ಮಗುಗೆ ಡೈಲಾಗ್ ಹೇಳಿಕೊಡುವುದು ಡೈರೆಕ್ಟರ್ ಅಲ್ಲ 'ಪಾರು': ಮೋಕ್ಷಿತಾ ನಿಜವಾದ ತಾಯಿಯೇ ಆಗಿಬಿಟ್ಟಿದ್ದಾರೆ!
ಪಾರು ಧಾರಾವಾಹಿಯಲ್ಲಿ ಕಣ್ಣ ಮುಂದೆ ಇರುವುದು ತನ್ನದೇ ಮಗು ಎಂದು ಗೊತ್ತಿದ್ದರು, ಎಲ್ಲರಿಗೂ ಹೇಳುವುದಕ್ಕೆ ಆಗದಂತಹ ಸ್ಥಿತಿಯದು. ಪಾರು ತ್ಯಾಗಕ್ಕೆ ಜನನಿ ತಾಯಿಯಾಗಿದ್ದಾಳೆ. ಆದರೆ, ದೇವರು ಇಬ್ಬರು ತಾಯಂದಿರಿಗೂ ಅನ್ಯಾಯ ಮಾಡಿಲ್ಲ. ಹೆತ್ತಿರುವುದು ಪಾರುನೇ. ಮಗುಗೆ ಏನು ಬೇಕು, ಏನು ಬೇಡ ಎಂದು ನೋಡಿಕೊಳ್ಳುತ್ತಿರುವುದು ಕೂಡ ಪಾರುನೇ. ಜನನಿ ತಾನೇ ತಾಯಿ ಎಂಬ ನೆಮ್ಮದಿಯಲ್ಲಿ ಇದ್ದಾಳೆ.
ಮಗು ಈಗಾಗಲೇ ಶಾಲೆಗೆ ಹೋಗುವಂತೆ ಆಗಿದೆ. ಪ್ರೀತು ಊರಲ್ಲಿ ಇಲ್ಲ. ಜನನಿ ಆಫೀಸ್ ಕೆಲಸದಲ್ಲಿ ಬ್ಯುಸಿ. ಆದರೆ ಅಮ್ಮನ ಜೊತೆಗೆ ಹೆಚ್ಚು ಸಮಯ ಕಳೆಯಬೇಕು ಎಂದು ಬಯಸುತ್ತಾಳೆ. ಆ ನೋವಿಗೆಲ್ಲಾ ಸ್ಪಂದಿಸುವುದು ಪಾರು ಮತ್ತು ಆದಿ. ಪುಟಾಣಿಯ ನಿಜವಾದ ತಂದೆ-ತಾಯಿ.

ಪಾರು ಮಗಳಾಗಿ ಕಾಣಿಸಿಕೊಂಡ ಪ್ರನ್ವಿ
ಪಾರು ಧಾರಾವಾಹಿಯಲ್ಲಿ ಈಗ ಎಲ್ಲರ ಗಮನ ಮಗುವಿನ ಮೇಲೆ ಇದೆ. ಕಥೆ ಮಗುವಿನ ಮೇಲೆ ನಡೆಯುತ್ತಿದೆ. ಮಗುವಿನ ಬೆಳವಣಿಗೆ, ಮಗುವಿನೊಂದಿಗೆ ಪೋಷಕರ ಬಾಂಧವ್ಯ, ಪಾರು ಮತ್ತು ಮಗು, ಜನನಿ ಕೋಪ ಮತ್ತು ಮಗುವಿನ ಆಸೆ. ಹೀಗೆ ಮಗು ಹೆಚ್ಚು ಹೈಲೈಟ್ ಆಗಿದೆ. ಅರಸನ ಕೋಟೆಯ ವಾರಸುಧಾರೆಯಾಗಿ ಕಾಣಿಸಿಕೊಳ್ಳುತ್ತಿರುವುದು ಕಳೆದ ಸೀಸನ್‌ನ ಛೋಟಾ ಚಾಂಪಿಯನ್ ಮಗು ಪ್ರನ್ವಿ.
ಸೈನಿಕರ ಮಗಳು ಪ್ರನ್ವಿ
ಮಕ್ಕಳ ಪ್ರೋಗ್ರಾಂಗೆ ಡಿಮ್ಯಾಂಡ್ ಕೂಡ ಇತ್ತು. ಛೋಟಾ ಚಾಂಪಿಯನ್ ಮತ್ತೆ ಶುರು ಮಾಡಬೇಕೆಂಬ ಹುಮ್ಮಸ್ಸಿನಿಂದ ಜೀ ಕನ್ನಡ ಬಹಳ ವರ್ಷಗಳ ಬಳಿಕ ಮತ್ತೆ ಛೋಟಾ ಚಾಂಪಿಯನ್ ಶುರು ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಗುವೇ ಪ್ರನ್ವಿ. ಈ ಪುಟಾಣಿಗೆ ಇನ್ನು ಮೂರು ವರ್ಷವಷ್ಟೇ. ತಂದೆ ಆರ್ಮಿಯಲ್ಲಿ ಕೆಲಸ ಮಾಡುತ್ತಾರೆ. ಆರು ತಿಂಗಳಿಗೊಮ್ಮೆ ತಂದೆಯನ್ನು ನೋಡಬೇಕಿದ್ದ ಮಗು. ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾಳೆ. ಛೋಟಾ ಚಾಂಪಿಯನ್ ಸಮಯದಲ್ಲಿ ಅಪ್ಪನ ಧ್ವನಿ ಕೇಳಿ ಆಡಿದ ಮಾತು, ಆಕೆಯ ತಂದೆ ಬಂದೊಡನೆ ಓಡಿ ಹೋಗಿ ತಬ್ಬಿಕೊಂಡ ರೀತಿ ಎಲ್ಲವೂ ಪ್ರನ್ವಿ ಎಷ್ಟು ಮಿಸ್ ಮಾಡಿಕೊಳ್ಳುತ್ತಾಳೆ ಎಂಬುದನ್ನು ತೋರಿಸಿತ್ತು.
ಪ್ರನ್ವಿಗೆ ಡೈಲಾಗ್ ಕಲಿಸುವುದು ಡೈರೆಕ್ಟರ್ ಅಲ್ಲ
ಛೋಟಾ ಚಾಂಪಿಯನ್ ಮುಗಿದ ಮೇಲೆ ಪ್ರನ್ವಿ ಪಾರು ಧಾರಾವಾಹಿಗೆ ಬಂದಿದ್ದಾಳೆ. ಪಾರು ಜೊತೆಗೆ ಹೆಚ್ಚಿನ ಬಾಂಧವ್ಯ ಹೊಂದಿದ್ದಾಳೆ. ಧಾರಾವಾಹಿಯಲ್ಲಿ ಹೆಚ್ಚಿನ ಸಮಯ ಪಾರು ಜೊತೆಗೆ ಇರುವ ಕಾರಣ ಬಾಂಧವ್ಯವೂ ಜಾಸ್ತಿಯೇ ಬೆಸೆದಿದೆ. ಇನ್ನು ಡೈರೆಕ್ಟರ್ ಡೈಲಾಗ್ ಹೇಳಿಕೊಡುವುದಲ್ಲ, ಮಗುಗೆ ಪಾರುನೆ ಎಲ್ಲಾ ರೀತಿಯಾದ ಡೈಲಾಗ್ ಹೇಳಿಕೊಡುತ್ತಾರೆ. ಆ ವಿಡಿಯೋವೊಂದನ್ನು ಮೋಕ್ಷಿತಾ ಪೈ ಹಂಚಿಕೊಂಡಿದ್ದಾರೆ. ಡೈಲಾಗ್ ಹೇಳಿಕೊಡುವಾಗ, ಮೋಕ್ಷಿತಾ, ತಾಯಿಯೇ ಆಗಿ ಬಿಟ್ಟಿದ್ದಾರೆ.
ಪ್ರನ್ವಿಯ ನಟನೆಗೆ ಶಬ್ಬಾಶ್ ಗಿರಿ
ಪ್ರನ್ವಿಗೆ ಕೇವಲ ಮೂರು ವರ್ಷವೇ ಆದರೂ ಅವಳ ಅಭಿನಯಕ್ಕೆ ಎಲ್ಲರೂ ಸೋಲಬೇಕು ಅಂತ ಅಭಿನಯ ಮಾಡುತ್ತಾಳೆ. ಎಷ್ಟು ದೊಡ್ಡ ಡೈಲಾಗ್ ಅನ್ನೇ ನೀಡಿದರು. ನಾಲಿಗೆ ತೊದಲಿದರು ಅದನ್ನು ಮುದ್ದು ಮುದ್ದಾಗಿ ಹೇಳುತ್ತಾಳೆ. ಅಷ್ಟೇ ಅಲ್ಲ ಪ್ರನ್ವಿಗೆ ಎಷ್ಟೊಂದು ಪ್ರತಿಭೆ ಇದೆ ಎಂಬುದನ್ನು ಅವಳ ಸೋಷಿಯಲ್ ಮೀಡಿಯಾ ನೋಡಿದರೇನೆ ಗೊತ್ತಾಗುತ್ತದೆ. ಬೇರೆ ಬೇರೆ ದೇಶಗಳ ರಾಜಧಾನಿಯನ್ನು ಪಟ ಪಟ ಅಂತ, ಸ್ವಲ್ಪವೂ ತಪ್ಪೇ ಇಲ್ಲದೆ ಹೇಳುತ್ತಾಳೆ. ಪಟ ಪಟ ಅಂತ ಮಾತನಾಡುವ ಪ್ರನ್ವಿಗೆ ಪಾರು ಸೆಟ್‌ನಲ್ಲಿ ಇರುವವರೆಲ್ಲಾ ಫ್ರೆಂಡ್ಸ್ ಗಳೇ.


Click it and Unblock the Notifications











