ಆದಿಗೆ ಇನ್ನು ಅಮ್ಮನ ಮೇಲೆ ಅನುಮಾನ : ಮಗನ ಪ್ರೀತಿ ಕಂಡು ಖುಷಿಯಾಗುತ್ತಿದ್ದಾಳೆ ಅಖಿಲಾ..!

By ಎಸ್ ಸುಮಂತ್

ಒಂದು ಮಾತಿದೆ ಕೆಟ್ಟ ಮಕ್ಕಳು ಇದ್ದರು ಕೆಟ್ಟ ತಾಯಿ ಈ ಭೂಮಿ ಮೇಲೆ ಇರುವುದಕ್ಕೆ ಸಾಧ್ಯವಿಲ್ಲ ಎಂಬುದು. ಹಾಗೇ ಊರವರ ದೃಷ್ಟಿ ಮಕ್ಕಳ ಮೇಲೆ ಬಿದ್ದರು, ತಾಯಿ ದೃಷ್ಟಿ ಮಕ್ಕಳಿಗೆ ಆಗುವದೇ ಇಲ್ಲ ಎಂಬುದನ್ನು ಯಾರು ಮರೆಯುವ ಹಾಗೆ ಇಲ್ಲ. ಆದರೆ ಆದಿ ಇಲ್ಲಿ ಎಲ್ಲದನ್ನು ಮರೆಯುತ್ತಿದ್ದಾನೆ. ತನ್ನ ತಾಯಿಯ ದೃಷ್ಟಿಯೇ ನಮ್ಮಿಬ್ಬರಿಗೆ ಹೆಚ್ಚಾಗಿ ಬೀಳುತ್ತಿದೆ ಎಂದುಕೊಳ್ಳುತ್ತಿದ್ದಾನೆ. ಅದಕ್ಕೆ ಈಗ ದೃಷ್ಟಿ ತೆಗೆಸಿಕೊಳ್ಳುವುದಕ್ಕೂ ಹೋಗುತ್ತಿದ್ದಾನೆ.

ಅಖಿಲಾಂಡೇಶ್ವರಿ ಮೊದಲಿನಿಂದಲೂ ಪಾರುಳನ್ನು ಸ್ವೀಕರಿಸುತ್ತಾ ಇರಲಿಲ್ಲ. ಆದರೆ ನ್ಯಾಯ ಇದೆ ಎನಿಸಿದಾಗ, ಸರಿ ಎನಿಸಿದಾಗ ಅದನ್ನು ಅಖಿಲಾ ಹೊಗಳದೆ ಇರುವುದೂ ಇಲ್ಲ. ಅಂತ ಗುಣವಂತೆ ಅರಸನಕೋಟೆಯ ರಾಣಿ ಅಖಿಲಾಂಡೇಶ್ವರಿಯ ಗುಣ. ಮೊದಲಿನಿಂದಲೂ ಗೊತ್ತಿದ್ದರು ಆದಿ ಇದನ್ನು ನೆನಪು ಮಾಡಿಕೊಳ್ಳುವುದಕ್ಕೂ ಹೋಗುತ್ತಿಲ್ಲ. ಅರ್ಥೈಸಿಕೊಳ್ಳುವುದಕ್ಕೂ ಹೋಗುತ್ತಿಲ್ಲ.

ಚಿಕ್ಕಮ್ಮನ ಕೈಗೆ ಪೊರಕೆ ಕೊಟ್ಟ ಆದಿ

ಚಿಕ್ಕಮ್ಮನ ಕೈಗೆ ಪೊರಕೆ ಕೊಟ್ಟ ಆದಿ

ಅಖಿಲಾ ಮತ್ತು ದಾಮಿನಿ ಇಬ್ಬರು ಪೇಪರ್ ಓದುತ್ತಾ, ಕಾಫಿ ಕುಡಿಯುತ್ತಾ ಇರುವಾಗ ಅಲ್ಲಿಗೆ ಬಂದ ಆದಿಗೆ ಅಮ್ಮನ ನಡವಳಿಕೆ ನೆನಪಾಗಿದೆ. ತಕ್ಷಣ ಅಲ್ಲಿಂದ ಹೋದವ ಪೊರಕೆ ಹಿಡಿದು ಬಂದಿದ್ದಾನೆ. ಅಖಿಲಾ ಅದನ್ನೇಲ್ಲಾ ನೋಡುತ್ತಾ ಏನಿದು ಅಂತ ಯೋಚನ ಮಾಡುತ್ತಿದ್ದಾಳೆ. ಪೊರಕೆ ತಂದವನೆ ಸೀದಾ ತನ್ನ ಚಿಕ್ಕಮ್ಮನ ಕೈನಲ್ಲಿ ಪೊರಕೆ ಇಟ್ಟಿದ್ದಾನೆ. ನಾನು ಕಸ ಗುಡಿಸಬೇಕೆನಪ್ಪಾ ಎಂದು ದಾಮಿನಿ ಕೇಳಿದಾಗ, ಇಲ್ಲ ನನ್ನ ಮತ್ತು ನನ್ನ ಹೆಂಡತಿಯ ದೃಷ್ಟಿ ತೆಗಿ ಎಂದಿದ್ದಾನೆ.

ಮಗ-ಸೊಸೆಗೆ ದೃಷ್ಟಿ ತೆಗೆದ ದಾಮಿನಿ

ಮಗ-ಸೊಸೆಗೆ ದೃಷ್ಟಿ ತೆಗೆದ ದಾಮಿನಿ

ಅದೇ ಸಮಯಕ್ಕೆ ಪಾರುಳನ್ನು ಕರೆದುಕೊಂಡು ಬಂದ ಆದಿ, ಈಗ ದೃಷ್ಟಿ ತೆಗೆಯಿರಿ ಎಂದಿದ್ದಾನೆ. ಆದಿ ಆ ಕ್ಷಣದಲ್ಲಿ ಆಡುತ್ತಿದ್ದ ಪ್ರತಿಯೊಂದು ಮಾತಿನಲ್ಲೂ ಅಖಿಲಾಂಡೇಶ್ವರಿ ದೃಷ್ಟಿ ಬಿದ್ದಿದೆ ಎಂಬುದನ್ನು ಒತ್ತಿ ಒತ್ತಿ ಹೇಳಿದಂತೆ ಇತ್ತು. ಆ ಕಡೆ ದಾಮಿನಿ ನಾಯಿ ಕಣ್ಣು, ನರಿ ಕಣ್ಣು ಎನ್ನುತ್ತಿದ್ದರೆ. ಇತ್ತ ಆದಿ ಆಗದವರೆ ಇರುವವರು, ಉರಿದುಕೊಳ್ಳುವವರ ದೃಷ್ಟಿ ಕೂಡ ನಮ್ಮಿಬ್ಬರ ಮೇಲೆ ತಾಕದಿರಲಿ ಎಂದು ದೃಷ್ಟಿ ತೆಗೆಯಿರಿ ಎಂದಿದ್ದಾನೆ.

ಮಗನ ಪ್ರೀತಿಗೆ ಖುಷಿ ಪಟ್ಟ ಅಖಿಲಾ

ಮಗನ ಪ್ರೀತಿಗೆ ಖುಷಿ ಪಟ್ಟ ಅಖಿಲಾ

ಅಖಿಲಾಳ ತಳಮಳ ಆದಿಗೆ ಅರ್ಥವಾಗುತ್ತಿಲ್ಲ. ಮೊದಲೆಲ್ಲಾ ಪಾರು ಕಂಡರೆ ದ್ವೇಷಕಾರುತ್ತಿದ್ದ ಅಖಿಲಾ ಈಗ ತೋರುತ್ತಿರುವ ಪ್ರೀತಿಯನ್ನು ಆದಿಯಿಂದ ನಂಬುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಅನುಮಾನದ ನೋಟದಿಂದಲೇ ನೋಡುತ್ತಿದ್ದಾನೆ. ದೃಷ್ಟಿ ತೆಗೆಸಿಕೊಳ್ಳಲು ಹೆಂಡತಿಯನ್ನು ಕರೆದುಕೊಂಡು ಬಂದಾಗಲೂ ಅಖಿಲಾ ಮನದಲ್ಲಿ ನಗು ಇತ್ತು. ಇನ್ನು ಕೆಟ್ಟವರ ದೃಷ್ಟಿಯೆಲ್ಲಾ ಹೋಗುವಂತೆ ತೆಗೆಯಿರಿ ಎಂದಾಗಲೂ ಅಖಿಲಾ ಮನಸ್ಸಾರೆ ಸಂತಸಪಟ್ಟಿದ್ದಾಳೆ. ಮಗನ ಪ್ರೀತಿಗೆ ಸೊಸೆಯ ಮುಗ್ಧತೆಗೆ ಮುಖದ ಮೇಲೆಯೇ ನಸು ನಗು ಬೀರಿದ್ದಾಳೆ.

ಆದಿಗೆ ತಪ್ಪಿನ ಅರಿವಾಗುವುದು ಯಾವಾಗ

ಆದಿಗೆ ತಪ್ಪಿನ ಅರಿವಾಗುವುದು ಯಾವಾಗ

ಅಖಿಲಾ ಗುಣ ಏನು ಎಂಬುದು ಆದಿಗೆ ಗೊತ್ತಿದೆ. ಆದರೂ ಸತ್ಯವನ್ನು ನಂಬುತ್ತಿಲ್ಲ. ಆದಿಗೆ ಎರಡನೇ ಮದುವೆಯಾಗುತ್ತೆ ಎಂದು ಗುರೂಜಿ ಹೇಳಿದಾಗಿನಿಂದ ಅಖಿಲಾಗೆ ಪಾರುದೇ ಟೆನ್ಶನ್. ಅದಕ್ಕಾಗಿಯೇ ಪಾರುಳ ಮೇಲೆ ತುಂಬಾ ಪ್ರೀತಿ ತೋರಿಸುತ್ತಿದ್ದಾಳೆ. ಆದರೆ ಆ ಪ್ರೀತಿಯನ್ನು ಆದಿ ಫೇಕ್ ಎಂದು ತಿಳಿಯುತ್ತಿದ್ದಾನೆ. ನಮ್ಮಿಬ್ಬರನ್ನು ದೂರ ಮಾಡುವುದಕ್ಕೆ ಹೀಗೆಲ್ಲಾ ಅಮ್ಮ ಮಾಡುತ್ತಿದ್ದಾರೆ ಎಂದೇ ನಂಬಿದ್ದಾನೆ. ಎರಡನೇ ಮದುವೆ ವಿಚಾರ ಕೇಳಿಸಿದ್ದರು ಇನ್ನು ನಂಬುವುದಕ್ಕೆ ರೆಡಿ ಇಲ್ಲ.

More from Filmibeat

English summary
Paaru Serial September 20th, Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X