»   » 'ಬಿಗ್ ಬಾಸ್' ಮನೆಯಲ್ಲಿ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ ಹರ್ಷಿತಾ!

'ಬಿಗ್ ಬಾಸ್' ಮನೆಯಲ್ಲಿ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ ಹರ್ಷಿತಾ!

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಪತ್ರಿಕಾ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಮನೆಯ ಅಂಗಳಕ್ಕೆ ಪ್ರವೇಶ ಸಿಕ್ಕಿದೆ.

ಚಾಲ್ತಿಯಲ್ಲಿರುವ ಶೋ ಗ್ರ್ಯಾಂಡ್ ಫಿನಾಲೆಗೂ ಮುನ್ನ ಸ್ಪರ್ಧಿಗಳ ಜೊತೆ ಪತ್ರಕರ್ತರು ವಿಶೇಷ ಸುದ್ದಿಗೋಷ್ಠಿ ನಡೆಸಿದ್ದು ಈ ವಾರದ, ಈ ಸೀಸನ್ ನ ವಿಶೇಷ. ಈ ವಿಶೇಷ ನೇರ ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಕೇವಲ ನಾಲ್ಕು ಪತ್ರಕರ್ತರನ್ನು ಆಯ್ಕೆಮಾಡಿ ಮನೆಯೊಳಗೆ ಬಿಡಲಾಗಿತ್ತು. ಇವರ ಪೈಕಿ ನಮ್ಮ ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡದ ವರದಿಗಾರ್ತಿ ಹರ್ಷಿತಾ ರಾಕೇಶ್ ಕೂಡಾ ಒಬ್ಬರು.

oneindia-filmibeat-reporter-harshitha-at-bigg-boss-house

ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಹಾಗೂ 'ಬಿಗ್ ಬಾಸ್' ಆಯೋಜನೆಯ ಟೀಂ ಆಯ್ಕೆ ಮಾಡಿದ ನಾಲ್ವರು ಪತ್ರಕರ್ತರಿಗೆ ಮಾತ್ರ 'ಬಿಗ್ ಬಾಸ್' ಮನೆಯೊಳಗೆ ಪ್ರವೇಶ ನೀಡಲಾಗಿತ್ತು. ಈ ರೀತಿ ಆಯ್ಕೆಯಾದವರಲ್ಲಿ 'ವಿಜಯ ಕರ್ನಾಟಕ'ದ ಶರಣು ಹುಲ್ಲೂರು, 'ಪ್ರಜಾವಾಣಿ'ಯ ರೋಹಿಣಿ ಮುಂಡಾಜೆ, 'ಈಟಿವಿ ಕನ್ನಡ' ಸುದ್ದಿ ವಾಹಿನಿಯ ಸೋಮಣ್ಣ ಮಾಚಿಮಾಡ ಅವರ ಜೊತೆಗೆ ಸಿನಿಮಾ ವೆಬ್ ಸೈಟ್ ಕ್ಷೇತ್ರದ ಏಕೈಕ ಪ್ರತಿನಿಧಿಯಾಗಿ 'ಫಿಲ್ಮಿಬೀಟ್ ಕನ್ನಡ'ದ ಹರ್ಷಿತಾ ರಾಕೇಶ್ ಅವರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

oneindia-filmibeat-reporter-harshitha-at-bigg-boss-house

ಈ ವಿಶೇಷ ಸುದ್ದಿಗೋಷ್ಠಿ ಏಕೆ ನಡೆಸಲಾಯಿತು? ಪ್ರಶ್ನೋತ್ತರ ವೇಳೆ ಜನಪ್ರಿಯ ಸ್ಪರ್ಧಿ ಪ್ರಥಮ್ ನೀಡಿದ ಸಮಾಜಾಯಿಷಿಗಳೇನು? ಫಿನಾಲೆಗೆ ಎಲ್ಲರಿಗಿಂತ ಮೊದಲು ಎಂಟ್ರಿ ಪಡೆದ ಮೋಹನ್ ಹೇಳಿದ್ದೇನು? ಮಿತವಾಗಿ ಮಾತನಾಡುವ ಮಾಳವಿಕಾ ಅವರು ಬಾಯ್ಬಿಟ್ಟ ಸತ್ಯವೇನು? ವಿವರವಾಗಿ ಇಲ್ಲಿ ಓದಿ...[Exclusive: 'ಬಿಗ್ ಬಾಸ್' ಮನೆಯಲ್ಲಾದ ಡಿಢೀರ್ ಪ್ರೆಸ್ ಮೀಟ್ ಹೇಗಿತ್ತು ಗೊತ್ತಾ?]

ಈ ಸುದ್ದಿಗೋಷ್ಠಿಯ ಆಯ್ದ ತುಣುಕುಗಳು 'ಸೂಪರ್ ಸಂಡೇ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. [ಇಂದು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ದಿಢೀರ್ ಪತ್ರಿಕಾಗೋಷ್ಠಿ.! ನಿರೀಕ್ಷಿಸಿ...]

ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿರುವ ಬಿಗ್ ಬಾಸ್ ಮನೆಯೊಳಗೆ ಮಾಧ್ಯಮ ಪ್ರತಿನಿಧಿಗಳು ಎಂಟ್ರಿ ಕೊಟ್ಟಿದ್ದು ಹೇಗೆ? ಅಲ್ಲಿ ಏನು ನಡೆಯಿತು? ಎಷ್ಟು ಕಾಲ ಮನೆಯೊಳಗಿದ್ದರು? ಮುಂತಾದ ವಿವರಗಳನ್ನು ಫಿಲ್ಮಿಬೀಟ್ ಕನ್ನಡದಲ್ಲಿ ನಿರೀಕ್ಷಿಸಿ...

English summary
Bigg Boss Kannada 4: Week 15 - Among Four Journalists, Oneindia/Filmibeat Kannada Reporter Harshitha Rakesh got chance to take part at Press meet which took place at Bigg Boss House with Bigg Boss Contestants. Don't miss to watch Bigg Boss press meet today at 9 pm in Colors Super Channel.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X