ಅಬ್ಬಬ್ಬಾ 'ಪಾರು' ಧಾರಾವಾಹಿ ಪುಟಾಣಿ ಡಿಮ್ಯಾಂಡ್ ನೋಡಿ: ಬೆಳ್ಳುಳ್ಳಿ ಕಬಾಬ್ ಮಾಡೋಕೆ ರಾವುಲ್ಲಾ ಬೇಕಂತೆ..!

By ಎಸ್ ಸುಮಂತ್

ಇದು ಸೋಷಿಯಲ್ ಮೀಡಿಯಾ ಜಮಾನ. ಅದರಲ್ಲೂ ರೀಲ್ಸ್ ಜಮಾನ. ಎಲ್ಲರೂ ತಮ್ಮ ತಮ್ಮ ಪ್ರೊಫೈಲ್‌ನಲ್ಲಿ ಟ್ರೆಂಡಿಂಗ್ ರೀಲ್ಸ್‌ಗಳಿಗೆ ಹೆಜ್ಜೆ ಹಾಕುತ್ತಾರೆ. ರೀಲ್ಸ್ ಮಾಡದವರಿಲ್ಲ. ರೀಲ್ಸ್ ನೋಡದವರಿಲ್ಲ. ಪುಟಾಣಿ ಮಕ್ಕಳಿಂದ ಹಿಡಿದು, ದೊಡ್ಡವರ ತನಕವೂ ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಮಕ್ಕಳು ಏನೇ ಮಾಡಿದರೂ ನೋಡುವುದಕ್ಕೆ, ಕೇಳುವುದಕ್ಕೇನೆ ಸಿಕ್ಕಾಪಟ್ಟೆ ಖುಷಿಯಾಗುತ್ತದೆ. ಮಕ್ಕಳ ತೊದಲು ನುಡಿಯಂತು ಮನಸ್ಸಾರೆ ನಗು ತರಿಸದೇ ಇರುವುದಿಲ್ಲ. ಈಗ ಧಾರಾವಾಹಿಗಳಲ್ಲಿ ಮಕ್ಕಳ ನಟನೆ ಎಲ್ಲರ ಗಮನ ಸೆಳೆಯುತ್ತಿದೆ. ಪಾರು ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಪುಟಾಣಿಯೂ ಎಲ್ಲರ ಫೇವರಿಟ್ ಆಗಿದ್ದಾಳೆ‌.

Paaru Serial fame Baby Pranvi Reels goes viral

ಪಾರು ಮಗಳ ಪಾತ್ರಧಾರಿ ಯಾರು..?

ಜೀ ಕನ್ನಡದ ಪಾರು ಧಾರಾವಾಹಿಯಲ್ಲಿ ಜನನಿ ಮಗಳಾಗಿ ಪ್ರಣ್ವಿ ಕಾಣಿಸಿಕೊಂಡಿದ್ದಾಳೆ. ಈಗಿನ್ನು ತೊದಲು ನುಡಿಯಲ್ಲಿ ಮಾತನಾಡುತ್ತಾಳೆ. ಆದರೆ ಅವಳ ಆ ತೊದಲು ನುಡಿಗಳೇ ನೋಡುಗರನ್ನು ಆಕರ್ಷಣೆ ಮಾಡುತ್ತದೆ. ಧಾರಾವಾಹಿಯೊಳಗಿನ ಪಾರು, ಅಖಿಲಾ ಅಜ್ಜಿ, ರತ್ನವೇಣಿ ಅಜ್ಜಿ, ದಾಮಿನಿ ಅಜ್ಜಿಯ ಹೆಸರನ್ನು ಕರೆಯುವುದೇ ಒಂದು ಚೆಂದ. ನಟನೆಯಲ್ಲಿಯೂ ಅಷ್ಟೇ ಆ ಪಾತ್ರಕ್ಕೆ ಎಲ್ಲೂ ಕಡಿಮೆಯಾಗದಂತೆ ಅಭಿನಯಿಸಿದ್ದಾಳೆ‌. ಈ ಪ್ರಣ್ವಿ ದೇಶ ಕಾಯುವ ಯೋಧರ ಮಗಳು ಎನ್ನುವುದೇ ಹೆಮ್ಮೆಯ ವಿಚಾರ.

ಪುಟಾಣಿ ಪ್ರಣ್ವಿ ಸೀರೆಯಲ್ಲಿ ಮಿಂಚಿಂಗ್

ಸೋಷಿಯಲ್ ಮೀಡಿಯಾದಲ್ಲೂ ಪ್ರಣ್ವಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾಳೆ. ಪ್ರಣ್ವಿ ಜೊತೆಗೆ ತಂದೆ - ತಾಯಿ ಕೂಡ ಆಕ್ಟೀವ್ ಆಗಿದ್ದಾರೆ. ಪ್ರಣ್ವಿಗೆ 219 ಸಾವಿರ ಜನ ಫಾಲೋ ಮಾಡುತ್ತಿದ್ದಾರೆ. ಇತ್ತಿಚೆಗಂತೂ ಪಾರು ಧಾರಾವಾಹಿಯ ಸೆಟ್‌ನಲ್ಲಿರುವಂತ ವಿಡಿಯೋಗಳನ್ನೇ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಪುಟಾಣಿ ಪ್ರಣ್ವಿಗೆ ಸೀರೆ ಕ್ರೇಜ್ ಕೂಡ ಇದೆ. ಸೀರೆಯಲ್ಲೂ ಒಂದಷ್ಟು ರೀಲ್ಸ್‌ಗಳನ್ನು ಮಾಡಿ ಹಾಕಿದ್ದಾರೆ.

ಯೋಧರ ಮಗಳು ಈ ಪ್ರಣ್ವಿ

ಬಹಳ ವರ್ಷಗಳ ಹಿಂದಿನ ಶೋ ಛೋಟಾ ಚಾಂಪಿಯನ್ ಮತ್ತೆ ಶುರುವಾಗಿತ್ತು. ಈ ಶೋಗೆ ಪ್ರಣ್ವಿ ಕೂಡ ಭಾಗವಹಿಸಿದ್ದಳು. ಅಲ್ಲಿಯೇ ಅವರ ತಂದೆ ದೇಶ ಕಾಯಿವ ಯೋಧರು ಎಂಬುದು ಅನಾವರಣವಾಗಿದ್ದು. ತಂದೆಯನ್ನು ಪ್ರಣ್ವಿ ಎಷ್ಟು ಮಿಸ್ ಮಾಡಿಕೊಳ್ಳುತ್ತಾಳೆ ಎಂಬುದು ತಿಳಿದಿದ್ದು. ಆ ಕಾರ್ಯಕ್ರಮದಲ್ಲಿ ಕುಳಿತಿದ್ದವರೆಲ್ಲರನ್ನು ಒಂದು ಕ್ಷಣ ಭಾವುಕಗೊಳಿಸಿದ್ದ ಕ್ಷಣವದು. ಮಗುವಿನ ವಿಚಾರಕ್ಕೆ ಎಲ್ಲರೂ ಒಂದು ಕ್ಷಣ ಕಣ್ಣೀರು ಹಾಕಿದ್ದರು. ಆದರೆ ಆ ಮಗುವಿನ ತಂದೆ ಕಾರ್ಯಕ್ರಮಕ್ಕೆ ಬಂದು ಇಂದು ಅದ್ಭುತವನ್ನು ಉಂಟು ಮಾಡಿದ್ದರು.

Paaru Serial fame Baby Pranvi Reels goes viral

ರಾವುಲ್ಲಾನ ಸಹಾಯ ಕೇಳಿದ ಪ್ರಣ್ವಿ

ಈ ಸೋಷಿಯಲ್ ಮೀಡಿಯಾದಲ್ಲಿ ಯಾವಾಗ..? ಏನು..? ಟ್ರೆಂಡಿಂಗ್ ಆಗುತ್ತೆ ಎಂಬುದನ್ನು ಹೇಳುವುದಕ್ಕೆ ಆಗಲ್ಲ. ಹಳೇ ಹಾಡುಗಳು ವೈರಲ್ ಆಗುತ್ತಿವೆ. ಡೈಲಾಗ್ ಗಳು ವೈರಲ್ ಆಗುತ್ತಿವೆ. ಅದರಲ್ಲೂ ಸದ್ಯ ಇನ್ನು ಟ್ರೆಂಡಿಂಗ್‌ನಲ್ಲಿಯೇ ಇರುವುದು ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಹಾಡು ಹಾಗೂ ಬೆಳ್ಳುಳ್ಳಿ ಕಬಾಬ್.. ರಾವುಲ್ಲ ಅಲ್ಲಾಡಿಸಪ್ಪ ಡೈಲಾಗ್. ಇದೀಗ ಪುಟಾಣಿ ಪ್ರಣ್ವಿ ಕೂಡ ಈ ಡೈಲಾಗ್ ರೀಲ್ಸ್ ಮಾಡಿದ್ದಾಳೆ. ಬೆಳ್ಳುಳ್ಳಿ ಕಬಾಬ್ ಮಾಡೋಕೆ ರಾವುಲ್ಲಾ ಬೇಕು ಕಳಿಸುತ್ತೀರಾ ಎನ್ನುತ್ತಿದ್ದಾಳೆ. ಮೊದಲೇ ಪುಟಾಣಿ, ಆದರೆ ಸೀರೆಯುಟ್ಟು, ಮುದ್ದಾಗಿ ಕಾಣುತ್ತಿರುವ ಪ್ರಣ್ವಿ ಬೆಳ್ಳುಳ್ಳಿ ಕಬಾಬ್ ಮಾಡಲು ಹೊರಟಿದ್ದಾಳೆ.

More from Filmibeat

English summary
Paaru Seiral baby Pranvi bellulli kababa Reels;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X