ರಿಯಾಝ್ ಮೇಲೆ ಗೂಬೆ ಕೂರಿಸಿದ ಜಗನ್ ಗೆ ಛೀಮಾರಿ ಹಾಕಿದ ನೆಟ್ಟಿಗರು!

'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಕಂಡ್ರೆ ವೀಕ್ಷಕರು ಉರಿದು ಬೀಳ್ತಿದ್ದಾರೆ. 'ಬಿಗ್ ಬಾಸ್' ಮನೆಯೊಳಗೆ ಇದ್ದಾಗ ಜಗನ್ ಮಾಡಿಕೊಂಡ ರಂಪ-ರಾದ್ಧಾಂತಗಳು ಒಂದೆರಡಲ್ಲ.

ಜಗನ್ ಜಗಳಗಳನ್ನ ನೋಡಿ ನೋಡಿ ವೀಕ್ಷಕರಿಗೆ, ಅದರಲ್ಲೂ ನೆಟ್ಟಿಗರಿಗೆ ಸಾಕಾಗಿ ಹೋಗಿತ್ತು. ವೀಕ್ಷಕರ ಬೆಂಬಲ ಇಲ್ಲದೆ, ಜಗನ್ ಕೂಡ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದರು. ಇದೀಗ ಮತ್ತೆ ವೀಕ್ಷಕರ ಕೆಂಗಣ್ಣಿಗೆ ಜಗನ್ ಗುರಿಯಾಗಿದ್ದಾರೆ. ಅದಕ್ಕೆ ಕಾರಣ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ದಿನ ಜಗನ್ ಬಾಯಿಂದ ಬಂದ ಕೆಲ ಮಾತುಗಳು.

''ನಮ್ಮಲ್ಲಿ ಸೆಲೆಬ್ರಿಟಿ, ಕಾಮನ್ ಮ್ಯಾನ್ ಅನ್ನೋದು ಇಲ್ಲವೇ ಇಲ್ಲ. ಮನೆಯೊಳಗೆ ನಾವು ಯಾವತ್ತೂ ಅದನ್ನ ಮಾತನಾಡಿಲ್ಲ. ಮನಸ್ಸಿನಲ್ಲೂ ಅದನ್ನ ಇಟ್ಟುಕೊಂಡಿಲ್ಲ. ಯಾರೋ ಒಬ್ಬರು ಆ ಬೀಜ ಹಾಕಿದರು. ಅದು ಇವತ್ತು ಆಲದ ಮರ ಆಗಿ ಇಲ್ಲಿರುವ ಅಷ್ಟೂ ಜನಕ್ಕೂ ತುಂಬಾ ಎಫೆಕ್ಟ್ ಆಗುತ್ತಿದೆ'' ಎಂದು ಜಗನ್ ಹೇಳಿದರು. ''ಅಷ್ಟಕ್ಕೂ ಆ ಬೀಜ ಹಾಕಿದ್ದು ಯಾರು'' ಎಂದು ಸುದೀಪ್ ಕೇಳಿದಾಗ ರಿಯಾಝ್ ಕಡೆ ಬೆಟ್ಟು ಮಾಡಿ ತೋರಿಸಿದರು ಜಗನ್. ಇದೇ ಈಗ ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.

''ಎಲ್ಲದರಲ್ಲೂ ಭೇದಭಾವ ಮಾಡೋದು ಮಾಡಿ ಈಗ ರಿಯಾಝ್ ಮೇಲೆ ಗೂಬೆ ಕೂರಿಸಲಾಗಿದೆ'' ಎಂದು ನೆಟ್ಟಿಗರು ಕಲರ್ಸ್ ಸೂಪರ್ ಫೇಸ್ ಬುಕ್ ಪೇಜ್ ನಲ್ಲಿಯೇ ಕೆಂಡಕಾರುತ್ತಿದ್ದಾರೆ. ಬೇಕಾದ್ರೆ, ಆ ಕಾಮೆಂಟ್ ಗಳನ್ನ ನೀವೇ ನೋಡಿ...

ಟ್ರೋಲ್ ಆದ ಜಗನ್

ಟ್ರೋಲ್ ಆದ ಜಗನ್

''ನಮ್ಮಲ್ಲಿ ಸೆಲೆಬ್ರಿಟಿ, ಕಾಮನ್ ಮ್ಯಾನ್ ಅನ್ನೋದು ಇಲ್ಲವೇ ಇಲ್ಲ'' ಅಂತ ಗ್ರ್ಯಾಂಡ್ ಫಿನಾಲೆ ದಿನ ಹೇಳಿದ್ದ ಜಗನ್, ಅದಕ್ಕೂ ಮುನ್ನ ಕಾಮನ್ ಮ್ಯಾನ್ ಗಳನ್ನು ಬಿಟ್ಟು ಸೆಲೆಬ್ರಿಟಿಗಳು ಮಾತ್ರ ಒಂದು ಪಾರ್ಟಿ ಮಾಡಿದ್ದರು. ಈಗ ಅದೇ ಸುದ್ದಿಯನ್ನ ಇಟ್ಟುಕೊಂಡು ಜಗನ್ ವಿರುದ್ಧ ಟ್ರೋಲ್ ಮಾಡಲಾಗುತ್ತಿದೆ. (ಚಿತ್ರಕೃಪೆ: ಟ್ರೋಲ್ ಶಿಷ್ಯ)

ರಿಯಾಝ್ ಮೇಲೆ ಗೂಬೆ ಕೂರಿಸಿದರು

ರಿಯಾಝ್ ಮೇಲೆ ಗೂಬೆ ಕೂರಿಸಿದರು

''ಸೆಲೆಬ್ರಿಟಿಗಳು ತಮ್ಮ ತಪ್ಪನ್ನ ಇನ್ನೂ ಒಪ್ಪಿಕೊಳ್ಳುತ್ತಿಲ್ಲ. ಎಲ್ಲದರಲ್ಲೂ ಭೇದಭಾವ ಮಾಡಿ ಈಗ ರಿಯಾಝ್ ಮೇಲೆ ಗೂಬೆ ಕೂರಿಸಲಾಗಿದೆ'' ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ಕಪಾಳಕ್ಕೆ ಹೊಡೆದಂತೆ

ಕಪಾಳಕ್ಕೆ ಹೊಡೆದಂತೆ

''ಜನಸಾಮಾನ್ಯರಂತೆ ನಡೆದುಕೊಂಡ ಸೆಲೆಬ್ರಿಟಿ (ಚಂದನ್ ಶೆಟ್ಟಿ) ವಿನ್ನರ್ ಆದರು. ಇದು ಸೆಲೆಬ್ರಿಟಿಗಳು ಅಂತ ಕರೆಯಿಸಿಕೊಳ್ಳುವವರ ಕಪಾಳಕ್ಕೆ ಹೊಡೆದಂತೆ'' ಅಂತೆಲ್ಲ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

'ಬಿಗ್ ಬಾಸ್' ಸೆಲೆಬ್ರಿಟಿಗಳ ಸೀರಿಯಲ್ ನೋಡ್ಬೇಡಿ

'ಬಿಗ್ ಬಾಸ್' ಸೆಲೆಬ್ರಿಟಿಗಳ ಸೀರಿಯಲ್ ನೋಡ್ಬೇಡಿ

''ಚಂದನ್ ಎಂದೂ ಸೆಲೆಬ್ರಿಟಿ ತರಹ ನಡೆದುಕೊಂಡಿಲ್ಲ. ಜನಸಾಮಾನ್ಯರು 'ಬಿಗ್ ಬಾಸ್' ಸೆಲೆಬ್ರಿಟಿಗಳ ಸೀರಿಯಲ್ ಹಾಗೂ ಸಿನಿಮಾಗಳನ್ನ ನೋಡಲೇಬಾರದು'' ಎಂದಿದ್ದಾರೆ ವೀಕ್ಷಕರು.

ಎಲ್ಲರನ್ನೂ ವಿರೋಧಿಸಿಲ್ಲ

ಎಲ್ಲರನ್ನೂ ವಿರೋಧಿಸಿಲ್ಲ

''ನಾವು ಯಾವ ಸೆಲೆಬ್ರಿಟಿಯನ್ನೂ ವಿರೋಧಿಸುತ್ತಿಲ್ಲ. 'ಬಿಗ್ ಬಾಸ್' ಮನೆಯಲ್ಲಿ ಇದ್ದ ಕೆಲವೇ ಕೆಲವು ಸ್ಪರ್ಧಿಗಳು ಅಂದ್ರೆ, ದಯಾಳ್, ಜಗನ್, ಅನುಪಮಾ, ಆಶಿತಾ, ಸಿಹಿ ಕಹಿ ಚಂದ್ರು, ಜೆಕೆ ಮೇಲೆ ಮಾತ್ರ ವಿರೋಧ ಇದೆ. ಅದು ಅವರು ನಡೆದುಕೊಂಡ ರೀತಿಯಿಂದಾಗಿ'' ಎಂಬುದು ನೆಟ್ಟಿಗರೊಬ್ಬರ ಅಭಿಪ್ರಾಯ.

ಟ್ರೋಲ್ ಐಕಾನ್ ಜಗನ್

ಟ್ರೋಲ್ ಐಕಾನ್ ಜಗನ್

''ಜಗನ್ 'ಟ್ರೋಲ್ ಐಕಾನ್'. ರಿಯಾಝ್ ಯಾವಾಗಲೂ ಬೆಸ್ಟ್'' ಅಂತಾವ್ರೆ ನೆಟ್ಟಿಗರು.

'ಬಿಗ್ ಬಾಸ್' ನೋಡುವ ನಮಗೆ ಎಲ್ಲ ಗೊತ್ತಾಗುತ್ತೆ.!

'ಬಿಗ್ ಬಾಸ್' ನೋಡುವ ನಮಗೆ ಎಲ್ಲ ಗೊತ್ತಾಗುತ್ತೆ.!

''ಸಿಹಿ ಕಹಿ ಚಂದ್ರು ಹಾಗೂ ದಯಾಳ್ ಔಟ್ ಆಗಿದ್ದು ಅವರ ನಡವಳಿಕೆಯಿಂದ. ರಿಯಾಝ್ ಹೇಳಿದ್ದಾರೆ ಅಂತ ನಮಗೆ ಅನಿಸಿಲ್ಲ. ಪ್ರತಿ ದಿನ ಬಿಗ್ ಬಾಸ್ ನೋಡುವ ನಮಗೆ ಏನಾಗುತ್ತಿದೆ ಅಂತ ಗೊತ್ತಾಗುತ್ತೆ. ಫಿನಾಲೆ ದಿನವೂ ರಿಯಾಝ್ ರನ್ನ ಟಾರ್ಗೆಟ್ ಮಾಡಿದ್ದು ನಿಮ್ಮ ಸ್ವಭಾವ ತೋರಿಸುತ್ತೆ'' ಎನ್ನುತ್ತಾ ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ.

ಮತ್ತೆ ಸಾಬೀತಾಯಿತು

ಮತ್ತೆ ಸಾಬೀತಾಯಿತು

''ವೀಕ್ಷಕರು ಸೆಲೆಬ್ರಿಟಿ ಸ್ಪರ್ಧಿಗಳನ್ನ ಯಾಕೆ ಇಷ್ಟ ಪಡಲಿಲ್ಲ ಎಂಬುದು ಮತ್ತೊಂದು ಬಾರಿ ಸಾಬೀತಾಗಿದ್ಯಂತೆ''

ಈ ಪ್ರಶ್ನೆಗೆ ಉತ್ತರ ಇದ್ಯಾ.?

ಈ ಪ್ರಶ್ನೆಗೆ ಉತ್ತರ ಇದ್ಯಾ.?

''ಕಾಮನ್ ಮ್ಯಾನ್, ಸೆಲೆಬ್ರಿಟಿ ಅನ್ನೋದು ಇರ್ಲಿಲ್ವಾ.? ನಾವೇನು ಕುರುಡರಾ.? ನಮಗೆ ರಿಯಾಝ್ ಹೇಳಿದ್ರೇನೇ ಗೊತ್ತಾಗೋದಾ.? ಹಾಗೆ ಗೊತ್ತಾಗಲ್ವಾ.?'' ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.

ನಮಗೂ ಭೇದಭಾವ ಕಾಣಿಸುತ್ತಿತ್ತು

ನಮಗೂ ಭೇದಭಾವ ಕಾಣಿಸುತ್ತಿತ್ತು

''ಜಗನ್, ಸಿಹಿ ಕಹಿ ಚಂದ್ರು ಹಾಗೂ ದಯಾಳ್ ತುಂಬಾ ಸುಲಭವಾಗಿ ರಿಯಾಝ್ ರತ್ತ ಬೆಟ್ಟು ಮಾಡಿ ತೋರಿಸಿದರು. ಆದ್ರೆ, ವೀಕ್ಷಕರಾದ ನಮಗೂ ಕೂಡ 'ಬಿಗ್ ಬಾಸ್' ಮನೆಯಲ್ಲಿ ನಡೆಯುತ್ತಿದ್ದ ಭೇದಭಾವ ಕಾಣಿಸುತ್ತಿತ್ತು. ಕೊನೆಯ ದಿನವೂ ಈ ಟಾಪಿಕ್ ಬಂದಿದ್ದು ಸಹಿಸಲಾಗಲಿಲ್ಲ'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿವೆ.

ಇನ್ನೂ ಬದಲಾಗಿಲ್ಲ.!

ಇನ್ನೂ ಬದಲಾಗಿಲ್ಲ.!

ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ವೀಕ್ಷಕರು ಈ ಕಾಮೆಂಟ್ ಗಳನ್ನ ನೀವೇ ಓದಿರಿ...

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಅಭಿಪ್ರಾಯ ತಿಳಿಸಿ

ರಿಯಾಝ್ ಮೇಲೆ ಗೂಬೆ ಕೂರಿಸಿದ್ರಾ ಜಗನ್.? ಕಾಮನ್ ಮ್ಯಾನ್, ಸೆಲೆಬ್ರಿಟಿ ಅಂತ ಬೀಜ ಬಿತ್ತಿದ್ದು ರಿಯಾಝ್ ಅವರಾ.? ಇದಕ್ಕೆ ನೀವೇನಂತೀರಿ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 5 viewers have taken Colors Super Official Facebook page to express their displeasure against Celebrity contestants' comments in #BBK5 Grand Finale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X