twitter
    For Quick Alerts
    ALLOW NOTIFICATIONS  
    For Daily Alerts

    ಬೀದಿಗೆ ಬಿದ್ದ 'ಪಾಪ ಪಾಂಡು' ವಿಕ್ರಮ್ ಸೂರಿ ಸಂಸಾರ

    By Rajendra
    |

    Vikram Suri and Namitha
    ಈ ಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ 'ಪಾಪ ಪಾಂಡು' ಕಾಮಿಡಿ ಸೀರಿಯಲ್ ಮೂಲಕ ಮನೆಮಾತಾದ ನಟ ವಿಕ್ರಮ್ ಸೂರಿ. ಈ ಧಾರಾವಾಹಿಯ ವಿಶೇಷ ಸಂಚಿಕೆಗಾಗಿ ಬಂದಿದ್ದ ನಮಿತಾ ಅವರೇ ಬಳಿಕ ಸೂರಿ ಅವರ ಬಾಳ ಸಂಗಾತಿಯಾದರು. ಈಗ ವಿಷಯ ಅದಲ್ಲ. ಇವರಿಬ್ಬರ ಸಂಸಾರ ಈಗ ಅಕ್ಷರಶಃ ಬೀದಿಗೆ ಬಿದ್ದಿದೆ.

    ಇವರಿಬ್ಬರದು ಅನುರೂಪ ದಾಂಪತ್ಯ. ಕಳೆದ 28 ವರ್ಷಗಳಿಂದ ಸೂರಿ ತಮ್ಮ ಪೋಷಕರ ಜೊತೆ ಬಸವನಗುಡಿಯಲ್ಲಿ ವಾಸವಾಗಿದ್ದರು. ಇವರಿದ್ದ ಮನೆ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿತ್ತು ಎನ್ನಲಾಗಿದೆ.

    "ನಮಗೆ ಯಾವುದೇ ನೋಟೀಸ್ ನೀಡದೆ ಮುಜರಾಯಿ ಇಲಾಖೆ ಏಕಾಏಕಿ ಮನೆಯನ್ನು ಧ್ವಂಸ ಮಾಡಿದೆ. ಈಗ ನಮ್ಮ ಸಂಸಾರ ಬೀದಿಪಾಲಾಗಿದೆ. ನಮಗೆ ಯಾವುದೇ ಮಾಹಿತಿ ನೀಡದೆ ಈ ರೀತಿ ಮಾಡಿರುವುದು ಯಾವ ನ್ಯಾಯ?" ಎಂದು ವಿಕ್ರಮ್ ಸೂರಿ ಹಾಗೂ ನಮಿತಾ ಮಾಧ್ಯಮಗಳ ಜೊತೆ ತಮ್ಮ ನೋವನ್ನು ತೋಡಿಕೊಂಡರು.

    ಆದರೆ ಮುಜರಾಯಿ ಇಲಾಖೆ ಹೇಳುವುದೇನೆಂದರೆ, "ನ್ಯಾಯಾಲಯದ ಆದೇಶದ ಮೇರೆಗೆ ನಾವು ಶುಕ್ರವಾರ (ಅ.26) ವಿಕ್ರಮ್ ಸೂರಿ ದಂಪತಿಗಳು ವಾಸವಾಗಿದ್ದ ಮನೆಯನ್ನು ತೆರವುಗೊಳಿಸಿದ್ದೇವೆ. ಇವರು ಕಳೆದ 28 ವರ್ಷಗಳಿಂದ ಈ ಮನೆಗೆ ಯಾವುದೇ ಬಾಡಿಗೆ ಕಟ್ಟುತ್ತಿರಲಿಲ್ಲ" ಎಂದಿದೆ.

    "ಈ ಮನೆಗೆ ನಾವು ತಿಂಗಳಿಗೆ ರು. 4 ಸಾವಿರ ಬಾಡಿಗೆ ಕಟ್ಟುತ್ತಿದ್ದೆವು. ನಮಗೆ ಮೊದಲೇ ನೋಟೀಸ್ ನೀಡಿದ್ದಿದ್ದರೆ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆದರೆ ಮುಜರಾಯಿ ಇಲಾಖೆ ಯಾವುದೇ ಸೂಚನೆ ನೀಡದೆ ನಮ್ಮ ಮನೆಯನ್ನು ತೆರವುಗೊಳಿಸಿರುವುದು ನಮಗೆ ತುಂಬಾ ನೋವುಂಟು ಮಾಡಿದೆ" ಎಂದಿದ್ದಾರೆ ವಿಕ್ರಮ್ ಸೂರಿ ಹಾಗೂ ನಮಿತಾ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, "ಮನೆ ತೆರವಿಗೆ ಕೋರ್ಟ್ ಆದೇಶ ನೀಡಿತ್ತು. ಆ ಮೇರೆಗೆ ನಾವು ಅತಿಕ್ರಮವಾಗಿದ್ದ ಇವರ ಮನೆಯನ್ನು ಧ್ವಂಸ ಮಾಡಿದ್ದೇವೆ. ನಾವು ಕಾನೂನು ಬದ್ಧವಾಗಿ ಮನೆಯನ್ನು ತೆರವುಗೊಳಿಸಿದ್ದೇವೆ. ಕಾನೂನು ಪ್ರಕಾರ ಏನೇನು ಕ್ರಮಕೈಗೊಳ್ಳಬೇಕೋ ಅದನ್ನು ನಾವು ಮಾಡಿದ್ದೇವೆ ಅಷ್ಟೇ" ಎಂದಿದ್ದಾರೆ.

    ವಿಕ್ರಂ ಮೂಲತಃ ಕಲಾವಿದರ ಕುಟುಂಬದ ಹುಡುಗ. ಅವರ ತಂದೆ ಸಂಜಯ್ ಸೂರಿ ಪ್ರತಿಷ್ಠಿತ ಗುಬ್ಬಿ ಕಂಪನಿ ಕಲಾವಿದರಾಗಿದ್ದರು. ಪ್ರಕಾಶ್ ರೈ ಅಭಿನಯಿಸಿದ್ದ 'ಬಿಸಿರು ಕುದುರೆ' ಚಿತ್ರದಲ್ಲಿ ವಿಕ್ರಂ ಬಾಲ ಕಲಾವಿದನಾಗಿ ಅಭಿನಯಿಸಿದ್ದ. ಕೊಟ್ರೇಶಿ ಕನಸು, ಚಿನ್ನಾರಿ ಮುತ್ತ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

    ಇನ್ನು ವಿಕ್ರಮ್ ಅವರ ಬಾಳ ಸಂಗಾತಿ ನಮಿತಾ ಅವರೂ ಅಷ್ಟೇ ಕಿರುತೆರೆಯಲ್ಲಿ ಚಿರಪರಿಚಿತರು. ಗೋಧೂಳಿ, ಬಿದಿಗೆ ಚಂದ್ರಮ ಧಾರಾವಾಹಿಗಳ ಮೂಲಕ ಪರಿಚಿತರು. 'ಸಿಲ್ಲಿ ಲಲ್ಲಿ' ಪಾತ್ರ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈಗ ಇವರಿಬ್ಬರ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ.

    ಈ ವಿವಾದಿತ ಸ್ಥಳದಲ್ಲಿ ಸಂಜಯ್ ಸೂರಿ ಸ್ಥಾಪಿಸಿದ ಸೂರ್ಯ ಕಲಾವಿದರು ಸಂಸ್ಥೆಯ ಸದಸ್ಯರು ಅನೇಕ ವರ್ಷಗಳಿಂದ ರಂಗ ತಾಲೀಮು ನಡೆಸಿಕೊಂಡು ಬಂದಿದ್ದಾರೆ. ಸೂರ್ಯ ಕಲಾವಿದರು ತಂಡ ನೃತ್ಯ ರೂಪಕಗಳನ್ನು ಪ್ರದರ್ಶಿಸುವುದರಲ್ಲಿ ಜನಪ್ರಿಯತೆ ಗಳಿಸಿದೆ. (ಏಜೆನ್ಸೀಸ್)

    English summary
    Kannada small screen actor and comedy serial 'Pa Pa Pandu' fame Vikram Soori house demolished by Endowment department in Basavanagudi, Bangalore on 26th October. The Endowment department asked for vacate the house, the actor lived here for past 28 years. The Land belongs to Endowment department and no rent was paid by Virkam and Kin for past 28 years.
    Saturday, October 27, 2012, 10:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X