Pranvi Akshay: 'ಪಾರು'ಗೆ ಸೀರೆ ಗಿಫ್ಟ್ ಕೊಟ್ಟ ಪುಟಾಣಿ: ರೀಲ್ ಅಲ್ಲ ರಿಯಲ್
ಮಕ್ಕಳು ಅದೆಷ್ಟು ಮುಗ್ಧರಾಗಿರುತ್ತಾರೆ ಅಲ್ವಾ. ಅವರ ಮುಗ್ದತೆಗೆ ಮಾರು ಹೋಗದವರೇ ಇಲ್ಲ. ಮನಸ್ಸಿಗೆ ಅನ್ನಿಸಿದ್ದನ್ನು ಮಾಡುತ್ತಾರೆ. ಅಲ್ಲಿ ಯಾವುದೇ ರೀತಿಯ ಸ್ವಾರ್ಥ ಇರುವುದಿಲ್ಲ. ಜನರ ಜೊತೆಗೆ ಬೆರೆಯುವುದು ಕೂಡ ಮನಸ್ಸಿಗೆ ಇಷ್ಟವಾದರೆ ಮುಗೀತು. ತಮ್ಮವರಂತೆಯೇ ಕಾಣುತ್ತಾರೆ. ಇದು ಎಲ್ಲಾ ಮಕ್ಕಳ ಸ್ವಾಭಾವಿಕ ಗುಣ ಅಲ್ವಾ.
ಇಷ್ಟೆಲ್ಲಾ ಪೀಠಿಕೆ ಹಾಕುವುದಕ್ಕೂ ಒಂದು ಕಾರಣ ಇದೆ. 'ಪಾರು' ಧಾರಾವಾಹಿಯಲ್ಲಿ ಅಮ್ಮ-ಮಗುವಿನ ಬಾಂಧವ್ಯದ ಅನಾವರಣದ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಮಗುವಿನ ಮುಗ್ಧತೆಗೆ ಸಲಾಂ ಎನ್ನದೇ ಇರಲಾಗುವುದಿಲ್ಲ. ಖುಷಿ ಪಡದೇ ಇರಲು ಕಾರಣವೂ ಇಲ್ಲ. ಅಷ್ಟು ಚೆಂದವಾಗಿದೆ ಆ ವಿಡಿಯೋ.

ಮಗಳನ್ನು ಪೋಷಣೆ ಮಾಡುವ ಪಾರು
'ಪಾರು' ಧಾರಾವಾಹಿ ಹಲವು ವರ್ಷಗಳಿಂದ ಮೂಡಿ ಬರ್ತಿದೆ. ಆದರೆ ಕಥೆ ಎಲ್ಲಿಯೂ ಬೋರ್ ಆಗದೇ ಇರುವ ಕಾರಣ ಇನ್ನು ಧಾರಾವಾಹಿಯನ್ನು ಪ್ರಸಾರ ಮಾಡುತ್ತಲೇ ಇದ್ದಾರೆ. ಸದ್ಯಕ್ಕೆ ಅಮ್ಮ-ಮಗಳ ಬಾಂಧವ್ಯದ ಎಪಿಸೋಡ್‌ಗಳು ಪ್ರಸಾರವಾಗುತ್ತಿದೆ. ಕಣ್ಣ ಮುಂದೆ ಇರುವುದು ತನ್ನ ಮಗಳೇ ಆದರೂ ತಂಗಿಗಾಗಿ ಮಗಳ ಬಂಧವನ್ನೇ ಬಿಟ್ಟುಕೊಟ್ಟಿದ್ದಾಳೆ ಪಾರು. ತಂಗಿಗಾಗಿ ಎಲ್ಲವನ್ನು ತ್ಯಾಗ ಮಾಡಿದ ಪಾರು ಎಂದರೆ ಜನಕ್ಕೆ ಅಚ್ಚುಮೆಚ್ಚು ಹಾಗೇ ಆ ಮಗುವಿಗೆ ಅಷ್ಟೇ ಇಷ್ಟ.
ಪಾರುಗಾಗಿ ಗಿಫ್ಟ್ ತಂದು ಮಗು
ಧಾರಾವಾಹಿಯಲ್ಲಿ ಪಾರು, ಮಗುವಿಗಾಗಿ ಸಾಕಷ್ಟು ಸಮಯವನ್ನು ಕೊಡುತ್ತಾಳೆ. ಮಗುವಿನ ಹಾರೈಕೆಯಲ್ಲೆಲ್ಲಾ ಪಾರು ಪಾತ್ರ ಮಹತ್ವದ್ದಾಗಿದೆ. ಅದೇ ಪ್ರೀತಿ ಈಗ ರಿಯಲ್ ಆಗಿಯೂ ಅನಾವರಣವಾಗಿದೆ. ಧಾರಾವಾಹಿಯಲ್ಲಿ ಪಾರು ಮಗಳಾಗಿರುವ ಪ್ರಣ್ವಿ, ಅಮ್ಮನಿಗಾಗಿ ಉಡುಗೊರೆ ತಂದಿದ್ದಾಳೆ. ಸಪ್ರೈಸ್ ಆಗಿ ಆ ಗಿಫ್ಟ್ ನೀಡಿದ್ದಾಳೆ. ಮೊಬೈಲ್ ನೋಡುತ್ತಾ ಕುಳಿತಿದ್ದ ಪಾರು ಬಳಿ ಬಂದು, ಗಿಫ್ಟ್ ಬ್ಯಾಗ್ ನೀಡಿದ್ದಾಳೆ. ಆರಂಭದಲ್ಲಿ ಪ್ರಣ್ವಿ ಏನಕ್ಕೆ ಬಂದಿದ್ದಾಳೆ ಎಂಬುದನ್ನು ಪಾರು ಗಮನಿಸಿಲ್ಲ. ಸುಮ್ಮನೆ ಬಂದಿದ್ದಾಳೇನೋ ಎಂದು ಮೊಬೈಲ್ ನೋಡುತ್ತಾ ಕುಳಿತಿದ್ದಳು. ಆದರೆ ಆಮೇಲೆ ಗಿಫ್ಟ್ ಬ್ಯಾಗ್ ಕೊಟ್ಟು, ಪಾರುಗೆ ಶಾಕ್ ನೀಡಿದ್ದಾಳೆ.
ಸೀರೆ ಕಂಡು ಖುಷಿ ಪಟ್ಟ ಮೋಕ್ಷಿತಾ
ಪ್ರಣ್ವಿ, ಮೋಕ್ಷಿತಾಗಾಗಿ ಸೀರೆಯೊಂದನ್ನು ಉಡುಗೊರೆಯಾಗಿ ನಿಡೀದ್ದಾಳೆ. ಬಾದಾಮಿ ಕಲರ್, ಕೆಂಪು ಬಾರ್ಡರ್ ಇರುವಂತ ಸೀರೆ ಅದಾಗಿದೆ. ಸೀರೆ ಕಂಡ ಮೋಕ್ಷಿತಾ, 'ನಿಜಕ್ಕು ಇದು ನನಗೇನಾ, ನಂಗ್ ನಂಗೇನಾ' ಅಂತ ಮಕ್ಕಳ ರೀತಿಯಲ್ಲಿಯೇ ಕೇಳಿದ್ದಾಳೆ. ಪ್ರಣ್ವಿ ಕೂಡ ಇದು ನಿಮಗೆ ಗಿಫ್ಟ್ ಎಂದಿದ್ದಾಳೆ. ಖುಷಿಯಿಂದ ಪ್ರಣ್ವಿಗೆ, ಪಾರು ಮುತ್ತು ನೀಡಿದ್ದಾಳೆ. ಇತ್ತಿಚೆಗಷ್ಟೇ ಮೋಕ್ಷಿತಾ ಪೈ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದರು. ಈಗ ತೆರೆಮೇಲಿನ ಮಗಳ ಕೈಯಿಂದ ರಿಯಲ್ ಆಗಿ ಗಿಫ್ಟ್ ಪಡೆದಿದ್ದಾರೆ.

ಪ್ರಣ್ವಿ ನಟನೆಗೆ ನೆಟ್ಟಿಗರಿಂದ ಹೊಗಳಿಕೆ
ಅಂದಹಾಗೆ ಪ್ರಣ್ವಿ ಚೋಟಾ ಚಾಂಪಿಯನ್‌ಗೆ ಬಂದಿದ್ದಳು. ಅಲ್ಲಿಂದ 'ಪಾರು' ಧಾರಾವಾಹಿಗೆ ಆಯ್ಕೆಯಾಗಿದ್ದಾಳೆ. ಕ್ಯಾಮೆರಾ ಮುಂದೆ ನಟನೆ ಮಾಡುವುದಕ್ಕಿಂತ ನ್ಯಾಚುರಲ್ ಆಗಿ ನಟಿಸುವುದರಲ್ಲಿಯೇ ಪ್ರಣ್ವಿ ಬೆಸ್ಟ್ ಅಂತಿದ್ದಾರೆ ನೆಟ್ಟಿಗರು. ಕ್ಯಾಮೆರಾ ಎಂದಾಗ ಹಿಡಿದಿಡಿದು ಮಾತನಾಡುವ ಪ್ರಣ್ವಿ ಕ್ಯಾಮೆರಾ ಇಲ್ಲ ಎಂದಾಗ ತುಂಬಾ ಫ್ರೀಯಾಗಿ ಮಾತನಾಡುತ್ತಾಳೆ. ಮಾತನಾಡುವ ರೀತಿಯೂ ಚೆನ್ನಾಗಿದೆ. ಹೀಗಾಗಿ ಪಾರು ಹಂಚಿಕೊಂಡಿರುವ ಈ ವಿಡಿಯೋಗೆ ಮಗುವಿಗೆ ಶಹಬ್ಬಾಶ್‌ಗಿರಿ ಸಿಗುತ್ತಿದೆ.


Click it and Unblock the Notifications











