ಅಪ್ಪ-ಅಮ್ಮ ಊರಿಗೆ ಹೋದಾಗ 'ಪಾರು' ನಟಿ ಮೋಕ್ಷಿತಾಗೆ ತಮ್ಮನ ಆರೈಕೆ; ಭೇಷ್ ಎಂದ ನೆಟ್ಟಿಗರು!

By ಪ್ರಿಯಾ ದೊರೆ

'ಪಾರು' ಸೀರಿಯಲ್ ಮುಗಿದ ಬಳಿಕ ಅಭಿಮಾನಿಗಳು, ಪ್ರತಿನಿತ್ಯ ಮೋಕ್ಷಿತಾ ಅವರ ಸೋಶಿಯಲ್ ಪೇಜ್ ಹಾಗೂ ಸ್ಟೋರಿ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ತಪ್ಪದೇ ವೀಕ್ಷಿಸುತ್ತಾರೆ.

ಮಾರ್ಚ್ ಹದಿನಾರನೇ ತಾರೀಖು 'ಪಾರು' ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರವಾಗಿತ್ತು. ಇದಾದ ಬಳಿಕ ಯೂಟ್ಯೂಬ್ ಚಾನೆಲ್ ಅನ್ನು ತೆರೆದ ಮೋಕ್ಷಿತಾ ಅವರು ಇದುವರೆಗೂ 77 ವೀಡಿಯೀಗಳನ್ನು ಅಪ್ ಲೋಡ್ ಮಾಡಿದ್ದಾರೆ.

ಅಭಿಮಾನಿಗಳು ಆದಷ್ಟು ಬೇಗ ಮೋಕ್ಷಿತಾ ಅವರಿಗೆ ಮತ್ತೊಂದು ಸೀರಿಯಲ್ ಸಿಗಲಿ ಎಂದು ಬಯಸಿದ್ದು, ಆದರೆ, ಇನ್ನು ಹೊಸ ಪ್ರಾಜೆಕ್ಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Paaru serial fame actress Mokshitha Pai started her youtube channel

ಮೋಕ್ಷಿತಾ ಕುಟುಂಬ

ಮಂಗಳೂರು ಮೂಲದವರಾದ ಮೋಕ್ಷಿತಾ ಜನಸಿದ್ದು ಅಕ್ಟೋಬರ್ 22, 1995 ರಂದು. ತಂದೆ ನಾಗೇಶ್ ಪೈ, ತಾಯಿ ಗೋದಾವರಿ ಹಾಗೂ ಸಹೋದರನ ಜೊತೆಗೆ ಇದ್ದಾರೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ.ಕಾಮ್ ಮುಗಿಸಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಮಕ್ಕಳಿಗೆ ಟ್ಯೂಷನ್ ಹೇಳುತ್ತಿದ್ದ ಮೋಕ್ಷಿತಾ ಪೈ ಅವರು ಫೇಸ್‌ಬುಕ್ ಫೋಟೋ ಮೂಲಕ ಸೀರಿಯಲ್‌ಗೆ ಆಯ್ಕೆಯಾಗಿದ್ದಾರೆ. ತಮ್ಮ ವಿಶೇಷ ಚೇತನ ತಮ್ಮನನ್ನು ಮಗುವಿನಂತೆ ಆರೈಕೆ ಮಾಡುವ ಮೋಕ್ಷಿತಾ ತಮ್ಮ ಹುಟ್ಟುಹಬ್ಬವನ್ನು ಹಲವು ವರ್ಷಗಳಿಂದ ಅನಾಥಾಶ್ರಮಗಳಲ್ಲಿ ಆಚರಿಸುತ್ತಾರೆ.

ಯೂಟ್ಯೂಬ್ ಚಾನೆಲ್ ವೀಡಿಯೋಗಳು

'ಪಾರು' ಧಾರಾವಾಹಿ ಬಳಿಕ ಈಗ ನಟಿ ಮೋಕ್ಷಿತಾ ಪೈ ಅವರು ನೂತನ ಸಾಹಸಕ್ಕೆ ಮುಂದಾಗಿದ್ದು, ತಮ್ಮ ಹಿತೈಶಿಗಳ ಬೇಡಿಕೆ ಮೇರೆಗೆ ಹೊಸ ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ. ಈಗಾಗಲೇ 81.5k ಚಂದಾದಾರರನ್ನು ಹೊಂದಿದ್ದಾರೆ. 9.9k ಗೂ ಹೆಚ್ಚು ಲೈಕ್ಸ್ ಹಾಗೂ ಮೂರು ಸಾವಿರಕ್ಕೂ ಅಧಿಕ ವ್ಯೂವ್ಸ್ ಪಡೆದಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಇದುವರೆಗೂ 77 ವೀಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಮೋಕ್ಷಿತಾ ಅವರ ದಿನಚರಿ, ಅವರ ಶಾಪಿಂಗ್, ಶೂಟಿಂಗ್, ಬ್ಯೂಟಿ ಕೇರ್, ಫಿಟ್ನೆಸ್ ಎಲ್ಲಾ ವಿಚಾರದ ಮಾಹಿತಿಯನ್ನು ಯೂಟ್ಯೂಬ್ ಮೂಲಕವೇ ನೋಡಿ ಅಭಿಮಾನಿಗಳು ಮಾಹಿತಿ ಪಡೆಯುತ್ತಿದ್ದಾರೆ.

Paaru serial fame actress Mokshitha Pai started her youtube channel

ಟ್ರಿಪ್ ಹೋಗಲು ಬಯಸುವ ನಟಿ

'ಪಾರು' ಧಾರಾವಾಹಿ ಮುಗಿದ ಬಳಿಕ ಮೋಕ್ಷಿತಾ ಅವರು ಕಸಿನ್ಸ್ ಜೊತೆಗೆ ಪ್ರವಾಸ ಕೈಗೊಂಡಿದ್ದರು. ಇತ್ತೀಚೆಗೆ ಮೋಕ್ಷಿತಾ ಅವರು ಹೆಚ್ಚು ಹೆಚ್ಚು ಪ್ರವಾಸಗಳನ್ನು ಮಾಡಿದ್ದರು. ಶಿವರಾತ್ರಿ ಹಬ್ಬದ ಪ್ರಯುಕ್ತ ಈಶಾ ಫೌಂಡೇಶನ್‌ಗೆ ಭೇಟಿ ಕೊಟ್ಟಿದ್ದರು. ಇದಕ್ಕೂ ಮುನ್ನ ದುಬೈಗೆ ಹೋಗಿ ಎಂಜಾಯ್ ಮಾಡಿದ್ದರು. ಅಲ್ಲದೇ, ಕುಕ್ಕೆ ಸುಬ್ರಮಣ್ಯ, ಮೈಸೂರು, ಹಿಮಾಚಲ ಪ್ರದೇಶ, ವಯಾನಾಡು ಹೀಗೆ ಪ್ರವಾಸ ಮಾಡುತ್ತಿರುತ್ತಾರೆ. ಸದ್ಯ ಮನೆಯಲ್ಲೇ ಇದ್ದು, ನಿತ್ಯ ಒಂದೊಂದು, ಫೋಟೋ, ರೀಲ್ಸ್ ಅನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.

ಸಹೋದರನ ಆರೈಕೆಯಲ್ಲಿ ಮೋಕ್ಷಿತಾ

ಇನ್ನು ಮೋಕ್ಷಿತಾ ಅವರ ಸಹೋದರ ವಿಶೇಷ ಚೇತನ ಎಂಬುದು ಎಲ್ಲರಿಗೂ ಗೊತ್ತಿದೆ. ಮೋಕ್ಷಿತಾ ಅವರಿಗೆ ತಮ್ಮ ಸಹೋದರ ಎಂದರೆ ಪ್ರಾಣ. ಸದಾ ತಮ್ಮನ ಜೊತೆಗೆ ಇದ್ದು, ಸಹೋದರನ ಆರೈಕೆ ಮಾಡಲು ಬಯಸುತ್ತಾರೆ. ಇನ್ನು ಕಳೆದ ವಾರವಷ್ಟೇ ಮೋಕ್ಷಿತಾ ಅವರ ಸಹೋದರನಿಗೆ ಉಪನಯನವನ್ನು ಮಾಡಿಸಿ, ನವಗ್ರಹ ಹೋಮವನ್ನು ನೆರವೇರಿಸಲಾಗಿತ್ತು. ಬಳಿಕ ಮೋಕ್ಷಿತಾ ಅವರು ತಮ್ಮ ದಿನಚರಿ ಬಗ್ಗೆ ಯೂಟ್ಯೂಬ್‌ನಲ್ಲಿ ವೀಡಿಯೋ ಮಾಡಿ ಅಪ್ ಲೋಡ್ ಮಾಡಿದ್ದರು. ಇದೀಗ ಅಪ್ಪ-ಅಮ್ಮ ಊರಿಗೆ ಹೋದಾಗ ತಮ್ಮ ದಿನ ಹೇಗಿರುತ್ತೆ ಎಂದು ವಿಡಿಯೋ ಮಾಡಿದ್ದಾರೆ. ತಮ್ಮನಿಗೆ ಓಟ್ಸ್ ಬಿಸಿಬೇಳೆ ಬಾತ್, ಅನ್ನ, ಸಾರು ಪಲ್ಯ ಮಾಡಿ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.

More from Filmibeat

English summary
Paaru serial fame actress Mokshitha Pai started her youtube channel
Read more about: serial priya dore ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X