Sharth Padmnabha ; ಅನಿಮಾ ಚಿತ್ರಕ್ಕೆ ನಾಯಕನಾದ ನಟ ಶರತ್ ಪದ್ಮನಾಭ್..!

By ಪ್ರಿಯಾ ದೊರೆ

ಪಾರು ಧಾರಾವಾಹಿ ಮುಕ್ತಾಯಗೊಂಡಿದ್ದು, ವೀಕ್ಷಕರಿಗೆ ಬೇಸರವಾಗಿದೆ. ಆದರೆ, ಆದಿತ್ಯ ಅಲಿಯಾಸ್ ನಟ ಶರತ್ ಪದ್ಮನಾಭ್ ಅವರು ಹೊಸ ಸುದ್ದಿಯನ್ನು ಕೊಟ್ಟಿದ್ದಾರೆ. ಇಂಜಿನಿಯರ್ ಓದಿ ಐಟಿಯಲ್ಲಿ ಕೆಲಸ ಮಾಡುತ್ತಿದ್ದ ಶರತ್ ಪದ್ಮನಾಭ್ ಇರಲಾಗದೇ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಬಿಟ್ಟರು. ಸ್ಟಾರ್ ಸುವರ್ಣಾಗೆ ಎಂಟ್ರಿಕೊಟ್ಟು ಇವತ್ತು ಸ್ಟಾರ್ ಆಗಿದ್ದಾರೆ. ಶರತ್ ತಮ್ಮ ಐಟಿ ಸೆಕ್ಟರ್ ಬಿಟ್ಟು ದಿಲಿಪ್ ರಾಜ್ ಪ್ರೊಡಕ್ಷನ್ ಗೆ ಎಂಟ್ರಿ ಕೊಟ್ಟರು. ಬಳಿಕ ಪುಟ್ಮಲ್ಲಿ ಎಂಬ ಸೀರಿಯಲ್ ನಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡರು.

ಇಂಜಿನಿಯರ್ ಆಗಿ ನಟನಾದ ಶರತ್

ಶರತ್ ಅವರ ತಂದೆ ಹೆಸರು ಪದ್ಮನಾಭ್, ಇವರ ತಾಯಿಯ ಹೆಸರು ಗಾಯತ್ರಿ. ಇವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ . ಇವರು ಇಂಜಿನಿಯರ್ ಕಲಿತಿದ್ದಾರೆ. ಮೊದಲಿನಿಂದಲೂ ನಟನೆಯಲ್ಲಿ ಇಂಟ್ರೆಸ್ಟ್ ಹೊಂದಿದ್ದರು. ನಟನೆಯಲ್ಲಿ ಆಸಕ್ತಿ ಇತ್ತಾದರೂ ಇಂಜಿನಿಯರ್ ಕೆಲಸವನ್ನು ಸಂಪೂರ್ಣವಾಗಿ ಬಿಟ್ಟು ಶರತ್ ನಟನಾ ಕ್ಷೇತ್ರಕ್ಕೆ ಕಾಲಿಡಲಿಲ್ಲ. ಬದಲಿಗೆ ಗ್ರಾಫಿಕ್ ಡಿಸೈನರ್ ಆಗಿ ತನ್ನ ವೃತ್ತಿಯನ್ನು ಮುಂದುವರಿಸಿದ್ದರು. ಶೂಟಿಂಗ್ ಸೆಟ್ ಗಳಲ್ಲೂ ಕೆಲ ಇಂಜಿನಿಯರ್ ಕೆಲಸ ಮಾಡುತ್ತಾ ತಮ್ಮ ಪಾತ್ರಕ್ಕೂ ನ್ಯಾಯವನ್ನು ಒದಗಿಸಿ ಕೊಡುತ್ತಿದ್ದರು.

Paaru serial hero sharth padmanabh film

ಆದಿತ್ಯ ಆಗಿ ಮಿಂಚಿ ಈಗ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ

ಪುಟ್ಮಲ್ಲಿ ಮೂಲಕ ಕ್ಯಾಮರಾ ಎದುರು ಬಂದ ಶರತ್ ಗೆ ಪಾರು ಧಾರಾವಾಹಿ ಹೊಸ ತಿರುವನ್ನು ತಂದುಕೊಟ್ಟಿತು. ಪಾರು ಧಾರಾವಾಹಿಯಲ್ಲಿ ಆದಿತ್ಯ ಎಂಬ ನಾಯಕನ ಪಾತ್ರದಲ್ಲಿ ಮಿಂಚಿದರು. ರಕ್ಷಿತ್ ಶೆಟ್ಟಿಯವರಿಗೂ ಫಿಟ್ನೆಸ್ ಟ್ರೇನರ್ ಆಗಿರುವ ಶ್ರೀನಿವಾಸ್ ಬಳಿಯಲ್ಲಿ ಇವರು ತರಬೇತಿ ಪಡೆಯುತ್ತಿದ್ದಾರೆ. ಶರತ್ ಪದ್ಮನಾಭ್ ಅವರು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶರತ್ ಅವರ ಮದುವೆ ಸಮಾರಂಭಕ್ಕೆ ಕಿರುತೆರೆ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಎಲ್ಲರೂ ಆಗಮಿಸಿ ಶುಭ ಕೋರಿದರು. ಗೆಳತಿ ದಿವ್ಯಶ್ರೀ ಎಂಬುವರನ್ನು ಪ್ರೀತಿಸಿ ಶರತ್ ಮದುವೆಯಾಗಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಶರತ್

ಬೆಳ್ಳಿ ತೆರೆಯಲ್ಲೂ ಕಾಣಿಸಿಕೊಂಡ ಇವರು ನೀವು ಕರೆ ಮಾಡಿದ ಚಂದಾದಾರರು, ಜಸ್ಟ್ ಮಾತ್ ಮಾತಲ್ಲಿ ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡುವ ಕನಸು ಕಾಣುತ್ತಿದ್ದು, ಬೆಳ್ಳಿ ಪರದೆ ಮೇಲೂ ಇಷ್ಟರಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅನಿಮಾ ಸಿನಿಮಾದ ಚಿತ್ರೀಕರಣವೂ ಕೊನೆಯ ಹಂತದಲ್ಲಿದ್ದು, ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಶರತ್ ಗೆ ಜೋಡಿಯಾಗಿ ನಟಿ ಅನುಷಾ ಕೃಷ್ಣ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Paaru serial hero sharth padmanabh film

ಅನಿಮಾ ಚಿತ್ರಕ್ಕೆ ನಾಯಕನಾದ ಶರತ್

ಇನ್ನು ಸಿನಿಮಾದಲ್ಲಿ ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಎನ್ ಕೆ ರಾಜ್ ಛಾಯಾಗ್ರಹಣವಿದ್ದು, ವಿರಾಜ್ ವಿಶ್ವ ಅವರ ಸಂಭಾಷಣೆ ಇದೆ. ಚಿತ್ರಕ್ಕೆ ರೋನಾದ ಬಕ್ಕೇಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಉಜ್ವಲ್ ಚಂದ್ರ ಅವರ ಸಂಕಲನ 'ಅನಿಮಾ' ಚಿತ್ರಕ್ಕಿದೆ. ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ನಡಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ವರ್ಧನ್ ಎಂ ಎಚ್ ಆಕ್ಷನ್ ಕಟ್ ಹೇಳಿದ್ದಾರೆ. ಈ ವಿಚಾರವನ್ನು ಶರತ್ ಅವರು ಹೇಳಿಕೊಂಡಿದ್ದು, ಸ್ನೇಹಿತರು, ಗೆಳೆಯರು, ಸಹ ಕಲಾವಿದರೆಲ್ಲರು ಶುಭ ಕೋರಿದ್ದಾರೆ.

More from Filmibeat

English summary
Paaru serial sharath padmanabha new film anima as hero
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X