ತಂದೆಗೆ ಮನೆ ಖರೀದಿಸಲು ಹೊರಟ ಆದಿ-ಪಾರು: ಅಡ್ಡಿಯಾಗುತ್ತಾಳಾ ಜನನಿ
ಕಿರುತೆರೆಯ ಉತ್ತಮ ಧಾರವಾಹಿಗಳಲ್ಲಿ 'ಪಾರು' ಒಂದು. ಪಾರ್ವತಿ ಎಲ್ಲರ ಮೆಚ್ಚಿನ ಮನೆ ಮಗಳಾಗುತ್ತಿದ್ದಾಳೆ. ಆದರೆ ಜನನಿಗೆ ಮಾತ್ರ ಪಾರ್ವತಿ ವಿರುದ್ಧ ದ್ವೇಷ ಶುರುವಾಗಿದೆ. ಪಾರ್ವತಿ, ತನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾಳೆ, ಅರಸನ ಕೋಟೆಯ ಒಡತಿಯಾಗಲು ತಯಾರಿ ನಡೆಸುತ್ತಿದ್ದಾಳೆ. ತನ್ನನ್ನು ಕಡೆಗಣಿಸುತ್ತಿದ್ದಾಳೆ ಎಂದೆಲ್ಲ ಭಾವನೆ ಜನನಿಗೆ ಬಂದುಬಿಟ್ಟಿದೆ. ಯಾಮಿನಿ ಕುತಂತ್ರದಿಂದ ಜನನಿ ಮನದಲ್ಲಿ ಈಗಾಗಲೇ ಬಿರುಗಾಳಿ ಎದ್ದಿದೆ.
ಪಾರುಗೆ ಇದರ ಅರಿವೆ ಇಲ್ಲ. ಜನನಿಯನ್ನು ಪಾರು ಬಹಳ ಹಚ್ಚಿಕೊಂಡಿದ್ದಾಳೆ, ತನ್ನ ಸ್ವಂತ ತಂಗಿ ಎಂದು ಭಾವಿಸಿದ್ದಾಳೆ. ಆದರೆ ಜನನಿಗೆ ಪಾರುವನ್ನೇ ಅಪಾರ್ಥ ಮಾಡಿಕೊಂಡು ಕಿಡಿ ಕಾರುತ್ತಿದ್ದಾಳೆ. ಜನನಿಯ ಕಾಲು ನೋವಾದಾಗ ಪಾರ್ವತಿ ಕಾಲು ಒತ್ತಲೂ ಬರುತ್ತಾಳೆ ಈ ವೇಳೆ ಜನನಿ ಕಠೋರವಾಗಿ ಇದರ ಅಗತ್ಯ ನನಗಿಲ್ಲ ಎಂದು ಹೇಳುತ್ತಾಳೆ. ಜನನಿಯ ಮಾತು ಪಾರುಗೆ ಇರಿಸುಮುರಿಸು ತಂದಿದೆ.
ಯಾಮಿನಿ ಮಾತ್ರ ಇದನ್ನು ಮರೆಯಲ್ಲಿ ನೋಡುತ್ತಾ ವಿಕೃತ ಆನಂದ ಪಡುತ್ತಾಳೆ, ಇನ್ನು ಹನುಮಂತು ಹೊಸ ಮನೆ ಮಾಡುವ ಧಾವಂತದಲ್ಲಿದ್ದಾನೆ. ಎಷ್ಟು ದಿನ ಅಖಿಲಮ್ಮನ ಮನೆಯಲ್ಲಿ ಇರುವುದು, ಅಖಿಲಮ್ಮನ ಮನೆಯಲ್ಲಿ ಕೆಲಸ ಬಿಟ್ಟ ಬಳಿಕ ಅವರ ಮನೆಯಲ್ಲಿ ಇರೋದಾದರು ಹೇಗೆ ಎಂದೆಲ್ಲ ಯೋಚಿಸಿದ್ದಾನೆ. ಮನೆ ಕಟ್ಟಲು 60 ಲಕ್ಷ ಬೇಕಾಗಬಹುದು ಎಂದಾಗ ಏನು ಮಾಡಬೇಕು ಎಂದು ತೋಚದೇ ಹನುಮಂತು ಮೌನವಾಗಿಬಿಟ್ಟ, ಇತ್ತ ಈ ಮಾತುಗಳನ್ನು ಪಾರ್ವತಿ ಕೇಳಿಸಿಕೊಂಡಿದ್ದಾಳೆ.

ಅಪ್ಪನ ಬಳಿ 60 ಲಕ್ಷ ಹೇಗೆ ಇರುತ್ತೆ ಅವರು ನಮ್ಮನ್ನು ಎಷ್ಟೆಲ್ಲ ಕಷ್ಟಪಟ್ಟು ಬೆಳೆಸಿದ್ದಾರೆ. ಇದೀಗ ಮನೆ ಕಟ್ಟಲು 60 ಲಕ್ಷ ರೂ ಎಲ್ಲಿಂದ ತರುತ್ತಾರೆ ಎಂದಲ್ಲ ಯೋಚಿಸುತ್ತಾಳೆ, ಪಾರು ಈ ವಿಚಾರವನ್ನು ಆದಿ ಬಳಿ ಹೇಳಿಕೊಳ್ಳುತ್ತಾಳೆ, ನಾನು ಅಪ್ಪನ ಮಗಳು ಅನ್ನೊದಕ್ಕಿಂತ ನಿಮ್ಮ ಹೆಂಡತಿ ಎಂಬುವುದೇ ಹೆಚ್ಚು ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಆದರೆ ಇದೀಗ ಅಪ್ಪ ಹೊಸ ಮನೆ ಮಾಡಬೇಕು ಎಂದಿದ್ದಾರೆ, ಆದರೆ ಅವರ ಬಳಿ ದುಡ್ಡಿಲ್ಲ, ನಾನು ಇಷ್ಟು ದೊಡ್ಡ ಮನೆಯಲ್ಲಿ ಬಹಳ ಆರಾಮವಾಗಿದ್ದೇನೆ ಆದರೆ ನನ್ನ ಅಪ್ಪ, ತಮ್ಮ ಹೇಗಿದ್ದಾರೋ ಗೊತ್ತಾಗುತ್ತಿಲ್ಲ, ಮನೆ ಪರಿಸ್ಥಿತಿ ನನಗೆ ಚೆನ್ನಾಗಿ ತಿಳಿದಿದೆ ನಾವ್ಯಾಕೆ ಅವರಿಗೆ ಮನೆ ಕಟ್ಟಿ ಕೊಡಬಾರದು ಎಂದೆಲ್ಲ ವಿಚಾರವನ್ನು ಆದಿ ಬಳಿ ಹೇಳಿದಾಗ ಆದಿ ಸಂತೋಷವಾಗಿ ಒಪ್ಪಿಕೊಳ್ಳುತ್ತಾನೆ.
ವಿಚಾರ ತಿಳಿದ ಯಾಮಿನಿ, ಜನನಿ ಬಳಿ ಹೇಳುತ್ತಾಳೆ ಜನನಿ ಇದಕ್ಕೆ ಬಹಳ ಖುಷಿಯಾಗುತ್ತಾರೆ, ಆದರೆ ಯಾಮಿನಿ ಮಾತಿಗೆ ಸ್ವಲ್ಪ ಬೇಸರ , ಹಾಗೆಯೇ ಪಾರುವಿನ ಮೇಲೆ ಕೋಪವು ಬರುತ್ತದೆ, ಪಾರು-ಆದಿ, ಹನುಮಂತು ಮನೆಗೆ ಬರುತ್ತಾರೆ, ಮಾವನನ್ನು ಯಾವ ರೀತಿ ಮನೆ ಖರೀದಿಗೆ ಒಪ್ಪಿಸುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











