For Quick Alerts
  ALLOW NOTIFICATIONS  
  For Daily Alerts

  ಅತ್ತಿಗೆಯನ್ನು ದೂಡಿದ ಮೈದುನ: ಪ್ರೀತೂ ವರ್ತನೆಗೆ ಮನೆ ಮಂದಿ ಶಾಕ್

  By ಪೂರ್ವ
  |

  ಪಾರು ಧಾರಾವಾಹಿ ಇದೀಗ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಸೀರಿಯಲ್ ನೋಡುಗರಿಗೆ ಬಹಳ ಪ್ರಿಯವಾದ ಪಾತ್ರವೆಂದರೆ ಪಾರ್ವತಿ. ಪಾರು ಅಲಿಯಾಸ್ ಪಾರ್ವತಿ ಮಾಡುವ ಕೆಲಸಗಳೇ ಆಕೆಯನ್ನು ಬಹಳ ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ.

  ಇದೀಗ ಜನನಿ ಬೇಸರಗೊಂಡಿದ್ದಾಳೆ. ಇದನ್ನು ನೋಡಿದ ಪಾರು ಯಾಕೆ ಎಂದು ವಿಚಾರ ಮಾಡಿದಾಗ ಒಂದೊಂದೇ ವಿಚಾರ ಪಾರ್ವತಿ ಗಮನಕ್ಕೆ ಬರುತ್ತಿದೆ. ಜನನಿಗೆ ಪ್ರೀತೂ ಕೊಟ್ಟಿರುವ ಗಿಫ್ಟ್ ಅನ್ನು ಪಾರು ನೋಡುತ್ತಾಳೆ. ಆದರೆ ಅದು ಹರಿದ ಅರ್ಧ ಸೀರೆ ಆಗಿರುತ್ತದೆ. ಅದನ್ನು ನೋಡಿದ ಪಾರುಗೆ ಶಾಕ್ ಆಗುತ್ತದೆ. ಪ್ರೀತೂ ಯಾಕೆ ಹೀಗೆ ಮಾಡಿದರು ಎಂದೆಲ್ಲ ವಿಚಾರ ಮೂಡುತ್ತದೆ.

  ಸಾಕ್ಷಿ ಸಮೇತ ಕರೆತಂದರು ತಪ್ಪಿಸಿಕೊಂಡ ಕುತಂತ್ರಿಗಳು: ಮತ್ತೆ ರಾಜಿಯೇ ತಪ್ಪಿತಸ್ಥೆ..!ಸಾಕ್ಷಿ ಸಮೇತ ಕರೆತಂದರು ತಪ್ಪಿಸಿಕೊಂಡ ಕುತಂತ್ರಿಗಳು: ಮತ್ತೆ ರಾಜಿಯೇ ತಪ್ಪಿತಸ್ಥೆ..!

  ತಮ್ಮನ ವರ್ತನೆಯಿಂದ ಬೇಸತ್ತ ಆದಿ

  ತಮ್ಮನ ವರ್ತನೆಯಿಂದ ಬೇಸತ್ತ ಆದಿ

  ಏನು ಪಾರು ಹರಿದ ಸೀರೆ ತೆಗೆದುಕೊಂಡು ಏನು ಮಾಡುತ್ತಿದ್ದೀಯಾ ಎಂದು ಅಲ್ಲಿಗೆ ಬಂದ ಆದಿ ಕೇಳುತ್ತಾನೆ. ಆಗ ಅಲ್ಲಿಯೇ ಇದ್ದ ಜನನಿ ಮುಖ ಇನ್ನಷ್ಟು ತೆಪ್ಪಾಗಾಗುತ್ತದೆ. ಪ್ರೀತೂ ಬಳಿ ಮಾತನಾಡಬೇಕು ಎಂದು ಕೊಂಡರು ಆತ ಮಲಗಿದ್ದ ಕಾರಣ ಸಾಧ್ಯವಾಗಲಿಲ್ಲ. ಇತ್ತ ಜನನಿಯನ್ನು ಸಮಾಧಾನಪಡಿಸುತ್ತಾರೆ ಆದಿ ಪಾರು.

  ರಾಜಿಗೆ ಕುಡಿಸಿದವರ ಹಿಂದೆ ಬಿದ್ದಿದ್ದಾನೆ ಕರ್ಣ: ಸಾನ್ವಿಗೆ ಕಾದಿದೆಯಾ ಗ್ರಹಚಾರ..?ರಾಜಿಗೆ ಕುಡಿಸಿದವರ ಹಿಂದೆ ಬಿದ್ದಿದ್ದಾನೆ ಕರ್ಣ: ಸಾನ್ವಿಗೆ ಕಾದಿದೆಯಾ ಗ್ರಹಚಾರ..?

  ಪಾರು ಸಮಧಾನ

  ಪಾರು ಸಮಧಾನ

  ಇದು ಸೀರೆ ಅಲ್ಲ ಏನೋ ಬೇರೆ ಕೊಟ್ಟಿರಬೇಕು ಹೊಲಿಸಿಕೊಳ್ಳಲು ಎಂದು ಹೇಳುತ್ತಾರೆ. ಬಳಿಕ ಕೊಂಚ ಮಟ್ಟಿಗೆ ಸಮಾಧಾನಗೊಂಡ ಜನನಿ ಅಲ್ಲಿಂದ ರೂಮಿಗೆ ತೆರಳುತ್ತಾರೆ. ಚೆನ್ನಾಗಿದ್ದ ಸೀರೆ ಇದ್ದಕ್ಕಿದ್ದ ಹಾಗೆ ಯಾಕೆ ಹರಿಯಿತು? ಪ್ರೀತೂ ಹರಿದು ಕೊಟ್ಟನಾ? ಇಂತಹ ಹಲವು ಅನುಮಾನಗಳು ಮೂಡುತ್ತದೆ. ಬಳಿಕ ಅವರು ಅಲ್ಲಿಂದ ತೆರಳುತ್ತಾರೆ. ರಾತ್ರಿ ಮಲಗದ ಪಾರು ಕುಳಿತುಕೊಂಡಿರುತ್ತಾಳೆ. ಪ್ರೀತೂ ಮನೆ ಹೊರಗೆ ಹೋಗಲು ಬರುತ್ತಿದ್ದ ವೇಳೆ ಪಾರು ತಡೆಯುತ್ತಾರೆ.

  ಪ್ರೀತು ಎದುರು ಮಾತಿಲ್ಲ

  ಪ್ರೀತು ಎದುರು ಮಾತಿಲ್ಲ

  ಈ ವೇಳೆ ಅರುಂಧತಿ ಹಾಗೂ ರಾಣಾ ಬಳಿಮಾತನಾಡುತ್ತಾ ಇರುತ್ತಾರೆ. ಅತ್ತಿಗೆಯ ಬಳಿ ಪದೇ ಪದೆ ಹೇಳುತ್ತಿರುತ್ತಾನೆ. ಅತ್ತಿಗೆ ಹೊರಗೆ ಹೋಗಬೇಕು ಜಾಗ ಬಿಡಿ ಎಂದಾಗ ಪಾರು ಕೇಳುತ್ತಾಳೆ ಯಾಕೆ ಪ್ರೀತೂ ಜನನಿ ಮೇಲೆ ಕೋಪ ಮಾಡಿಕೊಂಡಿದ್ದೀರ ಹರಿದ ಸೀರೆಯನ್ನು ಆಕೆಗೆ ಕೊಟ್ಟಿದ್ದೀರಾ? ನೀವು ಯಾಕೆ ಜನನಿಗೆ ಹೀಗೆ ನೋವು ನೋಡುತ್ತಿದ್ದೀರಿ. ನಿಮಗೆ ಇದು ಸರಿ ಕಾಣಿಸುತ್ತಿದೆಯಾ ಎಂದು ಕೇಳುತ್ತಾಳೆ. ಅದಕ್ಕೆ ತಡಬಡಾಯಿಸಿ ಉತ್ತರಿಸುತ್ತಾನೆ.

  ಓಡಿ ಬಂದ ಆದಿ

  ಓಡಿ ಬಂದ ಆದಿ

  ಬಳಿಕ ಪ್ರೀತೂ ಜೊತೆ ಅರುಂಧತಿಗೆ ಹೇಳುತ್ತಾಳೆ. ಪಾರು ಜೊತೆ ಜೋರಾಗಿ ಮಾತನಾಡಿ ಕೆನ್ನೆಗೊಂದು ಬಾರಿಸು ಎನ್ನುತ್ತಾರೆ. ಪದೇ ಪದೆ ಮನೆಯಿಂದ ಹೊರಗೆ ಹೋಗಲು ನಾನು ಬಿಡಲ್ಲ ಎಂದು ಪಾರು ಹೇಳುತ್ತಾರೆ. ಇದನ್ನು ಹೇಳಬೇಕಾದರೆ ಪ್ರೀತೂ ಜೋರಾಗಿ ಹೇಳುತ್ತಾನೆ ನಿಮಗೆ ಹೇಳಿದರೆ ಅರ್ಥ ಆಗಲ್ವಾ ನನ್ನನ್ನು ನನ್ನ ಪಾಡಿಗೆ ಬಿಡಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪಾರು ನಾನು ಸತ್ತರೂ ಸರಿ ಮನೆಯಿಂದ ಹೋಗಲು ಜಾಗ ಬಿಡಲ್ಲ ಎನ್ನುತ್ತಾಳೆ. ಆಗ ಪಾರ್ವತಿಯನ್ನು ಪ್ರೀತೂ ತಳ್ಳುತ್ತಾನೆ. ಪಾರ್ವತಿ ಸೀದಾ ಮೆಟ್ಟಿಲ ಬಳಿ ಬಿದ್ದು ಕಾಲಿಗೆ ನೋವಾಗುತ್ತದೆ . ಇದನ್ನು ನೋಡಿದ ಪ್ರೀತೂಗೆ ನೋವಾದರೂ ಅಲ್ಲಿಂದ ಸೀದಾ ಹೋಗುತ್ತಾನೆ.

  ಅದಿಗೆ ಅಸಲಿ ವಿಚಾರ

  ಅದಿಗೆ ಅಸಲಿ ವಿಚಾರ

  ಇದನ್ನೆಲ್ಲ ನೋಡಿದ ಅಖಿಲಂಡೆಶ್ವರಿಗೆ ಶಾಕ್ ಆಗುತ್ತದೆ. ತಾನು ಅಂದುಕೊಂಡಿದ್ದೆ ಒಂದು ಇಲ್ಲಿ ಆಗುತ್ತಿರುವುದು ಒಂದು. ಅತ್ತಿಗೆ ಮೇಲೆ ಕೈ ಮಾಡುವಷ್ಟು ಬೆಳೆದು ಬಿಟ್ಟನಾ ಪ್ರೀತೂ ಎಂದೆಲ್ಲ ಕಾಡುತ್ತದೆ. ಅಲ್ಲಿಗೆ ಬಂದ ಆದಿ ಹಾಗೂ ಆದಿ ಚಿಕ್ಕಪ್ಪ ಪಾರ್ವತಿ ಏನಾಯ್ತಮ್ಮ ಎಂದು ಹೇಳುತ್ತಾರೆ. ಅದಕ್ಕೆ ಪಾರು ಹೇಳುತ್ತಾಳೆ ಜಾರಿ ಬಿದ್ದೆ ಎಂದು ಹೇಳುತ್ತಾರೆ. ಪಾರುವನ್ನು ಕರೆದುಕೊಂಡು ರೂಮಿಗೆ ಹೋಗುತ್ತಾನೆ ಆದಿ. ಇನ್ನೂ ಆದಿ ಪಾರು ಇರುವ ಕಡೆ ಜನನಿ ಬರುತ್ತಾಳೆ. ಜನನಿಯನ್ನು ನೋಡಿದ ಅರೆ ಜನನಿ ಏನಾಯಿತು ಎಂದು ಕೇಳುತ್ತಾರೆ. ಅದಕ್ಕೆ ಜನನಿ ಹೇಳುತ್ತಾಳೆ. ಭಾವ ಪಾರು ಸುಳ್ಳು ಹೇಳುತ್ತಿದ್ದಾರೆ. ಪಾರು ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಲ್ಲ. ಪ್ರೀತೂ ತಳ್ಳಿದ್ದು ಎಂದು ಹೇಳಿದಾಗ ಆದಿಗೆ ಶಾಕ್ ಆಗುತ್ತದೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

  English summary
  Paaru Serial August 26th written updated. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X