For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಶರತ್ ಪದ್ಮನಾಭ್

  By ಪ್ರಿಯಾ ದೊರೆ
  |

  ಶರತ್ ಪದ್ಮನಾಭ್. ಈಗ ಎಲ್ಲರ ನೆಚ್ಚಿನ ಆದಿತ್ಯ. ಹೆಂಗಳೆಯರ ಡ್ರೀಮ್ ಬಾಯ್. ರೀಲ್ ಲೈಫ್‌ನಲ್ಲಿ 'ಪಾರು'ಗೆ ದೇವ ಆಗಿದ್ದಆದಿತ್ಯ ಈಗ ರಿಯಲ್ ಲೈಫ್‌ನಲ್ಲಿ ಬೇರೊಬ್ಬ ಹುಡುಗಿಯ ಕೈ ಹಿಡಿದಿದ್ದಾರೆ.

  ಶರತ್ ಅವರ ತಂದೆ ಹೆಸರು ಪಧ್ಮನಾಭ್, ಇವರ ತಾಯಿಯ ಹೆಸರು ಗಾಯತ್ರಿ. ಇವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೆಲ್ಲಾ. ಇವರು ಇಂಜಿನಿಯರ್ ಕಲಿತಿದ್ದಾರೆ. ಮೊದಲಿನಿಂದಲೂ ನಟನೆಯ ಬಗ್ಗೆ ಆಸಕ್ತಿ ಇತ್ತು.

  ಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ; ಮದುವಣಗಿತ್ತಿ ಹಾಗೆ ಸಿಂಗಾರಗೊಂಡ ಪುಟ್ಟಕ್ಕನ ಮನೆಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ; ಮದುವಣಗಿತ್ತಿ ಹಾಗೆ ಸಿಂಗಾರಗೊಂಡ ಪುಟ್ಟಕ್ಕನ ಮನೆ

  ಶರತ್ ತಮ್ಮ ಐಟಿ ಸೆಕ್ಟರ್‌ ಅನ್ನು ಬಿಟ್ಟು ದಿಲೀಪ್ ರಾಜ್ ಪ್ರೊಡಕ್ಷನ್‌ಗೆ ಎಂಟ್ರಿ ಕೊಟ್ಟರು. ಬಳಿಕ 'ಪುಟ್ಮಲ್ಲಿ' ಎಂಬ ಧಾರಾವಾಹಿಯ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಿರಿತೆರೆಯಲ್ಲೂ ಕಾಣಿಸಿಕೊಂಡ ಇವರು 'ನೀವು ಕರೆ ಮಾಡಿದ ಚಂದಾದಾರರು' ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ.

  ನಟನೆ ಮೇಲೆ ಆಸೆ

  ನಟನೆ ಮೇಲೆ ಆಸೆ

  ನಟನೆಯಲ್ಲಿ ಆಸಕ್ತಿ ಇದ್ದರೂ ಇಂಜಿನಿಯರ್ ಓದಿ ಐಟಿಯಲ್ಲಿ ಕೆಲಸ ಮಾಡುತ್ತಿದ್ದ ಶರತ್ ಪದ್ಮನಾಭ್ ಇರಲಾಗದೇ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಬಿಟ್ಟರು. ಸ್ಟಾರ್ ಸುವರ್ಣಾಗೆ ಎಂಟ್ರಿಕೊಟ್ಟು ಇವತ್ತು ಸ್ಟಾರ್ ಆಗಿದ್ದಾರೆ. ಐಟಿ ಕೆಲಸವನ್ನು ಸಂಪೂರ್ಣವಾಗಿ ಬಿಟ್ಟು ಶರತ್ ನಟನಾ ಕ್ಷೇತ್ರಕ್ಕೆ ಕಾಲಿಡಲಿಲ್ಲ. ಬದಲಿಗೆ ಗ್ರಾಫಿಕ್ ಡಿಸೈನರ್ ಆಗಿ ತನ್ನ ವೃತ್ತಿಯನ್ನು ಮುಂದುವರಿಸಿದ್ದರು. ಶೂಟಿಂಗ್ ಸೆಟ್‌ಗಳಲ್ಲೂ ಕೆಲ ಇಂಜಿನಿಯರ್ ಕೆಲಸಗಳನ್ನು ಮಾಡುತ್ತಾ ತಮ್ಮ ಪಾತ್ರಕ್ಕೂ ನ್ಯಾಯವನ್ನು ಒದಗಿಸಿ ಕೊಡುತ್ತಿದ್ದರು.

  ಹೆಸರು ಕೊಟ್ಟ ಪಾರು ಧಾರಾವಾಹಿ

  ಹೆಸರು ಕೊಟ್ಟ ಪಾರು ಧಾರಾವಾಹಿ

  'ಪುಟ್ಮಲ್ಲಿ' ಮೂಲಕ ಕ್ಯಾಮೆರಾ ಎದುರಿಗೆ ಗುರುತಿಸಿಕೊಳ್ಳಲು ಶುರು ಮಾಡಿದ ಶರತ್‌ಗೆ 'ಪಾರು' ಧಾರಾವಾಹಿ ಹೊಸ ತಿರುವನ್ನು ತಂದುಕೊಟ್ಟಿತು. 'ಪಾರು' ಧಾರಾವಾಹಿಯಲ್ಲಿ ಆದಿತ್ಯ ಎಂಬ ನಾಯಕನ ಪಾತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಮಿಂಚುತ್ತಿದ್ದಾರೆ. ಇನ್ನು ಶರತ್ ಪದ್ಮನಾಭ್ ಅವರು ಫಿಟ್ನೆಸ್ ಫ್ರೀಕ್ ಕೂಡ ಹೌದು. ರಕ್ಷಿತ್ ಶೆಟ್ಟಿಯವರಿಗೂ ಫಿಟ್ನೆಸ್ ಟ್ರೇನರ್ ಆಗಿರುವ ಶ್ರೀನಿವಾಸ್ ಬಳಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸ್ಯಾಂಡಲ್‌ವುಡ್ ನಲ್ಲಿ ಕಮಾಲ್ ಮಾಡುವ ಕನಸು ಕಾಣುತ್ತಿದ್ದು, ಬೆಳ್ಳಿ ಪರದೆ ಮೇಲೂ ಇಷ್ಟರಲ್ಲೇ ಕಾಣಿಸಿಕೊಳ್ಳಲಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶರತ್

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶರತ್

  ಶರತ್ ಪದ್ಮನಾಭ್ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶರತ್ ಅವರ ಮದುವೆ ಸಮಾರಂಭಕ್ಕೆ ಕಿರುತೆರೆ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಎಲ್ಲರೂ ಆಗಮಿಸಿ ಶುಭ ಕೋರಿದ್ದಾರೆ. ಗೆಳತಿ ದಿವ್ಯಶ್ರೀ ಎಂಬುವರನ್ನು ಪ್ರೀತಿಸಿ ಶರತ್ ಮದುವೆಯಾಗಿದ್ದಾರೆ. 'ಹಿಟ್ಲರ್ ಕಲ್ಯಾಣ', 'ಗಟ್ಟಿಮೇಳ', 'ಜೊತೆ ಜೊತೆಯಲಿ' ಧಾರಾವಾಹಿ ಸೇರಿದಂತೆ ಸೀರಿಯಲ್ ತಂಡದವರೆಲ್ಲಾ ಬಂದು ಶರತ್ ಅವರಿಗೆ ವಿಶ್ ಮಾಡಿದ್ದಾರೆ.

  ಪ್ರೀತಿಸುತ್ತಿದ್ದ ಶರತ್-ದಿವ್ಯ

  ಪ್ರೀತಿಸುತ್ತಿದ್ದ ಶರತ್-ದಿವ್ಯ

  ಇನ್ನು ಕಳೆದ ನವೆಂಬರ್ ತಿಂಗಳಿನಲ್ಲಿ ಶರತ್ ಹಾಗೂ ದಿವ್ಯಶ್ರೀ ಉಂಗುರ ಬದಲಾಯಿಸಿಕೊಂಡಿದ್ದರು. ದಿವ್ಯಶ್ರೀ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಕೆಲ ಸಮಯದಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಇಬ್ಬರ ಮನೆಯಲ್ಲೂ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ, ಕುಟುಂಬದ ಸಮ್ಮುಖದಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದೀಗ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶರತ್ ಹಾಗೂ ದಿವ್ಯಶ್ರೀ ಅವರಿಗೆ ಕಿರುತೆರೆ ಕಲಾವಿದರು ಶುಭ ಕೋರಿದ್ದಾರೆ.

  English summary
  Paaru serial hero Sharath padmanabh Wedding Photos. Sharath Gets Married To Girlfriend Divya shree. Know more.
  Monday, January 23, 2023, 19:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X