twitter
    For Quick Alerts
    ALLOW NOTIFICATIONS  
    For Daily Alerts

    ಒಂದು ಗಂಟೆ ಮುಂಚೆನೇ ಜೀ ಕನ್ನಡದಲ್ಲಿ 'ಪಾರು' ಧಾರಾವಾಹಿ ಪ್ರಸಾರ

    |

    ಇಡೀ ಕರ್ನಾಟಕವೇ ಒಪ್ಪಿ ಮನೆ ಮಗಳಂತೆ ಅಪ್ಪಿಕೊಂಡಿರುವ ಧಾರಾವಾಹಿ ಪಾರು. "ಕರುಣೆಯ ಪೈರು ನಮ್ಮಿ ಪಾರು" ಎನ್ನುವ ಟ್ಯಾಗ್ ಹೊತ್ತುಕೊಂಡಿರುವ ಕನ್ನಡದ ಜನಪ್ರಿಯ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ಅತ್ಯುತ್ತಮ ತಾರಾಬಳಗ ಹಾಗೂ ರೋಚಕ ತಿರುವುಗಳನ್ನು ಹೊಂದಿರುವ ಅದ್ಭುತ ಧಾರಾವಾಹಿ ವೀಕ್ಷಕರಿಗೆ ಹೊಸ ತಿರುವು ಕೊಟ್ಟು ರಂಜಿಸುತ್ತಿದೆ.

    'ಪಾರು' ಧಾರಾವಾಹಿ ಹಲವು ವರ್ಷಗಳಿಂದ ಕಿರುತೆರೆಯ ಮೇಲೆ ವಿಜೃಂಭಿಸುತ್ತಿದೆ. ಹಿರಿಯ ನಟಿ ವಿನಯ ಪ್ರಸಾದ್ ಹಾಗೂ ಎಸ್‌.ನಾರಾಯಣ್ ನಟಿಸುತ್ತಿರುವ ಈ ಧಾರಾವಾಹಿ ಕನ್ನಡಿಗರ ಅಚ್ಚು ಮೆಚ್ಚಿನ ಧಾರಾವಾಹಿಗಳಲ್ಲೊಂದು. ವಿನಯ ಪ್ರಸಾದ್ ಅವರು ಅಖಿಲಾಂಡೇಶ್ವರಿಯಾಗಿ, ಎಸ್ .ನಾರಾಯಣ್ ವೀರಯ್ಯದೇವ ಎಂಬ ಗತ್ತಿನ ಪಾತ್ರಗಳ ಮೂಲಕ ಕಿರುತೆರೆಯ ವೀಕ್ಷಕರ ಗಮನ ಸೆಳೆದಿದ್ದಾರೆ. ಸದ್ಯ ಈ ಎರಡೂ ಪಾತ್ರಗಳೂ ಮುಖಾ ಮುಖಿಯಾಗುವ ಸನ್ನಿವೇಶಗಳು ಎದುರಾಗಿವೆ. ಇಬ್ಬರೂ ಗತ್ತಿನಿಂದಲೇ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಕಿರುತೆರೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಸದ್ಯ ಈ ಧಾರಾವಾಹಿ ಒಂದು ಗಂಟೆ ಮುಂಚಿತವಾಗಿ ಪ್ರಸಾರವಾಗುತ್ತಿದೆ.

    ಒಂದು ಗಂಟೆ ಮುಂಚೆ 'ಪಾರು' ಧಾರಾವಾಹಿ

    ಜನ ಮೆಚ್ಚುಗೆ ಗಳಿಸಿರುವ 'ಪಾರು' ಧಾರಾವಾಹಿ ಡಿಸೆಂಬರ್ 13 ರಿಂದ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಅರಸನ ಕೋಟೆಯ ಆಳುವ ಅರಸಿಯಾಗಿ, ಪ್ರೀತಿ ತುಂಬಿದ ಅಮ್ಮನಾಗಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ವಿನಯ ಪ್ರಸಾದ್ ಮೆಚ್ಚುಗೆ ಗಳಿಸಿದ್ದಾರೆ. ತಾಯಿಯ ಪ್ರೀತಿಯನ್ನೇ ಕಾಣದ ಮಕ್ಕಳಿಗೆ ತಾನೇ ಎಲ್ಲವೂ ಆಗಿರುವ ಹನುಮಂತು ಪಾತ್ರ, ಸದಾ ಬಡವರ ನೋವು ನಲಿವುಗಳಿಗೆ ಸ್ಪಂದಿಸುತ್ತ ನೊಂದವರ ಪಾಲಿನ ಭರವಸೆಯಾಗಿರುವ ವೀರಯ್ಯದೇವ, ಒಳ್ಳೆಯ ಗುಣಗಳೊಂದಿಗೆ ಸದಾ ಎಲ್ಲರಿಗೂ ಒಳಿತನ್ನೇ ಬಯಸುವ ಆದಿ ಹಾಗೂ ಪಾರು. ಈ ಎಲ್ಲಾ ಪಾತ್ರಗಳೂ ಕೂಡ ಜನ ಮೆಚ್ಚುಗೆಯನ್ನು ಗಳಿಸಿವೆ.

    Paaru will be telecasting in new time in zee kannada

    'ಪಾರು' ತನ್ನ ವಿನೂತನ ನಿರೂಪಣೆಯ ಶೈಲಿಯಿಂದ ಸೂಪರ್ ಹಿಟ್ ಧಾರಾವಾಹಿ ಎಂದು ಸಾಬೀತಾಗಿದೆ. ಎಂತಹದ್ದೇ ಸನ್ನಿವೇಶದಲ್ಲೂ ತನ್ನ ಅದ್ಧೂರಿತನವನ್ನು ಬಿಟ್ಟುಕೊಡದೆ ಮುಂದೆ ಸಾಗುತ್ತಾ ಬಂದಿದೆ. ಮೊದಲ ಸಂಚಿಕೆಯಿಂದ ಹಿಡಿದು ಇಲ್ಲವರೆಗೂ ಗುಣಮಟ್ಟದಲ್ಲಿ 'ಪಾರು' ಧಾರಾವಾಹಿ ರಾಜಿಯಾಗಿಲ್ಲ. ಅದ್ಧೂರಿ ಸೆಟ್ , ಭವ್ಯ ಬಂಗಲೆ, ಶ್ರೀ ಮಂತ ತಾರಾಗಣ ಎಲ್ಲವೂ ಕಿರುತೆರೆ ವೀಕ್ಷಕರಿಗೆ ಹೊಸ ಅನುಭವವನ್ನು ನೀಡುತ್ತಲೇ ಬಂದಿದೆ.

    800 ಸಂಚಿಕೆಗಳ ಸನಿಹದಲ್ಲಿ 'ಪಾರು' ಧಾರಾವಾಹಿ

    'ಪಾರು' ಮನೆ ಮಂದಿಯಲ್ಲಾ ಕೂತು ನೋಡುವ ಧಾರಾವಾಹಯಾಗಿದ್ದು, ತನ್ನದೇ ಅಭಿಮಾನಿ ಬಳಗವನ್ನು ಹೊಂದಿದೆ. ಪ್ರೀತಿ , ಸ್ನೇಹ ,ಆದರ್ಶ , ವಾತ್ಸಲ್ಯ ಜೊತೆ ಜೊತೆಗೆ ಮನರಂಜನೆಯನ್ನೂ ಸೇರಿಸಿ ಹೆಣೆದಿರುವ ಕಥೆಗೆ ಕನ್ನಡಿಗರ ಮನೆ ಬಾಗಿಲವರೆಗೂ ಮುಟ್ಟಿದೆ. ಸದ್ಯ ಈ ಧಾರಾವಾಹಿ ಶೀಘ್ರದಲ್ಲಿಯೇ 800 ಸಂಚಿಕೆಗಳನ್ನು ಪೂರ್ಣಗೊಳಿಸಲಿದೆ. ಸದ್ಯ ಅರಸನಕೋಟೆಯ ಹಿರಿ ಮಗ ಆದಿ ನಿಶ್ಚಿತಾರ್ಥದ ಹಂತದಲ್ಲಿದ್ದು, ಅಖಿಲಾಂಡೇಶ್ವರಿಯ ಪ್ರತಿಷ್ಠೆ ಮತ್ತು ಬಡವರ ಧ್ವನಿಯಾಗಿರುವ ವೀರಯ್ಯದೇವನ ಹಠದಲ್ಲಿ ಯಾರಿಗೆ ಗೆಲುವು ಸಿಗಲಿದೆ ಎನ್ನುವುದು ನೋಡುಗರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಆದಿ - ಪಾರು ಪ್ರೀತಿಗೆ ವಿರೋಧ ವ್ಯಕಪಡಿಸುತ್ತಿರುವ ಅರಸನಕೋಟೆ ಅಖಿಲಾಂಡೇಶ್ವರಿ ಮತ್ತು ಪರವಾಗಿ ನಿಂತಿರುವ ವೀರಯ್ಯದೇವ ಇವರಿಬ್ಬರ ಪ್ರತಿನಡೆಯು ದಿನದಿಂದ ದಿನಕ್ಕೆ ರೋಚಕ ಎನಿಸುವಂತಿದೆ.

    Paaru will be telecasting in new time in zee kannada

    ಈ ಧಾರಾವಾಹಿಗೆ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟ, ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿಲೀಪ್ ರಾಜ್ ಅವರ ಪತ್ನಿ ಶ್ರೀವಿದ್ಯಾರಾಜ್ 'ಪಾರು' ಧಾರಾವಾಹಿಯ ನಿರ್ಮಾಣದ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ. ಗುರುಪ್ರಸಾದ್ ಮೂಡೇನಹಳ್ಳಿ 'ಪಾರು' ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ನೆಚ್ಚಿನ ಧಾರಾವಾಹಿ 'ಪಾರು' ಬದಲಾದ ಸಮಯದಲ್ಲಿ ರಂಜಿಸುತ್ತಾ ಮುಂದೆ ಸಾಗಿದೆ. ಹೊಸ ಹುರುಪಿನೊಂದಿಗೆ ಒಂದು ಗಂಟೆಯ ಮುಂಚೆವಾಗಿಯೇ, ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ.

    English summary
    Paaru serial will be telecasting in new time in Zee Kannada. It is nearing the completion of 800 episodes.
    Thursday, December 16, 2021, 14:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X