರ ವಾಯ್ಸ್ ಇವತ್ತಿಗೂ ಬದಲಾಗಿಲ್ಲ. ನೆಟ್ಟಿಗರು ಕೂಡ ಈ ಜುಗಲ್‌ಬಂದಿ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ. ಜೋಡಿ ನಂ.1 ಕಾರ್ಯಕ್ರಮಕ್ಕೆ ನಟ ರಾಜೇಶ್ ನಟರಂಗ ಹಾಗೂ ನಟಿ ಛಾಯಾ ಸಿಂಗ್ ತೀರ್ಪುಗಾರರಾಗಿದ್ದಾರೆ.

ವಜ್ರೆಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ 'ಓಂ' ಸಿನಿಮಾ ನಿರ್ಮಾಣ ಮಾಡಿದ್ದರು. ಅವತ್ತಿನ ಕಾಲದ ನಿಜವಾದ ಬೆಂಗಳೂರು ರೌಡಿಗಳು ಚಿತ್ರದಲ್ಲಿ ನಟಿಸಿದ್ದರು. ಹಂಸಲೇಖ ಸಾಹಿತ್ಯ ಹಾಗೂ ಸಂಗೀತದಲ್ಲಿ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಗೌರಿಶಂಕರ್ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. 1995ರ ಮೇ 19ರಂದು ಸಿನಿಮಾ ತೆರೆಗೆ ಬಂದಿತ್ತು. ಬಳಿಕ ಹಲವು ಬಾರಿ ರೀ-ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಂಡಿತ್ತು.

'ಓಂ' ಚಿತ್ರದ ಬರೆದ ಕೆಲ ದಾಖಲೆಗಳನ್ನು ಕನ್ನಡದ ಮತ್ಯಾವುದೇ ಸಿನಿಮಾ ಬರೆಯಲಿಲ್ಲ. ಕನ್ನಡದಲ್ಲಿ ರೌಡಿಸಂ ಸಿನಿಮಾಗಳಿಗೆ ನಾಂದಿ ಹಾಡಿದ ಸಿನಿಮಾ ಇದು. ಭೂಗತಲೋಕದ ಕಥೆಗೆ ಪ್ರೇಮಕಥೆಯನ್ನು ಸೇರಿಸಿ ಉಪೇಂದ್ರ 'ಓಂ' ಸಿನಿಮಾ ಕಟ್ಟಿಕೊಟ್ಟಿದ್ದರು. ಒಂದು ಹಂತಕ್ಕೆ ಸೆನ್ಸಾರ್ ಮಂಡಳಿ ಸಿನಿಮಾ ಬಿಡುಗಡೆಗೆ ಅವಕಾಶ ಕೊಟ್ಟಿರಲಿಲ್ಲ. ಬಳಿಕ ಸಮಸ್ಯೆ ಬಗೆಹರಿದು ಸಿನಿಮಾ ತೆರೆಗೆ ಬಂದಿತ್ತು. ಭರ್ಜರಿ ಓಪನಿಂಗ್ ಪಡೆದು ಬಾಕ್ಸಾಫೀಸ್ ಶೇಕ್ ಮಾಡಿತ್ತು.

ತೆಲುಗು ಹಾಗೂ ಹಿಂದಿಗೂ 'ಓಂ' ಸಿನಿಮಾ ರೀಮೆಕ್ ಆಗಿತ್ತು. ಟಾಲಿವುಡ್‌ನಲ್ಲಿ ಸ್ವತಃ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದರು. ಆದರೆ ಯಾಕೋ ಸಿನಿಮಾ ಗೆಲ್ಲಲಿಲ್ಲ. ಸತ್ಯ ಆಗಿ ರಾಜಶೇಖರ್ ಹಾಗೂ ಮಾಧುರಿ ಪಾತ್ರದಲ್ಲಿ ಪ್ರೇಮಾ ತೆಲುಗಿನಲ್ಲಿ ಕೂಡ ನಟಿಸಿದ್ದರು. ಇದೇ ಸಿನಿಮಾದಿಂದ ಸ್ಫೂರ್ತಿ ಪಡೆದು ಬಾಂಗ್ಲಾದೇಶದಲ್ಲಿ ಒಂದು ಸಿನಿಮಾ ನಿರ್ಮಾಣವಾಗಿತ್ತು. ಹಿಂದಿ ರೀಮೆಕ್‌ನಲ್ಲಿ ಸನ್ನಿ ಡಿಯೋಲ್ ಹೀರೊ ಆಗಿ ನಟಿಸಿದ್ದರು.

Read more about: kannada shivarajkumar prema
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X