twitter
    For Quick Alerts
    ALLOW NOTIFICATIONS  
    For Daily Alerts

    ಪಾರು: ಅರಸನಕೋಟೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಹೇಗಿತ್ತು?

    By ಎಸ್ ಸುಮಂತ್
    |

    ವರಮಹಾಲಕ್ಷ್ಮೀ ಹಬ್ಬ ಆಷಾಢ ಮುಗಿದ ಮೇಲೆ ಬರೆದ ವ ಮೊದಲ ಹಬ್ಬ. ಈ ಹಬ್ಬಕ್ಕಾಗಿ ಮಹಿಳಾ ಮಣಿಯರು ಕಾದು ಕುಳಿತಿರುತ್ತಾರೆ. ತಿಂಗಳಿನಿಂದಲೇ ತಯಾರಿಯೂ ಆರಂಭವಾಗಿರುತ್ತದೆ. ಇನ್ನು ಅರಸನಕೋಟೆಯಲ್ಲಿ ಕೇಳಬೇಕಾ. ಇಬ್ಬರು ಸೊಸೆಯಂದಿರು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಅಖಿಲಾಂಡೇಶ್ವರಿಗೆ ಸೊಸೆಯಂದಿರ ಗುಣ ನೋಡಿ ತುಂಬಾನೇ ಖುಷಿಯಾಗಿದೆ.

    ಸದ್ಯ ಅರಸನಕೋಟೆಯ ಸಮಸ್ಯೆಗಳೆಲ್ಲಾ ಕರಗಿ ಹೋಗಿದೆ. ಶತ್ರುಗಳ ಕಾಟ ಈಗ ನಾಶವಾಗಿದೆ. ಹಬ್ಬದ ಸಮಯದಲ್ಲಿಯೇ ಶತ್ರುಗಳ ಹುಟ್ಟಡಗಿಸಿದ್ದಾರೆ. ಹೀಗಾಗಿ ಹಬ್ಬಕ್ಕೆ ಯಾವುದೇ ರೀತಿಯ ಅಡತಡೆಗಳಿಲ್ಲ. ಮನೆಯವರೆಲ್ಲಾ ಸೇರಿ ಹಬ್ಬ ಮಾಡಿದ್ದಾರೆ. ಪ್ರತಿ ವರ್ಷ ಅಖಿಲಾಂಡೇಶ್ವರಿ ಮಾಡುತ್ತಿದ್ದ ವರಮಹಾಲಕ್ಷ್ಮೀಯನ್ನು ಈ ಬಾರಿ ಇಬ್ಬರು ಸೊಸೆಯಂದಿರು ಮಾಡಿದ್ದಾರೆ.

    ಪಾರು: ಅತ್ತೆಯ ಮುಂದೇನೆ ರಾಣಾನ ಕಪಾಳಕ್ಕೆ ಬಾರಿಸಿದ ಪಾರು..!ಪಾರು: ಅತ್ತೆಯ ಮುಂದೇನೆ ರಾಣಾನ ಕಪಾಳಕ್ಕೆ ಬಾರಿಸಿದ ಪಾರು..!

    ಅರಸನಕೋಟೆಯಲ್ಲಿ ವರಮಹಾಲಕ್ಷ್ಮೀ ಸಂಭ್ರಮ

    ಅರಸನಕೋಟೆಯಲ್ಲಿ ವರಮಹಾಲಕ್ಷ್ಮೀ ಸಂಭ್ರಮ

    ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳಲ್ಲಿ ಎಲ್ಲಾ ಹಬ್ಬವನ್ನು ಸಾಕಷ್ಟು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಅಷ್ಟೆ ಅಲ್ಲ ಆ ಹಬ್ಬದಲ್ಲಿ ಬರುವ ವ್ರತಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಅದರಂತೆ ಅರಸನಕೋಟೆ ಮನೆಯಲ್ಲೂ ವರಮಹಾಲಕ್ಷ್ಮೀ ಹಬ್ಬವನ್ನು ಮಾಡಿದ್ದಾರೆ. ಅರಸನಕೋಟೆಯ ಮನೆಯನ್ನೆಲ್ಲಾ ಅಲಂಕಾರ ಮಾಡಿದ್ದಾರೆ. ಮೊದಲ ಸೊಸೆಯಾಗಿ ಪಾರು ಪೂಜೆ ಪುನಸ್ಕಾರದ ಜವಾಬ್ದಾರಿ ಹೊತ್ತು, ಮುಂದೆ ನಿಂತು ನೆರವೇರಿಸಿದ್ದಾಳೆ.

    ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಟಾರ್ ಸುವರ್ಣ ಸ್ಪೆಷಲ್ ಧಮಾಕಾ!ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಟಾರ್ ಸುವರ್ಣ ಸ್ಪೆಷಲ್ ಧಮಾಕಾ!

    ಪೂಜೆ ನೆರವೇರಿಸಿದ ಜನನಿ-ಪಾರು

    ಪೂಜೆ ನೆರವೇರಿಸಿದ ಜನನಿ-ಪಾರು

    ಅರಸನಕೋಟೆಯಲ್ಲಿ ಇಬ್ಬರು ಸೊಸೆಯಂದಿರಿದ್ದಾರೆ. ಮೊದಲ ಸೊಸೆ ಪಾರು ಎರಡನೇ ಸೊಸೆ ಜನನಿ. ಪಾರುನೇ ಮೊದಲ ಸೊಸೆಯಾಗಿ ಬರಬೇಕೆಂದು ಜನನಿ ಕೂಡ ಸಾಕಷ್ಟು ಶ್ರಮ ಹಾಕಿದ್ದಾಳೆ. ಆದರೆ ಮನೆಯಲ್ಲಿರುವ ಹಿತ ಶತ್ರು ದಾಮಿನಿಯಿಂದಾಗಿ ಜನನಿ ಮತ್ತು ಪಾರು ನಡುವೆ ಭಿನ್ನಾಭಿಪ್ರಾಯ ಮೂಡುವಂತೆ ಆಗಿತ್ತು. ಆದರೆ ವರಮಹಾಲಕ್ಷ್ಮೀಗೂ ಮುನ್ನ ಎಲ್ಲವೂ ಸರಿಯಾಗಿದೆ. ಶತ್ರುಗಳ ಕಾಟದಿಂದ ತಪ್ಪಿಸಿಕೊಂಡು ದೂರ ಬಂದಾಗಿದೆ. ಇನ್ನೊಮ್ಮೆ ಶತ್ರುಗಳು ಅರಸನಕೋಟೆಯ ಹೆಸರೆತ್ತದ ಹಾಗೇ ಬಿಸಿ ಮುಟ್ಟಿಸಿದ್ದಾರೆ. ಇದೆಲ್ಲಾ ಕತ್ತಲು ಕಳೆದು ಅರಸನಕೋಟೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷ ಮನೆಯ ಹಿರಿಯರಾಗಿ, ಯಜಮಾನಿಯಾಗಿ ಅಖಿಲಾಂಡೇಶ್ವರಿಯೇ ಪೂಜೆ ಮಾಡುತ್ತಿದ್ದರು. ಆದರೆ ಇದೀಗ ಇಬ್ಬರು ಸೊಸೆಯಂದಿರು ಜವಾಬ್ದಾರಿ ತೆಗೆದುಕೊಂಡು ಪೂಜೆ ಮಾಡಿದ್ದಾರೆ.

    ಹಬ್ಬಕ್ಕೆ ಆದಿಯಿಂದ ಉಡುಗೊರೆ

    ಹಬ್ಬಕ್ಕೆ ಆದಿಯಿಂದ ಉಡುಗೊರೆ

    ಹಬ್ಬ ಎಂದ ಮೇಲೆ ಹೊಸ ಬಟ್ಟೆ ತರುವುದು, ತೆಗೆದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಉಡುಗೊರೆ ತಂದರೆ ಇನ್ನಿಲ್ಲದ ಖುಷಿ. ಮನೆಯಲ್ಲಿ ಹಬ್ಬದ ಸಂಭ್ರಮವಿರುವಾಗ, ಆದಿ ಎಲ್ಲರಿಗೂ ಉಡುಗೊರೆ ತಂದಿದ್ದಾನೆ. ಹೊಸ ಬಟ್ಟೆಯನ್ನು ಕೊಟ್ಟು ಎಲ್ಲರ ಮುಖದಲ್ಲೂ ನಗು ಅರಳಿಸಿದ್ದಾನೆ. ಹಬ್ಬದ ಖುಷಿಯನ್ನು ದುಪ್ಪಟ್ಟು ಮಾಡಿದ್ದಾನೆ. ಈ ಹಬ್ಬದಿಂದ ಆದಿಗೆ ಹೊಸತನ ಬರಲಿದೆ.

    ಆದಿಗೆ ಸಿಕ್ತು ದೇವರ ಆಶೀರ್ವಾದ

    ಆದಿ ಮತ್ತು ಅಖಿಲಾಂಡೇಶ್ವರಿ ಮಾತು ಬಿಟ್ಟು ಬಹಳ ತಿಂಗಳೇ ಕಳೆದಿದೆ. ಆದಿ ಅದ್ಯಾವಾಗ ಪಾರುಳನ್ನು ಮದುವೆಯಾದನೋ ಅಂದಿನಿಂದ ಅವರಿಬ್ಬರ ನಡುವಿನ ಮಾತುಕತೆ ಮುಗಿದೇ ಹೋಯಿತು. ಮಗನನ್ನು ವಿಪರೀತ ದ್ವೇಷಿಸುವುದಕ್ಕೆ ಶುರು ಮಾಡಿದ್ಧಳು. ಆದಿಗೆ ತಾಯಿ ಪ್ರೀತಿ ಬೇಕು ಎಂದಾಗಲೂ ಕೊಡುವುದಕ್ಕೆ ಸಿದ್ಧವಿರಲಿಲ್ಲ. ಆದಿ ಸದಾ ಕಾಲ ತಾಯಿ‌ ಪ್ರೀತಿಗಾಗಿ ಹಾತೊರೆಯುತ್ತಿದ್ದ. ಇಷ್ಟು ದಿನ ಸಿಗದೆ ಹೋದ ಪ್ರೀತಿ ವರಮಹಾಲಕ್ಷ್ಮೀ ಹಬ್ಬದಂದು ಸಿಕ್ಕಿದೆ. ಎಲ್ಲರಿಗೂ ಬಟ್ಟೆ ಕೊಟ್ಟಂತೆ ತನ್ನ ತಾಯಿಗೂ ಬಟ್ಟೆ ಲೊಟ್ಟು ಆಶೀರ್ವಾದ ಪಡೆದಿದ್ದಾನೆ. ಅಖಿಲಾಂಡೇಶ್ವರಿ ಈ ಮೊದಲು ಆಶೀರ್ವಾದ ಮಾಡುತ್ತಿದ್ಧಂತೆ ಮಾಡಿದ್ದಾಳೆ. ಇದು ಆದಿಗೆ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

    English summary
    Paaru Serial Varamahalakshmi Special On August 5th Episode Written Update. Here is the details.
    Friday, August 5, 2022, 23:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X