twitter
    For Quick Alerts
    ALLOW NOTIFICATIONS  
    For Daily Alerts

    ಭಾರತೀಯ ಟಿವಿ ಕಾರ್ಯಕ್ರಮಗಳ ಬ್ಯಾನ್ ಸಾಧ್ಯವಿಲ್ಲ: ಪಾಕ್ ನ್ಯಾಯಾಲಯ

    By Suneel
    |

    'ಭಾರತೀಯ ಟಿವಿ ಕಾರ್ಯಕ್ರಮಗಳು ಪ್ರಸಾರವಾಗದಂತೆ ನಿರ್ಬಂಧ ಹೇರಲು ಸಾಧ್ಯವಿಲ್ಲ' ಎಂದು ಪಾಕಿಸ್ತಾನ ಕೋರ್ಟ್ ನಿನ್ನೆ(ಜು. 18) ಹೇಳಿದೆ.

    'ಪ್ರಪಂಚ ಎಂಬುದು ಒಂದು ಜಾಗತಿಕ ಹಳ್ಳಿ ಇದ್ದಂತೆ', ಯಾವುದೇ ಕಾರಣಗಳು ಇಲ್ಲದೇ ಎಷ್ಟು ವರ್ಷಗಳ ಕಾಲ ಇತರೆ ದೇಶದ ಕಾರ್ಯಕ್ರಮಗಳು ಪ್ರಸಾರವಾಗದಂತೆ ನಿರ್ಬಂಧ ಹೇರಲು ಸಾಧ್ಯ? ಎಂದು ಪ್ರಶ್ನಿಸಿ ಪಾಕಿಸ್ತಾನ ಕೋರ್ಟ್ ಹೇಳಿರುವುದನ್ನು 'ಡಾನ್' ಪತ್ರಿಕೆ ವರದಿ ಮಾಡಿದೆ.

    ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನ್ಸೂರ್ ಅಲಿ ಶಾಹ್, 'ಭಾರತದ ಟಿವಿ ಕಾರ್ಯಕ್ರಮಗಳಲ್ಲಿ ಆಕ್ಷೇಪಣಾರ್ಹ ಅಥವಾ ಪಾಕಿಸ್ತಾನಿ ವಿರೋಧಿ ಅಂಶಗಳು ಇದ್ದಲ್ಲಿ ಅದನ್ನು ಸೆನ್ಸಾರ್ ಗೆ ಒಳಪಡಿಸಬಹುದು, ಆದರೆ ಸಂಪೂರ್ಣವಾಗಿ ಬ್ಯಾನ್ ಮಾಡುವ ಅವಶ್ಯಕತೆ ಇಲ್ಲ' ಎಂದು ಹೇಳಿದ್ದಾರೆ.

    Pakistani court lifts ban on airing Indian TV serials

    ಉರಿ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನದ 'ವಿದ್ಯುನ್ಮಾನ ಮಾಧ್ಯಮಗಳ ನಿಯಂತ್ರಣಾ ಪ್ರಾಧೀಕಾರ(Pemra)' ಭಾರತದ ಟಿವಿ ಕಾರ್ಯಕ್ರಮಗಳನ್ನು ನಿರ್ಬಂಧಿಸಬೇಕು ಎಂದು ಕಳೆದ ಅಕ್ಟೋಬರ್ ನಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಲಾಹೋರ್ ಹೈಕೋರ್ಟ್, 'ಫೆಡರಲ್ ಸರ್ಕಾರ ಈ ಬಗ್ಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ ಮತ್ತು ಯಾವುದೇ ಕಾರಣಗಳು ಇಲ್ಲದೇ ಭಾರತೀಯ ಟಿವಿ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ' ಎಂದು ಹೇಳಿ ತೀರ್ಪು ನೀಡಿದೆ.

    English summary
    A Pakistani court on Tuesday lifted a ban on the airing of Indian television serials in the country saying "the world has become a global village" and asking how long "unreasonable restrictions" can be imposed, reported Dawn.
    Wednesday, July 19, 2017, 12:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X