ಕುಸುಮಾ ಪಾತ್ರದಲ್ಲಿ ಶಾಂತತೆ ಮತ್ತು ಗಟ್ಟಿತನ ಎರಡು ತುಂಬಿದೆ ಪದ್ಮಜಾ ರಾವ್

By ಅನಿತಾ ಬನಾರಿ

ನಟಿ ಪದ್ಮಜಾ ರಾವ್ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವನ ಅಮ್ಮನಾದ ಕುಸುಮಾ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಹಿಂದೆಂದೂ ಮಾಡಿರದ ರೀತಿಯಲ್ಲಿ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿರುವ ಪದ್ಮಜಾ ಅಭಿಮಾನಿಗಳ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ.

ಆರಂಭದಲ್ಲಿ, ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನನಗೆ ಸಿಕ್ಕಿದ ಈ ಪಾತ್ರದ ಮೇಲೆ ಯಾವುದೇ ರೀತಿಯ ಉತ್ಸಾಹವಿರಲಿಲ್ಲ. ಇದೊಂದು ರೀತಿಯಲ್ಲಿ ರನ್-ಆಫ್-ಮಿಲ್ ಎಂದು ಭಾವಿಸಿದ್ದೆ. ಆದರೆ ಮೊದಲ ಹತ್ತು ದಿನಗಳ ಚಿತ್ರೀಕರಣದ ನಂತರ ಎಲ್ಲವೂ ಬದಲಾಯಿತು. ಈ ಪಾತ್ರದ ಸಂಕೀರ್ಣತೆಯನ್ನು, ವೈಶಿಷ್ಟ್ಯತೆಯನ್ನು ತಿಳಿದುಕೊಂಡೆ ಎಂದು ಹೇಳುತ್ತಾರೆ ಪದ್ಮಜಾ ರಾವ್.

Padmaja Rao says Bhagyalakshmi serial Kusuma role gives more opportunities show acting skills

ಕುಸುಮಾನದ್ದು ಶಾಂತತೆ ಮತ್ತು ಗಟ್ಟಿತನ ಎರಡನ್ನೂ ತುಂಬಿರುವ ಒಂದು ಪಾತ್ರ. ಆಸಕ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುವುದರೊಂದಿಗೆ ನನ್ನ ನಟನೆಯ ಕೌಶಲವನ್ನು ಪ್ರದರ್ಶಿಸಲು ಒಂದು ಉತ್ತಮ ಅವಕಾಶ ದೊರೆತಂತಾಗಿದೆ ಎಂದು ಖುಷಿಯನ್ನು ವ್ಯಕ್ತಪಡಿಸಿದರು.

ನಟನಾ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ನಿರ್ವಹಿಸಿದ ಎಲ್ಲಾ ಆನ್-ಸ್ಕ್ರೀನ್ ಪಾತ್ರಗಳಿಗಿಂತ ಪದ್ಮಜಾ ರಾವ್ ಅವರಿಗೆ ಇದೊಂದು ವಿಭಿನ್ನ ಪಾತ್ರವಾಗಿದೆ. ಅವರು ಕಿರುತೆರೆಯಲ್ಲಾಗಲಿ ಹಿರಿತೆರೆಯಲಾಗಲಿ ಮೃದು ಸ್ವಭಾವದ ತಾಯಿಯ ಪಾತ್ರವನ್ನು ನಿಭಾಯಿಸಿದವರು. ಆದರೆ, ಈಗ ಪದ್ಮಜಾ ಅವರ ಆನ್‌ಸ್ಕ್ರೀನ್ ಪಾತ್ರ ಕುಸುಮಾ ಅವರಿಗೆ ಬೇರೆಯದೇ ಹೆಸರು ತಂದುಕೊಡುತ್ತಿದೆ.

Padmaja Rao says Bhagyalakshmi serial Kusuma role gives more opportunities show acting skills

ವೀಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದಕ್ಕೆ ನಟಿ ಇನ್ನಷ್ಟು ಖುಷಿಯಲ್ಲಿದ್ದಾರೆ ಮತ್ತು ಅವರಿಗೆ ಒಪ್ಪುವಂತೆ ಇನ್ನಷ್ಟು ಸುಂದರವಾಗಿ ಪಾತ್ರವನ್ನು ನಿಭಾಯಿಸುವ ಭರವಸೆ ನೀಡಿದ್ದಾರೆ. ಕನಸಿನಂತೆ ಇದ್ದ ಈ ಪಾತ್ರ ತೆರೆಯ ಮೇಲೆ ಮಾಡುತ್ತಿರುವ ಅಸಾಧಾರಣ ಜಾದೂ ಇನ್ನಷ್ಟು ಮುಂದುವರಿಯಲಿ ಎಂದು ಆಶಿಸೋಣ.

More from Filmibeat

English summary
Padmaja Rao says Bhagyalakshmi serial Kusuma role gives more opportunities show acting skills,know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X