ಪಾರು: ದುಶ್ಮನ್ ಅರುಂಧತಿಗೆ ಮತ್ತೊಮ್ಮೆ ಒಗ್ಗಟ್ಟು ತೋರಿಸಿದ ಆದಿ..!

By ಎಸ್ ಸುಮಂತ್

ಅರುಂಧತಿಗೆ ಅದೆಷ್ಟೇ ಬುದ್ದಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಮತ್ತೆ ಮತ್ತೆ ಒಂದೇ ತಪ್ಪನ್ನು ಮಾಡುತ್ತಿದ್ದಾಳೆ. ಅರಸನ ಕೋಟೆಯ ಒಗ್ಗಟ್ಟನ್ನು ಒಡೆದು, ಸುಖ-ಶಾಂತಿ ಇಲ್ಲದಂತೆ ಮಾಡುತ್ತಿದ್ದಾಳೆ. ಈಗಾಗಲೇ ಅರಸನಕೋಟೆಯ ಸೊಸೆಯಂದಿರಿಂದ ಕೆನ್ನೆ ಚುರ್ ಎನ್ನುವಂತೆ ರಾಣಾ ಒದೆ ತಿಂದಿದ್ದು ಆಗಿದೆ. ಕತ್ತು ಎತ್ತಲು ಆಗದಂತೆ ಅಖಿಲಾಂಡೇಶ್ವರಿ ಬಳಿ ಅರುಂಧತಿ ಛೀಮಾರಿ ಹಾಕಿಸಿಕೊಂಡಿದ್ದಾಳೆ. ಇಷ್ಟಾದರೂ ಬುದ್ದಿ ಕಲಿಯದ ಅರುಂಧತಿ, ಇದೀಗ ಪ್ರೀತುನಾ ಟಾರ್ಗೆಟ್ ಮಾಡಿದ್ದಾಳೆ.

ದೊಡ್ಡ ಮಗ ಮತ್ತು ಸೊಸೆಯ ಜೀವನದಲ್ಲಿ ಆಟವಾಡಿ, ಇಡೀ ಅರಸನಕೋಟೆ ನೆಮ್ಮದಿಯನ್ನು ಹಾಳು ಮಾಡಿದ್ದಳು. ಮೊದ ಮೊದಲಿಗೆ ಸಕ್ಸಸ್ ಆದವರು ಬಳಿಕ ಹೊಡೆತ ತಿಂದಿದ್ದರು. ಆದರೆ ಆದಿ ವಿಚಾರದಲ್ಲಿ ಅಮ್ಮ ಮಗನನ್ನು ದೂರ ಮಾಡಿದ್ದವರು, ಇದೀಗ ಪ್ರೀತು ವಿಚಾರದಲ್ಲಿ ಮನೆಯ ಮರ್ಯಾದೆಯನ್ನೇ ಟಾರ್ಗೆಟ್ ಮಾಡಿದ್ದಾರೆ.

ಪೂಜೆಗೆ ವಿಘ್ನವಾಗುತ್ತಾಳಾ ಅರುಂಧತಿ?

ಪೂಜೆಗೆ ವಿಘ್ನವಾಗುತ್ತಾಳಾ ಅರುಂಧತಿ?

ಅರಸನಕೋಟೆಯಲ್ಲಿ ಪೂಜೆ ಪುನಸ್ಕಾರ ಆಗಾಗ ನಡೆಯುತ್ತಲೇ ಇರುತ್ತವೆ. ಇನ್ನು ಹಬ್ಬ ಹರಿದಿನಗಳಲ್ಲಿ ಗ್ರ್ಯಾಂಡ್ ಆಗಿ ಸೆಲೆಬ್ರೇಷನ್ ನಡೆಯುತ್ತೆ. ಸದ್ಯ ವರಮಹಾಲಕ್ಷ್ಮೀ ಹಬ್ಬ ಮುಗಿದಿದೆ. ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡಿದ್ದಾರೆ. ಆದರೆ ಈ ಪೂಜೆ ಸರಾಗವಾಗಿ ನಡೆಯಲು ಬಿಡುವುದಿಲ್ಲ ಎಂದು ಅರುಂಧತಿ ಪಣ ತೊಟ್ಟಿದ್ದಾಳೆ. ಅದಕ್ಕಾಗಿ ಪ್ರೀತು ವಿಡಿಯೋವನ್ನು ಮನೆಯವರಿಗೆ ತಲುಪಿಸುವ ಸಾಹಸಕ್ಕೆ ಕೈ ಹಾಕಿದ್ದಾಳೆ.

ಪೂಜೆಯಲ್ಲೂ ಖುಷಿಯಿಲ್ಲ ಪ್ರೀತೂಗೆ

ಪೂಜೆಯಲ್ಲೂ ಖುಷಿಯಿಲ್ಲ ಪ್ರೀತೂಗೆ

ಮನೆಯವರೆಲ್ಲಾ ಸಂತಸದಿಂದ ಪೂಜೆಯ ಎಲ್ಲಾ ತಯಾರಿ‌ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರೀತೂ ಏನೋ ಗಾಬರಿಯಲ್ಲಿದ್ದಾನೆ. ಮನಸ್ಸೊಳಗೆ ಆಗುತ್ತಿರುವ ಆತಂಕವನ್ನು ಮನೆಯವರಿಗೂ ಹೇಳಿಕೊಳ್ಳುತ್ತಿಲ್ಲ. ಇನ್ನೆಲ್ಲೋ ಹೋಗಿ ನಿಂತಿರುತ್ತಾನೆ. ಆದರೆ‌ ಇದೇ ಸಮಯದಲ್ಲಿ ರಾಣಾ ಅಂದುಕೊಂಡಿದ್ದನ್ನೇ ಮಾಡಿದ್ದಾನೆ. ಪ್ರೀತೂ ಮತ್ತು ಮೋನಿಕಾ ಇದ್ದ ವಿಡಿಯೋವನ್ನು ಆದಿಯ ಮೊಬೈಲ್ ಗೆ ಕಳಿಸಿಬಿಟ್ಟಿದ್ದಾನೆ. ಅದೃಷ್ಟ ಆ ಕ್ಷಣ ಆದಿಯ ಮೊಬೈಲ್ ನಲ್ಲಿದ್ದ ವಿಡಿಯೋವನ್ನು ಪ್ರೀತೂ ನೋಡಿದ್ದಾನೆ. ತಕ್ಷಣ ರಾಣಾಗೆ ಕಾಲ್ ಮಾಡಿ ಮತ್ತೆ ಮನವಿ ಮಾಡಿಕೊಂಡಿದ್ದಾ‌ನೆ.

ಪ್ರೀತೂನಾ ಕಾಪಾಡುತ್ತಾನಾ ಆದಿ?

ಪ್ರೀತೂನಾ ಕಾಪಾಡುತ್ತಾನಾ ಆದಿ?

ಆದಿ ಮೊಬೈಲ್‌ಗೆ ಬಂದಿದ್ದ ವಿಡಿಯೋ, ಆದಿ ನೋಡುವುದಕ್ಕೂ ಮುನ್ನ ಡಿಲೀಟ್ ಆಗಿದೆ. ಪ್ರೀತೂ ಮನವಿ ಮಾಡಿದ ಮೇಲೆ ಆ ವಿಡಿಯೋ ಡಿಲೀಟ್ ಆಗಿದೆ. ಆದರೆ ಅದೇ ನಂಬರ್ ಕಾಲ್ ಮಾಡಿ ಕೇಳಲು ಮೋಹನ್ ಹೇಳಿದ್ದಾರೆ. ಇದರ ನಡುವೆ ಭಯದಲ್ಲಿಯೇ ಇರುವ ಪ್ರೀತಮ್ ಬೇಡ ಎಂದಿದ್ದಾನೆ. ಆದರೆ ಆದಿ ಆ ವಿಡಿಯೋ ನೋಡಿದ್ದಾನಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಯಾಕೆಂದರೆ ಆದಿಯ ನಡವಳಿಕೆ ಅರುಂಧತಿಗೆ ನಡುಕ ಹುಟ್ಟಿಸಿದಂತಿದೆ. ಹೀಗಾಗಿ ಆದಿ ಆ ವಿಡಿಯೋ ನೋಡಿರುವ ಸಾಧ್ಯತೆ ಇದೆ. ಒಂದು ವೇಳೆ ಆ ವಿಡಿಯೋ ಆದಿ ಗಮನಕ್ಕೆ ಬಂದಿದ್ದರೆ, ಖಂಡಿತಾ ಶತ್ರುಗಳಿಂದ ತಮ್ಮನನ್ನು ಕಾಪಾಡಿಕೊಳ್ಳುತ್ತಾನೆ.

ಆದಿಯ ನಡವಳಿಕೆಗೆ ಅರುಂಧತಿ ಶಾಕ್

ಆದಿಯ ನಡವಳಿಕೆಗೆ ಅರುಂಧತಿ ಶಾಕ್

ಈಗಾಗಲೇ ತಮ್ಮ ಶತ್ರುಗಳು ಯಾರು, ಅವರಿಂದ ಏನೆಲ್ಲಾ ಸಮಸ್ಯೆ ಆಗಿದೆ ಎಂಬುದು ಆದಿಯ ಗಮನಕ್ಕೂ ಬಂದಿದೆ. ಆದರೆ ಅದೇ ಶತ್ರುಗಳನ್ನು ಪ್ರೀತುನನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಸೂಕ್ಷ್ಮತೆ ಆದಿಗೆ ಸಿಕ್ಕಿರುವಂತೆ ಕಾಣುತ್ತದೆ. ಯಾಕೆಂದರೆ ಅರುಂಧತಿ ಮತ್ತು ರಾಣಾ ಸೇರಿಕೊಂಡು ಅರಸನಕೋಟೆಯ ನೆಮ್ಮದಿ ಹಾಳು ಮಾಡಬೇಕೆಂದೇ ಕಾಯುತ್ತಿರುವವರು. ಇದೀಗ ಆದಿ ತಮ್ಮ ಮನೆಯ ಸತ್ಯನಾರಾಯಣ ಪೂಜೆಗೆ ಶತ್ರುವಾದ ಅರುಂಧತಿಯನ್ನು ಕರೆತಂದಿದ್ದಾನೆ. ರಸ್ತೆಯಲ್ಲಿ ನಿಲ್ಲಿಸಿಕೊಂಡು ಮನೆಗೆ ಬಾ ಎಂದಿದ್ದಾನೆ. ಕೈ ಹಿಡಿದು ಎಳೆದೋಯ್ದಿದ್ದಾನೆ. ಅಷ್ಟೇ ಅಲ್ಲ ನಮ್ಮ ಮನೆ ಒಗ್ಗಟ್ಟು ಎಂಥದ್ದು ಎಂಬುದನ್ನು ತೋರಿಸಲು ಹೊರಟಿದ್ದಾನೆ. ಇದನ್ನು ಕಂಡು ಒಂದು ಕ್ಷಣ ಅರುಂಧತಿ ಶಾಕ್ ಆಗಿದ್ದಾಳೆ.

More from Filmibeat

English summary
Paaru Serial August 17th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X