ದುಬೈನಲ್ಲಿ ಮೋಕ್ಷಿತಾ ಪೈ ಮೋಜುಮಸ್ತಿ; ಆಕೆಯ ಮಾಡರ್ನ್ ಲುಕ್‌ಗೆ ಫ್ಯಾನ್ಸ್ ಫಿದಾ
ಪಾರು ಧಾರಾವಾಹಿಯ ಮೂಲಕ ಎಲ್ಲರ ಮನಸನ್ನು ಕದ್ದ ಚೆಲುವೆ ಈಕೆ. ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ನಟಿ ಮೋಕ್ಷಿತಾ ಪೈ ಅಭಿನಯ ಅಷ್ಟರ ಮಟ್ಟಿಗೆ ಎಲ್ಲರ ಮನ ಗೆದ್ದಿದೆ. ಮೋಕ್ಷಿತಾ ಪೈ ಅರಬ್ ರಾಷ್ಟ್ರ ಗಳಿಗೆ ಪ್ರವಾಸವನ್ನು ಕೈ ಗೊಂಡಿದ್ದಾರೆ.
ಹೌದು ದುಬೈ, ಅಬುದಾಬಿ ಹೀಗೆ ಹಲವು ನಗರಗಳಿಗೆ ಭೇಟಿ ನೀಡಿ ಖುಷಿ ಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೋಕ್ಷಿತಾ ಪೈ ಬಹಳ ಮಾಡರ್ನ್ ಆಗಿ ಬದಲಾಗುತ್ತಾ ಇದ್ದಾರೆ ಎಂದರೆ ತಪ್ಪಾಗದು. ಕಿರುತೆರೆಗೆ ಬಂದಾಗ ವೇಳೆ ಅಷ್ಟೊಂದು ಸ್ಟೈಲಿಶ್ ಆಗಿರದ ಮೋಕ್ಷಿತಾ ಪೈ ಇದೀಗ ಬಹಳ ಚೆನ್ನಾಗಿ, ಹಾಗೆಯೇ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ಹಾಗೆಯೇ ಸಖತ್ ಸೈಲಿಶ್ ಆಗಿದ್ದಾರೆ.

ಮೋಕ್ಷಿತಾಗೆ ಪ್ರವಾಸ ಎಂದರೆ ಬಹಳ ಇಷ್ಟ.. ಅದರಂತೆ ಅಲ್ಲಿನ ಹವಮಾನಗಳಿಗೆ ತಕ್ಕ ಬಟ್ಟೆಯನ್ನು ಹಾಕಿದ್ದಾರೆ ಈ ಸುಂದರಿ.. ಮೋಕ್ಷಿತಾ ಪೈ ಫೋಟೋ ಇದೀಗ ಸಖತ್ ಟ್ರೆಂಡಿಂಗ್ ಆಗಿದ್ದು ನೋಡುಗರಿಗೆ ಇಷ್ಟವಾಗುತ್ತಿದೆ.
ವಿದೇಶಕ್ಕೆ ಹೋಗಿ ಬಂದಿರುವ ಸುಂದರಿ ಯ ಸಾಕಷ್ಟು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಲೈಕ್ ಕಾಮೆಂಟ್ ಮಾಡುತ್ತಾ ಇದ್ದಾರೆ. ದುಬೈನಲ್ಲಿ ಕೂಡ ಸಾಕಷ್ಟು ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಸಖತ್ ಖುಷಿ ಪಟ್ಟಿದ್ದಾರೆ. ಮರುಭೂಮಿಯಲ್ಲಿ ಸುತ್ತಾಡಿದ್ದಾರೆ.
ವಿದೇಶದ ರಮಣೀಯ ತಾಣಗಳಲ್ಲಿ ಮೋಕ್ಷಿತಾ ಎಂಜಾಯ್ ಮಾಡಿ ಬಂದಿದ್ದಾರೆ. ಜೀನ್ಸ್ ಮಿಡಿ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟು ಕಾಣಿಸಿಕೊಂಡಿದ್ದಾರೆ. ಮರುಭೂಮಿಯಲ್ಲಿ ಸೂರ್ಯಾಸ್ತ ನೋಡಿ ಖುಷಿಪಟ್ಟಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ವಿದೇಶಗಳಿಗೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ. ಹಾಗೆಯೇ ಎಲ್ಲಾ ಫೋಟೋಗಳು ಬಹಳ ಆಕರ್ಷಕವಾಗಿ ಮೂಡಿ ಬಂದಿದೆ.

ಮೋಕ್ಷಿತಾ ಪೈ ಫೋಟೋ ವೈರಲ್
ತಾವು ತೆಗೆದುಕೊಂಡಿರುವ ಫೋಟೋಗಳು ಚೆನ್ನಾಗಿ ಮೂಡಿ ಬಂದರೆ ನಮಗೆ ಬಹಳ ಖುಷಿ ಅಲ್ಲವೇ, ಆ ಫೋಟೋಗಳನ್ನೂ ನಾವು ಮುಂದೊಂದು ದಿನ ನೋಡಿ ಬಹಳಷ್ಟು ಖುಷಿ ಪಡುತ್ತೇವೆ. ಅದಕ್ಕೆ ಯಾವ ಜಾಗಕ್ಕೆ ಹೋದರು ಫೋಟೋ ತೆಗೆದು ಇಟ್ಟುಕೊಳ್ಳಬೇಕು. ಆ ಫೋಟೋಗಳನ್ನು ನೋಡಿ ಎಂಜಾಯ್ ಮಾಡಿದ ಕ್ಷಣಗಳು ಆ ಜಾಗಕ್ಕೆ ಹೋದ ನೆನಪುಗಳು ಒಂದು ಕ್ಷಣದಲ್ಲಿ ಬಂದು ಹೋಗುತ್ತದೆ ಎನ್ನುವುದು ಅವರ ಮಾತು . ಇನ್ನು ಗೆಳೆಯರ ಜೊತೆ ಫನ್ ಮಾಡುತ್ತಾ ವಿದೇಶದಲ್ಲಿ ಆರಾಮವಾಗಿ ಸುತ್ತಾಡಿ ಇದೀಗ ಭಾರತಕ್ಕೆ ಆಗಮಿಸಿದ್ದಾರೆ .
ಪಾರು ಧಾರಾವಾಹಿ ಮೂಲಕ ಮೋಡಿ
ಅಂದಹಾಗೆ ಪಾರು ಧಾರವಾಹಿ ಕೂಡ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಮನೆಯಲ್ಲಿ ಇರುವ ಮಗು ಜನನಿ ಮಗು ಅಲ್ಲ. ಅದು ಪಾರು ಮಗು ಎನ್ನುವುದು ಅಖಿಲಾಗೆ ತಿಳಿಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಜನನಿ ಚಿಕ್ಕಮ್ಮ ರತ್ನವೇಣಿ, ಪಾರು ಜೊತೆ ನಡೆದುಕೊಳ್ಳುತ್ತಾ ಇರುವ ರೀತಿ ಬಹಳ ಬೇಸರ ತರಿಸಿದೆ. ಜನನಿ ಕೂಡ ರತ್ನವೇಣಿಯ ಮಾತು ಕೇಳಿ ಪಾರು ಕೆಟ್ಟವಳು ಅನ್ನುವ ಹಾಗೆ ನೋಡುತ್ತಾ ಇದ್ದಾಳೆ. ಆದರೆ ಈ ವಿಚಾರ ಪಾರುಗೆ ತಿಳಿದಿದೆ. ಆದರೆ ಏನು ಮಾಡಲಾಗದ ಸ್ಥಿತಿ ಆಕೆಯದು. ಅಖಿಲಾಂಡೇಶ್ವರಿ, ರತ್ನವೇಣಿ ಜೊತೆ ಮಗುವನ್ನು ಒಂದು ದಿನ ಹೊರಗಡೆ ಕಳುಹಿಸುತ್ತಾಳೆ. ಆ ವೇಳೆ ಮಗುವಿಗೆ ತಿನ್ನಲು ಏನೂ ಕೊಡದೇ ಸತಾಯಿಸುತ್ತಾ ಇದ್ದ ರತ್ನವೇಣಿಯ ಆಟ ನೋಡಿ ಅಖಿಲಾ ಮನಸ್ಸನ್ನು ಮತ್ತಷ್ಟು ಕೆರಳಿದೆ.
ರತ್ನವೇಣಿ ಕೆನ್ನೆಗೆ ಹೊಡೆದ ಅಖಿಲ
ಇನ್ನು ಮನೆಗೆ ಬಂದ ರತ್ನವೇಣಿಯನ್ನು ಅಖಿಲಾ ವಿಚಾರಿಸಿಕೊಳ್ಳುತ್ತಾಳೆ. ಆದರೆ ನಿಜ ವಿಚಾರ ಹೇಳದ ರತ್ನವೇಣಿ ಕೆನ್ನೆಗೆ ಸರಿಯಾಗಿ ಬಾರಿಸಿದಾಗ ರತ್ನವೇಣಿ ನಿಜ ವಿಚಾರ ಬಾಯಿ ಬಿಡುತ್ತಾರೆಳೆ. ರತ್ನವೇಣಿ ಮಾತು ಕೇಳಿ ಅಖಿಲ ಬಹಳ ಶಾಕ್‌ಗೆ ಒಳಗಾಗುತ್ತಾಳೆ.


Click it and Unblock the Notifications