ಪ್ರೀತಿಯ ಅಲೆಯಲ್ಲಿ 'ಪದ್ಮಾವತಿ', ದೀಪ್ತಿ ಮಾನೆ ಹೃದಯ ಗೆದ್ದ ಹುಡುಗ ಯಾರು ?
ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ಹೀಗಾಗಿಯೇ ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್ಲಾ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು ನೀಡುತ್ತದೆ ಎನ್ನುವ ನಂಬಿಕೆಯೇ ಜೀವಕ್ಕೊಂದು ಬೆಳಕು. ಈ ಬೆಳಕು ಈಗ ದೀಪ್ತಿ ಮಾನೆ ಅವರ ಬದುಕಿನಲ್ಲಿ ಕೂಡ ಮೂಡಿದೆ.
ಹೌದು, ದೀಪ್ತಿ ಮಾನೆ .. ಕನ್ನಡದ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ವ್ಯಾಪಕವಾಗಿ ಸದ್ದು ಮಾಡಿದ್ದ ''ಪದ್ಮಾವತಿ'' ಧಾರಾವಾಹಿಯ ಚೆಲುವೆ. ''ಪದ್ಮಾವತಿ'' ಧಾರಾವಾಹಿಯಲ್ಲಿ ''ತುಳಸಿ'' ಪಾತ್ರವನ್ನು ನಿರ್ವಹಿಸಿದ್ದ ದೀಪ್ತಿ ಮನ್ನೆ ಆ ನಂತರ ತೆಲುಗು ಕಿರುತೆರೆಗೆ ವಲಸೆ ಹೋದರು. ''ರಾಧಮ್ಮ ಕುತುರು'' ಮತ್ತು ''ಜಗದ್ದಾತ್ರಿ'' ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.

ತೆಲುಗಿನಲ್ಲಿ ಕೀರ್ತಿ ಅಭಿನಯಿಸಿದ ಈ ಎರಡು ಧಾರಾವಾಹಿಗಳು ತೆಲುಗು ಪ್ರೇಕ್ಷಕರ ಹೃದಯವನ್ನು ಗೆದ್ದವು. ದೀಪ್ತಿಗೆ ಅಪಾರವಾದ ಹೆಸರನ್ನು ಕೂಡ ನೀಡಿದವು. ಇಷ್ಟೇ ಅಲ್ಲ ತೆಲುಗಿನ ಜೀ ಕುಟುಂಬಂ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಾಯಕಿ ಎನ್ನುವ ಪ್ರಶಸ್ತಿಯನ್ನು ಕೂಡ ದೀಪ್ತಿ ಮಾನೆ ಮುಡಿಗೇರಿಸಿಕೊಂಡರು.
ಇಂಥಾ ದೀಪ್ತಿ ಮಾನೆ ಕೆಲ ದಿನಗಳ ಹಿಂದೆ ತಾವು ಪ್ರೀತಿಯ ಬಲೆಯಲ್ಲಿ ಸಿಲುಕಿರುವ ವಿಚಾರವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಹುಡುಗನ ಮುಖ ಕಾಣದಂತೆ ಕೆಲ ಫೋಟೊಗಳನ್ನು ಕೂಡ ಶೇರ್ ಮಾಡಿಕೊಂಡಿದ್ದರು.
ದೀಪ್ತಿ ತಮ್ಮ ಹುಡುಗನ ಜೊತೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದೇ ತಡ ಅಭಿಮಾನಿಗಳು ತಲೆ ಕೆದರಿಕೊಂಡು ಹುಡುಗನ ಕುಲ, ಗೋತ್ರ, ಜನ್ಮ ಜಾಲಾಡಲು ಶುರು ಮಾಡಿದ್ದರು. ಈಗ ಖುದ್ದು ದೀಪ್ತಿ ಮಾನೆ ತಮ್ಮ ಕನಸಿನ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮ ಭಾವಿ ಪತಿಯ ಜೊತೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಡಿಯರ್ ರೋಹನ್, ನಾನು ಕಾಯುತ್ತಿದ್ದ ವ್ಯಕ್ತಿ ನೀವು. ಆ ದೇವರು ನನಗಾಗಿ ಕಳುಹಿಸಿರುವ ಉಡುಗೊರೆ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಥ್ಯಾಂಕ್ಯೂ. ಐ ಲವ್ ಯೂ ಎಂದು ಬರೆದುಕೊಂಡಿದ್ಧಾರೆ.
ಇನ್ನುಳಿದಂತೆ ದೀಪ್ತಿ ಹೃದಯ ಕದ್ದ ರೋಹನ್ ಹಿನ್ನೆಲೆಯೇನು..? ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಆದರೆ ರೋಹನ್ ಚಿತ್ರರಂಗ ಮತ್ತು ಕಿರುತೆರೆಯಿಂದ ತುಂಬಾ ಇರುವ ವ್ಯಕ್ತಿ ಎನ್ನುವುದು ಮಾತ್ರ ಸತ್ಯ. ಶೀಘ್ರದಲ್ಲಿಯೇ ದೀಪ್ತಿ ಮತ್ತು ರೋಹನ್ ನಿಶ್ಚಿತಾರ್ಥ ಸಮಾರಂಭ ನಡೆಯುವ ಸಾಧ್ಯತೆ ಇದೆ. ಈ ವರ್ಷಾಂತ್ಯಕ್ಕೆ ಇಬ್ಬರು ಹಸೆಮಣೆ ಏರುವ ಸಾಧ್ಯತೆ ಕೂಡ ಇದೆ.

ಅಂದ್ಹಾಗೇ ಇತ್ತೀಚೆಗೆ ಕನ್ನಡದಲ್ಲಿ ಜೀ ಕುಟುಂಬ ಅವಾರ್ಡ್ ನಡೆದಂತೆ ತೆಲುಗಿನಲ್ಲಿ ಕೂಡ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ''ಜೀ ತೆಲುಗು'' ಕುಟುಂಬ ದೀಪ್ತಿ ಅವರಿಗೆ ಬಾಗಿನ ನೀಡಿ ಮಡಿಲು ತುಂಬಿತ್ತು. ನಮ್ಮ ''ಜಗಧಾತ್ರಿ'' ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ. ಹೀಗಾಗಿ ನಮ್ಮ ಕುಟುಂಬದ ಹುಡುಗಿಗೆ ಬಾಗಿನ ನೀಡಿ ನಾವು ಶುಭಹಾರೈಸುತ್ತಿದ್ದೇವೆ ಎಂದು ಹೇಳಿ ಜೀ ತೆಲುಗು ವಾಹಿನಿ ವಿಶೇಷ ಉಡುಗೊರೆ ನೀಡಿತ್ತು. ಪ್ರೋಮೋವನ್ನು ಕೂಡ ಬಿಡುಗಡೆಯಾಗಿತ್ತು. ಜೀ ಕುಟುಂಬದಿಂದ ಈ ಉಡುಗೊರೆ ನಿರೀಕ್ಷೆ ಮಾಡದ ದೀಪ್ತಿ ವೇದಿಕೆಯಲ್ಲಿ ಭಾವುಕರಾಗಿದ್ದರು.
ಸದ್ಯ ದೀಪ್ತಿ ಅವರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಇನ್ನು ಕಿರುತೆರೆಯಲ್ಲಿ ಮಿಂಚುತ್ತಿರುವ ದೀಪ್ತಿ ಮಾನೆ ಬೆಳ್ಳಿತೆರೆಯಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಕನ್ನಡದಲ್ಲಿ ''ನಮ್ಮೂರ ಹೈಕ್ಳು''.. ತೆಲುಗಿನಲ್ಲಿ ''ಇಕ್ ಸೇ ಲವ್'' ಮತ್ತು ತಮಿಳಿನಲ್ಲಿ ''ದೇವದಾಸ್ ಬ್ರದರ್ಸ್'' ಚಿತ್ರಗಳಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ಆದರೆ..ಕಿರುತೆರೆಯಲ್ಲಿ ಖುಲಾಯಿಸಿದ ಅದೃಷ್ಟ ಇವರಿಗೆ ಬೆಳ್ಳಿತೆರೆಯಲ್ಲಿ ಖುಲಾಯಿಸಲಿಲ್ಲ.


Click it and Unblock the Notifications











