Akshatha Ganesh: ಬಾಲಿವುಡ್ ಸ್ಟಾರ್ ಮಕ್ಕಳ ಟೀಚರ್ ನಿಂದ ಹಿಡಿದು ನಟನೆಯವರೆಗಿನ ಅಕ್ಷತಾ ಗಣೇಶ್ ಜರ್ನಿ!
'ಅಂತರಪಟ' ಧಾರಾವಾಹಿಯ ಅಕ್ಷತಾ ಗಣೇಶ್ ಒಂದು ಕಾಲದಲ್ಲಿ ಬಾಲಿವುಡ್ ಸ್ಟಾರ್ ಮಕ್ಕಳ ಟೀಚರ್ ಆಗಿದ್ದರು. ಹೌದು! 'ಅಂತರಪಟ' ಧಾರಾವಾಹಿಯಲ್ಲಿ ಸಾವಿತ್ರಿ ಎಂಬ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಕ್ಷತಾ ಗಣೇಶ್ ಅವರು ಅದಕ್ಕೂ ಮೊದಲು ಹಲವು ವರ್ಷಗಳ ಹಿಂದೆ ಇಂಗ್ಲಿಷ್ ಟೀಚರ್ ಆಗಿ ಮುಂಬೈನಲ್ಲಿ ಕೆಲಸ ಮಾಡಿದ್ದಾರಂತೆ.
ಸದ್ಯಕ್ಕಂತೂ 'ಅಂತರಪಟ' ಧಾರಾವಾಹಿಯಲ್ಲಿ ತಾಯಿಯ ಪಾತ್ರವನ್ನು ಮಾಡುತ್ತಿರುವ ನಟಿ ಅಕ್ಷತಾ ಗಣೇಶ್ ಅವರು ತಮ್ಮ ನಿಜವಾದ ವಯಸ್ಸನ್ನು ಮೀರಿರುವ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಬಹಳ ಫೇಮಸ್ ಕೂಡ ಆಗಿದ್ದಾರೆ. ಹಾಗಾದರೆ ಈ ನಟಿ ಅಕ್ಷತ ಗಣೇಶವರೆಗೂ ಮುಂಬೈನ ಬಾಲಿವುಡ್ ಸ್ಟಾರ್ ಮಕ್ಕಳದ್ದು ಏನು ಸಂಬಂಧ ಎಂದು ಕೇಳುತ್ತೀರಾ?

ನಟಿ ಅಕ್ಷತಾ ಗಣೇಶ್ ಅವರು ಇಂಗ್ಲಿಷ್‌ನಲ್ಲಿ ಎಂಎ ಮುಗಿಸಿದ್ದು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಮುಂಬೈನ ಧೀರೂಬಾಯ್ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕೆಲಸಕ್ಕೆ ಅಪ್ಲೈ ಮಾಡಿದ್ದರಂತೆ. ಅದೃಷ್ಟವಶಾತ್ ಅಂತಹ ದೊಡ್ಡ ಸ್ಕೂಲಿನಲ್ಲಿ ಕೆಲಸ ಸಿಕ್ಕಿ ಈಕೆ ಅಲ್ಲಿ ಬರೋಬ್ಬರಿ 10 ವರ್ಷಗಳ ಕಾಲ ಇಂಗ್ಲಿಷ್ ಟೀಚರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈ ರೀತಿ ಟೀಚರ್ ಆಗಿ ಕೆಲಸ ಮಾಡಿದ್ದ ಈಕೆ ತನ್ನ ಬಾಲ್ಯದ ಆಸೆಯಾಗಿದ್ದ ನಟನೆಗೆ ಇದೀಗ ಬಂದಿದ್ದಾರೆ.
ಅಕ್ಷತಾ ಗಣೇಶ್ ಅವರ ವೃತ್ತಿ ಜೀವನದ ಕುರಿತು ಬಹಳಷ್ಟು ಜನರಿಗೆ ತಿಳಿದಿರಲಿಲ್ಲ ಇತ್ತೀಚೆಗೆ ನಡೆದ ಫ್ಯಾಮಿಲಿ ಗ್ಯಾಂಗ್‌ಸ್ಟರ್ ಎಂಬ ಶೋನಲ್ಲಿ ನಟ, ನಿರೂಪಕ ಸೃಜನ್ ಲೋಕೇಶ್ ಅವರು ಇದನ್ನು ಬಹಿರಂಗಪಡಿಸಿದ್ದಾರೆ. ಅಂದಹಾಗೆ ಟೀಚರ್ ಆಗಿ ಕೆಲಸ ಮಾಡಿರುವ ನಟಿ ಅಕ್ಷತಾ ಗಣೇಶ ಅವರು ಬಹಳಷ್ಟು ಬಾಲಿವುಡ್ ಸ್ಟಾರ್ ಮಕ್ಕಳಿಗೆ ಟೀಚರ್ ಆಗಿ ಪಾಠ ಹೇಳಿಕೊಟ್ಟಿರುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಹೌದು, ಈಕೆ ಬಹಳಷ್ಟು ಪೇರೆಂಟ್ ಟೀಚರ್ ಮೀಟಿಂಗ್‌ನಲ್ಲಿ ಹೃತಿಕ್ ರೋಷನ್, ಜೋಹಿ ಚಾವ್ಲಾ, ಶಾರುಖ್ ಖಾನ್ ದಂಪತಿಗಳನ್ನು ಭೇಟಿಯಾಗಿದ್ದಾರಂತೆ. ಅಂದರೆ, ಈ ಸ್ಟಾರ್ ಮಕ್ಕಳು ಇದೇ ಶಾಲೆಗೆ ಬರುತ್ತಿದ್ದುದರಿಂದ ಆ ಮಕ್ಕಳಿಗೆ ಪಾಠ ಹೇಳಿಕೊಡುವುದಷ್ಟೇ ಅಲ್ಲದೆ ಈ ರೀತಿಯ ಪೇರೆಂಟ್ ಟೀಚರ್ ಮೀಟಿಂಗ್ ಸಂದರ್ಭದಲ್ಲಿ ಆ ಸ್ಟಾರ್ ಗಳನ್ನು ಮೀಟ್ ಆಗುವ ಸದಾವಕಾಶ ಸಿಕ್ಕಿರುವುದು ನಟಿ ಅಕ್ಷತಾ ಗಣೇಶ ಅವರಿಗೊಂದು ಹೆಮ್ಮೆ ಹಾಗೂ ಹಾಗೆಯೇ ಖುಷಿಯ ವಿಚಾರ.
ಇನ್ನು ಹತ್ತು ವರ್ಷಗಳ ಕಾಲ ವೃತ್ತಿ ಜೀವನವನ್ನು ಟೀಚರ್ ಆಗಿ ಕಳೆದ ಇವರು ನಂತರ ತಮ್ಮ ಬಾಲ್ಯದ ಕನಸಾಗಿದ್ದ ನಟನೆಗೆ ಕಾಲಿಟ್ಟಿದ್ದಾರೆ. ಇದಕ್ಕೆ ಇನ್ನೊಂದು ಮುಖ್ಯ ಕಾರಣ ಹಾಗೂ ಪ್ರೇರಣೆ ತಾವು ದಿನಂಪ್ರತಿ ನೋಡುತ್ತಿದ್ದ ಬಾಲಿವುಡ್ ಸ್ಟಾರ್ ನಟರು ಇರಬಹುದು. ಅದೇನೇ ಇರಲಿ ಸದ್ಯಕ್ಕಂತೂ ತಾವು ನಿರ್ವಹಿಸುತ್ತಿರುವ ನಟಿಸುತ್ತಿರುವ ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಹೆಗ್ಗಳಿಕೆ ಬಗ್ಗೆ ಪಾತ್ರರಾಗುತ್ತಿದ್ದಾರೆ ನಟಿ ಅಕ್ಷತಾ ಗಣೇಶ್.


Click it and Unblock the Notifications











