For Quick Alerts
  ALLOW NOTIFICATIONS  
  For Daily Alerts

  ಪಾರು: ವೀರಯ್ಯದೇವ ಇರುವ ತನಕ ಅರಸನಕೋಟೆ ಭದ್ರ

  By ಎಸ್ ಸುಮಂತ್
  |

  ಅರಸನಕೋಟೆಯ ಒಗ್ಗಟ್ಟು ಒಡೆಯಲು, ನೆಮ್ಮದಿ ಹಾಳು ಮಾಡಲು ಶತ್ರುಗಳು ಕಾಯುತ್ತಿದ್ದಾರೆ. ಅದಕ್ಕೆಂದೇ ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು, ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಆದರೆ ದೇವರ ಆಶೀರ್ವಾದ, ವೀರಯ್ಯದೇವನ ಬೆಂಬಲ ಇರುವ ತನಕ ಇದ್ಯಾವುದು ಸಾಧ್ಯವಿಲ್ಲದ ಮಾತು. ಅರಸನಕೋಟೆಯ ಕಾವಲಿಗೆ ಸದಾ ವೀರಯ್ಯದೇವ ನಿಂತಿದ್ದಾನೆ. ತಂಗಿ ಮನೆಯ ಮರ್ಯಾದೆಯನ್ನು ಕಾಪಾಡುತ್ತಿದ್ದಾರೆ.

  ಮನೆಯಲ್ಲಿ ಲಕ್ಷ್ಮೀ ಪೂಜೆ ನಡೆಯುತ್ತಿದೆ. ಆದಿ ಶತ್ರುವನ್ನೆ ಮನೆಗೆ ಕರೆತಂದಿದ್ದಾನೆ. ಮನೆ ಒಗ್ಗಟ್ಟನ್ನು ತೋರಿಸಲು ಆದಿ ಪ್ರಯತ್ನ ಪಡುತ್ತಿರುವಾಗಲೇ ಹಿಂದೆಯಿಂದ ಶತ್ರುಗಳ ಆಟವೂ ಜೋರಾಗಿದೆ. ಪ್ರೀತುನನ್ನು ಆಟವಾಡಿಸಲು ಶುರು ಮಾಡಿದ್ದಾರೆ. ಪೂಜೆಯ ಸಮಯಕ್ಕೆ ಪ್ರೀತುನನ್ನು ತಮ್ನ ಅಂಗಳಕ್ಕೆ ಕರೆಸಿಕೊಂಡಿದ್ದಾರೆ. ಇದು ಶತ್ರುವಿಗೆ ಆಡಿಕೊಳ್ಳಲು ದಾರಿ ಮಾಡಿಕೊಟ್ಟಂತಾಗಿದೆ.

  'ಕಥೆಯೇ ಹೀರೊ, ಕಥೆಗಿಂತ ದೊಡ್ಡವರು ಯಾರಿಲ್ಲ': ಜೊತೆ ಜೊತೆಯಲಿ ನಿರ್ಮಾಪಕ ಆರೂರು ಜಗದೀಶ್!'ಕಥೆಯೇ ಹೀರೊ, ಕಥೆಗಿಂತ ದೊಡ್ಡವರು ಯಾರಿಲ್ಲ': ಜೊತೆ ಜೊತೆಯಲಿ ನಿರ್ಮಾಪಕ ಆರೂರು ಜಗದೀಶ್!

  ಅರುಂಧತಿ ಮುಂದೆ ಸೋಲುತ್ತಾಳಾ ಅಖಿಲಾ?

  ಅರುಂಧತಿ ಮುಂದೆ ಸೋಲುತ್ತಾಳಾ ಅಖಿಲಾ?

  ಅರುಂಧತಿ ಮತ್ತು ರಾಣಾ ಸದಾ ಹಾತೊರೆಯುವುದು ಅರಸನಕೋಟೆಯ ಮರ್ಯಾದೆ ತೆಗೆಯಲು. ಸದ್ಯ ಮೋನಿಕಾ ಎಂಬ ಅಸ್ತ್ರ ಬಿಟ್ಟು ಪ್ರೀತುನಾ ಲಾಕ್ ಮಾಡಿಕೊಂಡಿದ್ದಾಳೆ. ಪೂಜೆ ಸಮಯಕ್ಕೆ ಸರಿಯಾಗಿ ಮೋನಿಕಾ, ಪದರೀತುನನ್ನು ಮನೆಯಿಂದ ಹೊರಗಡೆಗೆ ಕರೆಸಿಕೊಂಡಿದ್ದಾಳೆ. ದೇವಸ್ಥಾನದಲ್ಲಿ ಪೂಜೆಗೆಂದು ಕರೆಸಿಕೊಂಡಿದ್ದಾಳೆ. ಇಲ್ಲಿ ಮನೆಯಲ್ಲಿ ಪೂಜೆ ನಡೆಯುತ್ತಿದೆ. ಆದಿ ಒಗ್ಗಟ್ಟು ತೋರಿಸುತ್ತೇನೆಂದು ಹಾಕಿದ್ದ ಚಾಲೆಂಜ್ ಪೂರ್ಣವಾಗುತ್ತಿಲ್ಲ. ಆ ಕಡೆ ಪ್ರೀತು ಕಾಲ್ ರಿಸೀವ್ ಮಾಡುತ್ತಿಲ್ಲ. ಈ ಕಡೆ ಅರುಂಧತಿ ಎಲ್ಲಪ್ಪ ನಿಮ್ಮ ಒಗ್ಗಟ್ಟು ಎಂದು ವ್ಯಂಗ್ಯವಾಡುತ್ತಿದ್ದಾಳೆ. ಇದು ಅರಸನಕೋಟೆಯ ಮರ್ಯಾದೆಗೆ ಕಳಂಕ ಬಂದಂತಾಗುತ್ತಿದೆ. ಅರುಂಧತಿ ಮುಂದೆ ಅಖಿಲಾಂಡೇಶ್ವರಿ ತಲೆ ತಗ್ಗಿಸುವ ಸಮಯವಾಗಿದೆ. ಆದರೆ ಅಣ್ಣನ ಆಸರೆ ಇದಕ್ಕೆ ಅವಕಾಶ ಕೊಡಲ್ಲ.

  ವೀರಯ್ಯನಿಂದ ಬಗೆಹರಿದ ಸಮಸ್ಯೆ

  ವೀರಯ್ಯನಿಂದ ಬಗೆಹರಿದ ಸಮಸ್ಯೆ

  ದೇವಸ್ಥಾನದಲ್ಲಿ ಮೋನಿಕಾ ಕೈನಲ್ಲಿ ಪ್ರೀತು ಸಿಕ್ಕಿ ಬಿದ್ದಿದ್ದಾನೆ. ಮನೆಯಲ್ಲಿ ಪೂಜೆ ನಡೆಯುತ್ತಿದೆ, ಹೋಗಬೇಕು ಎಂದರು ಮೋನಿಕಾ ಬಿಡುತ್ತಿಲ್ಲ. ಇಲ್ಲಿಗೆ ನಿಮ್ಮ ಮನೆಯವರು ಬರುತ್ತಾರೆ ಎಂದು ಇನ್ನು ಶಾಕ್ ಕೊಟ್ಟಿದ್ದಾನೆ. ಆದರೆ ಅಲ್ಲಿಗೆ ಬಂದದ್ದು ವೀರಯ್ಯ ದೇವ. ಅರಸನ ಮನೆಗೆ ಸದಾ ಕಾವಲಾಗಿರುವ ವೀರಯ್ಯದೇವನಿಗೆ ಅಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗದೆ ಇರಲ್ಲ. ಮೋನಿಕಾ ಕೈನಿಂದ ಪ್ರೀತುನನ್ನು ಬಿಡಿಸಿಕೊಂಡು ನಡೆದಿದ್ದಾರೆ.

  ಸಂತಸ ತಂದ ಪ್ರೀತು

  ಸಂತಸ ತಂದ ಪ್ರೀತು

  ಮನೆಯಲ್ಲಿ ಕೂತ ಶತ್ರು ಅರುಂಧತಿ, ಮನೆಯವರೆಲ್ಲಾ ಇದ್ದರೆ ಅಲ್ಲವೇ ಪೂಜೆ ಸಂಪೂರ್ಣವಾಗುವುದು. ಎರಡನೇ ಮಗ ಕಾಣಿಸುತ್ತಲೇ ಇಲ್ಲ ಎಂದು ಅಣಗಿಸಿದ್ದಾಳೆ. ಅಖಿಲಾಂಡೇಶ್ವರಿ ದೇವರ ಹತ್ತಿರ ಮನವಿ ಮಾಡಿಕೊಂಡಿದ್ದಾರೆ. ಮಗ ಸರಿಯಾದ ಸಮಯಕ್ಕೆ ಬರಬೇಕು ಅಂತ. ದೇವರಿಗೆ ಅರಸನಕೋಟೆಯ ಮನವಿ ಕೇಳಿಸಿದೆ. ಪೂಜೆಯ ಸಮಯಕ್ಕೆ ಸರಿಯಾಗಿ ಪ್ರೀತು ಮನೆಗೆ ಬಂದಿದ್ದಾನೆ. ಇದನ್ನು ಕಂಡು ಅಖಿಲಾ ಕಣ್ಣಲ್ಲಿ ಸಂತಸ ಕಂಡರೆ, ಶತ್ರು ಅರುಂಧತಿ ಕಣ್ಣಲ್ಲಿ ಭಯ, ಆಶ್ಚರ್ಯ ಎಲ್ಲಾ ಒಟ್ಟೊಟ್ಟಿಗೆ ಆಗುತ್ತಿದೆ.

  ಅರುಂಧತಿ ಪಿತೂರಿ ಅಂತ್ಯವಾಗುತ್ತಾ?

  ಅರುಂಧತಿ ಪಿತೂರಿ ಅಂತ್ಯವಾಗುತ್ತಾ?

  ಅರುಂಧತಿ ಸೋಲುತ್ತಿದ್ದರು ಮತ್ತೆ ಮತ್ತೆ ತನ್ನ ಕೆಟ್ಟ ಹಠವನ್ನು ಪ್ರದರ್ಶನ ಮಾಡುತ್ತಿದ್ದಾಳೆ. ಅರಸನಕೋಟೆಯನ್ನು ಉರುಳಿಸುತ್ತೇನೆ ಎಂದು ತನ್ನ ಬತ್ತಳಿಕೆಯಲ್ಲಿರುವ ಬಾಣಗಳನ್ನೆಲ್ಲಾ ಬಳಸಿ, ಅಖಿಲಾ ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾಳೆ. ಇದೀಗ ವೀರಯ್ಯದೇವ ಮತ್ತೆ ಬಂದಿದ್ದು, ಅರುಂಧತಿಯ ಅಟ್ಟಹಾಸವನ್ನು ಮಟ್ಟಹಾಕುವ ಸಾಧ್ಯತೆ ಇದೆ. ಈಗಾಗಲೇ ಪ್ರೀತು ಯಾವುದೋ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಸೂಕ್ಷ್ಮತೆ ಅರ್ಥವಾಗಿದೆ. ಸಮಸ್ಯೆ ಏನು, ಬಂದದ್ದು ಯಾರಿಂದ ಎಂಬುದನ್ನು ತಿಳಿದರೆ ಅರುಂಧತಿಯ ಕಥೆ ಊಹಿಸಲು ಅಸಾಧ್ಯ. ವೀರಯ್ಯದೇವ ಕೊಟ್ಟರೆ ಇನ್ನೆಂದೂ ಅರುಂಧತಿ ಎದ್ದೇಳಲು ಸಾಧ್ಯವಿರುವುದಿಲ್ಲ.

  English summary
  Paaru Serial August 19th Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X