ಅತ್ತೆ ಮೆಚ್ಚಿದ ಸೊಸೆಯಾಗುತ್ತಾಳಾ ಪಾರು?

By ಪೂರ್ವ

ಜೀ ಕನ್ನಡ ವಾಹಿನಿಯಲ್ಲಿ ಹಲವು ಸೀರಿಯಲ್‌ಗಳು ಜನಪ್ರಿಯವಾಗಿದೆ. ಆ ಪೈಕಿ ಪಾರು ಸೀರಿಯಲ್ ಕೂಡ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತ ಮುನ್ನುಗುತ್ತಿದೆ. ಕಥೆಯಲ್ಲಿ ಹೊಸ ಹೊಸ ಟ್ವಿಸ್ಟ್‌ಗಳನ್ನು ನೀಡುತ್ತ ಪ್ರೇಕ್ಷಕರನ್ನು ಸೆಳೆಯಲಾಗುತ್ತಿದೆ. ಟಿಆರ್‌ಪಿ ರೇಸ್‌ನಲ್ಲಿ ಪ್ರತಿವಾರ ಪಾರು ಸಖತ್ ಪೈಪೋಟಿ ನೀಡುತ್ತದೆ. ಮೋಕ್ಷಿತಾ ಪೈ, ವಿನಯ್ ಪ್ರಸಾದ್, ಎಸ್.ನಾರಾಯಣ್, ಮುಂತಾದ ಕಲಾವಿದರು ಉತ್ತಮ ಅಭಿನಯದಿಂದ ಜನರ ಮನ ಗೆದ್ದಿದ್ದಾರೆ. ಜೀ ಕನ್ನಡ ವಾಹಿನಿಯನ್ನು ನಂ.1 ಪಟ್ಟಕ್ಕೆ ಏರಿಸುವಲ್ಲಿ ಈ ಸೀರಿಯಲ್ ಕೊಡುಗೆ ಮಾತ್ರ ಅಪಾರವಾದುದು. ಇಷ್ಟೆಲ್ಲಾ ಪ್ರಾಮುಖ್ಯತೆ ಇರೋ ಪಾರು ಧಾರವಾಹಿಯಲ್ಲಿ ದಿನಕ್ಕೊಂದು ಕಥೆ ಹುಟ್ಟು ಹಾಕಿಕೊಳ್ಳುತ್ತಿದೆ.

ಹಿರಿಯ ನಟಿ ವಿನಯಾ ಪ್ರಸಾದ್ ಅಭಿನಯಿಸುತ್ತಿರುವ ಅಖಿಲಾಂಡೇಶ್ವರಿ ಪಾತ್ರ ಅದ್ಭುತವಾಗಿ ಮೂಡಿಬರುತ್ತಿದೆ. ಇದೀಗ ತಾಯಿ ಮಗನ ನಡುವೆ ಸಮರ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಇದೀಗ ಮನೆಯವರ ಆಶಯದಂತೆ ಒಂದು ವಾರ ಮನೆ ನಡೆಸುವ ಜವಾಬ್ಧಾರಿಯನ್ನು ಅಖಿಲಾಂಡೇಶ್ವರಿ ಪಾರುಗೆ ವಹಿಸಿದ್ದಾರೆ. ಒಂದು ವಾರಕ್ಕೆ ಆಗುವಷ್ಟು ಮೊತ್ತ ಅಂದರೆ 5,೦೦,೦೦೦ ರೂಪಾಯಿಯನ್ನು ಪಾರು ಕೈಗೆ ನೀಡಿದ್ದಾರೆ ಅಖಿಲಾಂಡೇಶ್ವರಿ. ಇದರಿಂದ ಬಹಳ ಖುಷಿಯಾಗಿರುವ ಮನೆಯವರೆಲ್ಲರೂ ಐದು ಲಕ್ಷದಲ್ಲಿ ಎಷ್ಟನ್ನು ಖರ್ಚು ಮಾಡಬಹುದು ಹಾಗೆಯೇ ಹೇಗೆಲ್ಲಾ ಉಳಿತಾಯ ಮಾಡಬಹುದು ಎಂಬುದನ್ನು ಆದಿ, ಜನನಿ ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ.

ಮನೆಯ ಎಲ್ಲಾ ಖರ್ಚನ್ನು ನೋಡಿದರು 5 ಲಕ್ಷಕ್ಕಿಂತ ಜಾಸ್ತಿಯೇ ಆಗುತ್ತದೆ. ಅದಕ್ಕೆ ನೀರಿನ ಬಿಲ್, ವಿದ್ಯುತ್ ಬಿಲ್, ಮನೆ ದಿನಸಿ ಬಿಲ್, ಪೆಟ್ರೋಲ್ ಬಿಲ್ ಹೀಗೆ ಯಾವುದರಲ್ಲೆಲ್ಲಾ ಉಳಿತಾಯ ಆಗುತ್ತದೆ ಎಂದು ಎಂಬುದನ್ನು ನೋಡಿಕೊಂಡು ಖರ್ಚು ಮಾಡಲು ಸಜ್ಜಾಗಿದ್ದಾರೆ. ಪಾರುವಿಗೆ ಎಲ್ಲರೂ ಉತ್ತಮ ಸಲಹೆಗಳನ್ನು ನೀಡುತ್ತಿದ್ದಾರೆ. ಹಾಗೆಯೇ ಸಹಾಯವನ್ನು ಮಾಡುತ್ತಿದ್ದಾರೆ. ಐರನ್ ಮಾಡಲು ಹೋದ ಆದಿ ತಮ್ಮನಿಗೆ ಕೈಗೆ ಐರನ್ ಬಿಸಿ ತಾಗಿದೆ. ಇದನ್ನು ನೋಡಿದ ಅಖಿಲಾಂಡೇಶ್ವರಿ ಭಯ ಭೀತಳಾದರು. ಹಾಗೆಯೇ ಪ್ರೀತಿ ಜನನಿ ವೀಕೆಂಡ್‌ಗೆ ಎಲ್ಲದ್ರೂ ಹೋಗುತ್ತಿದ್ದರು ಆದ್ರೆ ಈ ಭಾರಿ ಮನೆಯಲ್ಲೇ ಇರುವುದನ್ನು ನೋಡಿದ ಅಖಿಲಾಂಡೇಶ್ವರಿ ಪ್ರೀತು ಬಳಿ ಕೇಳುತ್ತಾರೆ. ಜನನಿಯನ್ನು ಯಾಕೆ ಹೊರಗೆ ಕರೆದುಕೊಂಡು ಹೋಗಿಲ್ಲವೆಂದು ಇದಕ್ಕೆ ಪ್ರೀತು ಅಮ್ಮನಿಗೆ ಏನೋ ಹೇಳೀ ಮಾತು ಮರೆಸುತ್ತಾನೆ.

Paaru Serial Friday Episode Written Update

ಸ್ನಾನ ಮಾಡಲು ಹೋದ್ರೆ ನೀರು ಜಾಸ್ತಿ ವೇಸ್ಟ್ ಆಗುತ್ತೆ ಎಂದು ಹೇಳಿ ಧಾಮಿನಿಗೆ ಅವಳ ಗಂಡ ಟವಲ್‌ನಲ್ಲಿ ಮೈ ಉಜ್ಜಲು ಹೇಳುತ್ತಾರೆ. ಧಾಮಿನಿಗೆ ಇದೂ ಸಖತ್ ಕಿರಿ ಕಿರಿಯಾಗಿ ಗಂಡನ ಬಳಿ ಹೇಳುತ್ತಾಳೆ ಪಾರುವನ್ನು ಯಾವತ್ತು ಅರಸನ ಕೋಟೆ ಸೊಸೆಯಾಗಲು ಬಿಡುವುದಿಲ್ಲ. ಅಕ್ಕನ ಬಳಿ ಎಲ್ಲಾ ಹೇಳಿಯೇ ತೀರುತ್ತೇನೆ ಎಂದು ಹೇಳುತ್ತಾಳೆ. ಕೊನೆಗೂ ಧಾಮಿನಿ ಅಸಲಿ ಆಟವನ್ನು ತೋರಿಸಿಯೇ ಬಿಡುತ್ತಾಳೆ. ಅಕ್ಕನ ಬಳಿ ಪಾರು ಬಗ್ಗೆ ಇಲ್ಲ ಸಲ್ಲದನ್ನು ಹೇಳಿ ಪಾರುವಿನ ಬಗ್ಗೆ ಇನ್ನು ಕೆಟ್ಟ ಅಭಿಪ್ರಾಯ ಬರುವಂತೆ ಮಾಡುವ ತಂತ್ರ ಧಾಮಿನಿಯದ್ದು. ಇದರಿಂದ ಆಕೆಯ ಬೇಳೆ ಬೇಯಿಸಿಕೊಳ್ಳುತ್ತಾಳೆ ಧಾಮಿನಿ.

ಆದಿ-ಪಾರು ಮದುವೆಗೆ ಎಲ್ಲರೂ ಒಪ್ಪಿಗೆ ನೀಡಿದರೂ ಇದುವರೆಗೆ ಅಖಿಲಾಂಡೇಶ್ವರಿ ಮಾತ್ರ ತನ್ನ ಹಠವನ್ನು ಬಿಡದೆ ಇವರಿಬ್ಬರ ಮದುವೆಗೆ ಒಪ್ಪಿಗೆಯನ್ನು ನೀಡುತ್ತಿಲ್ಲ. ಆದಿ ಪಾರು ಬಳಿ ಮಾತನ್ನು ಆಡಿಸುತ್ತಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾವಾಹಿಗೆ ನಟ ನಿರ್ಮಾಪಕ ದಿಲೀಪ್ ರಾಜ್ ಕ್ರಿಯೆಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಶ್ರೀ ವಿದ್ಯಾ ರಾಜ್ ಅವರು ನಿರ್ಮಾಣದ ಜವಾಬ್ಧಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಗುರುಪ್ರಸಾದ್ ಮೂಡೇನಳ್ಳಿ ನಿರ್ದೇಶನದಲ್ಲಿ ಪಾರು ಧಾರವಾಹಿ ಮೂಡಿಬರುತ್ತಿದೆ.

More from Filmibeat

English summary
Paaru serial Friday episode written update. What happened in Paaru serial on Friday episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X