ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ 'ಪದ್ಮಾವತಿ'ಯ ತುಳಸಿ

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪದ್ಮಾವತಿ' ಧಾರಾವಾಹಿಯಲ್ಲಿ ನಾಯಕಿ ತುಳಸಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಚೆಂದುಳ್ಳಿ ಚೆಲುವೆಯ ಹೆಸರು ದೀಪ್ತಿ ಮನ್ನೆ.

ಬೆಳ್ಳಿತೆರೆಯ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟು 'ಪದ್ಮಾವತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಜಿಗಿದ ಈಕೆ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಮೋಡಿ ಮಾಡಿದ ಬೆಡಗಿ. ಸದ್ಯ ತೆಲುಗಿನ 'ರಾಧಮ್ಮ ಕುತುರು' ಧಾರಾವಾಹಿಯಲ್ಲಿ ನಾಯಕಿ ಅಕ್ಷರಾ ಆಗಿ ಅಭಿನಯಿಸುತ್ತಿರುವ ದಾವಣಗೆರೆಯ ಬೆಡಗಿ ಕಲಿತದ್ದು ಫ್ಯಾಷನ್ ಡಿಸೈನ್.

ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿ

ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿ

ಬೆಂಗಳೂರಿನ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸೇರಿದ ದೀಪ್ತಿ ಮನ್ನೆ ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿಯನ್ನು ಪಡೆದುಕೊಂಡರು. ಪದವಿಯ ಸಮಯದಲ್ಲಿ ದೀಪ್ತಿಯನ್ನು ನೋಡುತ್ತಿದ್ದ ಅನೇಕ ಸ್ನೇಹಿತರು ನೀನು ಯಾಕೆ ನಟಿಸಬಾರದು? ಯಾಕೆ ಬಣ್ಣದ ಲೋಕಕ್ಕೆ ಕಾಲಿಡಬಾರದು ಎಂದು ಪ್ರಶ್ನಿಸುತ್ತಿದ್ದಾರೆ. ಆ ಒಂದು ಪ್ರಶ್ನೆ ತನ್ನ ಜೀವನದ ದಿಕ್ಕನ್ನೇ ಬದಲಿಸುತ್ತದೆ ಎಂದು ಸ್ವತಃ ದೀಪ್ತಿ ಮನ್ನೆ ಅವರೇ ಅಂದಕೊಂಡಿರಲಿಲ್ಲ.

ಪದವಿಯ ಬಳಿಕ ನಟನೆಯಲ್ಲಿ ಒಲವು

ಪದವಿಯ ಬಳಿಕ ನಟನೆಯಲ್ಲಿ ಒಲವು

ಸ್ನೇಹಿತರ ಪ್ರಶ್ನೆಯನ್ನು ಗಂಭೀರವಾಗಿ ಸ್ವೀಕರಿಸಿದ ದೀಪ್ತಿ ಮನ್ನೆ ಪದವಿಯ ನಂತರ ನಟನಾ ಕ್ಷೇತ್ರಕ್ಕೆ ಕಾಲಿಡುವ ನಿರ್ಧಾರ ತೆಗೆದುಕೊಂಡರು.‌ ನಟಿಯಾಗಬೇಕು ಅಂದುಕೊಂಡಿದ್ದೇ ತಡ, ಇದ್ದ ಆಡಿಶನ್‌ಗಳನ್ನೆಲ್ಲಾ ಕೊಡಲು ಆರಂಭಿಸಿದ್ದರು.

ತಮಿಳಿನಲ್ಲಿ ಮೊದಲ ಸಿನಿಮಾ

ತಮಿಳಿನಲ್ಲಿ ಮೊದಲ ಸಿನಿಮಾ

ಒಂದಷ್ಟು ಆಡಿಶನ್ ಗಳಿಗೆ ಹೋದ ಮತ್ತೆ 'ಎವನ್' ಎನ್ನುವ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡರು ದೀಪ್ತಿ ಮನ್ನೆ‌‌. ನಂತರ ತಮಿಳು ಮಾತ್ರವಲ್ಲದೇ ತೆಲುಗು, ಕನ್ನಡ ಸಿನಿಮಾಗಳಿಂದ ಅವಕಾಶಗಳನ್ನು ಪಡೆದರು. 'ನಮ್ಮೂರ ಹೈಕ್ಳು' ಕನ್ನಡ ಸಿನಿಮಾದ ಜೊತೆಗೆ ತೆಲುಗಿನ 'ಇಕ್ ಸೇ ಲವ್ ' ಹಾಗೂ ತಮಿಳಿನ 'ದೇವದಾಸ್ ಬ್ರದರ್ಸ್' ಸಿನಿಮಾದಲ್ಲಿ ಅಭಿನಯಿಸಿದರು.

ಪರಭಾಷೆ ಕಿರುತೆರೆಯಲ್ಲಿ ನಟನೆ

ಪರಭಾಷೆ ಕಿರುತೆರೆಯಲ್ಲಿ ನಟನೆ

ಮನೋಜ್ಞ ನಟನೆಯ ಮೂಲಕ ಹಿರಿತೆರೆಯಲ್ಲಿ ಮಿಂಚಿದ ದೀಪ್ತಿ ಮನ್ನೆ ನಂತರ ಕಾಲಿಟಿದ್ದು ಕಿರುತೆರೆಗೆ. 'ಪದ್ಮಾವತಿ' ಧಾರಾವಾಹಿಯ ತುಳಸಿಯಾಗಿ ಬದಲಾದ ದೀಪ್ತಿ ನಟಿಸಿದ್ದು ಒಂದೇ ಧಾರಾವಾಹಿ ಆದರೂ ಈಗಲೂ ಆ ಪಾತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಮನೆ ಮಾತಾಗಿದ್ದಾರೆ. ಇಂದಿಗೂ ಪದ್ಮಾವತಿಯ ತುಳಸಿ ಆಗಿಯೇ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ದೀಪ್ತಿ ಇದೀಗ 'ರಾಧಮ್ಮ ಕುತುರ'ವಿನ ಅಕ್ಷರಾ ಆಗಿ ಪರಭಾಷೆಯ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

More from Filmibeat

English summary
Padmavathi Serial Tulasi Fame Deepthi Manne Busy In Telugu Serial, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X