Paaru Serial: ನೋವು ಮರೆತು ಖುಷಿ ಖುಷಿಯಾಗಿ ಹಬ್ಬದ ಅಡುಗೆ ಮಾಡಿದ ಪಾರು!
ಎಸ್ ನಾರಾಯಣ್, ವಿನಯಾ ಪ್ರಸಾದ್ ಅಂತಹ ದೊಡ್ಡ ನಟರಿರುವ ಧಾರಾವಾಹಿ 'ಪಾರು'. 'ಪಾರು' ಧಾರಾವಾಹಿ ಶುರುವಿನಿಂದಲೂ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ 'ಪಾರು' ಅಭಿನಯ ಹಾಗೂ ಆಕೆಯ ಕಷ್ಟಗಳನ್ನು ಕಂಡು ವೀಕ್ಷಕರು ಫಿದಾ ಆಗಿದ್ದಾರೆ. ಪಾರು, ವಿನಯ ಪ್ರಸಾದ್, ಸಿತಾರಾ, ಎಸ್ ನಾರಾಯಣ್, ಮಾನಸಿ ಜೋಶಿ, ಮೋಕ್ಷಿತಾ, ಪಂಕಜ್, ಶರತ್ ಸೇರಿದಂತೆ ಹಲವು ಕಲಾವಿದರಿದ್ದಾರೆ. ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಸದಾ ಹೊಸತನ್ನು ನೀಡುತ್ತಿದ್ದಾರೆ. ಹೊಸ ಬಗೆಯ ರಿಯಾಲಿಟಿ ಶೋಗಳು, ಹೊಸ ಕಥೆ ಹಾಗೂ ಹೊಸ ಮುಖಗಳಿರುವ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಮೂಡಿ ಬರುತ್ತಿರುವ ಧಾರಾವಾಹಿಯೇ ಪಾರು. ಈ ಧಾರಾವಾಹಿಯಲ್ಲೀಗ ಪಾರು ಅರಸನಕೋಟೆಯ ಸೊಸೆ ಅನ್ನೋ ಸತ್ಯ ಅಖಿಲಾಂಡೇಶ್ವರಿಗೆ ಗೊತ್ತಾಗಿದೆ. ಆದರೆ, ಪಾರು ತನ್ನ ಸೊಸೆ ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ.
ಅಡುಗೆ ಕೆಲಸ ಮಾಡಿಕೊಂಡು ಮನೆ ಮಂದಿಯೆಲ್ಲಾ ಮೆಚ್ಚಿಕೊಳ್ಳುವಂತೆ 'ಪಾರು' ನಡೆದುಕೊಳ್ಳುತ್ತಿದ್ದಳು. ಸದಾ ಇತರರ ಒಳಿತನ್ನೇ ಪಾರು ಬಯಸುತ್ತಿದ್ದಳು. ತನಗೆ ಯಾರು ಏನೇ ಅನ್ಯಾಯ ಮಾಡಿದರೂ ಲೆಕ್ಕಿಸದೆ ಅರಸನಕೋಟೆಗೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳುತ್ತಿದ್ದಳು. ಪಾರು ನಡೆ-ನುಡಿ ಮೆಚ್ಚಿಕೊಂಡಿದ್ದ ಅಖಿಲಾಂಡೇಶ್ವರಿ, ಆಕೆಯನ್ನು ತನ್ನ ಮಗಳಂತೆ ನೋಡುತ್ತಿದ್ದಳು.
ಆದರೆ ಈ ಹಿಂದೆಯೇ ಮದುವೆಯಾಗಿರುವ ಆದಿತ್ಯ ಹಾಗೂ ಪಾರು ಬಗ್ಗೆ ಧಾಮಿನಿಗೆ ಮೊದಲಿನಿಂದಲೂ ಅನುಮಾನವಿತ್ತು. ಈ ಬಗ್ಗೆ ಧಾಮಿನಿ ಎಷ್ಟೇ ಹೇಳಿದರೂ, ಅಖಿಲಾಂಡೇಶ್ವರಿಗೆ ಸತ್ಯ ತಿಳಿಯುವುದು ತಡವಾಗಿತ್ತು. ತನ್ನ ಮಾತನ್ನು ಮೀರುವುದಿಲ್ಲ ಎಂದು ತಿಳಿದಿರುವ ಅಖಿಲಾಂಡೇಶ್ವರಿ, ಆದಿತ್ಯನ ಮದುವೆಯನ್ನು ಯಾಮಿನಿ ಜೊತೆಗೆ ನಿಶ್ಚಯಿಸಿದ್ದಳು. ಪಾರು ಮುಂದೆ ನಿಂತು ಆದಿತ್ಯನ ಮದುವೆಯ ಕಾರ್ಯಗಳಿಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತಿದ್ದಳು.

ಆದರೆ, ಈ ಮದುವೆಯ ವಿಚಾರ ತಿಳಿದ ವೀರಯ್ಯ,ಪಾರುಗೆ ಇರುವ ಸತ್ಯವನ್ನು ಅಖಿಲಾಂಡೇಶ್ವರಿ ಬಳಿ ಹೇಳುವಂತೆ ಎಷ್ಟು ಕೇಳಿಕೊಂಡರೂ ಆಗಲಿಲ್ಲ. ಕೊನೆಗೆ ವೀರಯ್ಯ ಇರೋ ಸತ್ಯವನ್ನು ಹೇಳಲು ಮುಂದಾಗುತ್ತಾರೆ. ಅಷ್ಟರಲ್ಲಿ ಅಖಿಲಾಂಡೇಶ್ವರಿಯನ್ನು ಯಾಮಿನಿ ಕಡೆಯವರು ಕಿಡ್ನ್ಯಾಪ್ ಮಾಡಿದರು. ಅಖಿಲಾಂಡೇಶ್ವರಿಯ ಹಳೆಯ ಶತ್ರು ಅರುಂಧತಿ ಕಡೆಯವಳು ಯಾಮಿನಿ ಎಂದು ಆಗ ತಿಳಿಯಿತು. ನಂತರ ನಡೆಯುತ್ತಿದ್ದ ಮದುವೆಯನ್ನು ಕೂಡ ಕ್ಯಾನ್ಸಲ್ ಮಾಡಿದರು. ಆದರೆ ಇದೇ ಸಂದರ್ಭದಲ್ಲಿ ನಿಜಕ್ಕೂ ಪಾರು ತನ್ನ ಮನೆ ಮಗಳು ಎಂಬ ಸಂತೋಷದಲ್ಲಿದ್ದ ಅಖಿಲಾಂಡೇಶ್ವರಿಗೆ ಆದಿತ್ಯ ಹಾಗೂ ಪಾರು ಮದುವೆಯಾಗಿರುವ ವಿಚಾರ ತಿಳಿಯಿತು. ಅವರು ರಿಜಿಸ್ಟ್ರೇಷನ್ ಆಫೀಸ್ ನಲ್ಲಿ ಪಾರು-ಆದಿತ್ಯ ಮದುವೆಗೆ ತಾನೇ ಸಹಿ ಹಾಕಿರುವ ಬಗ್ಗೆಯೂ ತಿಳಿಯಿತು. ಇದು ಅಖಿಲಾಂಡೇಶ್ವರಿಗೆ ಶಾಕ್ ನೀಡಿದೆ.
ಹಾಗಾಗಿ ಅಖಿಲಾಂಡೇಶ್ವರಿ ಈಗ ಪಾರು ಮಾಡಿದ ಅಡುಗೆಯನ್ನು ಸೇವಿಸುವುದಿಲ್ಲ. ಪಾರು ನೀರು ತಂದು ಕೊಟ್ಟರೂ ಕುಡಿಯುವುದಿಲ್ಲ. ಪಾರು ಮುಖ ನೋಡಲು ಕೂಡ ಅಖಿಲಾಂಡೇಶ್ವರಿ ಬಯಸುತ್ತಿಲ್ಲ. ಅಖಿಲಾಂಡೇಶ್ವರಿ ನಡೆಯಿಂದ ಪಾರು ನೊಂದುಕೊಂಡಿದ್ದಾಳೆ. ಆದರೆ ಪಾರು ಸ್ಥಿತಿಯನ್ನು ಕಂಡು ರಘು ಬೇಸರ ಮಾಡಿಕೊಂಡಿದ್ದು, ಪಾರುಗೆ ಸಮಾಧಾನ ಮಾಡುತ್ತಿದ್ದಾರೆ.
ಅಖಿಲಾಂಡೇಶ್ವರಿ ನನಗೆ ನೀವಿಬ್ಬರೂ ಮದುವೆಯಾಗಿರುವ ಸತ್ಯ ಗೊತ್ತಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾಳೆ. ಮುಂದೆ ನಿನ್ನನ್ನು ಸೊಸೆಯೆಂದು ಕೂಡ ಒಪ್ಪಿಕೊಳ್ಳುತ್ತಾಳೆ. ಸಮಾಧಾನದಿಂದ ಇರು. ಬೇಸರ ಮಾಡಿಕೊಳ್ಳಬೇಡ ಎಂದು ರಘು, ಪಾರು \ಗೆ ಸಮಾಧಾನ ಹೇಳುತ್ತಿದ್ದಾರೆ. ನಂತರ ರಘು, ಪಾರುಗೆ ಮನೆಗೆ ಗೆಸ್ಟ್ ಬರುತ್ತಿದ್ದಾರೆ. ಬೇಗ ಬೇಗ ಹಬ್ಬದ ಅಡುಗೆ ಮಾಡು ಎಂದು ಹೇಳುತ್ತಾರೆ. ಹೀಗಾಗಿ ಪಾರು ಖುಷಿ ಖುಷಿಯಾಗಿ ಹಬ್ಬದ ಅಡುಗೆ ಮಾಡುತ್ತಿದ್ದಾರೆ. ಈ ಹಬ್ಬದ ಉಡುಗೆಯನ್ನು ಅಖಿಲಾಂಡೇಶ್ವರಿ ಊಟ ಮಾಡುತ್ತಾಳಾ ಎಂಬುದೇ ಈಗ ಕುತೂಹಲದ ಸಂಗತಿ.
ಆದರೆ, ಈ ಮದುವೆಯ ವಿಚಾರ ತಿಳಿದ ವೀರಯ್ಯ ದೇವ ಪಾರುಗೆ ಇರುವ ಸತ್ಯವನ್ನು ಅಖಿಲಾಂಡೇಶ್ವರಿ ಬಳಿ ಹೇಳುವಂತೆ ಎಷ್ಟು ಕೇಳಿಕೊಂಡರೂ ಆಗಲಿಲ್ಲ. ಕೊನೆಗೆ ವೀರಯ್ಯ ಇರೋ ಸತ್ಯವನ್ನು ಹೇಳಲು ಮುಂದಾಗುತ್ತಾರೆ. ಅಷ್ಟರಲ್ಲಿ ಅಖಿಲಾಂಡೇಶ್ವರಿಯನ್ನು ಯಾಮಿನಿ ಕಡೆಯವರು ಕಿಡ್ನ್ಯಾಪ್ ಮಾಡಿದರು. ಅಖಿಲಾಂಡೇಶ್ವರಿಯ ಹಳೆಯ ಶತ್ರು ಅರುಂಧತಿ ಕಡೆಯವಳು ಯಾಮಿನಿ ಎಂದು ಆಗ ತಿಳಿಯಿತು. ನಂತರ ನಡೆಯುತ್ತಿದ್ದ ಮದುವೆಯನ್ನು ಕೂಡ ಕ್ಯಾನ್ಸಲ್ ಮಾಡಿದರು. ಆದರೆ ಇದೇ ಸಂದರ್ಭದಲ್ಲಿ ನಿಜಕ್ಕೂ ಪಾರು ತನ್ನ ಮನೆ ಮಗಳು ಎಂಬ ಸಂತೋಷದಲ್ಲಿದ್ದ ಅಖಿಲಾಂಡೇಶ್ವರಿಗೆ ಆದಿತ್ಯ ಹಾಗೂ ಪಾರು ಮದುವೆಯಾಗಿರುವ ವಿಚಾರ ತಿಳಿಯಿತು. ಅವರು ರಿಜಿಸ್ಟ್ರೇಷನ್ ಆಫೀಸ್ ನಲ್ಲಿ ಪಾರು-ಆದಿತ್ಯ ಮದುವೆಗೆ ತಾನೇ ಸಹಿ ಹಾಕಿರುವ ಬಗ್ಗೆಯೂ ತಿಳಿಯಿತು. ಇದು ಅಖಿಲಾಂಡೇಶ್ವರಿಗೆ ಶಾಕ್ ನೀಡಿದೆ.
ಹಾಗಾಗಿ ಅಖಿಲಾಂಡೇಶ್ವರಿ ಈಗ ಪಾರು ಮಾಡಿದ ಅಡುಗೆಯನ್ನು ಸೇವಿಸುವುದಿಲ್ಲ. ಪಾರು ನಿರು ತಂದು ಕೊಟ್ಟರೂ ಕುಡಿಯುವುದಿಲ್ಲ. ಪಾರು ಮುಖ ನೋಡಲು ಕೂಡ ಅಖಿಲಾಂಡೇಶ್ವರಿ ಬಯಸುತ್ತಿಲ್ಲ. ಅಖಿಲಾಂಡೇಶ್ವರಿ ನಡೆಯಿಂದ ಪಾರು ನೊಂದುಕೊಂಡಿದ್ದಾಳೆ. ಆದರೆ ಪಾರು ಸ್ಥಿತಿಯನ್ನು ಕಂಡು ರಘು ಬೇಸರ ಮಾಡಿಕೊಂಡಿದ್ದು, ಪಾರುಗೆ ಸಮಾಧಾನ ಮಾಡುತ್ತಿದ್ದಾರೆ. ಮೊದಲು ಯಾವುದನ್ನೂ ಒಪ್ಪಿದ ಅಖಿಲಾಂಡೇಶ್ವರಿ ಈಗ ನಿಮ್ಮ ಮದುವೆಯನ್ನು ಒಪ್ಪಿದ್ದಾಳೆ. ಬಳಿಕ ನನಗೆ ನೀವಿಬ್ಬರೂ ಮದುವೆಯಾಗಿರುವ ಸತ್ಯ ಗೊತ್ತಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾಳೆ. ಮುಂದೆ ನಿನ್ನನ್ನು ಸೊಸೆಯೆಂದು ಕೂಡ ಒಪ್ಪಿಕೊಳ್ಳುತ್ತಾಳೆ. ಸಮಾಧಾನದಿಂದ ಇರು. ಬೇಸರ ಮಾಡಿಕೊಳ್ಳಬೇಡ ಎಂದು ರಘು, ಪಾರು ಗೆ ಸಮಾಧಾನ ಹೇಳುತ್ತಿರುತ್ತಾರೆ. ನಂತರ ರಘು, ಪಾರುಗೆ ಮನೆಗೆ ಗೆಸ್ಟ್ ಬರುತ್ತಿದ್ದಾರೆ. ಬೇಗ ಬೇಗ ಹಬ್ಬದ ಅಡುಗೆ ಮಾಡು ಎಂದು ಹೇಳುತ್ತಾರೆ. ಹೀಗಾಗಿ ಪಾರು ಖುಷಿ ಖುಷಿಯಾಗಿ ಹಬ್ಬದ ಅಡುಗೆ ಮಾಡುತ್ತಿರುತ್ತಾಳೆ. ಈ ಹಬ್ಬದಡುಗೆಯನ್ನು ಅಖಿಲಾಂಡೇಶ್ವರಿ ಊಟ ಮಾಡುತ್ತಾಳಾ ಎಂಬುದೇ ಈಗ ಕುತೂಹಲದ ಸಂಗತಿ.


Click it and Unblock the Notifications











