Paaru: ಕೊನೆಗೂ ಪ್ರೀತಮ್ ಕೈ ಗೆ ಸಿಕ್ಕಿ ಬಿದ್ದನಾ ರಾಣಾ ?
'ಪಾರು' ಧಾರಾವಾಹಿ ಇದೀಗ ಅದ್ಭುತ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಅಖಿಲಾಂಡೇಶ್ವರಿ, ರಘು ಬಳಿ ಬಂದು ತನ್ನ ದುಃಖ ತೋಡಿಕೊಂಡಿದ್ದಾಳೆ.ಹೇಗಾದರೂ ಮಾಡಿ ಪಾರು ಹಾಗೂ ಆದಿಯನ್ನೂ ಅರಸನ ಜೊತೆಗೆ ಕರೆದುಕೊಂಡು ಬರಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ. ಇನ್ನೊಂದು ಕಡೆ ರಾಣಾನನ್ನು ಹೇಗಾದರೂ ಹಿಡಿಯಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾರೆ ಅಖಿಲಾಂಡೇಶ್ವರಿ.
ಇವತ್ತಿನ ಸಂಚಿಕೆಯಲ್ಲಿ ಅಖಿಲ ಮಾತಿನಿಂದ ರಘು ಬಹಳ ಖುಷಿ ಪಡುತ್ತಾರೆ . ರಘು ತನ್ನ ಮಕ್ಕಳ ಮೇಲೆ ವಿಶೇಷ ಕಾಳಜಿ ಹೊಂದಿರುತ್ತಾರೆ. ತನ್ನ ಮಗ ಅಥವಾ ಮಗಳು ಚೆನ್ನಾಗಿ ಇರಲಿ ಎನ್ನುವುದು ಅವರ ಆಸೆ. ಅಖಿಲ ಕೂಡ ತನ್ನ ಮಗನ ಮಗು ಪಾರ್ವತಿ ಹೊಟ್ಟೆಯಲ್ಲಿ ಇದೆ ಎಂದು ಇನ್ನಷ್ಟು ಖುಷಿ ಪಡುತ್ತಾರೆ. ಹೇಗಾದರೂ ಮಾಡಿ ಪಾರ್ವತಿಯನ್ನು ಮನೆಗೆ ಕರೆದುಕೊಂಡು ಬಂದು ರಾಣಿಯ ಹಾಗೆ ನೋಡಿಕೊಳ್ಳಬೇಕು ಎಂಬುವುದು ಇಬ್ಬರ ಆಸೆ. ಆದರೆ, ಆದಿ ಮತ್ತು ಪಾರ್ವತಿ ಬಳಿ ಈ ಆಸೆಯನ್ನು ಹೇಳಿಕೊಂಡರೆ ಯಾರಾದರೂ ಅವರಿಗೆ ಅಪಾಯ ಮಾಡಿಬಿಟ್ಟರೆ ಎಂಬ ಭಯದಲ್ಲಿದ್ದಾರೆ.

ಹಳ್ಳಿಯಿಂದ ಅಖಿಲಾಗೆ ಕರೆ ಮಾಡಿದ ಪೊಲೀಸರು
ಇನ್ನೂ ಇವರಿಬ್ಬರೂ ಮಾತನಾಡುತ್ತಾ ಇರುವ ವೇಳೆ ಪೊಲೀಸ್ ಕರೆ ಮಾಡಿ ಮಾತನಾಡುತ್ತಾರೆ. ಅವರು ರಾಣಾನ ಹಳ್ಳಿಯಲ್ಲಿ ಇರುವ ಮನೆಗೆ ಭೇಟಿ ನೀಡಿದ್ದಾರೆ. ಆದರೆ, ರಾಣಾನ ಮನೆಯಲ್ಲಿ ಹೆಂಡತಿ ಮಕ್ಕಳು ಮಾತ್ರ ಇದ್ದಾರೆ, ಆತ ಮನೆಗೆ ಬಾರದೆ ತಿಂಗಳುಗಟ್ಟಲೆ ಆಗಿದೆ ಎಂದು ಹೇಳಿದರು ಎಂದು ರಘು ಬಳಿ ಹೇಳಿದ್ದಾಳೆ. ಇದನ್ನು ಕೇಳಿದ ರಘುಗೆ ಮಾತ್ರ ಶಾಕ್ ಆಗಿದೆ.
ಇನ್ನೂ ನಮ್ಮ ಮಕ್ಕಳಿಗೆ ಕಷ್ಟ ಕಟ್ಟಿಟ್ಟ ಬುತ್ತಿ. ಹೇಗಾದರೂ ಮಾಡಿ ರಾಣನನ್ನು ಹುಡುಕಬೇಕು ಎಂದು ಆಲೋಚನೆ ಮಾಡುತ್ತಾನೆ . ಇನ್ನು ಆದಿ ಆಟೋದ ಒಳಗೆ ಪ್ರೀತಮ್ ಕೂರುತ್ತಾನೆ ಅಣ್ಣ ನನ್ನನ್ನು ಆಟೋದಲ್ಲಿ ಆಫೀಸ್‌ಗೆ ಕಳುಹಿಸಿ, "ನೀನು ನನ್ನ ಜೊತೆನೆ ಇರಬೇಕು. ನಿನಗೆ ಪೇಮೆಂಟ್ ಕೊಡುತ್ತೇನೆ. ಈಗಲೇ ಬುಕ್ಕಿಂಗ್ ಕೂಡ ಮಾಡಿದ್ದೇನೆ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಆದಿ ಮಾತ್ರ ತನ್ನ ಹಠ ಬಿಡದೆ ಪ್ರೀತಮ್ "ನೀನು ಎದ್ದೇಳು ನಿನ್ನ ಕಾರ್‌ನಲ್ಲಿ ಹೋಗು" ಎಂದು ಹೇಳುತ್ತಾನೆ. ಬಳಿಕ ಪ್ರೀತಮ್ ಜೊತೆ ಏನೇನೆಲ್ಲ ಸಬೂಬು ಹೇಳಿ ಅಲ್ಲಿಂದ ಹೋಗುತ್ತಾನೆ. ಇನ್ನೂ ಇದೆಲ್ಲವನ್ನು ನೋಡಿದ ಪಾರು ಮಾತ್ರ ಸಣ್ಣದಾಗಿ ನಗುತ್ತಾ ಇರುತ್ತಾಳೆ.
ಹನುಮಂತುಗೆ ಅವಮಾನ ಮಾಡಿದ ದಾಮಿನಿ
ಇನ್ನು ಹನುಮಂತು ಪಾರುಗೆ ವಾಕಿಂಗ್ ಮಾಡಿಸುತ್ತಾ ಇರುತ್ತಾನೆ. ಇದನ್ನು ನೋಡಿದ ದಾಮಿನಿ ಮಾತ್ರ ಬಾಯಿಗೆ ಬಂದ ಹಾಗೆ ಮಾತನಾಡುತ್ತಾ ಇರುತ್ತಾಳೆ. ಇದನ್ನೆಲ್ಲ ಕೇಳಿಸಿಕೊಂಡ ಪಾರುಗೆ ದುಃಖ ಉಮ್ಮಳಿಸಿ ಬರುತ್ತದೆ. ಬಳಿಕ ಹನುಮಂತುಗೆ ಕೂಡ ಸರಿಯಾಗಿ ಬಯ್ಯುತ್ತಲೆ ಇರುತ್ತಾಳೆ. ಇದನ್ನು ನೋಡಿದ ಅಖಿಲಗೆ ಕೋಪ ನೆತ್ತಿಗೆ ಏರುತ್ತದೆ. ಹನುಮಂತು ಬಯ್ಯುವ ವೇಳೆ ಪಾರು ಹೇಳುತ್ತಾಳೆ "ಅಪ್ಪನಿಗೆ ಏನು ಹೇಳಬೇಡಿ ಅವರು ಏನೂ ತಪ್ಪು ಮಾಡಿಲ್ಲ" ಎಂದು ಹೇಳುತ್ತಾಳೆ.

ಇದನ್ನು ಕೇಳಿದ ದಾಮಿನಿ ಇನ್ನೂ ಜೋರಾಗಿ ಮಾತನಾಡುತ್ತಾಳೆ. ದಾಮಿನಿ ಮಾತು ಕೇಳದೆ ಜೋರಾಗಿ ದಾಮಿನಿ ಹೆಸರನ್ನು ಕೂಗುತ್ತಲೇ ಇರುತ್ತಾಳೆ. ಅಖಿಲನನ್ನು ನೋಡಿದ ದಾಮಿನಿ ನಡುಗಿ ಹೋಗುತ್ತಾಳೆ. ಬಳಿಕ ದಾಮಿನಿ ಅಖಿಲ ಬಳಿ ಹೋಗಿ ಕೈ ಕಟ್ಟಿ ನಿಲ್ಲುತ್ತಾರೆ. ಇನ್ನೂ ಕೋಪಗೊಂಡ ದಾಮಿನಿಗೆ ಕೋಪಗೊಂಡು ಬೈಯ್ಯಲು ಶುರು ಮಾಡುತ್ತಾರೆ. ಇದನ್ನು ನೋಡಿದ ದಾಮಿನಿ ಶಾಕ್ ಆದರೂ, ಬಳಿಕ ಸುಮ್ಮನೆ ಇರುತ್ತಾಳೆ. ಇನ್ನು ಪ್ರೀತಮ್ ಆಫೀಸ್ ಹೋಗುತ್ತ ಇರುವಾಗ ರಾಣಾ ನೋಡಲು ಸಿಗುತ್ತಾನೆ. ರಾಣಾನನ್ನು ಚೆಸ್ ಮಾಡಿಕೊಂಡು ಹೋಗುತ್ತಾ ಅಣ್ಣನಿಗೂ ಕರೆ ಮಾಡಿ ಹೇಳುತ್ತಾನೆ. ಮುಂದೇನು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.


Click it and Unblock the Notifications











