Paaru Serial: ಪ್ರೇಕ್ಷಕರಿಗೆ ರಸದೌತಣ ನೀಡುತ್ತಿರುವ ಪಾರು ಧಾರವಾಹಿ!
ಪಾರು ಸೀರಿಯಲ್ ಕಥೆಯಲ್ಲಿ ಈಗ ಹೊಸ ಹೊಸ ಟ್ವಿಸ್ಟ್‌ಗಳನ್ನು ನೀಡಲಾಗುತ್ತಿದೆ. ಆ ಮೂಲಕ ಪ್ರೇಕ್ಷಕರಿಗೆ ಈ ಧಾರಾವಾಹಿ ಇನ್ನಷ್ಟೂ ಅಚ್ಚುಮೆಚ್ಚು ಆಗುತ್ತಿದೆ. ಕನ್ನಡ ಕಿರುತೆರೆಯ ಎಲ್ಲ ಸೀರಿಯಲ್‌ಗಳು ಬಗೆಬಗೆಯ ಪ್ರಯತ್ನಗಳನ್ನು ಮಾಡುತ್ತಿದೆ. ಸಿನಿಮಾದ ಗುಣಮಟ್ಟದಲ್ಲೇ ಧಾರವಾಹಿಗಳು ಮೂಡಿಬರುತ್ತಿದೆ. ಜೀ ಕನ್ನಡ ವಾಹಿನಿಯ ಪಾರು ಧಾರವಾಹಿ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿ ಆಗುತ್ತಿದೆ, ಟಿಆರ್‌ಪಿ ರೇಸ್‌ನಲ್ಲಿ ಈ ಧಾರವಾಹಿ ಭರ್ಜರಿ ಪೈಪೋಟಿ ನೀಡುತ್ತಿದೆ.
Recommended Video

ಸಿನಿಮಾದಲ್ಲಿ ಫೇಮಸ್ ಆದ ವಿನಯ್ ಪ್ರಸಾದ್, ಎಸ್. ನಾರಾಯಣ್ ಮುಂತಾದ ಪ್ರತಿಭಾವಂತ ಹಿರಿಯ ಕಲಾವಿದರ ನಟನೆಯಿಂದಾಗಿ ಪಾರು ಧಾರವಾಹಿಯ ಹಿರಿಮೆ ಹೆಚ್ಚಿಸಿದೆ. ನಟ ಎಸ್. ನಾರಾಯಣ್ ಅವರು ಈ ಧಾರವಾಹಿಯಲ್ಲಿ ಒಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಆದರೆ ಎಲ್ಲ ಎಪಿಸೋಡ್‌ನಲ್ಲಿಯೂ ಅವರು ಕಾಣಿಸಿಕೊಂಡಿಲ್ಲ. ಕೆಲವು ಎಪಿಸೋಡ್‌ಗಳಿಗಷ್ಟೆ ಅವರು ಬರುತ್ತಾರೆ.
ಕಿರುತೆರೆ ಪ್ರೇಕ್ಷಕರು ಆ ಪಾತ್ರವನ್ನು ಹಲವು ವಾರಗಳ ಕಾಲ ಮಿಸ್ ಮಾಡಿಕೊಂಡಿದ್ದರು. ಆದರೆ ಇತ್ತೀಚಿನ ಯುಗಾದಿ ಎಪಿಸೋಡ್‌ನಲ್ಲಿ ಎಸ್. ನಾರಾಯಣ್ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅವರ ಆಗಮನದಿಂದ ಅಭಿಮಾನಿಗಳಿಗೆ ಹರುಷ ಹೆಚ್ಚಿದೆ ಹಾಗೂ ಅವರ ಪಾತ್ರವು ಕಥೆಯನ್ನು ಬೇರೆ ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ ಎಂಬ ನಿರೀಕ್ಷೆಯೂ ಇದೆ. ಎಸ್ ನಾರಾಯಣ್ ತನ್ನ ತಂಗಿಯ ಮನೆ, ಮನಸ್ಸನ್ನು ಸರಿಪಡಡಿಸುವಲ್ಲಿ ಸಫಲರಾಗಿದ್ದಾರೆ. ಅಖಿಲಾಂಡೇಶ್ವರಿಯ ಮಗನೇ ಮನೆಯ ಕೆಲಸದ ಆಳವನ್ನೇ ಮದುವೆಯಾದಾಗ ಆಕೆ ಬಹಳ ಆಕ್ರೋಶಗೊಂಡಿದ್ದಳು, ಆಕೆಯ ನೋವನ್ನು ಎಸ್ ನಾರಾಯಣ್ ಸರಿಪಡಿಸಿದ್ದಾರೆ.

ಸೊಸೆಯಿಂದಲೇ ಅರಸನ ಕೋಟೆಯ ದೀಪ ಬೆಳಗುವುದು, ಹಾಗೆಯೇ ಇನ್ನು ಮುಂದೆ ಸೊಸೆಯೇ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡು ಇಡೀ ಅರಸನ ಕೋಟೆಯನ್ನು ಮುನ್ನಡೆಸಿಕೊಂಡು ಹೋಗಬೇಕು ಎನ್ನುವ ಬಯಕೆ ಅಖಿಲಾಂಡೇಶ್ವರಿಗೆ. ಆ ಬಯಕೆಯನ್ನು ಮಗ ಆದಿತ್ಯ ಹುಸಿ ಮಾಡಿದಾಗ ಎಲ್ಲಿಲ್ಲದ ಕೋಪ, ಆವೇಶ ಎಲ್ಲವೂ ಒಂದು ಗೂಡಿ ಮಗ ಸೊಸೆ ಬಳಿ ಮಾತೆ ಬಿಟ್ಟಿದ್ದರು ಅಖಿಲಾಂಡೇಶ್ವರಿ ಆದರೆ ಯುಗಾದಿ ಹಬ್ಬದಂದು ವೀರಣ್ಣನ ಮನೆಗೆ ತೆರಳಿದ ಸಂದರ್ಭ, ಅತ್ತೆ ಸೊಸೆಯನ್ನು ಒಂದುಗೂಡಿಸುವ ಎಲ್ಲಾ ಪ್ರಯತ್ನವನ್ನು ವೀರಣ್ಣ ಪ್ರೀತು ಮಾಡುತ್ತಿದ್ದರು. ಆದರೂ ಅಖಿಲಾಂಡೇಶ್ವರಿ ತನ್ನ ಮೊಂಡು ಹಠ ಬಿಡದೆ ಪಾರು ಬಳಿ ಎಷ್ಟು ಮಾತು ಆಡಬೇಕೋ ಅಷ್ಟೆ ಮಾತು ಆಡಿ ಸುಮ್ಮನಾಗುತ್ತಿದ್ದರು. ಇತ್ತ ಪಾರುಗೆ ಅಖಿಲಮ್ಮನನ್ನು ಕಂಡರೆ ನಡುಕ. ಅಖಿಲಾಂಡೇಶ್ವರಿ ಏನು ತಪ್ಪು ಮಾಡಿದರು ವೀರಯ್ಯ ಅದನ್ನು ತಿದ್ದುವ ಕೆಲಸ ಮಾಡುತ್ತಲೇ ಇದ್ದಾರೆ.
ಇದೀಗ ಕೂಡ ಅಖಿಲಾಂಡೇಶ್ವರಿಗೆ ವೀರಣ್ಣ ಬುದ್ಧಿ ಮಾತುಗಳನ್ನು ಹೇಳಿದಾಗ ಕೆಲವೊಂದು ಬಾರಿ ಒಪ್ಪದ ಅಖಿಲಾಂಡೇಶ್ವರಿ ಇದೀಗ ವಿರಣ್ಣ ಹೇಳಿದ ಮಾತು ಮನಸ್ಸಿಗೆ ತಾಕಿದೆ. ಅದೆಷ್ಟೇ ಕೋಪವಿದ್ದರು ಮಗ ಮಾಡಿರುವುದು ಸರಿಯೋ ತಪ್ಪೊ ಗೊತ್ತಿಲ್ಲ. ಆದರೆ ಅದನ್ನ ತಿದ್ದಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ತಾಯಿ. ಹಾಗೆಯೇ ಮನೆಯ ಮಗಳಾಗಿ ಮಾಡುವ ಕರ್ತವ್ಯ ಇದಾಗಿದೆ. ಇದೀಗ ಪಾರುವನ್ನು ಕರೆದು ಆಫೀಸ್‌ಗೆ ಬರುವಂತೆ ಅಖಿಲಾಂಡೇಶ್ವರಿ ಹೇಳಿದರು. ಬಳಿಕ ಮರು ದಿವಸ ಮೀಟಿಂಗ್ ಕರೆದು ಸಮಾಲೋಚನೆ ನಡೆಸಿದ ಬಳಿಕ ಅಖಿಲಾಂಡೇಶ್ವರಿಯನ್ನು ಪಾರು ಕರೆದು ಪಾರುವನ್ನು ಎಮ್‌ಡಿ ಸ್ಥಾನಕ್ಕೆ ಕೂರಿಸುತ್ತಾರೆ ಅಖಿಲಾಂಡೇಶ್ವರಿ. ಇದಿರಂದ ಎಲ್ಲರಿಗೂ ಅಶ್ಚರ್ಯಕ್ಕೆ ಒಳಗಾಗಿದ್ದಾರೆ. ಅಖಿಲಾಂಡೇಶ್ವರಿಯ ಈ ನಡೆ ಎಲ್ಲರಲ್ಲಿ ಬಹಳ ಕುತೂಹಲ ಮೂಡಿಸಿದೆ. ಪಾರು ಈ ಜವ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ? ಎಂಬುವುದನ್ನು ಕಾದು ಕೋಡಬೇಕಾಗಿದೆ


Click it and Unblock the Notifications