"ಜಾಕಿ.. ಜಾಕಿ.. ಜಾಕಿ" ಎನ್ನುತ್ತಾ ಹೆಜ್ಜೆ ಹಾಕಿದ ಬಿಗ್‌ಬಾಸ್ ವಿನ್ನರ್ ಕಾರ್ತಿಕ್; ಕಿಶನ್ ಜೊತೆ ಭರ್ಜರಿ ಸ್ಟೆಪ್ಸ್

By ಅನಿತಾ ಬನಾರಿ

ಬಿಗ್‌ಬಾಸ್‌ ಖ್ಯಾತಿಯ ಕಾರ್ತಿಕ್ ಮಹೇಶ್ ಎಲ್ಲರಿಗೂ ಗೊತ್ತು. ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ಆಗಿರುವ ನಟ ಕಾರ್ತಿಕ್ ಮಹೇಶ್ ಈ ರಿಯಾಲಿಟಿ ಶೋನಿಂದ ಪಾಪ್ಯುಲಾರಿಟಿ ಪಡೆದಿದ್ದಾರೆ. ತಮ್ಮ ಸರಳತೆಯಿಂದ ಕನ್ನಡದ ಮನೆ ಮಾತಾಗಿರುವ ಕಾರ್ತಿಕ್ ಮಹೇಶ್ ಇದೀಗ ಡಾನ್ಸರ್ ಕಿಶನ್ ಅವರೊಂದಿಗೆ ಸೇರಿ ಜಾಕಿ ಜಾಕಿ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಇನ್ನೊಂದು ಕಡೆ ಕಿಶನ್ ಬಿಳಗಲಿ ತಮ್ಮ ಡ್ಯಾನ್ಸ್‌ನಿಂದಲೇ ಜನರಿಗೆ ಪರಿಚಯ. ಆಗಾಗ ಸೆಲೆಬ್ರಿಟಿಗಳ ಜೊತೆ ಹಾಡಿಗೆ ಸ್ಟೆಪ್ ಹಾಕುವ ಇವರು, ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಜೊತೆ ಹೆಜ್ಜೆ ಹಾಕಿದ್ದಾರೆ. ಜಾಕಿ ಹಾಡಿಗೆ ಹಾಕಿದ ಈ ಜೋಡಿಯ ಹೆಜ್ಜೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

On the occasion of Puneeth Rajkumar birthday actor Kishan Karthik danced for Jackie song

ನಿನ್ನೆ (ಮಾರ್ಚ್ 17) ನಟಸಾರ್ವಭೌಮ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವಿತ್ತು. ಕರ್ನಾಟಕದ ಜನತೆ ಎಲ್ಲರೂ ಬೇರೆ ಬೇರೆ ರೀತಿಯಲ್ಲಿ ನಟ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದರು. ಆ ನಿಟ್ಟಿನಲ್ಲಿ ಡ್ಯಾನ್ಸರ್ ಕಿಶನ್ ಅವರು ಕಾರ್ತಿಕ್ ಮಹೇಶ್ ಅವರೊಂದಿಗೆ ಕೂಡಿ ಅಪ್ಪು ನಟಿಸಿದ 'ಜಾಕಿ' ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

"ಜಾಕಿ.. ಜಾಕಿ.. ಜಾಕಿ.." ಹಾಡಿಗೆ ಕಿಶನ್ ಬಿಳಗಲಿ ಮತ್ತು ಕಾರ್ತಿಕ್ ಮಹೇಶ್ ಹೆಜ್ಜೆ ಹಾಕಿದ್ದು, ನೆಟ್ಟಿಗರ ಮನ ಕದ್ದಿದ್ದಾರೆ. ಕಪ್ಪು ಜಾಕೆಟ್‌ನಲ್ಲಿ ಕಿಶನ್ ಹಾಗೂ ಕಾರ್ತಿಕ್ ಮಹೇಶ್ ಮಿಂಚಿದ್ದು, ಪುನೀತ್ ರಾಜಕುಮಾರ್ ನಟಿಸಿದ ಸಿನಿಮಾ ಫೇಮಸ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದೀಗ ಈ ವಿಡಿಯೋ ಬಹಳ ವೈರಲ್ ಆಗಿದ್ದು ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾ ತುಂಬಾ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟದ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವುದಕ್ಕೆ ಹಲವಾರು ಫೋಟೋಗಳನ್ನು ಶೇರ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. ಅದೇ ರೀತಿ ಇದೀಗ ನಟ ಕಾರ್ತಿಕ್ ಮಹೇಶ್ ಹಾಗೂ ಕಿಶನ್ ಬಿಳಗಲಿ ದಿವಂಗತ ನಟ ಪುನೀತ್ ರಾಜಕುಮಾರ್ ಅವರ 'ಜಾಕಿ' ಸಿನಿಮಾದ "ಜಾಕಿ.. ಜಾಕಿ.." ಹಾಡಿಗೆ ಸ್ಟೆಪ್ ಹಾಕಿ 49ನೇ ವರ್ಷದ ಹುಟ್ಟುಹಬ್ಬದಂದು ಅವರನ್ನು ನೆನೆದಿದ್ದಾರೆ.

ಈ ವಿಡಿಯೋ ಈಗಾಗಲೇ ಬಹಳ ವೈರಲ್ ಆಗಿದ್ದು 77,000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಅಂದಹಾಗೆ ನೆಟ್ಟಿಗರಂತೂ ಈ ವಿಡಿಯೋದಿಂದ ಬಹಳ ಖುಷಿಯಾಗಿದ್ದು, ಅಪ್ಪು ಅಭಿಮಾನಿಗಳು ಹಾಗೂ ಫಾಲೋವರ್ಸ್ ಈ ವಿಡಿಯೋಗೆ ಪಾಸಿಟಿವ್ ಕಮೆಂಟ್ಸ್ ಮಾಡಿ ಹುರಿದುಂಬಿಸಿದ್ದಾರೆ.

ಈ ವಿಡಿಯೋ ಪೋಸ್ಟ್ ಮಾಡುವಾಗ ನಟ ಕಾರ್ತಿಕ್ ಮಹೇಶ್ "ಸರಳತೆಯ ಸಾಮ್ರಾಟ , ನಗುವಿನ ಒಡೆಯ , ಪ್ರೀತಿಗೆ ಪರಮಾತ್ಮ ,ಬದುಕಿಗೆ ಸ್ಪೂರ್ತಿ ನಮ್ಮ ಪವರ್ ಸ್ಟಾರ್." ಎಂಬ ಕ್ಯಾಪ್ಶನ್ ನೀಡಿದ್ದು ಇದು ಅಭಿಮಾನಿಗಳಿಗೆ ಬಹಳ ಖುಷಿ ತಂದಿದೆ. ಬಹಳಷ್ಟು ಜನ ಅಭಿಮಾನಿಗಳು ಅಪ್ಪು ಅವರ ಹಾಡುಗಳ ಸಾಲುಗಳನ್ನು ಹಾಕಿ ಕಮೆಂಟ್ ಮಾಡಿದ್ದೂ ಇದೆ.

More from Filmibeat

English summary
Kishan Bilagali and Karthik Mahesh wished Power Star Puneeth Rajkumar on his birthday with Jackie a dance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X