India
  For Quick Alerts
  ALLOW NOTIFICATIONS  
  For Daily Alerts

  ಪಾರು: ಅತ್ತೆಯ ಮುಂದೇನೆ ರಾಣಾನ ಕಪಾಳಕ್ಕೆ ಬಾರಿಸಿದ ಪಾರು..!

  By ಎಸ್ ಸುಮಂತ್
  |

  ಪಾರು ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ಕೊಡುತ್ತಾಳೆ. ಗೌರವ ಕೊಡುವವರಿಗೆ ತಲೆ ತಗ್ಗಿಸಿ ನಮಿಸುತ್ತಾಳೆ. ಆ ಗುಣ ಅಖಿಲಾಂಡೇಶ್ವರಿಗೂ ತುಂಬಾನೇ ಇಷ್ಟವಾಗುತ್ತದೆ. ಅಖಿಲಾಂಡೇಶ್ವರಿಯ ಗುಣವೇ ಪಾರುಗೂ ಬಂದಿದೆ. ಅಖಿಲಾಂಡೇಶ್ವರಿ ಕೂಡ ತಪ್ಪು ಮಾಡಿದಾಗ ಮುಂದೆ ಇರುವವರು ಯಾರು ಎಂದು ನೋಡದೆ ಕ್ಷಮೆ ಕೇಳುತ್ತಾರೆ. ಇತ್ತೀಚೆಗೆ ತಾನು ಮಾಡಿದ ತಪ್ಪು ಅರಿವಾದಾಗ ಆದಿ ಮುಂದೆ ಕೈ ಮುಗಿದು ಕ್ಷಮೆ ಕೇಳಿದ್ದರು.

  ಈಗ ಸೊಸೆಯಂದಿರನ್ನು ಕರೆದುಕೊಂಡು ಅಖಿಲಾಂಡೇಶ್ವರಿ ಶತ್ರುವಿನ ಮನೆಗೆ ಹೋಗಿದ್ದಾಳೆ. ರಾಣಾ-ಅರುಂಧತಿಯ ಹುಟ್ಟಡಗಿಸಲು ಫ್ಲ್ಯಾನ್ ಮಾಡಿಯೇ ಹೋಗಿದ್ದಾಳೆ. ಅರಸನಕೋಟೆಯನ್ನು ಹಾಳು ಮಾಡಿದ್ದೇವೆಂದುಕೊಂಡು ಖುಷಿಯಾಗಿದ್ದಾರೆ. ಆದರೆ ಊಹೆ ಮಾಡದೆಯೇ ಅಖಿಲಾಂಡೇಶ್ವರಿಯ ಆಗಮನವಾಗಿದೆ. ಇದು ಶತ್ರುಗಳಿಗೆ ಶಾಕ್ ಎನಿಸಿದೆ.

  ಜೇನುಗೂಡು: ಶಶಾಂಕ್ ಅರಿಶಿಣ ಹಚ್ಚಿದ್ದು ಮಾಯಾಗಾ? ದಿಯಾ?ಜೇನುಗೂಡು: ಶಶಾಂಕ್ ಅರಿಶಿಣ ಹಚ್ಚಿದ್ದು ಮಾಯಾಗಾ? ದಿಯಾ?

  ಸೊಸೆಯಂದಿರ ಜೊತೆಗೆ ಶತ್ರುವಿನ ಮನೆಗೆ ಬಂದ ಅಖಿಲಾ

  ಸೊಸೆಯಂದಿರ ಜೊತೆಗೆ ಶತ್ರುವಿನ ಮನೆಗೆ ಬಂದ ಅಖಿಲಾ

  ಅದ್ಯಾವಾಗ ತನ್ನ ಮನೆಯ ಸಂಸಾಸರವನ್ನು ಹಾಳು ಮಾಡುತ್ತಿರುವುದು ರಾಣಾ ಮತ್ತು ಅರುಂಧತಿ ಎಂಬುದು ಗೊತ್ತಾಯ್ತೋ, ಆಗಿನಿಂದ ಅಖಿಲಾಂಡೆರಶ್ವರಿಯ ಮನಸ್ಸು ಕೋಪದಲ್ಲಿಯೇ ತೋಯ್ದಿದೆ. ಯಾವಾಗ ಶತ್ರುವನ್ನು ಮಟ್ಟ ಹಾಕ್ತಿವೋ ಎಂದು ಕಾಯುತ್ತಿದ್ದಾಳೆ. ಅದಕ್ಕೆಂದೇ ಇದೀಗ ಸೊಸೆಯಂದಿರ ಜೊತೆಗೆ ಹೊರಟಿದ್ದಾಳೆ. ಸಂತಸವಾಗಿದ್ದ ರಾಣಾ ಮತ್ತು ಅರುಂಧತಿಯ ನೆಮ್ಮದಿ ಹಾಳು ಮಾಡಿದ್ದಾಳೆ.

  ರಾಣಾ ಮನೆಯಲ್ಲಿಯೇ ಊಟೋಪಚಾರ

  ರಾಣಾ ಮನೆಯಲ್ಲಿಯೇ ಊಟೋಪಚಾರ

  ಅರುಂಧತಿ ಮತ್ತು ರಾಣಾ ಆರಾಮಾವಾಗಿ ಕುಳಿತಿದ್ದಾಗ ಬಿರುಗಾಳಿಯಂತೆ ಬಂದು ಅಪ್ಪಳಿಸಿದ್ದು ಅಖಿಲಾಂಡೇಶ್ವರಿ ಮತ್ತು ಆಕೆಯ ಸೊಸೆಯಂದಿರು. ಬಂದಾಗ ರಾಣಾ ಭಯದಲ್ಲಿಯೇ ಇದ್ದನು. ಆದರೆ ಶತ್ರುವಿನ ಮನೆಯಲ್ಲಿಯೇ ಕುಳಿತು ಊಟೋಪಚಾರ ಮಾಡಿದ್ದಾರೆ. ಇದನ್ನು ಕಂಡು ಶತ್ರುಗಳು ಶಾಕ್ ಆಗಿದ್ದಾರೆ. ಪಾರು ಮತ್ತು ಜನನಿ ಸೇರಿ ಅಡುಗೆ ಮಾಡಿ ಬಡಿಸಿದ್ದಾರೆ. ಅಡುಗೆ ಮನೆಯಲ್ಲಿ ಇಬ್ಬರು ಸೊಸೆಯಂದಿರದ್ದೇ ಅಬ್ಬರ ಇತ್ತು. ಅಷ್ಟೇ ಯಾಕೆ ರಾಣಾನಿಗೂ ಅಡುಗೆ ಮನೆಯ ಕೆಲಸ ಅಚ್ಚಿದ್ದರು. ಅರುಂಧತಿಗೆ ತೆಂಗಿನಕಾಯಿ ತುರಿಯಲು ಹೇಳಿದ್ದರು. ತಪ್ಪು ಮಾಡಿದ ಇಬ್ಬರಿಗೆ ಒಂಥರ ಮಾನಸಿಕವಾಗಿಯೇ ಹಿಂಸೆ ನೀಡಿದರು. ಈ ಶಿಕ್ಷೆಗಿಂತ ಮತ್ತೊಂದು ಶಿಕ್ಷೆ ಅವರಿಗೆ ಸಿಕ್ಕಂತೆ ಇಲ್ಲ.

  ಅಖಿಲ ಕೊಟ್ಟ ಶಿಕ್ಷೆಗೆ ಶತ್ರುಗಳೇ ಶಾಕ್

  ಅಖಿಲ ಕೊಟ್ಟ ಶಿಕ್ಷೆಗೆ ಶತ್ರುಗಳೇ ಶಾಕ್

  ಶತ್ರುಗಳು ಯಾರು, ಮನೆಯ ನೆಮ್ಮದಿ ಹಾಳು ಮಾಡಿದವರು ಯಾರೆಂದು ತಿಳಿದ ಮೇಲೂ ಅಖಿಲಾಂಡೇಶ್ವರಿ ತೆಗೆದುಕೊಂಡ ತೀರ್ಮಾನವೇ ವಿಚಿತ್ರವಾಗಿದೆ. ಕೋಪದಿಂದಲೇ ಶತ್ರುಗಳ ಮನೆಗೆ ಬಂದ ಅಖಿಲಾ, ಅಡುಗೆ ಮನೆಯಲ್ಲಿ ರಾಜ್ಯಭಾರ ನಡೆಸಿದಳು. ರಾಣಿಯಂತೆ ಕುಳಿತು ಸೊಸೆಯಂದಿರನ್ನು ಅಡುಗೆ ಮನೆಗೆ ಬಿಟ್ಟು, ರಾಣಾ ಮತ್ತೆ ಅರುಂಧತಿಗೂ ಕೆಲಸ ಮಾಡಲು ಹೇಳಿದ್ದಾಳೆ. ಸೊಸೆಯಂದಿರು ಮಾಡಿಕೊಟ್ಟ ಅಡುಗೆ ತಿನ್ನಲು ಹೇಳಿದ್ದಾಳೆ. ರಾಣಾ ಮತ್ತು ಅರುಂಧತಿ ಅನುಮಾನದಲ್ಲಿ ನೋಡಿದ್ದಾರೆ. ಅಖಿಲಾ ಕೊಟ್ಟ ಟಾಂಗ್‌ನಿಂದ ಬಾಯಿ ಮುಚ್ಚಿಕೊಂಡು ತಿಂದಿದ್ದಾರೆ.

  ಆಸಿಡ್ ಹಾಕಲು ಬಂದವನು ರಾಣಾ

  ಪಾರು ಮೇಲೆ ಅಟ್ಯಾಕ್ ಮಾಡಲು ರಾಣಾ ಸಜ್ಜಾಗಿದ್ದ. ಆದರೆ ಆ ಅಟ್ಯಾಕ್ ಮಾಡಿದ ಆರೋಪ ಹೊತ್ತಿದ್ದು, ಜನನಿ. ಮನೆಯಲ್ಲಿಯೇ ಇದ್ದ ದಾಮಿನಿಯಿಂದಾಗಿ. ರಾಣಾ ಕುತಂತ್ರವನ್ನು ಜನನಿ ಮೇಲೆ ಬರುವಂತೆ ಮಾಡಿದ್ದಳು. ಗಂಡ ಹೆಂಡತಿಯ ನಡುವೆ ಜಗಳವೂ ಆಗುವಂತೆ ಮಾಡಿದ್ದಳು. ಆದರೆ ಪಾರುಗೆ ರಾಣಾನೆ ಆ ಅಟ್ಯಾಕ್ ಮಾಡಿದ್ದು ಎಂಬುದು ಗೊತ್ತಾಗಿದೆ. ಮನೆಯಲ್ಲಿ ಅರಾಣಾನ ಕಣ್ಣುಗಳಮ್ನು ನೋಡಿಕಂಡು ಹಿಡಿದಿದ್ದಾಳೆ. ಆತನನ್ನು ಪ್ರಶ್ನೆ ಮಾಡಿ ಕಪಾಳಕ್ಕೆ ಹೊಡೆದಿದ್ದಾಳೆ.

  English summary
  Paaru Serial August 4th Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X