ಅರುಂಧತಿನ ಸುಮ್ಮನೆ ಬಿಡುತ್ತಾಳಾ ಅಖಿಲಾಂಡೇಶ್ವರಿ: ಮುಂದೆ ಪಾರು ಗತಿ?

By ಪೂರ್ವ

'ಪಾರು' ಧಾರಾವಾಹಿ ದಿನದಿಂದ ದಿನಕ್ಕೆ ಉತ್ತಮ ತಿರುವುಗಳನ್ನು ಪಡೆಯುತ್ತಿದೆ. ಪಾರು ಮುಗ್ಧತೆಗೆ ಜನ ಮಾರು ಹೋಗುತ್ತಿದ್ದಾರೆ. ಅದೆಷ್ಟೂ ಕಷ್ಟ ಬಂದರು ಪಾರು ಅದನ್ನೆಲ್ಲವನ್ನು ಮೆಟ್ಟಿನಿಂತು ಸವಾಲಾಗಿ ಸ್ವೀಕರಿಸಿ ಎಲ್ಲದುದನ್ನು ಎದುರಿಸುತ್ತಾಳೆ. ಕಷ್ಟ ಬಂದಾಗ ಜಗ್ಗದೇ ಸುಖ ಬಂದಾಗ ಹಿಗ್ಗದೇ ಎಲ್ಲವನ್ನು ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ ಪಾರು.

ಇದೀಗ ಯಾಮಿನಿ ಮಾತನ್ನು ಕೇಳುತ್ತಿರುವ ಜನನಿಗೆ ಪಾರು ಮಾಡುತ್ತಿರುವುದೆಲ್ಲ ಕೆಟ್ಟದಾಗಿ ಕಾಣಿಸೋಕೆ ಶುರುವಾಗಿದೆ. ಆದರೆ ಇದರ ಬಗ್ಗೆ ಪಾರುಗೆ ತಿಳಿಯೋದೇ ಇಲ್ಲ. ಪಾರು ನಡವಳಿಕೆ ಇತ್ತೀಚಿನ ದಿನಗಳಲ್ಲಿ ಜನನಿಗೂ ಇರಿಸು ಮುರಿಸು ಕಂಡು ಬಂದಿದೆ. ಇದೀಗ ಅರುಂಧತಿಯ ಕುತಂತ್ರಕ್ಕೆ ಪಾರು ಬಲಿಯಾಗಿದ್ದಾಳೆ.

ಪಾರು ಒಳ್ಳೆತನಕ್ಕೆ ಬೆಲೆ ಇಲ್ಲದಾಗಿದೆ. ಪಾರು ಅನಾಥಶ್ರಮದವರಿಗೆ ಒಳ್ಳೆಯದಾಗುತ್ತದೆ. ತನ್ನಿಂದ ಏನಾದರೂ ಅವರಿಗೆ ಸಹಾಯವಾಗುತ್ತದೆ ಎಂದು ಫೋಟೊಶೂಟ್‌ನಲ್ಲಿ ಪಾಲ್ಗೊಳ್ಳುತ್ತಾಳೆ. ಫೋಟೊವನ್ನು ತೆಗೆಸಿ ಮನೆಗೆ ಬರುತ್ತಾಳೆ. ಆದರೆ ಅಂದು ತೆಗೆಸಿದ ಫೋಟೊ ಇದೀಗ ಪೇಪರ್‌ನಲ್ಲಿ ಬಂದಿದೆ. ಅಖಿಲಾಂಡೇಶ್ವರಿ ಪೇಪರ್ ನೋಡಿ ಮೊದಲ ಅರ್ಧ ಮಾತ್ರ ಓದುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಪಾರು ಬರುತ್ತಾಳೆ ಅವಳನ್ನು ಕಂಡ ಅಖಿಲಾಂಡೇಶ್ವರಿ ಟೀ ಮಾಡಿಕೊಂಡು ಕೊಡು ಎಂದು ಹೇಳುತ್ತಾಳೆ. ಅದಕ್ಕೆ ಪಾರು ಬೇಡ ಅಮ್ಮ ಟೀ ಬೇಡ ಎಂದು ಹೇಳುತ್ತಾಳೆ. ಆದರೂ ಒಂದು ಗ್ಲಾಸ್ ಟೀ ಮಾಡಿಕೊಂಡು ಬರುತ್ತೇನೆ ಎಂದು ಹೇಳುತ್ತಾಳೆ. ಅಖಿಲಾಂಡೇಶ್ವರಿ ಅಡಿಗೆ ಮನೆಗೆ ಹೋಗಿ ಟೀ ಮಾಡುತ್ತಾರೆ.

ದಿಕ್ಕುತೋಚದೇ ನಿಂತ ಪಾರು

ದಿಕ್ಕುತೋಚದೇ ನಿಂತ ಪಾರು

ಪಾರು ಬಳಿಗೆ ಆದಿ ಬಂದು ಪೇಪರ್‌ನಲ್ಲಿ ಏನಿದೆ ಬಿಸಿ ಬಿಸಿ ಸುದ್ದಿ ಎಂದು ನೋಡಲು ಬರುತ್ತಾರೆ. ಆದಿ ಕೂಡ ಅರ್ಧಭಾಗ ಮಾತ್ರ ಪೇಪರ್ ಓದಿ ಬಳಿಕ ಆಂಗ್ಲ ಭಾಷೆಯ ಪೇಪರ್ ಓದುತ್ತಾನೆ. ಬಳಿಕ ಅಲ್ಲಿಗೆ ಜನನಿ ಪ್ರೀತು ಬರುತ್ತಾರೆ. ಅಲ್ಲಿಗೆ ಅಖಿಲಾಂಡೇಶ್ವರಿ ನಾಲ್ವರಿಗೂ ಟೀ ತಂದು ಕೊಡುತ್ತಾರೆ. ತಿಂಡಿ ರೆಡಿಯಾದ ಮೇಲೆ ಕರೆಯುತ್ತೇನೆ ಎಂದು ಅಖಿಲಾಂಡೇಶ್ವರಿ ಹೇಳಿ ಅಲ್ಲಿಂದ ಹೋಗುತ್ತಾರೆ. ಈ ವೇಳೆ ಅಮ್ಮನ ಕೈಚಳಕದ ಟೀಯನ್ನು ಕುಡಿದು ಅಮ್ಮನನ್ನು ಹೊಗಳುತ್ತಾನೆ. ಈ ವೇಳೆ ಪ್ರೀತು ಅತ್ತಿಗೆಯು ಸಖತ್ ಆಗಿ ಟೀ ಮಾಡಿಕೊಡುತ್ತಾರೆ ಎಂದು ಹೇಳುತ್ತಾನೆ. ಈ ವೇಳೆ ಬಿಸಿನೆಸ್ ಪಾರ್ಟ್‌ನರ್ಸ್‌ ಆಗಮನವಾಗುತ್ತೆ.

ಪೋಟೊ ಕಂಡು ಶಾಕ್ ಆದ ಪಾರು

ಪೋಟೊ ಕಂಡು ಶಾಕ್ ಆದ ಪಾರು

ಆ ವೇಳೆ ಆದಿ ಕೇಳುತ್ತಾನೆ. ನೀವು ಇಷ್ಟು ದೂರ ಬಂದಿದ್ದೀರ ಏನು ವಿಚಾರ ಎಂದು ಕೇಳುತ್ತಾನೆ. ಈ ವೇಳೆ ಅವರು ಹೇಳುತ್ತಾರೆ. ನಿಮ್ಮ ಹೆಂಡತಿ ನಮ್ಮನ್ನುಇಲ್ಲಿ ತನಕ ಬರುವ ಹಾಗೆ ಮಾಡಿದ್ದಾರೆ ಎಂದು ಹೇಳಿದಾಗ ಏನೆಂಬುವುದೇ ಅರ್ಥವಾಗದೇ ಮುಖ ಮುಖ ನೋಡಿಕೊಳ್ಳುತ್ತಾರೆ. ಇತ್ತ ಪಾರುಗೆ ಏನು ಅರ್ಥವಾಗುವುದಿಲ್ಲ. ಈ ವೇಳೆ ಹೇಳುತ್ತಾನೆ ಇವತ್ತಿನ ಪೇಪರ್ ನೋಡಿ ಎಂದು ಪೇಪರ್ ತೋರಿಸುತ್ತಾನೆ. ಅದರಲ್ಲಿದ್ದ ಪಾರು ಫೋಟೊ ನೋಡಿ ಎಲ್ಲರಿಗೂ ಶಾಕ್ ಆಗುತ್ತದೆ. ವೈರಿಯ ಕಂಪನಿಗೆ ಪಾರು ರಾಯಬಾರಿಯಾಗಿದ್ದು ಎಲ್ಲರಿಗೂ ಶಾಕ್ ಆಗಿದೆ.

ಜನನಿಗೆ ಕುಮ್ಮಕ್ಕು ನೀಡಿದ ಯಾಮಿನಿ

ಜನನಿಗೆ ಕುಮ್ಮಕ್ಕು ನೀಡಿದ ಯಾಮಿನಿ

ಜನನಿಯು ಹೇಳುತ್ತಾಳೆ ನೀವು ಹೇಳದೇ ದೇವಸ್ಥಾನಕ್ಕೆ ತೆರಳಿರುವುದು ಇದಕ್ಕೇನಾ ಎಂದೆಲ್ಲ ಹೇಳುತ್ತಾಳೆ. ಇದಕ್ಕೆ ಪೂರಕವಾಗಿ ಯಾಮಿನಿಯೂ ಕೂಡ ಪಾರುಗೆ ಚುಚ್ಚಿ ಮಾತನಾಡುತ್ತಾಳೆ. ಇದನ್ನು ಕಂಡ ಅಖಿಲಾಂಡೇಶ್ವರಿ ಕೆಂಡಾಮಂಡಲರಾಗುತ್ತಾರೆ. ಈ ವೇಳೆ ಒಬ್ಬಾತ ಆಗಮಿಸಿ ತಗೊಳಿ ಮೇಡಂ 60 ಲಕ್ಷ ರೂಪಾಯಿ ಚೆಕ್ ಎಂದು ಹೇಳಿ ಹಣ ಕೊಡುತ್ತಾನೆ. ಆತನನ್ನು ನೋಡಿದ ಪಾರು ಏನು ಸರ್ ಇದು ಅನ್ಯಾಯ. ಈ ಜಾಹೀರಾತು ಮಾಡಿರುವುದು ಅನಾಥಶ್ರಮಕ್ಕೆ ಎಂದು ಹೇಳಿ ಈ ರೀತಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳುತ್ತಾಳೆ.

ಪಾರುನಾ ಮನೆಯವರು ನಂಬುತ್ತಾರಾ?

ಬ್ಯುಸಿನೆಸ್ ಪಾರ್ಟ್‌ನರ್ಸ್‌ ಸಮಸ್ಯೆ ಕೇಳಲು ಅಖಿಲಾಂಡೇಶ್ವರಿ ಬಂದರು. ಈ ವೇಳೆ ಅಖಿಲಾಂಡೇಶ್ವರಿ ಕೆಂಡಾಮಂಡಲರಾಗುತ್ತಾರೆ. ಇನ್ನೂ ಪಾರು ಮುಗ್ಧತೆಯನ್ನು ಬಳಸಿಕೊಂಡ ಅರುಂಧತಿ ಇದನ್ನೆಲ್ಲವನ್ನು ವೀಡಿಯೋ ಮಾಡುತ್ತಿದ್ದರು. ಇನ್ನೂ ಅರುಂಧತಿಯ ವಿರುದ್ಧ ಧ್ವನಿ ಎತ್ತುತ್ತರಾ ಅಖಿಲಾಂಡೇಶ್ವರಿ? ಪಾರುಗೆ ಮೋಸ ಮಾಡಿದ ಅರುಂಧತಿನಾ ಸುಮ್ಮನೆ ಬಿಡುತ್ತಾರಾ ಅಖಿಲಾಂಡೇಶ್ವರಿ? ಮುಂದಿನ ಸಂಚಿಕೆಯಲ್ಲಿ ಏನಾಗುತ್ತೆ?

More from Filmibeat

English summary
Zee Kannada Paaru Serial Written Update On June 10th Episode. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X