'ಪಾರು' ಧಾರಾವಾಹಿಯ 'ಜನನಿ' ಪವಿತ್ರಾಗೆ ಮೊದಲ ಅವಕಾಶ ಸಿಕ್ಕ ಅಚ್ಚರಿಯ ಕತೆ

By ಪೂರ್ವ

'ಪಾರು' ಧಾರಾವಾಹಿಯಲ್ಲಿ ಎಲ್ಲ ಪಾತ್ರಗಳು ತುಂಬ ಪವರ್‌ಫುಲ್ ಆಗಿವೆ. ಹೀರೋ-ಹೀರೋಯಿನ್‌ನಂತೆ ಉಳಿದ ಪಾತ್ರಗಳಿಗೂ ಸಾಕಷ್ಟು ಮಹತ್ವ ಇದೆ. ಅಂತೆಯೇ ಜನನಿ ಪಾತ್ರ ಜನಮನ್ನಣೆ ಗಳಿಸಿದೆ. ಜನನಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ಪವಿತಾ ಬಿ ನಾಯ್ಕ್ ಅವರು 'ಪಾರು' ಗಿಂತ ಮುಂಚೆ 'ರಕ್ಷಾ ಬಂಧನ' ಸೀರಿಯಲ್‌ನಲ್ಲಿ ನಟಿಸಿದ್ದರು.

ಪವಿತ್ರ ಫ್ರೆಂಡ್ ಅಣ್ಣನಿಗೆ ನಟನೆಯಲ್ಲಿ ತುಂಬ ಆಸಕ್ತಿ ಇತ್ತು. ಅವರು ಒಮ್ಮೆ ಒಂದು ಸಂಸ್ಥೆಗೆ ಕರೆದುಕೊಂಡು ಹೋಗಿದ್ದರು. ಆಗ ಸಿನಿಮಾ ಟೀಂವೊಂದು ಲೀಡ್ ಪಾತ್ರಕ್ಕೆ ನಟಿಯನ್ನು ಹುಡುಕುತ್ತಿದ್ದರು. ಆಗ ಪವಿತ್ರರವರನ್ನು ನೋಡಿದವರು ಡೈಲಾಗ್ ಹೇಳಿ ಅಂತ ಹೇಳಿದ್ರಂತೆ. ಪವಿತ್ರ ಬೇರೆಯವರಿಗೋಸ್ಕರ ಆಡಿಷನ್ ಬಳಿ ಹೊಗಿದ್ರು. ಡೈಲಾಗ್ ಬರಲ್ಲ ಅಂತ ಹೇಳಿದರೂ ಕೇಳದೆ ಒತ್ತಾಯ ಮಾಡಿದರಂತೆ. ಅವರ ಒತ್ತಾಯಕ್ಕೆ ಮಣಿದು ಡೈಲಾಗ್ ಹೇಳಿದರಂತೆ, ತಂಡದವರು ಪವಿತ್ರಾರನ್ನು ಸೆಲೆಕ್ಟ್ ಮಾಡಿಬಿಟ್ಟರು!

ಮನೆಯವರು ಸಹ ಸಿಕ್ಕ ಅವಕಾಶ ಮಿಸ್ ಮಾಡಿಕೊಳ್ಳಬೇಡ ಎಂದರು. ಮನೆಯವರು, ಗೆಳೆಯರು ಎಲ್ಲರ ಒತ್ತಯಕ್ಕೆ ಮಣಿದು ಸಿನಿ ರಂಗಕ್ಕೆ ಪವಿತ್ರ ಪಾದಾರ್ಪಣೆ ಮಾಡಿದರು ಪವಿತ್ರ. ಆ ಬಳಿಕ 'ಎಲ್ಲಿ ನನ್ನ ವಿಳಾಸ', 'ಲಡ್ಡು', 'ಸ್ವೇಚ್ಛಾ' ಸಿನಿಮಾ ಮಾಡಿದ್ದಾರೆ. ಇವು ಮೂರು ಸಿನಿಮಾಗಳು ಹೊಸ ತಂಡದ ಸಿನಿಮಾಗಳೇ ಆಗಿವೆ. ಸಿನಿಮಾ ಮುಗಿಯುತ್ತಿದ್ದಂತೆ ಪವಿತ್ರಾಗೆ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತಂತೆ.

ಖಾಸಗಿ ವಾಹಿನಿಯಲ್ಲಿ 'ರಕ್ಷಾ ಬಂಧನ' ಧಾರಾವಾಹಿಯಲ್ಲಿ ನಟಿಸಿದರು. ಧಾರಾವಾಹಿ 95 ಎಪಿಸೋಡ್ ಬಂತು. ಬಿಗ್ ಬಾಸ್ ಶೋ ಶುರುವಾಗಬೇಕಾಗಿ ಬಂದಿದ್ದರಿಂದ ನಮ್ಮ ಧಾರಾವಾಹಿ ಮುಕ್ತಾಯವಾಯ್ತು. ಇದಾದ ನಂತರದಲ್ಲಿ 'ಪಾರು' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಲಭಿಸಿತು ಎಂದಿದ್ದಾರೆ ಪವಿತ್ರ.

ರಕ್ಷಾ ಬಂಧನ' ಧಾರಾವಾಹಿಯಲ್ಲಿ ನಟನೆ

ರಕ್ಷಾ ಬಂಧನ' ಧಾರಾವಾಹಿಯಲ್ಲಿ ನಟನೆ

ಧಾರಾವಾಹಿ ಹಾಗೂ ಸಿನಿಮಾದ ಶೂಟಿಂಗ್, ಶೆಡ್ಯೂಲ್, ನಟನೆ ಎಲ್ಲವೂ ಕೂಡ ಡಿಫರೆಂಟ್ ಆಗಿರತ್ತೆ. ಸಿನಿಮಾದಲ್ಲಿ 10-15 ದಿನ ಶೆಡ್ಯೂಲ್ ಇರತ್ತೆ. ಧಾರಾವಾಹಿಯನ್ನು ತಿಂಗಳಾನುಗಟ್ಟಲೇ ಮಾಡಬೇಕಾಗುತ್ತದೆ. ಸಿನಿಮಾದಲ್ಲಿ ಬೇರೆ ಬೇರೆ ಜಾಗಗಳಲ್ಲಿ ಶೂಟಿಂಗ್ ಮಾಡಬೇಕಾಗುವುದು. ಧಾರಾವಾಹಿಗೆ ಒಂದೇ ಕಡೆ ಶೂಟಿಂಗ್ ಮಾಡೋದು ಹೆಚ್ಚು. ಹಲವು ವಿಚಾರದಲ್ಲಿ ನಿಜಕ್ಕೂ ಪವಿತ್ರಗೆ ಖುಷಿಯಿದೆಯಂತೆ. ಶಾಲೆ-ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇದನ್ನು ನೋಡಿ ಪವಿತ್ರ ಮನೆಯವರು ಕೆಲವರಿಗೆ ಅವಕಾಶವೇ ಸಿಗೋದಿಲ್ಲ, ನಿನಗೆ ಅವಕಾಶ ಇದೆ ಭಾಗವಹಿಸು ಅಂತ ಒತ್ತಾಯ ಮಾಡಿ ಕಳಿಸಿದ್ದರಂತೆ.

''ನಾವು ಹೇಗಿರುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ನಿರ್ಧಾರ''

''ನಾವು ಹೇಗಿರುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ನಿರ್ಧಾರ''

ಆಮೇಲೆ ಪವಿತ್ರನೇ ಇಷ್ಟಪಟ್ಟು ನಟಿಸಲು ಆರಂಭಿಸಿದರು. ನಾವು ಹೇಗಿರುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ನಿರ್ಧಾರವಾಗುತ್ತದೆ. ತಲೆ ಕೆಡಿಸೋರು ತುಂಬ ಜನರು ಇರುತ್ತಾರೆ, ಆದರೆ ನಾವು ನಮ್ಮ ಕೆಲಸದ ಕಡೆಗೆ ಮಾತ್ರ ಗಮನ ಕೊಡಬೇಕು. ಮನೆಯಲ್ಲಿ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿರೋದು ನಮ್ಮ ಕೈಲಿರುತ್ತದೆ. ಬೇರೆ ಬೇರೆ ಜಾಗಗಳಲ್ಲಿ ಶೂಟಿಂಗ್ ಇರುತ್ತವೆ. ಉತ್ತರ ಕರ್ನಾಟಕದ ಕಡೆ ಕೂಡ ಶೂಟಿಂಗ್ ಇವೆ. ಚಿತ್ರರಂಗಕ್ಕೆ ಬಂದಮೇಲೆ ಖುಷಿಯಿಂದ ಕೆಲಸ ಮಾಡಬೇಕು ಎಂದು ಫಿಕ್ಸ್ ಆಗಿದ್ದಾರಂತೆ ಎನ್ನುತ್ತಾರೆ ಪವಿತ್ರ.

ನಟನೆಗೆ ಬರದಿದ್ದರೆ ಐಟಿಯಲ್ಲಿ ಕೆಲಸ ಮಾಡುತ್ತಿದ್ದರಂತೆ ಪವಿತ್ರ.

ನಟನೆಗೆ ಬರದಿದ್ದರೆ ಐಟಿಯಲ್ಲಿ ಕೆಲಸ ಮಾಡುತ್ತಿದ್ದರಂತೆ ಪವಿತ್ರ.

ಇಂಜಿನಿಯರಿಂಗ್ ಮಾಡಿರೋದರಿಂದ ನಟನೆಗೆ ಬರದಿದ್ದರೆ ಐಟಿಯಲ್ಲಿ ಕೆಲಸ ಮಾಡುತ್ತಿದ್ದರಂತೆ ಪವಿತ್ರ. ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ ನನ್ನನ್ನು ಯಾರೂ ಗುರುತಿಸುತ್ತಿರಲಿಲ್ಲ. ಆದರೆ ಪಾರು ಧಾರಾವಾಹಿಯಲ್ಲಿ ನಟಿಸಿದ ಮೇಲಂತೂ ಎಲ್ಲೇ ಹೋದರೂ ಜನರು ಮಾತನಾಡಿಸುತ್ತಾರೆ, ಮನೆಗೆ ಕರೆದು ಊಟ ಹಾಕಿಸುತ್ತಾರೆ. ಇತ್ತೀಚೆಗೆ ಸಿಗಂಧೂರು, ತಿರುಪತಿಗೆ ಹೋದಾಗ ಜನರು ನಮ್ಮನ್ನು ಮಾತನಾಡಿಸಿ ಫೋಟೋ ತೆಗೆಸಿಕೊಂಡರು. ಜನರು ಒಮ್ಮೊಮ್ಮೆ ನನ್ನನ್ನು ನೋಡಿ ಗೊಂದಲದಲ್ಲಿದ್ದರೆ ಮಾಸ್ಕ್ ತೆಗೆದು ನಾನೇ ಜನನಿ ಅಂತ ಹೇಳುತ್ತೇನೆ ಎಂದು ಪವಿತ್ರ ಹೇಳುತ್ತಾರೆ.

ಧಾರಾವಾಹಿಗಳಿಂದ ಪವಿತ್ರಗೆ ಸಿಕ್ಕಾಪಟ್ಟೆ ಆಫರ್

ಧಾರಾವಾಹಿಗಳಿಂದ ಪವಿತ್ರಗೆ ಸಿಕ್ಕಾಪಟ್ಟೆ ಆಫರ್

ಧಾರಾವಾಹಿಗಳಿಂದ ಪವಿತ್ರಗೆ ಸಿಕ್ಕಾಪಟ್ಟೆ ಆಫರ್ ಬರುತ್ತಿದೆ. ವೆಬ್‌ಸಿರೀಸ್‌ಗೂ ಕೂಡ ಆಫರ್ ಬರುತ್ತಿದೆಯಂತೆ. ಆದರೆ ಪವಿತ್ರಗೆ ವೆಬ್‌ಸಿರೀಸ್‌ನಲ್ಲಿ ನಟಿಸಲು ಇಷ್ಟವಿಲ್ಲವಂತೆ. ಕನ್ನಡದಲ್ಲಿಯೇ ಹೆಚ್ಚು ನಟಿಸಲು ಇಷ್ಟವಂತೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೆ. ರಾಮ್‌ನಾರಾಯಣ್, ಮದನ್, ಕಿಶನ್ ಮೊದಲಾದ ನಿರ್ದೇಶಕರ ಜೊತೆ ಕೆಲಸ ಮಾಡಿರುವ ರಮಾನಂದ್ ಆರ್. ಈಗ ಸ್ವತಂತ್ರವಾಗಿ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದ ಹೆಸರು ಲಡ್ಡು. ಪವಿತ್ರಾ ಈ ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Paaru serial Actress Pavitra real life. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X