Suryavamsha: 'ಜೊತೆ ಜೊತೆಯಲಿ'ಗೆ ಮೇಘಾಶೆಟ್ಟಿ..ಅನಿರುದ್ಧ್ 'ಸೂರ್ಯವಂಶ'ಕ್ಕೆ ಯಾರು?

By ಅನಿತಾ ಬನಾರಿ

ನಟನೆ ಎಂದಾಗ ಪಾಸಿಟಿವ್ ಹಾಗೂ ನೆಗೆಟಿವ್ ಎರಡು ರೀತಿಯ ಪಾತ್ರಗಳು ಇದ್ದೇ ಇರುತ್ತವೆ. ಅದರಲ್ಲೂ ಕಿರುತೆರೆ ಧಾರಾವಾಹಿಗಳು ಎಂದಾಗ ನೆಗೆಟಿವ್ ರೋಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ ಎಂಬುದು ಎಷ್ಟೋ ಜನರ ಅಭಿಪ್ರಾಯ.

ಅದೆಷ್ಟೋ ಧಾರಾವಾಹಿಗಳಲ್ಲಿ ಖಳನಾಯಕ, ಖಳನಾಯಕಿಯಾಗಿ ನಟಿಸಿ ಮಿಂಚಿರುವ ಜ್ವಲಂತ ಸಾಕ್ಷಿಗಳು ಇಂದು ನಮ್ಮೊಂದಿಗಿದ್ದಾರೆ. ಎಷ್ಟೋ ಬಾರಿ ನಾಯಕ ನಾಯಕಿಯರಿಗಿಂತಲೂ ಈ ರೀತಿಯ ವಿಲನ್ ರೋಲ್ ಮಾಡುವವರೇ ಜನಮನ ಗೆದ್ದಿರುವುದೂ ಉಂಟು. ಅಂತಹ ಖಳನಾಯಕಿ ಪಾತ್ರ ಮಾಡಿ ಗೆದ್ದಿರುವ ನಟಿ ಪಲ್ಲವಿ ಗೌಡ ಈಗ ಮತ್ತೆ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ. ಅದು ಕೂಡಾ ನಾಯಕಿಯಾಗಿ!

ಅನಿರುದ್ಧ್‌ಗೆ ನಾಯಕಿ ಪಲ್ಲವಿ ಗೌಡ

ಅನಿರುದ್ಧ್‌ಗೆ ನಾಯಕಿ ಪಲ್ಲವಿ ಗೌಡ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ಅಭಿನಯಿಸಿದ್ದ ಪಲ್ಲವಿ ಗೌಡ ಮುಂದೆ ಕಾರಣಾಂತರಗಳಿಂದ ಸೇವಂತಿ ಪಾತ್ರಕ್ಕೆ ವಿದಾಯ ಹೇಳಿದ್ದರು. ಬಳಿಕ ತೆಲುಗಿನ 'ಚದುರಂಗಂ' ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಪಲ್ಲವಿ ಗೌಡ, ಇದೀಗ 'ಸೂರ್ಯವಂಶ' ಧಾರಾವಾಹಿ ಮೂಲಕ ಕಿರುತೆರೆಗೆ ಬರಲಿದ್ದು, ನಟ ಅನಿರುದ್ಧ್ ಜತ್ಕರ್ ಅವರಿಗೆ ಜೋಡಿಯಾಗಲಿದ್ದಾರೆ‌.

'ಗಾಳಿಪಟ' ಹಾರಿಸಿ ನಾಯಕಿಯಾದ ಪಲ್ಲವಿ

'ಗಾಳಿಪಟ' ಹಾರಿಸಿ ನಾಯಕಿಯಾದ ಪಲ್ಲವಿ

'ಗಾಳಿಪಟ' ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ಮೊದಲು ಕಾಣಿಸಿಕೊಂಡ ಪಲ್ಲವಿ ಗೌಡ ಅವರು ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಮೇಲಿಂದ ಮೇಲೆ ಅವಕಾಶಗಳು ಬರುತ್ತಲೇ ಹೋದವು. 'ಮನೆಯೊಂದು ಮೂರು ಬಾಗಿಲು', 'ಪರಿಣಯ', 'ಸೇವಂತಿ', 'ಚಂದ್ರ ಚಕೋರಿ' ಹೀಗೆ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಪಲ್ಲವಿ ಗೌಡ, ಆರೂರು ಜಗದೀಶ್ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಜೋಡಿಹಕ್ಕಿ' ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡರು. ಜೊತೆಗೆ ಆ ಪಾತ್ರ ಆಕೆಗೆ ನೀಡಿದ ಪ್ರಾಮುಖ್ಯತೆ ಅಷ್ಟಿಷ್ಟಲ್ಲ.

ಸಿನಿಮಾಗಳಲ್ಲೂ ನಟಿಸಿರೊ ಪಲ್ಲವಿ

ಸಿನಿಮಾಗಳಲ್ಲೂ ನಟಿಸಿರೊ ಪಲ್ಲವಿ

ಧಾರಾವಾಹಿಗಳಲ್ಲಷ್ಟೇ ಕಾಣಿಸಿಕೊಳ್ಳದ ಈ ಚೆಲುವೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮೊದಲಿಗೆ 'ಪ್ರೇಮ ಘೀಮಾ ಜಾನೆ ದೋ' ಸಿನಿಮಾ ಮೂಲಕ ನಾಯಕಿ ನಟಿಯಾಗಿ ಹಿರಿತೆರಿಗೆ ಕಾಲಿಟ್ಟ ಇವರು, ನಂತರ 'ಕಿಡಿ' ಸಿನಿಮಾದಲ್ಲಿಯೂ ಕಾಣಿಸಿಕೊಂಡರು.

English summary
Pallavi Gowda returned to Kannada television through the serial Suryavamsha, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X