ಶತ್ರುವಿನಿಂದಲೇ ಬಯಲಾಯ್ತು ಸತ್ಯ : ಆದಿ ಮುಂದೆ ಕೈ ಮುಗಿದು ನಿಂತ ಅಖಿಲಾಂಡೇಶ್ವರಿ!

By ಎಸ್ ಸುಮಂತ್

ಅಖಿಲಾಂಡೇಶ್ವರಿ ಸಂಸಾರದಲ್ಲಿ ಅರುಂಧತಿಯ ಆಟ ಇಷ್ಟು ದಿನ ಜೋರಾಗಿಯೇ ನಡೆದಿದೆ. ಅಮ್ಮ ಮಗನನ್ನು ದೂರ ಮಾಡುವ ತನಕ, ಸಂಸಾರದಲ್ಲಿ ಬಿರುಗಾಳಿ ಮೂಡಿಸುವ ತನಕ, ಮಕ್ಕಳಲ್ಲಿಯೇ ದ್ವೇಷ ಹುಟ್ಟಿಸುವ ತನಕ. ಆದರೆ ದುಷ್ಟರ ಆಟ ಹೆಚ್ಚು ದಿನ ನಡೆಯಲ್ಲ ಎಂಬುದಿ ಸತ್ಯವಾಗಿದೆ. ಎಲ್ಲವೂ ಚೆನ್ನಾಗಿದ್ದಾಗ ಆಟವಾಡಿದ ಅರುಂಧತಿ ಈಗ ಸೋಲುತ್ತಿದ್ದಾಳೆ. ಆದರೆ ತಡವಾಗಿ ಅರಿವಾಗಬೇಕಿದ್ದ ಸತ್ಯ ಶತ್ರುವಿನಿಂದಲೇ ಬಯಲಾಗಿದೆ.

ಸದ್ಯ ಅಖಿಲಾಂಡೇಶ್ವರಿ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಆದಿ ತಾಯಿಯ ಪ್ರೀತಿಗಾಗಿ ಬಯಸುತ್ತಿದ್ದಾರೆ, ತಾಯಿ ಇನ್ಯಾವುದೋ ಕೋಪವನ್ನೇ, ಶತ್ರುಗಳ ಆಟವನ್ನೇ ಮನದಲ್ಲಿಟ್ಟುಕೊಂಡು ಶಾಂತಿ, ಸಂತೋಷದಿಂದ ದೂರ ಉಳಿಯುತ್ತಿದ್ದಾರೆ. ಆದರೆ ಎಲ್ಲಾ ಸಮಸ್ಯೆಗಳು ಕಳೆದು, ಇದೀಗ ಒಳ್ಳೆಯದ್ದಾಗುವ ಸಮಯ ಹತ್ತಿರ ಬಂದಿದೆ.

ಅರುಂಧತಿ ಹೇಳಿದ ಮಾತಿಗೆ ಅಖಿಲಾ ಶಾಕ್

ಅರುಂಧತಿ ಹೇಳಿದ ಮಾತಿಗೆ ಅಖಿಲಾ ಶಾಕ್

ಅರಸನಕೋಟೆಯ ನೆಮ್ಮದಿ ಹಾಳು ಮಾಡಲು ರಾಣಾ ಮತ್ತು ಅರುಂಧತಿ ಪಣ ತೊಟ್ಟು ನಿಂತಿದ್ದಾರೆ. ಅದಕ್ಕೆ ತಕ್ಕಂತೆ ಅಖಿಲಾಂಡೇಶ್ಚರಿ ಮನೆಯಲ್ಲಿಯೇ ಮನೆ ಶತ್ರು ದಾಮಿನಿ ಇದ್ದಾಳೆ. ಹಣದ ಆಸೆಗೆ ಏನು ಬೇಕಾದರೂ ಮಾಡುವ ದಾಮಿನಿ, ಮನೆಯ ನೆಮ್ಮದಿ ಹಾಳು ಮಾಡುವುದರಲ್ಲಿ ದೊಡ್ಡ ಪಾಲು ಅವಳದ್ದೆ. ಮನೆಯಲ್ಲಿ ನೆಮ್ಮದಿಯೇ ಇಲ್ಲದಂತೆ ಮಾಡಿದ್ದ ಅರುಂಧತಿಯೇ ಇದೀಗ ಸತ್ಯ ಬಾಯ್ಬಿಟ್ಟಿದ್ದಾಳೆ. ಅಖಿಲಾಂಡೇಶ್ವರಿಗೆ ಇದನ್ನು ಕೇಳಿ ಶಾಕ್ ಎನಿಸಿದೆ.

ಮಗನ ಸಂಬಂಧ ಮತ್ತೆ ಸರಿಯಾಗುತ್ತಾ?

ಮಗನ ಸಂಬಂಧ ಮತ್ತೆ ಸರಿಯಾಗುತ್ತಾ?

ಆದಿ ಎಂದರೆ ತುಂಬಾನೇ ಪ್ರೀತಿ ಮಾಡುತ್ತಿದ್ದ ಅಖಿಲಾಂಡೇಶ್ವರಿ, ಪಾರುನನ್ನು ಮದುವೆ ಮಾಡಿಕೊಂಡು ಬಂದ ಮೇಲೆ ದ್ವೇಷಿಸುವುದನ್ನು ಕಲಿತಳು. ಆದರೆ ಬರ ಬರುತ್ತಾ ಎಲ್ಲವೂ ಸರಿಯಾಗುತ್ತಿದೆ ಎನ್ನುವಾಗಲೇ ಶತ್ರುಗಳ ಅಟ್ಡಹಾಸ ಜೋರಾಗಿತ್ತು. ಪಾರುಳನ್ನು ಕ್ಷಮಿಸಿ ಸೊಸೆ ಅಂತ ಒಪ್ಪಿಕೊಳ್ಳಬೇಕು. ಅಷ್ಟರಲ್ಲಿ ಪ್ರೀತಿಯ ಮಗನ ಮೇಲೂ ದ್ವೇಷ ಬರುವಂತೆ ಮಾಡಿದ್ದಳು. ಆದರೆ ಮಗ ಏನು ತಪ್ಪು ಮಾಡಿರಲಿಲ್ಲ. ಪರಿಸ್ಥಿತಿಗೆ ಸಿಲುಕಿ ಇಷ್ಟೆಲ್ಲಾ ಸಮಸ್ಯೆ ಅನುಭವಿಸಿದ ಎಂದು ತಿಳಿದ ಮೇಲೆ ಅಖಿಲಾಂಡೇಶ್ವರಿ ಹೃದಯ ಒಡೆದು ಹೋಗಿದೆ. ಅರುಂಧತಿ ಕರೆ ಮಾಡಿ, ಮನೆಯ ನೆಮ್ಮದಿ ಹಾಳಾಗಿದ್ದಕ್ಕೆ ಏನು ಕಾರಣ ಎಂಬುದನ್ನು ಎಳೆ ಎಳೆಯಾಗಿ ಹೇಳಿದ್ದಾಳೆ.

ಮರಳಿ ಅಮ್ಮನ ಪ್ರೀತಿ ಪಡೆಯುತ್ತಾನಾ ಆದಿ

ಮರಳಿ ಅಮ್ಮನ ಪ್ರೀತಿ ಪಡೆಯುತ್ತಾನಾ ಆದಿ

ಆದಿಗೆ ಅಮ್ಮನ ಪ್ರೀತಿ ಯಾವಾಗ ಸಿಗುತ್ತೆ ಅಂತ ಕನವರಿಸುತ್ತಿದ್ದಾನೆ. ಅಖಿಲಾಂಡೇಶ್ವರಿ ಮನಸ್ಸಿಗೆ ತಪ್ಪಿನ ಅರಿವಾಗಿದೆ. ಅಂದು ಮುಖ್ಯವಾದ ಮೀಟಿಂಗ್ ಬಾರದೆ ಇರಲು ಕಾರಣ ಇದೇ ಅರುಂಧತಿ ಎಂಬುದು ತಿಳಿದು, ಆದಿಯ ಬಳಿ ಮಾತನಾಡಿದ್ದಾಳೆ. ಆದಿ ಎಂಬ ಹೆಸರನ್ನು ಕರೆದೆ ಅದೆಷ್ಟು ದಿನಗಳಾಗಿತ್ತೋ. ಅಂದು ನಡೆದ ವಿಚಾರವನ್ನು ಮತ್ತೊಮ್ಮೆ ಕೇಳಿದಾಗ, ಆದಿಯ ಮುಂದೆ ಕೈ ಜೋಡಿಸಿ ನಿಂತಿದ್ದಾಳೆ. ಅಮ್ಮ ಕೈ ಮುಗಿದು ಕ್ಷಮೆ ಕೇಳಿದಾಗ ಆದಿಯ ಮನಸ್ಸು ಸಹಿಸಲಾಗಿಲ್ಲ. ಕಡೆಗೂ ಅಮ್ಮನ ಪ್ರೀತಿ ಮೊದಲಿನಂತೆಯೇ ಸಿಕ್ಕಿದ್ದಕ್ಕೆ ಖುಷಿ ಪಟ್ಟಿದ್ದಾನೆ. ಅರಸನ ಕೋಟೆಯಲ್ಲಿ ಈಗ ಎಲ್ಲವೂ ಸರಿಯಾಗುತ್ತಿದೆ.

ದಾಮಿನಿಯೇ ಒಳ ಶತ್ರು ಎಂದು ಗೊತ್ತಾದರೆ

ಹೊರಗಿನ ಶತ್ರುವನ್ನು ಬೇಗ ಕಂಡು ಹಿಡಿಯಬಹುದು ಆದರೆ ಒಳಗಿರುವ ಶತ್ರುವನ್ನು ಕಂಡು ಹಿಡಿಯಲು ಆಗಲ್ಲ ಎಂಬ ಮಾತಿದೆ. ಈಗ ದಾಮಿನಿ ಕೇಸ್ ನಲ್ಲಿಯೂ ಅದೇ ಆಗಿರುವುದು. ಆದರೆ ಮನೆಯಲ್ಲಿ ನಡೆಯುವ ವಿಚಾರವನ್ನು ಹೊರಗಿನವರಿಗೆ ತಿಳಿಸಲು ಒಳಗಿನವರಿಂದಲೇ ಸಾಧ್ಯ ಎಂಬುದು ಅಖಿಲಾಂಡೇಶ್ವರಿಗೆ ಅರ್ಥವಾಗಿದೆ. ಆ ಹಿತ ಶತ್ರು ಯಾರೆಂದು ತಿಳಿಯಲು ಹೊರಡಿದ್ದಾಳೆ. ಇದನ್ನು ಕೇಳಿಸಿಕೊಂಡ ದಾಮಿನಿ ತನ್ನ ಕೊರಳಲ್ಲಿ ಇದ್ದ ಕ್ಯಾಮೆರಾದ ಯಂತ್ರವನ್ನು ತೆಗೆದಿದ್ದಾಳೆ‌. ಆದರೆ ಅಖಿಲಾಂಡೇಶ್ವರಿ ಇದೆಲ್ಲವನ್ನು ತಿಳಿದುಕೊಳ್ಳದೆ ಸುಮ್ಮನೆ ಇರುವವರಲ್ಲ ಎನಿಸುತ್ತದೆ.

More from Filmibeat

English summary
Paaru Serial August 2nd Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X