For Quick Alerts
  ALLOW NOTIFICATIONS  
  For Daily Alerts

  ಸಂಭ್ರಮದಲ್ಲಿ 'ಪಾರು' ಧಾರಾವಾಹಿತಂಡ; ಕಾರಣವೇನು?

  |

  ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿ ಕೂಡ ಒಂದು. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಬಹುತೇಕ ಧಾರಾವಾಹಿಗಳು ಹಿಟ್ ಆಗಿದ್ದು, ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಾಗಿವೆ. ಹಿರಿಯ ನಟಿ ವಿನಯಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿರುವ ಪಾರು ಧಾರಾವಾಹಿಗೆ ಈಗ ಸಂಭ್ರಮದ ಕ್ಷಣ.

  ಪಾರು ಧಾರಾವಾಹಿ ಸದ್ಯ 700 ಸಂಚಿಕೆಗಳನ್ನು ಸಂಪೂರ್ಣ ಮಾಡಿದೆ. 700 ಸಂಚಿಕೆ ಪೂರೈಸಿರುವ ಸಂತಸವನ್ನು ಪಾರು ತಂಡ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿದೆ. ಪಾರು ಧಾರಾವಾಹಿ ನಿರ್ದೇಶಕ ಗುರು ಪ್ರಸಾದ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಧಾರಾವಾಹಿಯಲ್ಲಿ ಪಾರು ಪಾತ್ರದಲ್ಲಿ ನಟಿ ಮೋಕ್ಷಿತಾ ಪೈ ನಟಿಸುತ್ತಿದ್ದಾರೆ. ಆದಿ ಪಾತ್ರದಲ್ಲಿ ನಟಿ ಶರತ್ ಪದ್ಮನಾಭ್ ಕಾಣಿಸಿಕೊಂಡಿದ್ದಾರೆ. ಈ ಜೋಡಿಯ ಕೆಮಿಸ್ಟ್ರಿ ವೀಕ್ಷಕರಿಗೆ ಬಹಳ ಪ್ರಿಯವಾಗಿದ್ದು, ಧಾರಾವಾಹಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

   ಆರ್ಯವರ್ಧನ್ ಮತ್ತು ಅನು ಸಿರಿಮನೆ ಅದ್ದೂರಿ ಮದುವೆ ಸಂಭ್ರಮ ಆರ್ಯವರ್ಧನ್ ಮತ್ತು ಅನು ಸಿರಿಮನೆ ಅದ್ದೂರಿ ಮದುವೆ ಸಂಭ್ರಮ

  ಆದಿ ತಾಯಿಯ ಪಾತ್ರದಲ್ಲಿ ಸ್ಯಾಂಡಲ್ ವುಡ್ ಹಿರಿಯ ನಟಿ ವಿನಯಾ ಪ್ರಸಾದ್ ಕಾಣಿಸಿಕೊಳ್ಳುತ್ತಿದ್ದಾರೆ. ಅಗರ್ಭ ಶ್ರೀಮಂತೆ ಅಖಿಲಾಂಡೇಶ್ವರಿಯಾಗಿ ವಿನಯಾ ಪ್ರಸಾದ್ ಕಿರುತೆರೆಯಲ್ಲಿ ಅಬ್ಬರಿಸಿದ್ದಾರೆ. ಅಖಿಲಾಂಡೇಶ್ವರಿ ಪುತ್ರನ ಪಾತ್ರದಲ್ಲಿ ಆದಿ ಕಾಣಿಸಿಕೊಂಡಿದ್ದಾರೆ. ಅವರ ಮನೆ ಕೆಲಸದ ಯುವತಿ ಪಾತ್ರದಲ್ಲಿ ಪಾರು ನಟಿಸಿದ್ದಾರೆ. ಕಟ್ಟುನಿಟ್ಟಿನ ತಾಯಿ ಅಖಿಲಾಂಡೇಶ್ವರಿ ಪುತ್ರ ಆದಿ ಮನೆ ಕೆಲಸದಾಕೆ ಪಾರು ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಬ್ಬರು ಪ್ರೀತಿ, ಪ್ರೇಮದ ಕಥೆ ಸದ್ಯ ನಡೆಯುತ್ತಿದ್ದು, ಘಟನೆ, ಅಂತಸ್ತು, ಗೌರವ, ವರ್ಯಾದೆ ಅಂತ ಬದುಕುತ್ತಿರುವ ಅಖಿಲಾಂಡೇಶ್ವರಿ ಪಾರುನನ್ನು ಸೊಸೆ ಎಂದು ಒಪ್ಪಿಕೊಳ್ಳುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

  ಈಗಾಗಲೇ ಪತ್ರ ಆದಿಗೆ ಹುಡುಗಿ ಹುಡುಕುತ್ತಿದ್ದು, ತನ್ನ ಅಂತಸ್ಥಿಗೆ ಸರಿಹೊಂದಿರುವ ಸೊಸೆಯನ್ನು ಆಯ್ಕೆ ಮಾಡುತ್ತಿದ್ದಾರೆ ಅಖಿಲಾಂಡೇಶ್ವರಿ. ಆದರೆ ಇದನ್ನೆಲ್ಲ ಮೀರಿ ಆದಿ ಪ್ರೀತಿಸಿದ ಹುಡುಗಿ ಪಾರುನನ್ನೇ ಮದುವೆಯಾಗುತ್ತಾನಾ? ಪ್ರೀತಿ ಉಳಿಸಿಕೊಳ್ತಾನಾ ಎನ್ನುವ ಕುತೂಹಲದಲ್ಲಿ ಪ್ರೇಕ್ಷಕರು ಧಾರಾವಾಹಿ ವೀಕ್ಷಿಸುತ್ತಿದ್ದಾರೆ.

  ಇನ್ನು ಈ ಧಾರಾವಾಹಿಯಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಕೂಡ ಬಣ್ಣ ಹಚ್ಚಿದ್ದಾರೆ. ವಿನಯಾ ಪ್ರಸಾದ್ ಅಣ್ಣನ ಪಾತ್ರದಲ್ಲಿ ಎಸ್ ನಾರಾಯಣ್ ಕಾಣಿಸಿಕೊಂಡಿದ್ದಾರೆ. ವಿನಯಾ ಪ್ರಸಾದ್ ಹಿರಿಯಣ್ಣ ವೀರಪ್ಪ ನಾಯಕ ಪಾತ್ರದಲ್ಲಿ ಎಸ್ ನಾರಾಯಣ್ ಬಣ್ಣ ಹಚ್ಚಿದ್ದಾರೆ.

  ಸದ್ಯ ಧಾರಾವಾಹಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಸದ್ಯ 700 ಸಂಚಿಕೆ ಪೂರೈಸಿರುವ ಪಾರು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದೆ. "ನಿಮ್ಮ ಪ್ರೀತಿಯ ಮನೆ ಮಗಳು 'ಪಾರು'ಗೆ 700 ಸಂಚಿಕೆಗಳ ಸಂಭ್ರಮ. ನಿಮ್ಮ ಬೆಂಬಲ, ಪ್ರೋತ್ಸಾಹ ಹೀಗೇ ಇರಲಿ" ಎಂದು ಕೇಳಿಕೊಂಡಿದ್ದಾರೆ.

   Paaru Kannada TV Serial completes 700 episodes

  ಜೊತೆ ಜೊತೆಯಲಿ ಧಾರಾವಾಹಿಯ ಮದುವೆ ಸಂಭ್ರಮ

  ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ತೊಂದು ಧಾರಾವಾಹಿ ಜೊತೆ ಜೊತೆಯಲಿ. ನಟ ಅನಿರುದ್ಧ ನಟಿಸುತ್ತಿರುವ ಈ ಧಾರಾವಾಹಿ ಕೂಡ ಅದ್ದೂರಿಯಾಗಿ ಮೂಡಿಬರುತ್ತಿದೆ. ನಟ ಅನಿರುದ್ಧ ಆರ್ಯವರ್ಧನ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಆರ್ಯವರ್ಧನ್ ಮದುವೆ ಸಂಭ್ರಮ ಜೋರಾಗದ್ದು, ಇಡೀ ತಂಡ ಸಂಭ್ರಮದಲ್ಲಿ ಓಡಾಡುತ್ತಿದೆ. ಆರ್ಯವರ್ಧನ್ ಮತ್ತು ಅನು ಸಿರಿಮನೆ ಅದ್ದೂರಿ ಮದುವೆ ಸಂಭ್ರಮ ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

  ಎಕರೆಗಟ್ಟಲೆ ವಿಶಾಲವಾದ ಜಾಗದಲ್ಲಿ ಮದುವೆ ಸೆಟ್ ಹಾಕಲಾಗಿದೆ. ಯಾವುದೇ ರಿಯಲ್ ಮದುವೆಗೂ ಕಮ್ಮಿ ಇಲ್ಲದ ಹಾಗೆ ಸಂಭ್ರಮ, ಸಡಗರ, ಅದ್ದೂರಿತನ ನೋಡಿ ಪ್ರೇಕ್ಷಕರು ಸಹ ಅಚ್ಚರಿ ಪಡುತ್ತಿದ್ದಾರೆ. ಅಂದಹಾಗೆ ಆರ್ಯವರ್ಧನ್ ಮತ್ತು ಅನು ಸಿರಿಮನೆ ಮದುವೆ ಸಂಚಿಕೆ ಆಗಸ್ಟ್ 16 ಪ್ರಸಾರವಾಗುತ್ತಿದೆ. ಮದುವೆ ತಯಾರಿಯ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಜೀ ವಾಹಿನಿ ಧಾರಾವಾಹಿಗಳನ್ನು ಅದ್ದೂರಿಯಾಗಿ ಕಟ್ಟಿಕೊಡುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.

  English summary
  Paaru Kannada TV Serial completes 700 episodes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X