ಪಾರು: ಸೊಸೆಯಂದಿರ ಜೊತೆ ಶತ್ರುವಿನ ಮನೆಗೆ ಬಂದ ಅಖಿಲಾಂಡೇಶ್ವರಿ : ರಾಣಾ-ಅರುಂಧತಿ ದಂಗು!
ಇಷ್ಟು ದಿನ ಅರಸನಕೋಟೆಯಲ್ಲಿ ಬರೀ ದ್ವೇಷ, ಕೋಪ, ಅಸಮಾಧಾನ, ಅಶಾಂತಿಯೇ ಕಾಡುತ್ತಿತ್ತು. ಎಲ್ಲವೂ ಅರಸನಕೋಟೆಯ ಶತ್ರುಗಳ ಕೈವಾಡದಿಂದ ಈ ರೀತಿ ನೆಮ್ಮದಿಯಿಲ್ಲದ, ಬೇಡದ ಸಮಸ್ಯೆಗಳು ಎದುರಾಗಿದ್ದವು. ಆದರೆ ಈಗ ಎಲ್ಲವೂ ಸರಿಯಾಗಿದೆ. ಅಖಿಲಾಂಡೇಶ್ವರಿ ಎಡವಿದ್ದೆಲ್ಲಿ ಎಂಬುದು ಗೊತ್ತಾಗಿದೆ. ಅದನ್ನು ಈಗ ತಿದ್ದಿಕೊಳ್ಳುವುದಕ್ಕೆ ಈಗ ರೆಡಿಯಾಗಿದ್ದಾಳೆ. ಅದಕ್ಕೆಂದೆ ಈಗ ಅಖಿಲಾಂಡೇಶ್ವರಿ ಶತ್ರುವಿನ ಮನೆಗೆ ಹೊರಟಿದ್ದಾಳೆ. ಅಖಿಲಾಂಡೇಶ್ವರಿಯನ್ನು ಕಂಡ ರಾಣಾ-ಅರುಂಧತಿ ಶಾಕ್ ಆಗಿದ್ದಾರೆ.
ಪಾರು ತನ್ನಿಷ್ಟದ ಸೊಸೆಯಲ್ಲ ಎಂಬ ಕಾರಣಕ್ಕೆ ಅಖಿಲಾಂಡೇಶ್ವರಿ ಆಕೆಯನ್ನು ಒಪ್ಪಿರಲಿಲ್ಲ. ಆದರೆ ಕೆಲವೊಂದು ಚಾಲೆಂಜ್‌ಗಳಿಂದ ಪಾರು ಗೆಲುವಿನ ಹಾದಿಯಲ್ಲಿ ನಡೆದಳು. ಆಗ ಅಖಿಲಾಂಡೇಶ್ವರಿಗೆ ಒಂದು ನಂಬಿಕೆ ಬಂದಿತ್ತು. ಇನ್ನೇನು ಸೊಸೆಯೆಂದು ಒಪ್ಪಿಕೊಳ್ಳಬೇಕು. ಅಷ್ಟರಲ್ಲಿ ಶತ್ರುಗಳ ಫ್ಲ್ಯಾನ್ ಸಕ್ಸಸ್ ಆಗಿತ್ತು, ಆದಿ-ಪಾರು, ಅಖಿಲಾಂಡೇಶ್ವರಿ ಮಧ್ಯೆ ಮಿಸ್ ಅಂಡರ್ಸ್ಟಾರ್ಡಿಂಗ್ ಜಾಸ್ತಿಯಾಗಿತ್ತು.

ಅರುಂಧತಿ ಪ್ಲ್ಯಾನ್ ಉಲ್ಟಾ
ಅರಸನ ಕೋಟೆಯ ನೆಮ್ಮದಿ ಹಾಳು ಮಾಡಲು ರಾಣಾ ಮತ್ತು ಅರುಂಧತಿ ಪ್ಲ್ಯಾನ್ ರಚಿಸಿದ್ದರು. ಅದಕ್ಕೆಂದೇ ಹಣ ಆಮಿಷವೊಡ್ಡಿ ದಾಮಿನಿಯನ್ನು ಸೆಳೆದಿದ್ದರು. ಶತ್ರುಗಳು ಎಂಬುದನ್ನು ನೋಡದೆ ಅವರು ಹೇಳಿದಂತೆ ದಾಮಿನಿ ಮಾಡಿದ್ದಳು. ಮನೆಯವರ ನೆಮ್ಮದಿ ಹಾಳಾಗಲು ದಾಮಿನಿ ಕೂಡ ಕಾರಣವಾಗಿದ್ದಳು. ಮನೆಯ ನೆಮ್ಮದಿ ಹಾಳು ಮಾಡಿದ್ದೇವೆ ಎಂದು ರಾಣಾ ಮತ್ತು ಅರುಂಧತಿ ಬಹಳ ಖುಷಿಯಿಂದ ಇದ್ದಾರೆ. ನಾವೇಳಿದ ಸತ್ಯಕ್ಕೆ ಅಖಿಲಾಂಡೇಶ್ವರಿ ಎದ್ದೆ ಇರಲ್ಲ ಎಂದು ಮನೆಯಲ್ಲಿ ಕುಳಿತು ಖುಷಿ ಪಡುತ್ತಿದ್ದಾರೆ. ಆದರೆ ಆಗಿರುವುದೆಲ್ಲಾ ಉಲ್ಟಾ ಆಗಿದೆ.

ಅರಸನಕೋಟೆಯಲ್ಲಿ ಈಗ ನೆಮ್ಮದಿ
ಇಷ್ಟು ದಿನ ಶತ್ರುಗಳ ಆಟ ಚೆನ್ನಾಗಿಯೇ ವರ್ಕೌಟ್ ಆಗಿತ್ತು. ಅರುಂಧತಿ - ರಾಣಾ ಮಾಡಿದ ಪ್ಲ್ಯಾನ್‌ನಿಂದಾಗಿ ಆದಿ ಇನ್ನಷ್ಟು ದೂರವಾಗಿದ್ದನು. ಪಾರು ಮೇಲಿನ ಮನಸ್ತಾಪ ಜಾಸ್ತಿಯಾಗಿತ್ತು. ಆ ಅವಾಂತರವನ್ನೆಲ್ಲ ಸೃಷ್ಟಿಸಿದವರೇ ಈಗ ಅರಸನ ಕೋಟೆಯ ಸಂತಸಕ್ಕೆ ದಾರಿಯಾಗಿದ್ದಾರೆ. ಅರುಂಧತಿ ಮತ್ತು ರಾಣಾ ತಾವೂ ಮಾಡಿದ ಕುತಂತ್ರವನ್ನೆಲ್ಲ ಅವರೇ ಬಾಯ್ಬಿಟ್ಟಿದ್ದಾರೆ. ಆದ್ದರಿಂದ ಏನೆಲ್ಲಾ ತೊಂದರೆ ಆಗಿದೆ ಎಂಬುದನ್ನು ಅವರೇ ಬಾಯ್ಬಿಟ್ಟಿದ್ದಾರೆ. ಇದರಿಂದ ಅಖಿಲಾಂಡೇಶ್ವರಿ ಮನಸ್ಸು ಸಂಪೂರ್ಣ ಬದಲಾಗಿದೆ. ಮನೆ ಹಾಳು ಮಾಡಲು ಹೊರಟವರೆ ಮನೆಯನ್ನು ಉದ್ಧಾರ ಮಾಡಿದ್ದಾರೆ.

ಸೊಸೆಯಂದಿರ ಜೊತೆ ಅಖಿಲಾಂಡೇಶ್ವರಿ
ಅರಸನಕೋಟೆಗೆ ಮಾಡಿದ ಕೆಟ್ಟ ಕೆಲಸವನ್ನೆಲ್ಲಾ ತಿಳಿದು ಅಖಿಲಾಂಡೇಶ್ವರಿ ಚೇತರಿಸಿಕೊಂಡಿರುವುದಿಲ್ಲ ಅಲ್ಲವಾ ಎಂದು ರಾಣಾ ಮತ್ತು ಅರುಂಧತಿ ಮಾತಾಡುತ್ತಾ ಕುಳಿತಿರುವಾಗಲೇ ಅಖಿಲಾಂಡೇಶ್ವರಿ ಕಾಳಿಯಂತೆ ಎದುರಾಗಿದ್ದಾಳೆ. ಮನೆಯಿಂದ ಹೊರಡುವಾಗಲೇ ನನಗೊಂದು ಚೂರು ಕೆಲಸವಿದೆ. ಜನನಿಯನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ. ಪಾರ್ವತಿ ಕೂಡ ಜೊತೆಗೆ ಬರುತ್ತಾಳೆ ಎಂದು ಹೇಳುಕೊಂಡೇ ಕರೆದುಕೊಂಡು ಹೋಗಿದ್ದಾರೆ. ಶತ್ರುಗಳ ಮುಂದೆ ಹೋದಾಗ ಇಬ್ಬರು ಸೊಸೆಯಂದಿರು ಅಖಿಲಾಂಡೇಶ್ವರಿಯ ಬಲದಂತೆ ಕಂಡಿದ್ದಾರೆ. ಮೂವರನ್ನು ನೋಡಿ ಅರುಂಧತಿ ಹಾಗೂ ರಾಣಾ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಮರಳಿ ಅಮ್ಮನ ಪ್ರೀತಿ ಪಡೆಯುತ್ತಾನಾ ಆದಿ?
ಆದಿಗೆ ಅಮ್ಮನ ಪ್ರೀತಿ ಯಾವಾಗ ಸಿಗುತ್ತೆ ಅಂತ ಕನವರಿಸುತ್ತಿದ್ದಾನೆ. ಅಖಿಲಾಂಡೇಶ್ವರಿ ಮನಸ್ಸಿಗೆ ತಪ್ಪಿನ ಅರಿವಾಗಿದೆ. ಅಂದು ಮುಖ್ಯವಾದ ಮೀಟಿಂಗ್ ಬಾರದೆ ಇರಲು ಕಾರಣ ಇದೇ ಅರುಂಧತಿ ಎಂಬುದು ತಿಳಿದು, ಆದಿಯ ಬಳಿ ಮಾತನಾಡಿದ್ದಾಳೆ. ಆದಿ ಎಂಬ ಹೆಸರನ್ನು ಕರೆದೆ ಅದೆಷ್ಟು ದಿನಗಳಾಗಿತ್ತೋ. ಅಂದು ನಡೆದ ವಿಚಾರವನ್ನು ಮತ್ತೊಮ್ಮೆ ಕೇಳಿದಾಗ, ಆದಿಯ ಮುಂದೆ ಕೈ ಜೋಡಿಸಿ ನಿಂತಿದ್ದಾಳೆ. ಅಮ್ಮ ಕೈ ಮುಗಿದು ಕ್ಷಮೆ ಕೇಳಿದಾಗ ಆದಿಯ ಮನಸ್ಸು ಸಹಿಸಲಾಗಿಲ್ಲ. ಕಡೆಗೂ ಅಮ್ಮನ ಪ್ರೀತಿ ಮೊದಲಿನಂತೆಯೇ ಸಿಕ್ಕಿದ್ದಕ್ಕೆ ಖುಷಿ ಪಟ್ಟಿದ್ದಾನೆ. ಅರಸನ ಕೋಟೆಯಲ್ಲಿ ಈಗ ಎಲ್ಲವೂ ಸರಿಯಾಗುತ್ತಿದೆ.


Click it and Unblock the Notifications











