Sharath Padmanabha : ನಟ ಶರತ್ ಪದ್ಮನಾಭ್ ಫಿಟ್ನೆಸ್‌ಗೆ ಕಾರಣ ರಕ್ಷಿತ್ ಶೆಟ್ಟಿ ಟ್ರೈನರ್!
ಇಂಜಿನಿಯರಿಂಗ್ ಕಲಿತು ಐಟಿ ಉದ್ಯೋಗದಲ್ಲಿದ್ದವರು ಶರತ್. ನಟನಾ ಕ್ಷೇತ್ರದಲ್ಲಿದ್ದ ಆಸಕ್ತಿಗೆ ಮೊದಲ ಅವಕಾಶ ಮಾಡಿಕೊಟ್ಟಿದ್ದು ಸ್ಟಾರ್ ಸುವರ್ಣ ಚಾನೆಲ್. ಹಾಗೆ ಎಂಟ್ರಿ ಕೊಟ್ಟು ಇಂದು ಹೆಂಗೆಳೆಯರ ಹಾರ್ಟ್‌ನಲ್ಲಿ ಮನೆ ಮಾಡುವ ತನಕ ಬೆಳೆದು ನಿಂತಿದ್ದಾರೆ.
ಚೆಲುವು, ಸದೃಢ ಮೈಕಟ್ಟನ್ನು ಗಮನಿಸಿದರೆ ಈತ ಯಾವ ಸಿನಿಮಾತಾರೆಗೂ ಕಡಿಮೆ ಇಲ್ಲ ಅನಿಸಿಬಿಡುತ್ತದೆ. ನಟನೆಯ ಮೂಲಕ ಈಗಾಗಲೇ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ಶರತ್ ಪದ್ಮನಾಭ್ ಫಿಟ್ನೆಸ್‌ಗೆ ಕಾರಣ ಶ್ರೀನಿವಾಸ್ ಗೌಡ ಟ್ರೈನಿಂಗ್.
ರಕ್ಷಿತ್ ಶೆಟ್ಟಿಯವರಿಗೂ ಫಿಟ್ನೆಸ್ ಟ್ರೈನರ್ ಆಗಿರುವ ಶ್ರೀನಿವಾಸ್ ಬಳಿಯಲ್ಲಿ ತರಬೇತಿ ಪಡೆಯುತ್ತಿರುವ ಶರತ್ ಸದ್ಯದಲ್ಲೇ ತಾವು ಕೂಡ ಬೆಳ್ಳಿ ಪರದೆಗೆ ಕಾಲಿಡಲು ಸಿದ್ಧವಾಗುತ್ತಿದ್ದಾರೆ. ಜೀ ಕನ್ನಡದ ಟಾಪ್ ಸೀರಿಯಲ್ ಲೀಸ್ಟ್‌ನಲ್ಲಿ 'ಪಾರು' ಸೀರಿಯಲ್ ಕೂಡ ಸೇರಿದೆ. ಈ ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿಯ ಹಿರಿಯ ಮಗನಾಗಿ ಆದಿತ್ಯ ಕಾಣಿಸಿಕೊಂಡಿದ್ದಾರೆ.

ಆದಿತ್ಯ ಅವರ ನಿಜವಾದ ಹೆಸರು ಶರತ್ ಪದ್ಮನಾಭ್
ಆದಿತ್ಯ ನಿಜವಾದ ಹೆಸರು ಶರತ್. ಇವರ ತಂದೆ ಹೆಸರು ಪಧ್ಮನಾಭ್, ತಾಯಿ ಗಾಯತ್ರಿ. ಶರತ್ ಪದ್ಮನಾಭ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಶರತ್ ಪದ್ಮನಾಭ್ ಇಂಜಿನಿಯರ್ ವಿಧ್ಯಾಭ್ಯಾಸ ಮಾಡಿದ್ದಾರೆ. ಮೊದಲಿನಿಂದಲೂ ಆಕ್ಟಿಂಗ್‌ನಲ್ಲಿ ಶರತ್ ಪದ್ಮನಾಭ್ ಇಂಟ್ರೆಸ್ಟ್ ಹೊಂದಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಇವರ ಪ್ರತಿಭೆಯನ್ನು ಗುರುತಿಸಿ ನೇರವಾಗಿ ಸಮಪರ್ಕಿಸಿ ಅವಕಾಶ ನೀಡಲು ಮುಂದಾಗುತ್ತೆ ಪಾರು ತಂಡ. ಶರತ್ ತಮ್ಮ ಐಟಿ ಕೆಲಸವನ್ನು ಬಿಟ್ಟು ದಿಲೀಪ್ ರಾಜ್ ಪ್ರೊಡಕ್ಷನ್‌ನ 'ಪಾರು' ಸೀರಿಯಲ್ ಮೂಲಕ ಎಂಟ್ರಿಕೊಟ್ಟಿದ್ದರು. ಬಳಿಕ 'ಪುಟ್ಮಲ್ಲಿ' ಎಂಬ ಸೀರಿಯಲ್‌ನಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿತೆರೆಯಲ್ಲೂ ಕಾಣಿಸಿಕೊಂಡಿರುವ ಶರತ್ ಪದ್ಮನಾಭ್ 'ನೀವು ಕರೆ ಮಾಡಿದ ಚಂದಾದಾರರು' ಸಿನಿಮಾದಲ್ಲೂ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಕಿರುತೆರೆಗೆ ಎಂಟ್ರಿ
ಮೊದಲ ಬಾರಿ ನಟನೆಗೆ ಅವಕಾಶ ಸಿಕ್ಕಾಗ ಇಂಜಿನಿಯರಿಂಗ್ ವೃತ್ತಿಯನ್ನು ಶರತ್ ಪೂರ್ತಿಯಾಗಿ ತೊರೆಯಲಿಲ್ಲ . ಫ್ರಿಲ್ಯಾನ್ಸ್ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ದಿಲೀಪ್ ರಾಜ್ ಪ್ರೊಡಕ್ಷನ್‌ನಲ್ಲಿ ಆಡಿಶನ್ ಕೊಟ್ಟು, ಹದಿನೈದು ದಿನಗಳ ಕಾಲ ವರ್ಕ್ ಶಾಪ್ ನಡೆಸಿದ ಬಳಿಕ ಮೊದಲ ಬಾರಿ ಕ್ಯಾಮೆರಾ ಎದುರಿಗೆ ಶರತ್ ಬಂದಿದ್ದರು. ಆರಂಭದಲ್ಲಿ ಸೀರಿಯಲ್ ಸೆಟ್‌ನಲ್ಲಿಯೂ ಇಂಜಿನಿಯರಿಂಗ್ ಕೆಲಸ ಮಾಡಿದ್ದಾರೆ ಶರತ್. ನಟನೆಯನ್ನು ಕೂಡ ಸೀರಿಯಲ್ ಮೂಲಕವೇ ಗಂಭೀರ ಪರಿಶ್ರಮ ಹಾಕಿ ಕಲಿತುಕೊಂಡಿದ್ದಾರೆ.

ರಂಗ ದಿಗ್ಗಜ ಕೃಷ್ಣಮೂರ್ತಿ ಅವರೊಂದಿಗೆ ವರ್ಕ್‌ಶಾಪ್
ಶರತ್‌ಗೆ ವರ್ಕ್‌ಶಾಪ್ ನೀಡಿದವರು ರಂಗ ದಿಗ್ಗಜರೆನಿಸಿದ ಕೃಷ್ಣಮೂರ್ತಿ ಕವತ್ತಾರು. ಅವರ ಬಳಿಯಲ್ಲಿ ಹದಿನೈದು ದಿನಗಳ ವರ್ಕ್‌ಶಾಪ್ ಮಾಡಿದ್ದರು. ಇಷ್ಟೇ ಅಲ್ಲ, ಧಾರಾವಾಹಿಯಲ್ಲಿಯೂ ಹಿರಿಯ, ಅನುಭವಿ ಕಲಾವಿದರೊಡನೆ ನಟಿಸುವ ಅವಕಾಶ ಶರತ್ ಪಾಲಿಗೆ ಒದಗಿಬಂದಿದೆ. ರಿಚರ್ಡ್ ಲೂಯಿಸ್, ಚಂದ್ರಕಲಾ ಮೋಹನ್ ಅವರಿಂದ ಹಿಡಿದು ಇದೀಗ ನಟಿಸುತ್ತಿರುವ ಧಾರಾವಾಹಿಯಲ್ಲಿರುವ ವಿನಯಾ ಪ್ರಸಾದ್, ಎಸ್ ನಾರಾಯಣ್ ಮೊದಲಾದ ಹಿರಿಯ ಪ್ರತಿಭಾವಂತರು ನೀಡುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಲೆ ನಟನಾಗಿ ಗುರುತಿಸಿಕೊಂಡಿದ್ದಾರೆ.

'ಪಾರು' ಧಾರಾವಾಹಿಯಲ್ಲಿ ಸಿಕ್ಕಿದ್ದು ಬ್ಯುಸಿನೆಸ್ ಮ್ಯಾನ್ ಪಾತ್ರ
'ಪುಟ್ಮಲ್ಲಿ' ಧಾರಾವಾಹಿಯಲ್ಲಿ ಸ್ವಲ್ಪ ಸೆಟಲ್ಡ್ ಅನಿಸುವಂತಹ ಪಾತ್ರ ಶರತ್‌ಗೆ ದೊರಕಿತ್ತು. ಆದರೆ 'ಪಾರು' ಧಾರಾವಾಹಿಯಲ್ಲಿ ಸಿಕ್ಕಿದ್ದು ಬ್ಯುಸಿನೆಸ್ ಮ್ಯಾನ್ ಪಾತ್ರ. ಅದಕ್ಕಾಗಿ ನಿರ್ದೇಶಕರು ಕೆಲವು ಸಿನಿಮಾ ಪಾತ್ರಗಳ ಬಾಡಿ ಲ್ಯಾಂಗ್ವೇಜ್ ರೆಫರ್ ಮಾಡಿದ್ದರು. ಪ್ರತಿಯೊಂದು ಕ್ಯಾರೆಕ್ಟರ್‌ಗಳ ಜೊತೆಗೆ ಹೇಗೆ ವಿಭಿನ್ನವಾಗಿ ಪ್ರತಿಕಿಯೆ ಮಾಡಬೇಕಿದೆ ಎನ್ನುವ ಬಗ್ಗೆ ಕೂಡ ನಿರ್ದೇಶಕರೇ ಸೂಚನೆ ನೀಡಿದ್ದರು. ಸಾಲದೆನ್ನುವಂತೆ ಅದೊಂದೆ ಧಾರಾವಾಹಿಯಲ್ಲಿ ಅಡುಗೆಯವನಾಗಿ, ಠಪೋರಿ ಅವತಾರದಲ್ಲಿ ವಿಭಿನ್ನವಾಗಿ ನಟಿಸುವ ಸಂದರ್ಭವೂ ಶರತ್‌ಗೆ ಒದಗಿಬಂದಿದೆ.


Click it and Unblock the Notifications











