'ಬಿಗ್ ಬಾಸ್ ಕನ್ನಡ-6': ಒಟ್ಟು 18 ಸ್ಪರ್ಧಿಗಳು, ಅದರಲ್ಲಿ ಅರ್ಧದಷ್ಟು ಸೆಮಿ-ಸೆಲೆಬ್ರಿಟಿಗಳು.!

'ಬಿಗ್ ಬಾಸ್' ಆಗಮನದ ನಂತರ ದೇಶದಲ್ಲಿ ಜನರು ಟೆಲಿವಿಷನ್ ನೋಡುವ ರೀತಿಯೇ ಬದಲಾಗಿದೆ. 'ಬಿಗ್ ಬಾಸ್' ಕನ್ನಡವೂ ಅಷ್ಟೆ... ಆರಂಭದಿಂದಲೂ ಜನಪ್ರಿಯತೆಯಲ್ಲಿ ಎಲ್ಲ ಶೋಗಳಿಗಿಂತಲೂ ಮುಂದಿದೆ. 'ಬಿಗ್ ಬಾಸ್' ಕನ್ನಡ ಸೀಸನ್ 5ರಲ್ಲಿ ಮೊಟ್ಟಮೊದಲ ಬಾರಿಗೆ ಜನಸಾಮಾನ್ಯರಿಗೆ ಪ್ರವೇಶ ಸಿಕ್ಕಿತು. ಈ ವರ್ಷವೂ ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳ ಹದವಾದ ಮಿಶ್ರಣ ನೋಡುಗರಿಗೆ ಮುದ ನೀಡಲು ಸಜ್ಜಾಗಿದೆ.

ಹೌದು, ಎಲ್ಲ ರಿಯಾಲಿಟಿ ಶೋಗಳ ಬಾಸ್ 'ಬಿಗ್ ಬಾಸ್'ನ ಆರನೇ ಆವೃತ್ತಿ ಅಕ್ಟೋಬರ್ 21ರ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಆರಂಭವಾಗಲಿದೆ. ಸೋಮವಾರದಿಂದ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಈ ಶೋಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇದು ಬಹುತೇಕ ಸಾಮಾನ್ಯ ಜನರ 'ಬಿಗ್ ಬಾಸ್' ಆಗಿರಲಿದೆ. ಹಾಗೆಂದು ಈ ಬಾರಿ ಸೆಲೆಬ್ರಿಟಿಗಳು ಇರುವುದೇ ಇಲ್ಲ ಎಂದೇನಿಲ್ಲ. ಒಟ್ಟು ಹದಿನೆಂಟು ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಇರಲಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ಸೆಮಿ ಸೆಲೆಬ್ರಿಟಿಗಳು. ವಿಶ್ವಾದ್ಯಂತ ಈ ಶೋ ಸೆಲೆಬ್ರಿಟಿಗಳಿಂದ ಆರಂಭವಾಗಿ ಜನಸಾಮಾನ್ಯರ ಶೋ ಆಗುತ್ತಾ ನಡೆದಿದೆ. ಕನ್ನಡದಲ್ಲಿಯೂ ಜನಸಾಮಾನ್ಯರು ಸೆಲೆಬ್ರಿಟಿಗಳಾಗುವ ಹಂತಕ್ಕೆ 'ಬಿಗ್ ಬಾಸ್' ಬಂದು ಮುಟ್ಟಿದೆ. ಮುಂದೆ ಓದಿರಿ...

ವೀಕ್ಷಕರ ಇಚ್ಛೆಗೆ ತಕ್ಕ ಹಾಗೆ ಶೋ

ವೀಕ್ಷಕರ ಇಚ್ಛೆಗೆ ತಕ್ಕ ಹಾಗೆ ಶೋ

"ನಾವು ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವಾಗ ನಮ್ಮ ವೀಕ್ಷಕರ ಬೇಕು ಬೇಡ ಮತ್ತು ಅವರ ಆಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡಿರುತ್ತೇವೆ. ಕೇವಲ ಮೂರೇ ವರ್ಷಗಳಲ್ಲಿ ಕಲರ್ಸ್ ಸೂಪರ್ ಚಾನೆಲ್ ರೇಟಿಂಗ್ ನಲ್ಲಾಗಲಿ, ಕಾರ್ಯಕ್ರಮ ವೈವಿಧ್ಯದಲ್ಲಾಗಲಿ ಭಾರೀ ಎತ್ತರಕ್ಕೆ ಏರಿದೆ. 'ಬಿಗ್ ಬಾಸ್' ಯಾವ ರೀತಿಯ ಶೋ ಎಂದರೆ ಕಾರ್ಯಕ್ರಮ ನಡೆಯುವ ಅಷ್ಟೂ ದಿನ ಜನರನ್ನು ಟೆಲಿವಿಷನ್ ಗೆ ಅಂಟಿ ಕೂರುವಂತೆ ಮಾಡುವಂಥದ್ದು" ಎನ್ನುತ್ತಾರೆ ವಯಾಕಾಮ್ 18ನ ರೀಜನಲ್ ಚಾನೆಲ್‍ಗಳ ಹೆಡ್ ರವೀಶ್ ಕುಮಾರ್.

ವಿವಿಧ ಕ್ಯಾರೆಕ್ಟರ್ ಗಳ ಸಮ್ಮಿಲನ

ವಿವಿಧ ಕ್ಯಾರೆಕ್ಟರ್ ಗಳ ಸಮ್ಮಿಲನ

"ನಾವು ಈ ಶೋಗೆ ಸ್ಪರ್ಧಿಗಳನ್ನು ಹುಡುಕುವಾಗ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ಕ್ಯಾರೆಕ್ಟರ್ ಗಳನ್ನು ಹುಡುಕುತ್ತಿರುತ್ತೇವೆ. ಆ ಕ್ಯಾರೆಕ್ಟರ್ ಗಳು ಸೆಲೆಬ್ರಿಟಿಗಳಲ್ಲಿಯೂ ಇರಬಹುದು, ಜನ ಸಾಮಾನ್ಯರಲ್ಲೂ ಇರಬಹುದು. ಈ ಬಾರಿಯ ಹದಿನೆಂಟೂ ಜನರು ಬಹಳ ಇಂಟರೆಸ್ಟಿಂಗ್ ಕ್ಯಾರೆಕ್ಟರ್‍ ಗಳಾಗಿರುತ್ತಾರೆ. ಒಮ್ಮೆ ಮನೆಯೊಳಗೆ ಹೋದ ಮೇಲೆ ಅವರು ಸೆಲೆಬ್ರಿಟಿಗಳೋ, ಜನ ಸಾಮಾನ್ಯರೋ ಎಂಬ ಪ್ರಶ್ನೆ ಮುಖ್ಯವಾಗುವುದಿಲ್ಲ. ಅವರು ಎಷ್ಟು ಮನರಂಜನೆ ನೀಡುತ್ತಾರೆ ಎನ್ನುವುದಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ" ಎನ್ನುತ್ತಾರೆ ವಯಾಕಾಮ್ 18 ಸಂಸ್ಥೆಯ ಕನ್ನಡ ಮಾರುಕಟ್ಟೆಯ ಬ್ಯುಸಿನೆಸ್ ಹೆಡ್ ಹಾಗೂ 'ಬಿಗ್ ಬಾಸ್' ನಿರ್ದೇಶಕರೂ ಆಗಿರುವ ಪರಮೇಶ್ವರ ಗುಂಡ್ಕಲ್.

'ಬಿಗ್ ಬಾಸ್' ಪ್ರಿಯವಾದ ವಿಷಯ

'ಬಿಗ್ ಬಾಸ್' ಪ್ರಿಯವಾದ ವಿಷಯ

"ನನ್ನ ಸಿನಿಮಾಗಳ ಹೊರತಾಗಿ ಪ್ರತಿ ವರ್ಷ ನಾನು ಕ್ರಿಕೆಟ್ ಆಡುತ್ತೇನೆ. ಪ್ರಯಾಣ ಮಾಡುತ್ತೇನೆ. ಅಡುಗೆಯನ್ನೂ ಮಾಡುತ್ತೇನೆ. ಹಾಗೆಯೇ 'ಬಿಗ್ ಬಾಸ್' ನಡೆಸಿಕೊಡುತ್ತೇನೆ. ಇದು ನನಗೆ ಬಹಳ ಪ್ರಿಯವಾದ ವಿಷಯ. ಹೊಸ ಹೊಸ ಸ್ಪರ್ಧಿಗಳನ್ನು ಭೇಟಿಯಾಗಲು ನಾನು ಕೂಡಾ ತುಂಬಾ ಉತ್ಸುಕನಾಗಿದ್ದೇನೆ" ಎನ್ನುತ್ತಾರೆ ಸುದೀಪ್.

ಹೊಸ ಮನೆ

ಹೊಸ ಮನೆ

ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಅಗ್ನಿ ಅನಾಹುತದ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು. ಆ ಅವಘಡದಲ್ಲಿ 'ಬಿಗ್ ಬಾಸ್' ಮನೆಯೂ ಭಸ್ಮವಾಗಿ ಹೋಗಿತ್ತು. ಹಾಗಾಗಿ ಈ ಬಾರಿ ಸಂಪೂರ್ಣವಾಗಿ ಹೊಸದಾಗಿ ಮನೆಯನ್ನು ನಿರ್ಮಿಸಲಾಗಿದೆ. ಈ ಬಾರಿಯ ಮನೆ ಇನ್ನಷ್ಟು ವಿಶಾಲವಾಗಿರಲಿದೆ. ಮೇಕಪ್ ಮಾಡಿಕೊಳ್ಳಲೆಂದೇ 'ಪೌಡರ್ ರೂಮ್' ಸೇರಿದಂತೆ ಹೊಸ ಆಕರ್ಷಣೆಗಳೂ ಮನೆಯಲ್ಲಿವೆ. ಮನೆಯ ಹೊರಗಿನ ಗಾರ್ಡನ್ ಏರಿಯಾದಲ್ಲಿ ಹೊಸದಾಗಿ ವಿಶೇಷವಾದ ಗಿಡವೊಂದನ್ನು ನೆಡಲಾಗಿದೆ. ಭಾರೀ ವೆಚ್ಚದ ಈ ಗಿಡವನ್ನು ಬೇರೆ ನಗರದಿಂದ ಇಲ್ಲಿಗೆ ತರಲಾಗಿದೆ.

More from Filmibeat

English summary
Out of 18 contestants most of them will be semi-celebrities in Bigg Boss Kannada 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X