Mokshitha Pai: ಕಪ್ಪು ಉಡುಗೆಯಲ್ಲೂ ಸೌಂದರ್ಯ ಹೊದ್ದು ನಿಂತ ಚೆಲುವೆ

By ಪ್ರಿಯಾ ದೊರೆ

'ಪಾರು' ಧಾರಾವಾಹಿ ನಟಿ ಮೋಕ್ಷಿತಾ ಪೈ ಬಗ್ಗೆ ಏನೂ ಹೇಳಬೇಕಾಗಿಯೇ ಇಲ್ಲ. ನೋಡಲು ಮುದ್ದು ಮುದ್ದಾಗಿದ್ದು ಎಲ್ಲರ ಮನಸ್ಸಿನಲ್ಲಿ ನೆಲೆಸಿರುವ ತಾರೆ.

ಕನ್ನಡದ ಪಾರು ಧಾರಾವಾಹಿಯಲ್ಲಿ ಮುಗ್ಧ ಮನಸ್ಸಿನ ಮುದ್ದು ಚೆಲುವೆಯಾಗಿದ್ದು, ನೋಡುಗರನ್ನು ಥಟ್ಟನೆ ಸೆಳೆಯುವ ನೋಟ ಇವರದ್ದು. ತಮ್ಮ ಸೌಮ್ಯ ಸ್ವಾಭಾವದಿಂದಲೇ ಜನರನ್ನು ಸೆಳೆದಿರುವ ಈಕೆ, ನಿಜ ಬದುಕಿನಲ್ಲೂ ಕರುಣಾಮಯಿ.

Paaru serial fame actress Pics mokshitha Looks Stunning In Black Saree, See Pics

ಕಿರುತೆರೆಯಲ್ಲಿ ಸಿಕ್ಕ ಬೆಂಬಲದಿಂದಲೇ ಪಾರು ಸ್ಯಾಂಡಲ್‌ವುಡ್‌ನಲ್ಲೂ ನಟಿಸುತ್ತಿದ್ದಾರೆ. ಈಗ ಸಿನಿಮಾ ಹಾಗೂ ಇತರೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ರಂಬೆ, ಊರ್ವಶಿ, ಮೇನಕೆಯರನ್ನೂ ಮೀರಿಸುವಂತಹ ಚೆಲುವು ನಟಿ ಮೋಕ್ಷಿತಾರವರದ್ದು, ಸದಾ ಹೊಸ ಹೊಸ ಸೀರೆಯಲ್ಲಿ ಅಪ್ಸರೆಯಂತೆಯೇ ಕಂಗೊಳಿಸುತ್ತಿರುತ್ತಾರೆ. ಜೀವನದಲ್ಲಿ ಏಳು ಬೀಳುಗಳನ್ನು ನೋಡಿರುವ ನಟಿ ಮೋಕ್ಷಿತಾ ಪೈ 'ಪಾರು' ಧಾರಾವಾಹಿಯಲ್ಲೂ ಅಂತಹದ್ದೇ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೀರಿಯಲ್ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿರುವ ಮೋಕ್ಷಿತಾ ಪರಭಾಷೆಯಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಾಗ ಚಿಕ್ಕ ಪುಟ್ಟ ಪ್ರವಾಸಗಳನ್ನು ಕೈಗೊಳ್ಳುವ ಮೋಕ್ಷಿತಾ ಎಂಜಾಯ್ ಮಾಡುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಕೊಳ್ಳುತ್ತಿರುತ್ತಾರೆ.

ನಗು ಮೊಗದ ಅಪ್ಸರೆ ಮೋಕ್ಷಿತಾ ಪೈ

ಮೋಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ. ಸಾಕಷ್ಟು ಬಾರಿ ಫೋಟೋ ಶೂಟ್ ಮಾಡಿಸಿಕೊಂಡು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳು ಕೂಡ ಮೋಕ್ಷಿತಾ ಪೈ ಫೋಟೋ ನೋಡಿ ಬಹಳಷ್ಟು ಖುಷಿ ಪಡುತ್ತಾರೆ. ನಗು ಮೊಗದ ಅಪ್ಸರೆಯ ಫೋಟೋಗಳಿಗೆ ಸಾಕಷ್ಟು ಅಭಿಮಾನಿಗಳು ಲೈಕ್ ಕಾಮೆಂಟ್ ಮಾಡುತ್ತಿರುತ್ತಾರೆ. ಯಾವುದಾದರೂ ಉತ್ತಮ ಪ್ರವಾಸಿ ತಾಣಗಳಿಗೆ ಗೆಳೆಯರು ಹಾಗೂ ತನ್ನ ಕುಟುಂಬದ ಜೊತೆ ಹೋದರೆ ಈ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಯಾವಾಗಲೂ ಸೀರೆಯಲ್ಲಿ ಮಿಂಚಲು ಬಯಸುವ ನಟಿ ಆಗಾಗ ಮಾಡ್ರನ್ ಉಡುಗೆಯಲ್ಲೂ ಕಾಣಿಸಿಕೊಳ್ಳುತ್ತಾರೆ.

ಹೆಚ್ಚಾಗಿ ಸೀರೆ ಉಡುವ ಚೆಲುವೆ

ಕಳೆದ ಮೂರು-ನಾಲ್ಕು ವರ್ಷಗಳಿಂದ 'ಪಾರು' ಧಾರಾವಾಹಿಯಲ್ಲಿ ನಟಿ ಮೋಕ್ಷಿತಾ ಪೈ ನಟಿಸುತ್ತಿದ್ದಾರೆ. ಆಕೆಯ ಮೊದಲ ಧಾರಾವಾಹಿಯೇ ಹಿಟ್ ಆಗಿದ್ದು, ಪಾರು ಎಂದೇ ಚಿರಪರಿಚಿತರಾಗಿದ್ದಾರೆ. ಸಿನಿ ಕ್ಷೇತ್ರದಲ್ಲೂ ಪಾದಾರ್ಪಣೆ ಮಾಡಿರುವ ಮೋಕ್ಷಿತಾ , ಈಗಾಗಲೇ 'ನಿರ್ಭಯಾ- 2' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಮೋಕ್ಷಿತಾ ಪೈ ನಟಿಸುವ ಸುದ್ದಿ ಹರಡಿದೆ. 'ಪಾರು' ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಂತೆ ಕಾಣುವ ಇವರು, ಹೆಚ್ಚಾಗಿ ಸೀರೆಯಲ್ಲಿ ಫೋಟೋಗಳನ್ನು ತೆಗೆಸಿಕೊಳ್ಳುತ್ತಿರುತ್ತಾರೆ.

ಕಪ್ಪು ಸೀರೆಯಲ್ಲೂ ಕ್ಯೂಟ್ ಗೊಂಬೆ

ಮೋಕ್ಷಿತಾ ಪೈ ಹೆಚ್ಚು ಲೈಟ್ ಕಲರ್‌ ಇಷ್ಟ ಪಡುತ್ತಾರೆ. ಹಾಲಿನಂತೆ ಬೆಳ್ಳಗೆ ಕಂಗೊಳಿಸುವ ಈ ಚೆಲುವೆ ಈಗ ಕಪ್ಪು ಸೀರೆಯಲ್ಲಿ ಮಿರ ಮಿರನೇ ಮಿಂಚಿದ್ದಾರೆ. ಕಪ್ಪು ಸೀರೆಗೆ ಕುಂದನ್ ಆಭರಣವನ್ನು ಧರಿಸಿದ್ದು, ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಫೋಟೋಗಳಿಗೆ ಸಾಕಷ್ಟು ಲೈಕ್ಸ್, ಕಾಮೆಂಟ್ಸ್ ಬಂದಿದ್ದು ಎಲ್ಲವೂ ಸೂಪರ್, ಎಲಿಗೆಂಟ್, ಬ್ಯೂಟಿಫುಲ್, ಅಪ್ಸರೆ, ಕ್ಯೂಟ್, ಗೊಂಬೆ, ರಂಬೆ ಎಂದೇ ಕರೆಸಿಕೊಂಡಿದ್ದಾರೆ. ಒಟ್ನಲ್ಲಿ ಮೋಕ್ಷಿತಾ ಪೈ ಎಲ್ಲಾ ಬಗೆಯ ಉಡುಗೆಯಲ್ಲೂ ಸೌಂದರ್ಯದ ಗಣಿ ಹೊತ್ತ ದೇವತೆಯಂತೆಯೇ ಕಂಗೊಳಿಸುತ್ತಾರೆ ಎಂಬುದನ್ನು ಪ್ರತಿ ಸಲವೂ ಪ್ರೂವ್ ಮಾಡುತ್ತಿದ್ದಾರೆ.

More from Filmibeat

English summary
Actress Mokshitha pai new photos uploaded in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X