»   » ನೀವು 'ಬಿಗ್ ಬಾಸ್' ಸ್ಪರ್ಧಿ ಆಗ್ಬೇಕಾ.! ಕೂಡಲೇ ಈ ಅರ್ಜಿ ಭರ್ತಿ ಮಾಡಿ

ನೀವು 'ಬಿಗ್ ಬಾಸ್' ಸ್ಪರ್ಧಿ ಆಗ್ಬೇಕಾ.! ಕೂಡಲೇ ಈ ಅರ್ಜಿ ಭರ್ತಿ ಮಾಡಿ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ' 5ನೇ ಆವೃತ್ತಿಗೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಸೆಪ್ಟಂಬರ್ ತಿಂಗಳಿನಲ್ಲಿ ಬಿಗ್ ಬಾಸ್ 5 ಆರಂಭವಾಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಬಹಿರಂಗವಾಗಿದೆ.

'ಬಿಗ್ ಬಾಸ್ ಕನ್ನಡ' ಈ ಎಲ್ಲ ಹಿಂದಿನ ಆವೃತ್ತಿಗಳಿಂತ ಈ ಬಾರಿ ವಿಶಿಷ್ಟವಾಗಿರಲಿದೆ. ಕಳೆದ ನಾಲ್ಕು ಸೀಸನ್ ಗಳಲ್ಲಿಯೂ ಸೆಲೆಬ್ರಿಟಿ ಎಂದು ಕರೆಸಿಕೊಂಡವರು ಮಾತ್ರ ಬಿಗ್ ಮನೆ ಪ್ರವೇಶ ಮಾಡಿದ್ದರು. ಆದ್ರೆ, ಈ ಬಾರಿ ಜನಸಾಮಾನ್ಯರು 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಡಲಿದ್ದಾರೆ.

'ಬಿಗ್ ಬಾಸ್-5'ಗೆ ಸ್ವರ್ಧಿಗಳ ಬೇಟೆ ಶುರು.! ಈ ಬಾರಿ 'ಕಾಮನ್ ಮ್ಯಾನ್' ಎಂಟ್ರಿ ಪಕ್ಕಾ

ಹೌದು, 'ಬಿಗ್ ಬಾಸ್ ಕನ್ನಡ-5'ನೇ ಆವೃತ್ತಿಯಲ್ಲಿ ಬಿಗ್ ಬಾಸ್ ಮನೆಯೊಳಗೆ ಜನಸಾಮಾನ್ಯರು ಪ್ರವೇಶ ಮಾಡುವುದು ಅಧಿಕೃತವಾಗಿದ್ದು, ಇದಕ್ಕಾಗಿ ಆನ್ ಲೈನ್ ಅರ್ಜಿಯ ಅವಕಾಶ ನೀಡಲಾಗಿದೆ. ಈ ಅರ್ಜಿ ಭರ್ತಿ ಮಾಡಿ, ಬಿಗ್ ಬಾಸ್ ಮನೆಗೆ ಆಯ್ಕೆ ಆಗಬಹುದು? ಅರ್ಜಿ ಹೇಗಿದೆ? ಏನೆಲ್ಲಾ ಭರ್ತಿ ಮಾಡಬೇಕು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಆನ್ ಲೈನ್ ಅರ್ಜಿ ಭರ್ತಿ ಮಾಡಿ

ಕಲರ್ಸ್ ಕನ್ನಡ ವಾಹಿನಿ ಅಧಿಕೃತ ವೆಬ್ ಸೈಟ್ ನಲ್ಲಿ ಜನ ಸಾಮಾನ್ಯರಿಗಾಗಿ ಆನ್ ಲೈನ್ ಅರ್ಜಿ ಅವಕಾಶ ನೀಡಲಾಗಿದೆ. ನಿಮ್ಮ ಪ್ರತಿಭೆ ಏನು ಎಂಬುದನ್ನ ಗುರುತಿಸಿ ಈ ಅರ್ಜಿಯನ್ನ ಭರ್ತಿ ಮಾಡಬೇಕಿದೆ. ಅವರುಗಳಲ್ಲಿ ಅತ್ಯುತ್ತಮರನ್ನ ಈ ಬಾರಿ ಬಿಗ್ ಬಾಸ್ ಮನೆಗೆ ಆಯ್ಕೆ ಮಾಡಿಕೊಳ್ಳಲಾಗುವುದು.

ವೈಯಕ್ತಿಕ ವಿವರ ಕಡ್ಡಾಯ

ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ತೂಕ, ಎತ್ತರ, ಉದ್ಯೋಗ, ಹೀಗೆ ನಿಮ್ಮ ವೈಯಕ್ತಿಕ ವಿವರಗಳನ್ನ ಭರ್ತಿ ಮಾಡಬೇಕಿದೆ. ಅದರ ಜೊತೆಗೆ ಮೂರು ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಿಬೇಕು.

ಪ್ರಶ್ನೆ ನಂ.1

''ನಿಮ್ಮದೇ ಆದ ರೀತಿಯಲ್ಲಿ ನಿಮ್ಮನ್ನ ನೀವು ಪರಿಚಯ ಮಾಡಿಕೊಳ್ಳಬೇಕು''? ಈ ಪ್ರಶ್ನೆಗೆ ಉತ್ತರವನ್ನ ವಿಡಿಯೋ ಮೂಲಕ ಆನ್ ಲೈನ್ ಅರ್ಜಿಯಲ್ಲಿ ಅಪ್ ಲೌಡ್ ಮಾಡಬೇಕು.

ಪ್ರಶ್ನೆ ನಂ.2

''ನೀವು ಬಿಗ್ ಬಾಸ್ ಮನೆಯಲ್ಲಿ ಯಾಕೆ ಭಾಗವಹಿಸಲು ಇಚ್ಛೀಸುತ್ತೀರಿ?'' ಎಂಬ ಪ್ರಶ್ನೆಗೆ ನೀವು ವಿಡಿಯೋ ಮೂಲಕ ಉತ್ತರಿಸಿ ಆನ್ ಲೈನ್ ಅರ್ಜಿಯಲ್ಲಿ ನೀಡಲಾದ ಸ್ಥಳದಲ್ಲಿ ವಿಡಿಯೋ ಅಪ್ ಲೌಡ್ ಮಾಡಬೇಕು.

ಪ್ರಶ್ನೆ ನಂ.3

''ಇತರರಿಗಿಂತ ನೀವು ಭಿನ್ನವೆಂದು ಹೇಗೆ ತೋರಿಸಿಕೊಳ್ಳುತ್ತೀರಿ?'' ಇದು ಮೂರನೇ ಪ್ರಶ್ನೆಯಾಗಿದ್ದು, ಉತ್ತರವನ್ನ ವಿಡಿಯೋ ಮೂಲಕ ಉತ್ತರಿಸಿ ವಿಡಿಯೋ ಅಪ್ ಲೌಡ್ ಮಾಡಬೇಕು.

ಅತ್ಯುತ್ತಮರನ್ನ ಆಯ್ಕೆ ಮಾಡಲಾಗುವುದು

ಅರ್ಜಿ ಭರ್ತಿ ಮಾಡಿದ ಅಭ್ಯರ್ಥಿಗಳಲ್ಲಿ ಯಾರು ಉತ್ತಮವೆನಿಸುತ್ತೋ ಆ ವ್ಯಕ್ತಿಗಳನ್ನ ಬಿಗ್ ಬಾಸ್ ಮನೆಯೊಳಗೆ ಕಳುಹಿಸಲು ಬಿಗ್ ಬಾಸ್ ಅಯೋಜಕರು ನಿರ್ಧರಿಸಿದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿ, ಅರ್ಜಿ ಭರ್ತಿ ಮಾಡಿ

ಹತ್ತು-ಹಲವು ಸರ್ಪೈಸ್ ಗಳೊಂದಿಗೆ ಬರಲಿದೆ 'ಬಿಗ್ ಬಾಸ್ ಕನ್ನಡ-5'

English summary
Now You Can Also Participate in Bigg Boss Kannada 5. if you are interested fill in the application and submit. more details read the article

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada