ಮೋಕ್ಷಿತಾ ಪೈ: ಅಪ್ಪಂದಿರ ದಿನಕ್ಕೆ 'ಪಾರು' ಹಾಕಿದ್ದ ಈ ಗೌನ್ ಬಲು ದುಬಾರಿ!
ಸೆಲೆಬ್ರೆಟಿಗಳನ್ನು ನೋಡುವುದು ಅಂದರೆ ಸಾಮಾನ್ಯ ಜನರಿಗೆ ಖುಷಿ. ಅದರಲ್ಲೂ ಅವರ ಲೈಫ್ ಸ್ಟೈಲ್, ಅವರ ಡ್ರೆಸ್, ಅವರ ಮೇಕಪ್, ಅವರು ಬಳಸುವ ವಸ್ತುಗಳ ಮೇಲೆ ಕಣ್ಣು ಸದಾ ಇರುತ್ತದೆ. ಅವರು ತೊಡುವ ಉಡುಗೆ ಮೇಲೆಯೇ ಹೆಚ್ಚು ಗಮನ ಹೋಗುವುದು ಸಹಜ. ಒಂದೊಮ್ಮೆ ನಟಿಮಣಿಯರು ತೊಟ್ಟಿರುವಂತ ಡ್ರೆಸ್‌ಗಳ ಹುಡುಕಾಟವೂ ಶುರುವಾಗಿರುತ್ತದೆ. ಆದರೆ ಬೆಲೆಯ ಭಾರಕ್ಕೋ, ಸೇಮ್ ಟು ಸೇಮ್ ಸಿಗದೆ ಇರುವುದಕ್ಕೋ ಬೇಸರವೂ ಆಗಿರುತ್ತೆ.
ಸದ್ಯ ಈಗ ಎಲ್ಲರ ಚಿತ್ತ ಪಾರು ಮೇಲೆ ನೆಟ್ಟಿದೆ. ಅದರಲ್ಲೂ ಎಲ್ಲರ ಮನಸ್ಸಿಗೂ ಇಷ್ಟವಾಗುವಂತ ಕಲರ್‌ಫುಲ್ ಡ್ರೆಸ್ ಬೇರೆ ಪಾರು ಹಾಕಿದ್ದಾರೆ. ಇದೇ ಕಾರಣಕ್ಕೆ ಹೆಂಗಳೆಯರ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಜೊತೆಗೆ ಗೌನಿನ ಡಿಸೈನ್ ಕೂಡ ಅದ್ಭುತವಾಗಿರುವುದಕ್ಕೆ ಎಲ್ಲರ ಮನ ಸೆಳೆಯುತ್ತಿದೆ.

ನೀಲಿ ಗೌನ್‌ನಲ್ಲಿ ಪಾರು ಮಿಂಚಿಂಗ್
ಡ್ರೆಸ್‌ಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಕೆಲವೊಬ್ಬರು ತುಂಬಾ ಎಡವುತ್ತಾರೆ. ಇನ್ನು ಕೆಲವೊಬ್ಬರು ಕಲರ್ ಕಾಂಬಿನೇಷನ್, ಪ್ಯಾಟ್ರನ್ ಅಂತ ಕರೆಕ್ಟ್ ಆಗಿ ಚೂಸ್ ಮಾಡಿ, ಎಲ್ಲಾ ಆ್ಯಂಗಲ್ ನಿಂದಲೂ, ಎಲ್ಲಾ ಕಾಲಕ್ಕೂ ಒಪ್ಪುವಂತ ಡ್ರೆಸ್‌ಗಳನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ. ಇದೀಗ ಪಾರು ಹಾಕಿರುವ ಡ್ರೆಸ್ ಕೂಡ ಇದೇ ವರ್ಗಕ್ಕೆ ಸೇರುವಂತದ್ದು. ಕಲರ್ ತುಂಬಾನೇ ಅದ್ಭುತವಾಗಿದೆ. ಅದರಲ್ಲೂ ಬಯಸಿ ಬಯಸಿ ಹುಡುಕುವ ಕಲರ್ ಇದಾಗಿದೆ. ನೀಲಿ ಬಣ್ಣ ಎಂದರೆ ಆಲ್ ಮೋಸ್ಟ್ ಎಲ್ಲರಿಗೂ ಪ್ರೀತಿಯೇ. ಹೀಗಾಗಿಯೇ ಪಾರು ಹಾಕಿರುವ ಈ ಡ್ರೆಸ್‌ಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ.

ಪಾರು ತೊಟ್ಟಿರುವ ಈ ಡ್ರೆಸ್ ಬೆಲೆ ಎಷ್ಟು?
ಸೆಲೆಬ್ರೆಟಿಗಳು ಹಾಕುವ ಬಟ್ಟೆಯೆಲ್ಲಾ ಸಿಕ್ಕಾಪಟ್ಟೆ ದುಬಾರಿ. ಸಾಮಾನ್ಯಾರಾದವರು ಆ ಬೆಲೆ ಕೊಟ್ಟು ಖರೀದಿಸುವುದಾದರೂ ಹೇಗೆ ಎಂಬ ಬೇಸರ ಸದಾ ಕಾಲ ಜೀವಂತವಾಗಿರುತ್ತದೆ. ಆದರೂ ತನ್ನಿಷ್ಟದ ನಟಿ ತೊಟ್ಟ ಬಟ್ಟೆಯ ಬೆಲೆ ಎಷ್ಟಿರಬಹುದೆಂದು ತಿಳಿಯುವ ಕುತೂಹಲವೂ ಹೆಚ್ಚಾಗಿಯೇ ಇರುತ್ತದೆ. ಈಗ ಪಾರು ತೊಟ್ಟಿರುವ ಗೌನ್ ಬೆಲೆಯೂ ದುಬಾರಿ ಎಂದೇ ಹೇಳಬಹುದು. ಯಾಕಂದ್ರೆ ಗೌನ್ ಬಹಳಷ್ಟು ಬಾರೀ ಒಂದನ್ನೇ ಹಾಕಿಕೊಳ್ಳುವುದಕ್ಕೆ ಆಗುವುದಿಲ್ಲ. ಹೀಗಾಗಿ ಇಷ್ಟೊಂದು ಬೆಲೆ ಕೊಡಬೇಕಾ ಎಂಬ ಪ್ರಶ್ನೆಯೂ ಹಲವರಲ್ಲಿ ಮೂಡದೆ ಇರಲಾರದು. ಆಂದ್ಹಾಗೆ ಪಾರು ತೊಟ್ಟಿರುವ ಈ ಗೌನ್ ಬೆಲೆ ಬರೋಬ್ಬರಿ 9 ಸಾವಿರ. ಡಿಸೈನರ್ ಒಬ್ಬರ ಪ್ರಮೋಷನ್‌ಗಾಗಿ ಈ ಗೌನ್ ತೊಟ್ಟಿದ್ದಾರೆ.

ಗೌನ್ ಲುಕ್ಕಿಗೆ ಕಾರಣ ಇಲ್ಲಿದೆ?
ಡ್ರೆಸ್‌ಗಳು ಚೆಂದ ಕಾಣಬೇಕು ಎಂದರೆ ಅದಕ್ಕೆ ಉಪಯೋಗಿಸುವ ಬಟ್ಟೆ ಕೂಡ ತುಂಬಾ ಮುಖ್ಯವಾಗುತ್ತೆ. ಯಾವ ರೀತಿಯಾದ ಡಿಸೈನ್ ಮಾಡುತ್ತೇವೆ ಎಂದು ಗಮನದಲ್ಲಿಟ್ಟುಕೊಳ್ಳುವಂತೆ, ಅದಕ್ಕೆ ತಕ್ಕನಾದ ಬಟ್ಟೆಯನ್ನೇ ತರಬೇಕಾಗುತ್ತದೆ. ಇಲ್ಲವಾದಲ್ಲಿ ಸುಕ್ಕು ಹಿಡಿಯಬಹುದು, ಪ್ಯಾಟ್ರನ್ ಸರಿಯಾದ ರೀತಿಯಲ್ಲಿ ಬಾರದೆ ಇರಬಹುದು. ಪಾರು ಹಾಕಿರುವ ನೀಲಿ ಬಣ್ಣದ ಗೌನ್ ನಲ್ಲು ಫ್ಯಾಬ್ರಿಕ್ ಕ್ಲಾತ್ ಬಳಸಲಾಗಿದೆ. ಜೊತೆಗೆ ಪರದೆ ರೀತಿಯ ಬಟ್ಟೆಯನ್ನು ಲುಕ್ಕಿಗಾಗಿ ಬಳಕೆ ಮಾಡಲಾಗಿದೆ. ಈ ಎರಡು ಬಟ್ಟೆಯಿಂದಾಗಿ ಡ್ರೆಸ್ ಲುಕ್ ಮತ್ತಷ್ಟು ಹೆಚ್ಚಾಗಿದೆ.
ಸ್ಪೆಷಲ್ ಡೇಗಾಗಿ ತೊಟ್ಟಿದ್ದ ಉಡುಗೆ
ಇತ್ತೀಚೆಗೆ ಅಪ್ಪಂದಿರ ದಿನವನ್ನು ಜೀ ಕನ್ನಡ ಕೂಡ ಅದ್ಧೂರಿಯಾಗಿ ಆಚರಿಸಿದೆ. ಈ ವೇಳೆ ಕಿರುತೆರೆ ತಾರೆಯರ ಅಪ್ಪಂದಿರನ್ನು ವೇದಿಕೆ ಮೇಲೆ ಕರೆಸಲಾಗಿತ್ತು. ಅದ್ಧೂರಿ ವೇದಿಕೆಯಲ್ಲಿ ತಂದೆ ಮಕ್ಕಳ ಸಮಾಗಮವಾಗಿತ್ತು. ಈ ವೇಳೆ ಪಾರು ಹಾಕಿದ್ದ ನೀಲಿ ಬಣ್ಣದ ಗೌನ್ ಎಲ್ಲರ ಗಮನ ಸೆಳೆದಿತ್ತು.


Click it and Unblock the Notifications











