ರಾಯಭಾರಿ ಪಾರುವಿನ ರಾಯಲ್ ಫೋಟೋಶೂಟ್

Recommended Video

Paaru Kannada Serial:ಫೋಟೋಶೂಟ್ ಹಾಳು ಮಾಡುವ ಪ್ಲಾನ್ ಅನುಷ್ಕಾಳದ್ದು

ಜೀ ಕನ್ನಡ ವಾಹಿನಿ ಸದಾ ನವನವೀನ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕನ್ನಡಿಗರ ಮನೆ ಮಾತಾಗಿರುವಂತದ್ದು. ವಿಶಿಷ್ಟ ಕಥಾ ಹಂದರವುಳ್ಳ ಧಾರಾವಾಹಿಗಳನ್ನು ನಿರ್ಮಿಸಿ ನಿರಂತರವಾಗಿ ಕನ್ನಡಿಗರಿಗೆ ಮನರಂಜನೆಯ ಮಹಾಪೂರವನ್ನೇ ಒದಗಿಸಿದೆ. ಕಿರುತೆರೆಯ ಸಾಂಪ್ರದಾಯಿಕ ಚೌಕಟ್ಟನ್ನೂ ಮೀರಿ, ಸತತವಾಗಿ ವೀಕ್ಷಕರ ಮುಂದೆ ಹೊಸ ಅಲೆಯ ಕಥೆಗಳನ್ನು ಕಟ್ಟಿಕೊಟ್ಟು ಮನರಂಜಿಸಿ ಯಶಸ್ವಿಯಾಗಿದೆ. ಅಂತಹ ಯಶಸ್ವೀ ಧಾರಾವಾಹಿಗಳಲ್ಲಿ ಪಾರು ಧಾರಾವಾಹಿಯೂ ಒಂದು.

ಪಾರು ಧಾರಾವಾಹಿ ಅಪಾರ ಜನಮೆಚ್ಚುಗೆ ಪಡೆದು ಪ್ರಸಾರವಾಗುತ್ತಿದೆ. ಅರಸನಕೋಟೆ ಅಖಿಲಾಂಡೇಶ್ವರಿಯ ದಿಟ್ಟ ಮಾತುಗಳು, ಮುದ್ದಾದ ಹುಡುಗಿ ಪಾರುವಿನ ಮುಗ್ಧತೆ, ಆದಿತ್ಯನ ಶಿಸ್ತು, ಪ್ರೀತಮ್ ಮಾಡುವ ತರಲೆ ಕನ್ನಡಿಗರ ಮನೆಮನದಲ್ಲು ಆವರಿಸಿ ನಿಂತಿವೆ. ಪಕ್ಕಾ ಸಿನಿಮಾ ಶೈಲಿಯ ಮೇಕಿಂಗ್ ‍ಗೆ ವೀಕ್ಷಕರು ಮನಸೋತಿದ್ದಾರೆ.

ಬೃಹದಾಕಾರದ ಮನೆಗಳು, ಅಖಿಲಾಂಡೇಶ್ವರಿಯಿಂದ ಹಿಡಿದು ಎಲ್ಲಾ ಪಾತ್ರಧಾರಿಗಳು ಧರಿಸೋ ಸೀರೆ ಒಡವೆಗಳು, ಪಾರುವಿನ ಸರಳತೆ ನೋಡುಗರ ಮೈಮನ ಸೆಳೆದಿವೆ. ಪಾರು ಧಾರಾವಾಹಿ ಕಥಾಹಂದರವಂತು ಪ್ರತಿ ಎಪಿಸೋಡನ್ನು ವೀಕ್ಷಕರು ಕಾತುರದಿಂದ ಕಾಯುವಂತೆ ಮಾಡಿದೆ. ಮುಂದೆ ಓದಿ....

ಪಾರುವಿನ ಅದ್ದೂರಿ ಫೋಟೋಶೂಟ್

ಪಾರುವಿನ ಅದ್ದೂರಿ ಫೋಟೋಶೂಟ್

ಶಿಸ್ತಿನ ಸಿಂಹಿಣಿ ಅಖಿಲಾಂಡೇಶ್ವರಿಯ ಅರಮನೆಗೆ ಹಳ್ಳಿಯ ಹುಡುಗಿ ಪಾರು ಬಂದು ನೆಲೆಸಿದ್ದು, ಅಖಿಲಾಂಡೇಶ್ವರಿಯ ಪ್ರೀತಿಗಳಿಸಿ ಮನೆಮಗಳಾಗಿ ಕೆಲಸಕ್ಕೆ ಸೇರಿದ್ದು, ಆದಿತ್ಯ ಹರ್ಬಲ್ ಪ್ರಾಡಕ್ಟ್ಸ್ ಕಂಪೆನಿಗೆ ರಾಯಭಾರಿಯಾದದ್ದು ನಿಮಗೆ ಗೊತ್ತೇ ಇದೆ. ಆದರೆ ಈಗ ಅಖಿಲಾಂಡೇಶ್ವರಿ ಸಾಮ್ರಾಜ್ಯದ ರಾಯಭಾರಿ ಪಾರುವಿನ ಕೀರ್ತಿ ಮಲ್ಟಿನ್ಯಾಶನಲ್ ಕಂಪೆನಿಗಳಲ್ಲೂ ಮೊಳಗುತ್ತಿದೆ. ದೇಸಿ ಸೊಗಡಿನ ಪ್ರಾಡಕ್ಟುಗಳು ವಿದೇಶಿಗರ ಗಮನ ಸೆಳೆಯಲು ತಮ್ಮ ಕಂಪೆನಿಯ ರಾಯಭಾರಿ ಪಾರುವಿನ ಅದ್ದೂರಿ ಫೋಟೋಶೂಟ್ ಹಮ್ಮಿಕೊಂಡಿದ್ದಾರೆ ಅಖಿಲಾಂಡೇಶ್ವರಿ ಮನೆಯವರು.

ಅವಮಾನಿಸುವ ಪ್ಲಾನ್ ಮಾಡಿದ್ದಾಳೆ

ಅವಮಾನಿಸುವ ಪ್ಲಾನ್ ಮಾಡಿದ್ದಾಳೆ

ಸದಾ ವಿಶಿಷ್ಟ ಕಥಾಹಂದರವನ್ನು ವೀಕ್ಷಕರ ಮುಂದೆ ತೆರೆದಿಡುವ ಪಾರು ಧಾರವಾಹಿ. ಹೊಸ ಹೊಸ ಟ್ವಿಸ್ಟ್ ‍ಗಳನ್ನು ನೀಡುವುದಕ್ಕೆ ಹೆಸರುವಾಸಿ. ಈ ಫೋಟೋಶೂಟ್ ‍ನಲ್ಲೂ ಒಂದು ವಿಭಿನ್ನ ಟ್ವಿಸ್ಟ್ ಕಾದಿದೆಯಂತೆ. ಅಖಿಲಾಂಡೇಶ್ವರಿಗಿಂತಗಲೂ ನಾನೇನು ಕಮ್ಮಿ ಎಂದು ಬೀಗುತ್ತಿದ್ದ ಅನುಷ್ಕಾ, ಮೋಸದ ಬಲೆ ಬೀಸಿ ಅಖಿಲಾಂಡೇಶ್ವರಿಯ ಪ್ರೀತಿಗಳಿಸಿ ಪಾರುವಿನ ಫೋಟೋ ಶೂಟ್ ಜವಾಬ್ದಾರಿ ಹೊತ್ತುಕೊಂಡಿದ್ದಾಳೆ. ಆದರೆ ಅನುಷ್ಕಾ ಅಖಿಲಾಂಡೇಶ್ವರಿ ಮೆಚ್ಚುವಂತೆ ಫೋಟೋಶೂಟ್ ಮಾಡಿಸುತ್ತಿಲ್ಲ, ಬದಲಾಗಿ ಪಾರುವಿಗೆ ತುಂಡುಡುಗೆ ತೊಡಿಸಿ ಅವಮಾನಿಸುವ ಪ್ಲಾನ್ ಮಾಡಿಕೊಂಡಿದ್ದಾಳೆ.

ಪಾರುವಿನ ಹೆಸರು ಕೆಡಿಸೋ ಕೇಡಿತನ

ಪಾರುವಿನ ಹೆಸರು ಕೆಡಿಸೋ ಕೇಡಿತನ

ಅಖಿಲಾಂಡೇಶ್ವರಿ ಮತ್ತು ಆದಿತ್ಯ ತಮ್ಮ ಹರ್ಬಲ್ ಕಂಪೆನಿಯನ್ನು ಮತ್ತಷ್ಟು ಮೇಲಕ್ಕೇರಿಸೋ ಕನಸಿಗೆ ಈ ಫೋಟೋಶೂಟ್ ಅತ್ಯಮೂಲ್ಯವಾಗಿದೆ. ಆದರೆ ಅನುಷ್ಕಾ ಮಾತ್ರ ಸಾಂಪ್ರದಾಯಿಕ ಉಡುಗೆಗೆ ಹೆಸರಾಗಿದ್ದ ಆದಿತ್ಯ ಗ್ರೂಪ್ ಆಫ್ ಕಂಪೆನಿಯ ರಾಯಭಾರಿ ಪಾರುಗೆ ವೆಸ್ಟರ್ನ್ ಉಡುಗೆ ತೊಡಿಸಿ ಅಖಿಲಾಂಡೇಶ್ವರಿಯ ಗೌರವಕ್ಕೆ ಚ್ಯುತಿ ತರುವ ಪ್ರಯತ್ನ ಮಾಡುತ್ತಿದ್ದಾಳೆ. ಅಷ್ಟೇ ಅಲ್ಲದೇ ಆದಿ ಮೆಚ್ಚಿದ ಕಂಗಳು ಪಾರುವಿನದ್ದೇ ಅಂತಾ ತಿಳಿದ ಅನುಷ್ಕಾಳಿಗೀಗ ಪಾರುವಿನ ಹೆಸರು ಕೆಡಿಸೋ ಕೇಡಿತನ. ಹಾಗಾಗಿ ಪಾರುವಿಗೂ ಮೋಸದ ಬಲೆ ಬೀಸಿ ಫೋಟೋಶೂಟ್ ‍ಗೆ ಒಪ್ಪಿಸಿಬಿಟ್ಟಿದ್ದಾಳೆ.

ಆದಿತ್ಯನ ಕನಸನ್ನು ನುಚ್ಚುನೂರು?

ಆದಿತ್ಯನ ಕನಸನ್ನು ನುಚ್ಚುನೂರು?

ಅಖಿಲಾಂಡೇಶ್ವರಿ ಕಂಡ ಕನಸು ಯಶಸ್ವಿಯಾಗೋಕೆ ಫೋಟೋ ಶೂಟ್ ಅಚ್ಚುಕಟ್ಟಾಗಿ ನೆರವೇರಲೇಬೇಕು. ಆದರೆ ಅನುಷ್ಕಾಳ ರಣತಂತ್ರ ಪಾರುವಿಗೆ ಅವಮಾನ ಮಾಡಿಸಿ ಆದಿತ್ಯನ ಕನಸನ್ನು ನುಚ್ಚುನೂರು ಮಾಡುತ್ತಾ ಅನ್ನುವ ಆತಂಕ ಧಾರಾವಾಹಿಯ ವೀಕ್ಷಕರಿಗಿದೆ.

ಟ್ವಿಸ್ಟ್ ‍ಗಳು ಜೊತೆ ಬರ್ತಿದೆ ಪಾರು

ಟ್ವಿಸ್ಟ್ ‍ಗಳು ಜೊತೆ ಬರ್ತಿದೆ ಪಾರು

ಅಂತರಾಷ್ಟ್ರೀಯ ಮಟ್ಟದಲ್ಲೂ ಆದಿತ್ಯನ ಕಂಪೆನಿ ಹೆಸರು ಗಳಿಸೋಕೆ ಈ ಫೋಟೋ ಶೂಟ್ ಸಹಾಯ ಮಾಡತ್ತಾ? ಅನುಷ್ಕಾಳ ಪ್ಲಾನ್ ಸಕ್ಸಸ್ ಆಗಿ ಅದೆಲ್ಲದಕ್ಕು ಅಡೆತಡೆಬರತ್ತಾ? ಅಖಿಲಾಂಡೇಶ್ವರಿ ಕನಸು ನನಸಾಗತ್ತಾ? ಪಾರು ರಾಯಭಾರಿಯಾಗಿ ಗಳಿಸಿದ ಹೆಸರಿಗೆ ಮಾಡರ್ನ್ ತೊಡುಗೆ ಕಳಂಕ ತಂದಿಟ್ಟುಬಿಡತ್ತಾ? ಈ ಎಲ್ಲಾ ಟ್ವಿಸ್ಟ್ ‍ಗಳು ಪಾರು ಧಾರಾವಾಹಿ ವೀಕ್ಷಕರಿಗೆ ಮತ್ತಷ್ಟು ಕಾತುರದಿಂದ ಕಾಯುವಂತೆ ಮಾಡಿವೆ.

More from Filmibeat

English summary
Paaru is one of the successful serial in zee kannada. the story is going very interesting and taking some twist.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X