For Quick Alerts
  ALLOW NOTIFICATIONS  
  For Daily Alerts

  ಪಾರು: ಅರಸನಕೋಟೆಯಲ್ಲಿ ಅದ್ಧೂರಿಯಾಗಿ ನಡೀತು ರಕ್ಷಾ ಬಂಧನದ ಸಂಭ್ರಮ

  By ಎಸ್ ಸುಮಂತ್
  |

  ಇವತ್ತು ರಕ್ಷಾ ಬಂಧನ. ಅಣ್ಣನ ಒಳಿತಿಗಾಗಿ ತಂಗಿ ಆಚರಿಸುವ ಹಬ್ಬ. ತಂಗಿಯ ಹಿಂದೆ ನಾನು ಇದ್ದೇನೆ ಎಂದು ಅಣ್ಣ ಭರವಸೆ ನೀಡುವ ಹಬ್ಬ. ರಕ್ಷಾ ಬಂಧನ ಆಚರಣೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಸರಳವಾಗಿಯಾದರೂ ಕಳೆದ ಕೆಲವು ವರ್ಷಗಳಿಂದ ಎಲ್ಲಾ ರಾಜ್ಯಗಳಲ್ಲಿಯೂ ರಕ್ಷಾ ಬಂಧನ್ ಆಚರಣೆ ಚಾಲ್ತಿಯಲ್ಲಿದೆ. ಇದೀಗ ಅರಸನಕೋಟೆಯ ಅಖಿಲಾಂಡೇಶ್ವರಿ ಮನದಲ್ಲೂ ಇದೆ ರಕ್ಷಾ ಬಂಧನ್ ಆಚರಣೆ ಸಂತಸ ತರಿಸಿದೆ.

  ಅರಸನಕೋಟೆಯ ನೆಮ್ಮದಿ ಹಾಳು ಮಾಡಲು ರಾಣಾ ಮತ್ತು ಅರುಂಧತಿ ಕಾರ್ಯತಂತ್ರ ರೂಪಿಸುತ್ತಲೇ ಇದ್ದಾರೆ. ಆದಿಯ ಲೈಫ್ ನಲ್ಲಿ ಆಟ ಆಡಿದ್ದಾಯ್ತು. ಅದಕ್ಕೆಂದೇ ಅಖಿಲಾ ತಕ್ಕ ಶಾಸ್ತಿ ಮಾಡಿದ್ದಾಳೆ. ಆದರೂ ಬುದ್ಧಿ ಕಲಿಯದ ಶತ್ರುಗಳು ಈಗ ಚಿಕ್ಕ ಮಗ ಪ್ರೀತಂ ಲಾಕ್ ಮಾಡಿದ್ದಾರೆ. ಆದರೆ ಪ್ರೀತಂ ಯಾವುದನ್ನು ಮನೆಯಲ್ಲಿಯೂ ಹೇಳುವುದಕ್ಕೂ ಆಗದಂತಹ ಸ್ಥಿತಿಯಲ್ಲಿದ್ದಾನೆ. ಮುಂದೆ ಇನ್ಯಾವ ರೀತಿಯ ಸಮಸ್ಯೆ ಕೊಡಲು ಸಜ್ಜಾಗಿದ್ದಾರೆ ಅನ್ನೋದನ್ನು ನೋಡಬೇಕಿದೆ.

  ಟ್ರಿಪ್‌ನಲ್ಲಿ ಪುಟ್ಟಕ್ಕನ ಮಕ್ಕಳು & ಬಾವಿ ಅಳಿಯಂದಿರ ಮೋಜು, ಮಸ್ತಿ..!ಟ್ರಿಪ್‌ನಲ್ಲಿ ಪುಟ್ಟಕ್ಕನ ಮಕ್ಕಳು & ಬಾವಿ ಅಳಿಯಂದಿರ ಮೋಜು, ಮಸ್ತಿ..!

  ಅಖಿಲಾ ಮುಖದಲ್ಲಿ ನಗು ತರಿಸಿದ ವೀರಣ್ಣ

  ಅಖಿಲಾ ಮುಖದಲ್ಲಿ ನಗು ತರಿಸಿದ ವೀರಣ್ಣ

  ವೀರಣ್ಣ ಎಂದರೆ ಅಖಿಲಾಂಡೇಶ್ಚರಿಗೆ ಎಲ್ಲಿಲ್ಲದ ಗೌರವ, ಪ್ರೀತಿ. ವೀರಣ್ಣ ಹೇಳಿದ ಮಾತನ್ನು ಅಖಿಲಾಂಡೇಶ್ವರ ಮೀರುವ ಮಾತೇ ಇಲ್ಲ. ತಾನಿಷ್ಟಪಡುವ ಅಣ್ಣನ ಮಗಳೇ ಮನೆಗೆ ಸೊಸೆಯಾಗಿ ಬಂದಿದ್ದು, ಮತ್ತಷ್ಟು ಸಂತಸ ತಂದಿದೆ. ಆದರೆ ಜನನಿ ಕೂಡ ತಾನೂ ವೀರಣ್ಣನ ಮಗಳು ಎಂಬ ಅಹಂ ತೋರಿಸಿದವಳಲ್ಲ. ವೀರಣ್ಣನ ಗುಣಗಳೇ ಜನನಿಗೂ ಬಂದಿದೆ ಎಂದರೆ ತಪ್ಪಾಗುವುದಿಲ್ಲ. ಅದೇ ಗುಣವನ್ನು ಅಖಿಲಾಂಡೇಶ್ವರಿ ಸಾಕಷ್ಟು ಬಾರೀ ಹೊಗಳಿದ್ದಾರೆ. ಇದೀಗ ತಾನು ಹೆಚ್ಚು ಇಷ್ಟ ಪಡುವ ಅಣ್ಣನ ಆಗಮನವಾಗಿದೆ. ಅದು ರಕ್ಷಾ ಬಂಧನದ ದಿವಸ. ವೀರಣ್ಣನನ್ನು ಕಂಡು ಅಖಿಲಾಂಡೇಶ್ವರಿ ಮನದಲ್ಲಿ ಸಂತ ಹೆಚ್ಚಾಗಿದೆ.

  ಸ್ವಾತಂತ್ರ್ಯ ದಿನಾಚರಣೆಯಂದೇ ಉದಯ ಟಿವಿಯ 'ಜನನಿ' ಜರ್ನಿ ಆರಂಭಸ್ವಾತಂತ್ರ್ಯ ದಿನಾಚರಣೆಯಂದೇ ಉದಯ ಟಿವಿಯ 'ಜನನಿ' ಜರ್ನಿ ಆರಂಭ

  ಜೇನುತುಪ್ಪ ಕಂಡು ಭಾವುಕಳಾದ ಅಖಿಲಾ

  ಜೇನುತುಪ್ಪ ಕಂಡು ಭಾವುಕಳಾದ ಅಖಿಲಾ

  ಕೆಲವೊಂದು ಇಷ್ಟ ಕಷ್ಟ ತಮ್ಮ ಆತ್ಮೀಯರಿಗೆ ಮಾತ್ರವೇ ಗೊತ್ತಿರುತ್ತದೆ. ಆ ಸೀಕ್ರೆಟ್ ಬೇರೊಬ್ಬರು ಈಡೇರಿಸಿದರೆ ಅನುಮಾನ, ಆಶ್ಚರ್ಯವಾಗದೆ ಇರುವುದಿಲ್ಲ. ಸೀಕ್ರೇಟ್ ಗೊತ್ತಿರುವ ವ್ಯಕ್ತಿ ನೆನಪಾಗದೆ ಇರುವುದಿಲ್ಲ. ರಕ್ಷಾ ಬಂಧನದಂದು ಅರಸನಕೋಟೆಯಲ್ಲಿ ಅದೇ ನಡೆದಿದೆ. ಮನೆ ಕೆಲಸದವರು ಅಖಿಲಾಂಡೇಶ್ವರಿಗೆ ಜೇನುತುಪ್ಪ ತಂದು ಕೊಟ್ಟಿದ್ದಾರೆ. ಅದನ್ನು ಕಂಡ ಅಖಿಲಾ, ನಂಗೆ ಜೇನು ತುಪ್ಪ ಇಷ್ಟ ಎಂದು ನಿಮಗೆ ಹೇಗೆ ಗೊತ್ತು ಎಂದಾಗ ವೀರಣ್ಣನ ಎಂಟ್ರಿಯಾಗುತ್ತೆ. ರಕ್ಷಾ ಬಂಧನದ ದಿನ ರಾಖಿ ಕಟ್ಟಿಸಿಕೊಳ್ಳಲು ಬಂದೆಯಾ ವೀರಣ್ಣ. ಎಷ್ಟು ವರ್ಷಗಳಾಗಿ ಹೋಯಿತಲ್ಲ ಎಂದು ನೆನೆದಿದ್ದಾಳೆ.

  ಅಖಿಲಾಗೆ ಡ್ರೈವರ್ ಕೂಡ ಅಣ್ಣನಂತೆ

  ಅಖಿಲಾಗೆ ಡ್ರೈವರ್ ಕೂಡ ಅಣ್ಣನಂತೆ

  ಅಖಿಲಾ ನಿಯತ್ತಿನಿಂದ ಇರುವವರನ್ನು ಪ್ರೀತಿ ಮಾಡದೆ ಇರುವವಳಲ್ಲ. ಅದರಲ್ಲಿ ಡ್ರೈವರ್ ಕೆಲಸದಲ್ಲಿರುವ ಹನುಮಂತು ಕೂಡ ಒಬ್ಬರು. ಅಂದಿನಿಂದ ಇಂದಿನವರೆಗೂ ಅದೇ ನಿಯತ್ತಿನಿಂದ ದುಡಿಯುತ್ತಿದ್ದಾನೆ. ಮಗಳ ಮನೆ ಕೆಲಸದವಳಾಗಿ, ಮನೆ ಸೊಸೆಯಾದಾಗಲೂ ಹನುಮಂತು ನಿಯತ್ತು ಬದಲಾಗಿಲ್ಲ. ಹೀಗಾಗಿ ಅಖಿಲಾ, ಹನುಮಂತುನನ್ನು ಅಣ್ಣನಂತೆ ಕಂಡು ರಾಖಿ ಕಟ್ಟಿದ್ದಾಳೆ.

  ಪವಿತ್ರಾಳನ್ನು ಮುಗಿಸಲು ದೇವ್ ಮಾಸ್ಟರ್ ಪ್ಲ್ಯಾನ್!ಪವಿತ್ರಾಳನ್ನು ಮುಗಿಸಲು ದೇವ್ ಮಾಸ್ಟರ್ ಪ್ಲ್ಯಾನ್!

  ಪಾರುಗೆ ಇಬ್ಬರು ತಮ್ಮಂದಿರು ಈಗ

  ಪಾರುಗೆ ಇಬ್ಬರು ತಮ್ಮಂದಿರು ಈಗ

  ಪಾರು ಅಲಿಯಾಸ್ ಮೋಕ್ಷಿತಾ ಪೈ ರಿಯಲ್ ಲೈಫ್ ಸ್ಟೈಲ್ ಎಲ್ಲರಿಗೂ ಗೊತ್ತಿರುವ ವಿಚಾರವೇ. ಈಗಾಗಲೇ ವೇದಿಕೆ ಮೇಲೆ, ಸೋಶಿಯಲ್‌ಮೀಡಿಯಾದಲ್ಲಿ ಒಡಹುಟ್ಟಿದ ಸಹೋದರನನ್ನು ನೋಡಿದ್ದೇವೆ. ಆದರೆ ಪಾರುಗೆ ಇನ್ನೊಬ್ಬ ತಮ್ಮ ಕೂಡ ಇದ್ದಾನೆ. ಅದು ಗಣಿ. ಧಾರಾವಾಹಿಯಲ್ಲಿ ತಮ್ಮನಾಗಿ ಅಭಿನಯಿಸುತ್ತಿರುವ ಗಣಿ, ರಿಯಲ್ ಲೈಫ್‌ನಲ್ಲಿ ಅಕ್ಕ ತಮ್ಮನಂತೆಯೇ ಇದ್ದಾರೆ. ಟ್ರಿಪ್ ಹೋದಾಗಲೂ ಪಾರು, ಗಣಿಯನ್ನು ಜೊತೆಗೆ ಕರೆದೊಯ್ಯುತ್ತಾಳೆ. ಇದೀಗ ಗಣಿ ಮತ್ತು ಒಡಹುಟ್ಟಿದ ತಮ್ಮನಿಗೂ ರಾಖಿ ಕಟ್ಟಿದ್ದಾರೆ.

  English summary
  Zee Kannada Paaru Serial August 11th Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X