ಬಿಗ್ ಸುದ್ದಿ: ಬಿಗ್ ಬಾಸ್ ಮನೆಗೆ ಮೊಟ್ಟ ಮೊದಲ ಸಲ ರಾಜಕಾರಣಿ ಎಂಟ್ರಿ?

ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಇದೇ ಭಾನುವಾರ ಸಂಜೆ 6 ಗಂಟೆಗೆ ಅದ್ಧೂರಿ ಓಪನಿಂಗ್ ಪಡೆದುಕೊಳ್ಳಲಿದೆ. ಈ ಸಲ ಬಿಗ್ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದ್ದು, ಸಂಭಾವ್ಯ ಪಟ್ಟಿ ಹರಿದಾಡುತ್ತಿದೆ.

ಕಿರುತೆರೆ ಕಲಾವಿದರು, ಟಿಕ್‌ಟಾಕ್ ಸ್ಟಾರ್‌ಗಳು, ಸಿನಿಮಾ ಕಲಾವಿದರು, ಇತರೆ ರಿಯಾಲಿಟಿ ಶೋ ಸ್ಪರ್ಧಿಗಳು, ಡ್ಯಾನ್ಸರ್ಸ್, ಗಾಯಕರು ಹೀಗೆ ಯಾರೆಲ್ಲ ಭಾಗಿಯಾಗಬಹುದು ಎಂಬ ಲೆಕ್ಕಾಚಾರ ಜೋರಾಗಿದೆ. ಈ ಕುತೂಹಲದ ನಡುವೆ ಹೊರಬಿದ್ದ ವಿಚಾರ ಏನಪ್ಪಾ ಅಂದ್ರೆ ಈ ಆವೃತ್ತಿಯಲ್ಲಿ ರಾಜಕಾರಣಿಯೊಬ್ಬರು ದೊಡ್ಮನೆ ಪ್ರವೇಶ ಮಾಡ್ತಿದ್ದಾರೆ. ಯಾರದು ಆ ರಾಜಕಾರಣಿ? ಯಾವ ಪಕ್ಷದ ರಾಜಕಾರಣಿ? ಮುಂದೆ ಓದಿ....

ರಾಜಕಾರಣಿ ಬಗ್ಗೆ ಮಾಹಿತಿ ಗುಂಡ್ಕಲ್!

ರಾಜಕಾರಣಿ ಬಗ್ಗೆ ಮಾಹಿತಿ ಗುಂಡ್ಕಲ್!

ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯ ಆರಂಭದ ಕುರಿತಾಗಿ ಮಾಹಿತಿ ನೀಡುವ ಉದ್ದೇಶದಿಂದ ಪ್ರೆಸ್ ಮೀಟ್ ಆಯೋಜಿಸಿದ್ದ ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ''ಈ ಸಲ ಬಿಗ್ ಮನೆಯಲ್ಲಿ ರಾಜಕಾರಣಿಯೊಬ್ಬರು ಇರಲಿದ್ದಾರೆ'' ಎಂದು ತಿಳಿಸಿದರು.

ಸುದೀಪ್‌ಗೂ ಪರಿಚಯ ಇದ್ದಾರೆ

ಸುದೀಪ್‌ಗೂ ಪರಿಚಯ ಇದ್ದಾರೆ

ರಾಜಕಾರಣಿ ಯಾರು ಎನ್ನುವುದರ ಬಗ್ಗೆ ಸುಳಿವು ನೀಡದ ಪರಮೇಶ್ವರ್ ಗುಂಡ್ಕಲ್ 'ಆ ರಾಜಕಾರಣಿ ಸುದೀಪ್ ಅವರಿಗೂ ಗೊತ್ತಿದ್ದಾರೆ' ಎಂದು ಹೇಳಿ ಕುತೂಹಲ ಹೆಚ್ಚಿಸಿದ್ದಾರೆ. ರಾಜಕಾರಣಿ ವಿಚಾರ ಹೊರಬೀಳುತ್ತಿದ್ದಂತೆ ಬಿಗ್ ಬಾಸ್ ಮನೆಗೆ ಬರಲು ಮುಂದಾಗಿರುವ ಆ ರಾಜಕಾರಣಿ ಯಾರು ಎಂಬ ಚರ್ಚೆ, ಹುಡುಕಾಟ ಆರಂಭವಾಗಿದೆ.

ಮೊಟ್ಟ ಮೊದಲ ಸಲ ಎಂಟ್ರಿ

ಮೊಟ್ಟ ಮೊದಲ ಸಲ ಎಂಟ್ರಿ

ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ರಾಜಕಾರಣಿಯೊಬ್ಬರು ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲ. ಈ ಮುಂಚಿನ ಏಳು ಆವೃತ್ತಿಗಳಲ್ಲಿ ರಾಜಕೀಯ ಕ್ಷೇತ್ರದಿಂದ ಯಾವ ಸ್ಪರ್ಧಿಯೂ ಇರಲಿಲ್ಲ. ಹಾಗಾಗಿ, ಈ ಸಲ ರಾಜಕಾರಣಿಯಾಗಿ ಬಿಗ್ ಬಾಸ್ ಪ್ರವೇಶಿಸುವ ಸ್ಪರ್ಧಿ ಟಾಕ್ ಆಫ್ ದಿ ಟೌನ್ ಆಗಲಿದ್ದಾರೆ.

ಸ್ಪರ್ಧಿಗಳು ಕ್ವಾರಂಟೈನ್?

ಸ್ಪರ್ಧಿಗಳು ಕ್ವಾರಂಟೈನ್?

ಈ ಆವೃತ್ತಿ 17 ಜನರು ಬಿಗ್ ಬಾಸ್ ಮನೆ ಪ್ರವೇಶಿಸಬಹುದು. ಈಗಾಗಲೇ ಸ್ಪರ್ಧಿಗಳು ಆಯ್ಕೆಯಾಗಿದ್ದು, ತಾಂತ್ರಿಕ ವರ್ಗ ಸೇರಿದಂತೆ ಎಲ್ಲವೂ ಕ್ವಾರಂಟೈನ್ನನಲ್ಲಿದ್ದಾರೆ. ಎರಡು ಸಲ ಕೊರೊನಾ ಪರೀಕ್ಷೆ ಆಗಿದೆ. ಮನೆಗೆ ಕಳುಹಿಸುವುದಕ್ಕೂ ಮೊದಲು ಮತ್ತೊಮ್ಮೆ ಕೊವಿಡ್ ಪರೀಕ್ಷೆ ಮಾಡಿ ನೆಗಿಟಿವ್ ಬಂದವರನ್ನು ಮಾತ್ರ ಮನೆಗೆ ಕಳುಹಿಸಲಾಗುವುದು.

More from Filmibeat

English summary
Bigg Boss kannada 8 set to start from february 28th evening 6pm. and for the first time politician will enter to bigg house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X